ನಾನೆಲ್ಲೇ ಇದ್ದರೂ ನಿನ್ನವನು, ನಿನ್ನ ಬಿಟ್ಟು ಹೋಗುವ ಮನಸ್ಸಿಲ್ಲ. ಆದರೆ ಸಮಯವಿಲ್ಲ!

ವೃದ್ಧ ದಂಪತಿಗಳಲ್ಲಿ ಪರಸ್ಪರ ಅವಲಂಬನೆ ಹೆಚ್ಚಾಗಿರುತ್ತದೆ. ಕಾಳಜಿ ಅಪಾರವಾಗಿರುತ್ತದೆ. ಹೀಗಿರುವಾಗ, ಒಬ್ಬರು ತೀರಿಕೊಂಡರೆ ಇನ್ನೊಬ್ಬರಿಗೆ ಕಷ್ಟವಾಗುತ್ತದೆ. ಮಂಗೋಲಿಯಾದ ಅಜ್ಜನೊಬ್ಬ ತಾನು ಸಾವಿಗೀಡಾದ ಬಳಿಕ ಹೇಗಿರಬೇಕೆಂದು ಅಜ್ಜಿಗೆ ಹೇಳಿರುವ ಕಿವಿಮಾತು ಹಾಗೂ ಅವರ ಮಾತುಕತೆ ಒಳಗೊಂಡ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ. 
 

Old man said some tips to his wife before dying and expressed love this video goes viral

ವೃದ್ಧ ದಂಪತಿಗಳು ಒಬ್ಬರಿಗೊಬ್ಬರು ಪರಸ್ಪರ ದೂಷಿಸಿಕೊಳ್ಳುವುದು ಸಹಜ, ಯಾವಾಗಲಾದರೂ ಕೋಪಿಸಿಕೊಂಡು ಬೈದಾಡುತ್ತಿದ್ದರೂ ಅವಲಂಬನೆಯಲ್ಲಿರುತ್ತಾರೆ, ಅಪಾರ ಪ್ರೀತಿಯೂ ಮನದಲ್ಲಿ ಮಡುಗಟ್ಟಿರುತ್ತದೆ. ಮಕ್ಕಳು, ಮೊಮ್ಮಕ್ಕಳ ಎದುರು ಪರಸ್ಪರ ಪ್ರೀತಿ ಭಾವನೆಯನ್ನು ತೋರ್ಪಡಿಸಿಕೊಳ್ಳಲು ಸಾಧ್ಯವಾಗದೆಯೂ ಇರಬಹುದು! ಪರಸ್ಪರರಲ್ಲಿ ಅವಲಂಬನೆಯಂತೂ ಅಗಾಧವಾಗಿರುತ್ತದೆ. ಹೀಗಿರುವಾಗ ಯಾರಾದರೂ ಒಬ್ಬರು ಈ ಲೋಕದಿಂದ ದೂರವಾದರೆ ಇನ್ನೊಬ್ಬರಿಗೆ ಆ ಶೂನ್ಯ ಬಾಧಿಸುತ್ತದೆ. ಅವರಿಲ್ಲದ ಈ ಬದುಕು ಬೇಡವೆನಿಸುತ್ತದೆ. ವಯಸ್ಸಾದ ಬಳಿಕ ಸಾವು ಸಹಜವೆಂದು ಅದನ್ನು ಸ್ವೀಕರಿಸಿದರೂ ಸಂಗಾತಿ ಇಲ್ಲದ ಶೂನ್ಯತೆ ಅವರನ್ನು ಕಾಡುತ್ತದೆ.

