Asianet Suvarna News Asianet Suvarna News

Extra Marital Affair: ಭಾರತದಲ್ಲಿ ಹೆಚ್ಚಾದ ವಿವಾಹೇತರ ಸಂಬಂಧ: ಶಾಕಿಂಗ್‌ ಮಾಹಿತಿ ಬಹಿರಂಗ

ದಾಂಪತ್ಯ ಮುರಿದು ಬೀಳಲು ಅನೇಕ ಕಾರಣವಿರುತ್ತದೆ. ಈಗಿನ ದಿನದಲ್ಲಿ ಸಣ್ಣ ವಿಷ್ಯಕ್ಕೂ ಸಂಸಾರ ದಾರಿ ತಪ್ಪುತ್ತಿದೆ. ಮನೆಯಲ್ಲಿ ಸುಖವಿಲ್ಲ ಎನ್ನುವ ಜನರು ಆನ್ಲೈನ್ ಡೇಟಿಂಗ್ ಅಪ್ಲಿಕೇಷನ್ ಮೊರೆ ಹೋಗ್ತಿದ್ದಾರೆ. ಭಾರತದಲ್ಲಿ ಇದು ದಿನ ದಿನಕ್ಕೂ ಏರಿಕೆಯಾಗ್ತಿದೆ.
 

Dating App Reveals Indian Involve Extra Marital Affair
Author
First Published Jan 25, 2023, 4:02 PM IST

ಭಾರತದಲ್ಲಿ ಸೆಕ್ಸ್ ಒಂದು ನಿಷಿದ್ಧ ವಿಷ್ಯ. ಮದುವೆಗೆ ಮೊದಲು ಸೆಕ್ಸ್ ಎಷ್ಟು ಅಪರಾಧವೋ ಅದೇ ರೀತಿ ಮದುವೆಯಾದ್ಮೇಲೆ ಬೇರೆ ವ್ಯಕ್ತಿಯ ಜೊತೆ ಸಂಬಂಧ ಬೆಳೆಸುವುದು ಕೂಡ ದೊಡ್ಡ ತಪ್ಪು ಎಂದು ಭಾರತದಲ್ಲಿ ಭಾವಿಸಲಾಗಿದೆ. ಮದುವೆ ನಂತ್ರ ವಿವಾಹೇತರ ಸಂಬಂಧ ಬೆಳೆಸುವುದು, ವಿಚ್ಛೇದನ ನೀಡುವುದು ಎಲ್ಲವೂ ವಿದೇಶಿಗಳಿಗೆ ಸೀಮಿತ ಎಂದು ಭಾರತೀಯರು ಹೇಳ್ತಿದ್ದರು. ಒಮ್ಮೆ ಸಪ್ತಪದಿ ತುಳಿದ ಮೇಲೆ ದಂಪತಿ ಅದೇನೇ ಸಮಸ್ಯೆ ಬಂದ್ರೂ ಒಟ್ಟಿಗೆ ಇರಬೇಕೆಂಬ ಅಲಿಖಿತ ನಿಯಮವಿತ್ತು. ಮಹಿಳೆ ಅಥವಾ ಪುರುಷ ಯಾರೊಬ್ಬರು ವಿವಾಹ ಮುರಿದುಕೊಳ್ಳುವ ನಿರ್ಧಾರಕ್ಕೆ ಬಂದ್ರೂ ಅದನ್ನು ಅವಮಾನದಂತೆ ನೋಡಲಾಗ್ತಾಯಿತ್ತು. ಆದ್ರೀಗ ಭಾರತ ದೊಡ್ಡ ಮಟ್ಟದಲ್ಲಿ ಬದಲಾಗಿದೆ. ಭಾರತದಲ್ಲಿ ವಿಚ್ಛೇದನದ ಸಂಖ್ಯೆ ವಿಪರೀತವಾಗಿದೆ. ವಿಚ್ಛೇದನ ಮಾತ್ರವಲ್ಲ ವಿವಾಹೇತರ ಸಂಬಂಧ ಕೂಡ ಏರಿಕೆಯಾಗ್ತಿದೆ. ಅದ್ರಲ್ಲೂ ಮಹಿಳೆಯರು ಮುಂದಿದ್ದಾರೆ. 

