Asianet Suvarna News Asianet Suvarna News

Relationship Tips: ನಾನ್ಯಾಕೆ ಒಂಟಿ? ಈ ಪ್ರಶ್ನೆ ಕಾಡ್ತಿದ್ರೆ ಇದನ್ನೋದಿ

ಒಡಹುಟ್ಟಿದವರ ಮಧ್ಯೆಯೇ ಗಲಾಟೆಯಾಗ್ತಿರುತ್ತೆ. ಇನ್ನು ಸಂಗಾತಿ ಮಧ್ಯೆ ಆಗ್ದೆ ಇರುತ್ತಾ? ಆದ್ರೆ ಈ ಜಗಳ, ಬೇರ್ಪಡುವಿಕೆಗೆ ನಮ್ಮ ಸ್ವಭಾವವೇ ಕಾರಣವಾಗಿರ್ಬಹುದು. ಬೇರೆಯವರ ಮೇಲೆ ಆರೋಪ ಹೊರಿಸುವ ಮೊದಲು ನಿಮ್ಮನ್ನು ನೀವು ನೋಡ್ಕೊಳ್ಳಿ. 
 

Why Relationships And Dating Is So Hard For You
Author
First Published Jan 26, 2023, 4:39 PM IST

ಬಟ್ಟೆ ಬದಲಿಸಿದಂತೆ ಸಂಗಾತಿ ಬದಲಿಸಲು ಸಾಧ್ಯವಿಲ್ಲ. ಪ್ರೀತಿಯ ಸಂಬಂಧ ಶಾಶ್ವತವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಕೆಲವರು ಒಬ್ಬರನ್ನೇ ಪ್ರೀತಿಸಿ, ಅವರ ಜೊತೆ ಹೊಂದಿಕೊಂಡು ಜೀವನ ಪರ್ಯಂತ ಜೊತೆಯಾಗಿ ಸಾಗುತ್ತಾರೆ. ಆದ್ರೆ ಮತ್ತೆ ಕೆಲವರು ಎಷ್ಟೇ ಪ್ರಯತ್ನಿಸಿದ್ರೂ ಒಂದು ವರ್ಷ ಕೂಡ ಒಬ್ಬ ವ್ಯಕ್ತಿ ಜೊತೆ ಇರಲು ಸಾಧ್ಯವಿಲ್ಲ. ಪಾಲುದಾರರನ್ನು ಹುಡುಕಲು ಅವರು ಸಾಕಷ್ಟು ಕಷ್ಟಪಡ್ತಾರೆ. ಸಿಕ್ಕ ವ್ಯಕ್ತಿ ಕೂಡ ತುಂಬಾ ಸಮಯ ಇವ್ರ ಜೊತೆ ಇರೋದಿಲ್ಲ. ಒಂದೇ ಡೇಟ್ ನಲ್ಲಿ ಸಂಬಂಧ ಕಳೆದುಕೊಳ್ಳುವವರಿದ್ದಾರೆ. 

ನಾನೇಕೆ ಇನ್ನೂ ಒಂಟಿಯಾಗಿದ್ದೇನೆ ಎಂಬ ಪ್ರಶ್ನೆ ಅಂಥವರನ್ನು ಕಾಡುತ್ತದೆ. ಮದುವೆ (Marriage), ಸಂಬಂಧ ಬಯಸಿಯೂ ಅವರಿಗೆ ಅದು ಸಿಕ್ಕಿರೋದಿಲ್ಲ. ಇದಕ್ಕೆ ಅವರು ಕಾರಣವಲ್ಲ. ಅವರು ಒಂಟಿಯಾಗಿರಲು ಅವರಲ್ಲಿರುವ ಕೆಲ ಸ್ವಭಾವ ಕಾರಣ. ನಿಮ್ಮ ಕೆಲ ಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ. ನಾವಿಂದು ನಿಮ್ಮೆಲ್ಲ ಸಂಬಂಧ ದೀರ್ಘಕಾಲ ಉಳಿಯಬೇಕೆಂದ್ರೆ ಏನು ಮಾಡ್ಬೇಕು ಎಂಬುದನ್ನು ಹೇಳ್ತೆವೆ.