ಅದರಲ್ಲೂ ಪರಸ್ಪರ ಅವಲಂಬನೆ ಇದ್ದಾಗ ಅವರನ್ನು ಕಳೆದುಕೊಳ್ಳುವ ನೋವು, ಯಾರೂ ಇಲ್ಲದ ಭಾವನೆ ಕಾಡುವುದು ಹೆಚ್ಚು. ಅದೆಷ್ಟೇ ವಯಸ್ಸಾಗಿದ್ದರೂ ಇಂಥದ್ದೊಂದು ಭಾವನೆ ಸಹಜ. ಜಗತ್ತಿನಾದ್ಯಂತ ಕಂಡುಬರುವ ಮನಸ್ಥಿತಿ ಇದು. ಇದೀಗ, ಸಾವಿನ ಸನ್ನಿವೇಶದಲ್ಲಿ ಮಂಗೋಲಿಯಾದ ವೃದ್ಧ ದಂಪತಿಗಳ ನಡುವೆ ನಡೆದ ಮಾತುಕತೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಇವರಿಬ್ಬರು ಬರೋಬ್ಬರಿ 64 ವರ್ಷಗಳ ಕಾಲ ಸಹಜೀವನ ನಡೆಸಿದ್ದರು. 

ಆತ 88 ವರ್ಷದ ಅಜ್ಜ. ಆಕೆಗೆ ಎರಡು ವರ್ಷ ಕಡಿಮೆ ಇರಬಹುದಷ್ಟೆ. ಆದರೆ, ಇಬ್ಬರ ನಡುವೆ ಅದೇನು ಪ್ರೀತಿ (Love), ಪರಸ್ಪರ ಕಾಳಜಿ (Care) ಎಂದು ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಅಜ್ಜನಿಗೆ (Old Man) ಸಾವು ಸಮೀಪಿಸುವುದರಲ್ಲಿತ್ತು. ಕೇವಲ ಒಂದು ದಿನದ ಹಿಂದೆ ವಿವಾಹ ವಾರ್ಷಿಕೋತ್ಸವ ಆಗಿತ್ತು. ಅದಾದ ಮರುದಿನವೇ ಅಜ್ಜ ಮರಣಶಯ್ಯೆಯಲ್ಲಿದ್ದ. ಈ ವಿಡೀಯೋವನ್ನು ವೃದ್ಧ ದಂಪತಿಗಳ ಸಂಬಂಧಿಕರಾದ ಶಿನ್‌ ಜಿಂಗ್‌ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ. ಇದನ್ನು ನೋಡಿದರೆ ಎಂಥವರಿಗೂ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುತ್ತದೆ. 

ವೃದ್ಧಾಪ್ಯದ ಒಂಟಿತನ ಬಲ್ಲಿರಾ? ಅದನ್ನ ನಿವಾರಿಸುವ 'ಗುಡ್‌ ಫೆಲೋಸ್‌'ಗೆ ರತನ್‌ ಟಾಟಾ ಬೆನ್ನೆಲುಬು

64  ವರ್ಷಗಳ ದಾಂಪತ್ಯ: ಈ ಅಜ್ಜ-ಅಜ್ಜಿ ಕಳೆದ 64 ವರ್ಷಗಳಿಂದಲೂ ಜತೆಗಿದ್ದಾರೆ. ಪರಸ್ಪರ ಅಪಾರ ಕಾಳಜಿ ಹೊಂದಿದ್ದ ದಂಪತಿ (Husband Wife) ಇಷ್ಟು ವರ್ಷಗಳಲ್ಲಿ ದೂರವಾಗಿದ್ದ ಸಮಯವೇ ಇಲ್ಲ. ಸಾಯುವ ಮುನ್ನಾ ದಿನ ಈ ವಿಡಿಯೋ ಮಾಡಲಾಗಿದೆ. ಅಜ್ಜ ಸಾವಿಗೀಡಾದ ಬಳಿಕ ಶಿನ್‌ ಜಿಂಗ್‌ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇದೀಗ ವೈರಲ್‌ ಆಗಿದೆ. “ಕೊನೆಗೂ ಅಜ್ಜ ತೀರಿಹೋದರು. ಅಜ್ಜಿ ಮಕ್ಕಳಂತೆ ಅಳುತ್ತಿದ್ದರು. ಆ ಹುಡುಗಿಯನ್ನು ಕೈಬಿಟ್ಟು ಅವರು ಹೊರಟೇಹೋದರುʼ ಎಂದು ಅವರು ಹೇಳಿದ್ದಾರೆ.

ಸೀರೆಯುಟ್ಟರೂ ಸಾಧಿಸಿ ತೋರಿಸಿದ ವೃದ್ಧೆ: ಈ ಅಜ್ಜಿ ಉತ್ಸಾಹ ನಮಗ್ಯಾಕಿಲ್ಲ?