ಅತಿ ಹೆಚ್ಚು ಭರವಸೆ ಅಪಾಯಕಾರಿ : ಸಂಗಾತಿ (Partner) ಸದಾ ತನ್ನ ನಿರೀಕ್ಷೆಗಳನ್ನು ಪೂರೈಸಬೇಕು, ನನ್ನ ಆಸೆಗಳಿಗೆ ಜೊತೆಯಾಗಬೇಕು ಎಂಬ ಅತಿ ನಿರೀಕ್ಷೆಯನ್ನು ಕೆಲವರು ಹೊಂದಿರುತ್ತಾರೆ. ಸಂಗಾತಿ ನನ್ನ ಜೊತೆಗಿರಬೇಕು ಎಂದುಕೊಳ್ಳುವ ಜನರು ಸಂಗಾತಿ ಮೇಲೆ ಅತಿ ಭರವಸೆ ಹೊಂದಿರುತ್ತಾರೆ. ಆದ್ರೆ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೆ ಆದ ಜೀವನವಿದೆ. ಸಂಗಾತಿ ಅಂದ್ರೆ ಆತ ನಿಮ್ಮ ದಾಸನಲ್ಲ. ಸಂಗಾತಿಗೂ ವೈಯಕ್ತಿಕ ಆಸೆ, ಕೆಲಸಗಳಿರುತ್ತವೆ. ಸಂಗಾತಿ ಹೆಚ್ಚಿನ ಸಮಯ ನೀಡಿಲ್ಲ ಅಥವಾ ನಿರೀಕ್ಷೆಯಂತೆ ನಡೆದುಕೊಂಡಿಲ್ಲ ಎಂದಾಗ ಇವರ ಮನಸ್ಸು ಮುರಿಯುತ್ತದೆ. ಸಂಬಂಧ ಹಾಳಾಗುತ್ತದೆ. ಹಾಗಾಗಿ ಸಂಬಂಧ ಗಟ್ಟಿಯಾಗಿರಬೇಕೆಂದ್ರೆ ಕೊಟ್ಟು – ತೆಗೆದುಕೊಳ್ಳುವ ನಿಯಮ ಪಾಲನೆ ಮಾಡ್ಬೇಕು. ನೀವು ಸಂಗಾತಿಯಿಂದ ಏನು ನಿರೀಕ್ಷೆ ಮಾಡ್ತಿರೋ ಅದನ್ನು ಸಂಗಾತಿಗೆ ಮೊದಲು ನೀಡುವ ಪ್ರಯತ್ನ ನಡೆಸಿ. ಆಗ ನೀವು ನೀಡಿದ್ದರ ಡಬಲ್ (Double) ನಿಮ್ಮ ಸಂಗಾತಿಯಿಂದ ವಾಪಸ್ ಬರುತ್ತದೆ.

ಸಂಗಾತಿಯೊಂದಿಗೆ ಮುಕ್ತವಾಗಿರಲು ಪ್ರಯತ್ನಿಸಿ : ಸಂಗಾತಿ ನಿಮ್ಮ ಜೀವನ (Life) ದ ಒಂದು ಭಾಗ. ಸಂಗಾತಿ ಜೊತೆ ಮುಕ್ತವಾಗಿರುವುದು ಬಹಳ ಮುಖ್ಯವಾಗುತ್ತದೆ. ಅನೇಕರು ಸಂಗಾತಿ ಜೊತೆಗೆ ಮನಸ್ಸು ಬಿಚ್ಚಿ ಮಾತನಾಡುವುದಿಲ್ಲ. ಭಾವನೆಗಳನ್ನು ಹಿಡಿದಿಟ್ಟುಕೊಂಡು ಜೀವನ ನಡೆಸ್ತಾರೆ. ಇಂಥವರು ಬಯಸದಿದ್ದರೂ ಒಂಟಿ (Alone) ಜೀವನ ನಡೆಸಬೇಕಾಗುತ್ತದೆ. ದಂಪತಿ ಮಧ್ಯೆ ಉತ್ತಮ ಸಂವಹನ ಇರಬೇಕು. ಇದು ಸಂಬಂಧವನ್ನು ಮತ್ತಷ್ಟು ಬಿಗಿಗೊಳಿಸುತ್ತದೆ. ನಿಮಗೂ ಸಂಗಾತಿ ಸಿಗಬೇಕು, ಇಬ್ಬರು ಅನ್ಯೂನ್ಯವಾಗಿ ಜೀವನ ನಡೆಸಬೇಕೆಂದ್ರೆ ಬಿಗಿತನ ಬಿಟ್ಟು ಸಂಗಾತಿ ಮುಂದೆ ನಿಮ್ಮ ಮನಸ್ಸನ್ನು ಬಿಚ್ಚಿಡಿ. ತನ್ನೆಲ್ಲ ಭಾವನೆಯನ್ನು ಹೇಳಿಕೊಳ್ಳದ ಸಂಗಾತಿಯನ್ನು ಯಾರೂ ಬಯಸುವುದಿಲ್ಲ. ಸ್ವಲ್ಪ ದಿನಗಳಲ್ಲಿಯೇ ಅವರು ನಿಮ್ಮಿಂದ ದೂರ ಹೋಗ್ತಾರೆ.