ಸಾಮಾನ್ಯ ಅಜ್ಜನಲ್ಲ ಈತ:  ಆದರೆ, ಆ ಅಜ್ಜ ಸಾಮಾನ್ಯ ಅಜ್ಜನಲ್ಲ ಎನ್ನುವುದು ಅವರ ಮಾತುಗಳಿಂದಲೇ ತಿಳಿಯುತ್ತದೆ. ಅಜ್ಜ ತಾನು ಸಾಯುವ (Death) ಮುನ್ನ ಹೇಳಿದ ಮಾತು ಎಲ್ಲರ ಕಣ್ಣುಗಳನ್ನೂ ತೆರೆಸುವಂಥದ್ದು. ಅಜ್ಜಿ ಆತನ ಬಳಿಯೇ ಕುಳಿತು ಒಂದೇ ಸಮನೆ ಅಳುತ್ತಿದ್ದಳು (Cry). ಆಗ ಅಜ್ಜ, ಅಜ್ಜಿಯ ಕೈ ಹಿಡಿದು, “ಯಾರಾದರೂ ಮೊಮ್ಮಗ ಅಥವಾ ಮೊಮ್ಮಗಳು (Daughter in Law) ನಿನ್ನನ್ನು ದುಃಖಕ್ಕೆ (Pain) ಈಡು ಮಾಡಿದರೆ ಅದನ್ನು ಸಹಿಸಿಕೊಂಡು ಸುಮ್ಮನಿರಬೇಡ, ಅದಕ್ಕೆ ಹೊಂದಾಣಿಕೆ (Adjust) ಮಾಡಿಕೊಳ್ಳಬೇಡʼ ಎಂದು ಸಲಹೆ ನೀಡಿದ! ಈ ಮಾತಿಗೆ, ಅಲ್ಲಿ ನೆರೆದವರು “ಮಾತು ಕೊಡಿ ಅಕ್ಕʼ ಎಂದು ಹೇಳುತ್ತಾರೆ. ಪಾಪ, ಅಜ್ಜಿ ನಿರಂತರವಾಗಿ ಅಳುತ್ತಲೇ ಇರುತ್ತಾಳೆ.

ಬಳಿಕ, “ನೀವು ನನಗೆ ಮೋಸ ಮಾಡುತ್ತೀದ್ದೀರಿ, ನನ್ನನ್ನು ಬಿಟ್ಟು ಹೋಗುತ್ತಿದ್ದೀರಿʼ ಎಂದು ಹೇಳಿದಾಗ, ಅದಕ್ಕೆ ಅಜ್ಜ, “ಅಳಬೇಡ, ನನಗೆ ನಿನ್ನನ್ನು ಬಿಟ್ಟು ಹೋಗುವ ಮನಸ್ಸಿಲ್ಲ. ಆದರೆ, ನನ್ನ ಬಳಿ ಸಮಯ (Time)ವಿಲ್ಲ. ನೀನು ಧೃಡವಾಗಿರು, ನೋವಿನಿಂದ ನಿನ್ನ ಅಗತ್ಯಗಳ (Necessity) ಬಗ್ಗೆ ಉಪೇಕ್ಷೆ ಮಾಡಬೇಡ, ನಿನ್ನ ಆರೋಗ್ಯವನ್ನು (Health) ನಿರ್ಲಕ್ಷಿಸಬೇಡʼ ಎಂದು ಹೇಳಿದ!  ವಿಡಿಯೋ ಅರ್ಥವಾಗದ ಸ್ಥಳೀಯ ಭಾಷೆಯಲ್ಲಿದ್ದರೂ, ಅಲ್ಲಿನ ಭಾವನೆಗಳ (Emotions) ಸಮುದ್ರ ಎಲ್ಲರನ್ನೂ ಕಲಕುತ್ತದೆ. ಹೀಗಾಗಿಯೇ ಈ ವಿಡಿಯೋವನ್ನು 30 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.  

Latest Videos
Follow Us:
Download App:
  • android
  • ios