ನಾನೆಲ್ಲೇ ಇದ್ದರೂ ನಿನ್ನವನು, ನಿನ್ನ ಬಿಟ್ಟು ಹೋಗುವ ಮನಸ್ಸಿಲ್ಲ. ಆದರೆ ಸಮಯವಿಲ್ಲ!

ಹೊಂದಾಣಿಕೆ ಮುಖ್ಯ : ಸಂಗಾತಿ ಮಧ್ಯೆ ಗಲಾಟೆ ಸಾಮಾನ್ಯ. ಒಬ್ಬೊಬ್ಬರ ಸ್ವಭಾವ ಒಂದೊಂದು ರೀತಿಯಿರುತ್ತದೆ. ಹಾಗಾಗಿ ರಾಜಿ ಮಾಡಿಕೊಳ್ಳೋದನ್ನು ಕಲಿಯಬೇಕು. ಮೊಲಕ್ಕೆ ಮೂರೇ ಕಾಲು ಎನ್ನುತ್ತ ತನ್ನ ವಾದಕ್ಕೆ ಗಂಟು ಬಿದ್ದಲ್ಲಿ ಜನರು ನಿಮ್ಮಿಂದ ದೂರವಾಗ್ತಾರೆ. ಪರಸ್ಪರ ಹೊಂದಾಣಿಕೆ ಇಲ್ಲವೆಂದ್ರೆ ಶೀಘ್ರದಲ್ಲೇ ಸಂಬಂಧ ಹಳಸುತ್ತದೆ. 

Extra Marital Affair: ಭಾರತದಲ್ಲಿ ಹೆಚ್ಚಾದ ವಿವಾಹೇತರ ಸಂಬಂಧ: ಶಾಕಿಂಗ್‌ ಮಾಹಿತಿ ಬಹಿರಂಗ

ಸಂಗಾತಿ ಬಗ್ಗೆ ಇರಲಿ ಗಮನ : ಆರೋಗ್ಯಕರ ಸ್ವಾರ್ಥ ಇರಲೇಬೇಕು. ಹಾಗಂತ ನಮ್ಮ ಇಷ್ಟಕಷ್ಟದ ಮಧ್ಯೆ ಸಂಗಾತಿಯನ್ನು ಮರೆಯಬಾರದು. ಸಂಗಾತಿ ಏನು ಬಯಸ್ತಾರೆ, ಅವರಿಗೆ ಏನು ಇಷ್ಟ, ಅವರ ಆಸೆ ಏನು ಎಂಬುದನ್ನೆಲ್ಲ ತಿಳಿದು ಅದನ್ನು ಪೂರೈಸುವ ಪ್ರಯತ್ನ ಕೂಡ ಮಾಡಬೇಕು. ಸಂಗಾತಿ ನಿಮ್ಮಿಂದ ಏನು ಬಯಸ್ತಾರೆ ಎಂಬುದು ನಿಮಗೆ ತಿಳಿದಿಲ್ಲವೆಂದ್ರೆ ಆರೋಗ್ಯಕರ ಸಂಬಂಧ ಅಸಾಧ್ಯ. 

Follow Us:
Download App:
  • android
  • ios