ವಿವಾಹೇತರ ಸಂಬಂಧಗಳಿಗಾಗಿ ಡೇಟಿಂಗ್ (Dating) ಅಪ್ಲಿಕೇಶನ್‌ (Application) ಗಳನ್ನು ಬಳಸುವ ಜನರು ಸಹ ವೇಗವಾಗಿ ಹೆಚ್ಚುತ್ತಿದ್ದಾರೆ. ವಿವಾಹಿತರಿಗೆ ಮಾತ್ರ ಪ್ರತ್ಯೇಕ ಡೇಟಿಂಗ್ ಆಪ್ ಗಳನ್ನು ಕೂಡ ಮಾಡಲಾಗಿದೆ. ಇದ್ರಲ್ಲಿ ಖಾತೆ ತೆರೆದಿರುವ ಜನರು, ದಾಂಪತ್ಯ ದ್ರೋಹ, ಬೇಸರ, ದುಃಖ, ಗಂಡ ಅಥವಾ ಹೆಂಡತಿಯ ನಿರ್ಲಕ್ಷ್ಯ, ಅಸಭ್ಯತೆ ವಿವಾಹೇತರ ಸಂಬಂಧಕ್ಕೆ ಕಾರಣವಾಗಿದೆ ಎಂದಿದ್ದಾರೆ.

ವಿವಾಹಿತ ದಂಪತಿಯಲ್ಲಿ ಒಬ್ಬರು ಇನ್ನೊಬ್ಬ ಪುರುಷ ಅಥವಾ ಮಹಿಳೆಯೊಂದಿಗೆ ಸಂಬಂಧವನ್ನು ಹೊಂದಿದ್ದರೆ, ಅದನ್ನು ವಿವಾಹೇತರ ಸಂಬಂಧ ಎಂದು ಕರೆಯಲಾಗುತ್ತದೆ. 2018 ರವರೆಗೆ ದೇಶ (Country) ದಲ್ಲಿ ವಿವಾಹೇತರ ಸಂಬಂಧ ಬೆಳೆಸುವುದು ಮಾಡುವುದು ಅಪರಾಧವಾಗಿತ್ತು. ಐಪಿಸಿಯ ಸೆಕ್ಷನ್-497 ರ ಅಡಿಯಲ್ಲಿ ಬೇರೊಬ್ಬರ ಹೆಂಡತಿಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗೆ ದಂಡ ಮತ್ತು 5 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುತ್ತಿತ್ತು. 2018ರಲ್ಲಿ 150 ವರ್ಷಗಳ ಕಾನೂನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. 

Relationship Tips: ಇಂತಹ ಹುಡುಗರು ಪ್ರಪಂಚದಲ್ಲೇ ಬೆಸ್ಟ್‌ ಲವರ್ಸ್‌ ಆಗ್ತಾರೆ

ವರದಿ ಏನು ಹೇಳುತ್ತೆ? : ಫ್ರೆಂಚ್ ಎಕ್ಸ್ ಟ್ರಾ ಮ್ಯಾರಿಟಲ್ ಡೇಟಿಂಗ್ ಆಪ್ ಪ್ರಕಾರ, ಭಾರತದಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ವಿವಾಹೇತರ ಸಂಬಂಧ ಹೊಂದಿದ್ದಾರೆ. 2022 ರಲ್ಲಿ  ಈ ಅಪ್ಲಿಕೇಶನ್‌ನ 10 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಈ ಬಳಕೆದಾರರಲ್ಲಿ ಸುಮಾರು ಶೇಕಡಾ 20 ರಷ್ಟು ಭಾರತೀಯರು. ಅಂದರೆ ಸುಮಾರು 20 ಲಕ್ಷ ಭಾರತೀಯರು ಈ ಆಪ್ ನಲ್ಲಿ ಡೇಟಿಂಗ್ ಖಾತೆ ಹೊಂದಿದ್ದಾರೆ. ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಎಲ್ಲಾ ದೊಡ್ಡ ಮತ್ತು ಸಣ್ಣ ನಗರಗಳ ಜನರು ಇದ್ರಲ್ಲಿದ್ದಾರೆ. ಎಂಜಿನಿಯರ್‌ಗಳಿಂದ ವೈದ್ಯರವರೆಗೆ ಎಲ್ಲರೂ ಈ ಅಪ್ಲಿಕೇಶನ್ ಮೂಲಕ ವಿವಾಹೇತರ ಸಂಬಂಧ ಹೊಂದಿದ್ದಾರೆ.

ಕಣ್ಣು.. ಕಣ್ಣು ಕಲೆತಾಗ… ಮುಂದೆ ಏನೇನು ಆಗುತ್ತೆ ಗೊತ್ತಾ?

ಇನ್ನು ವಿವಾಹೇತರ ಡೇಟಿಂಗ್ ಅಪ್ಲಿಕೇಶನ್ ಗ್ಲೀಡೆನ್‌ ಪ್ರಕಾರ, ಇದ್ರಲ್ಲಿರುವ ಬಳಕೆದಾರರ ಪೈಕಿ ಶೇಕಡಾ 20 ರಷ್ಟು ಬಳಕೆದಾರರು ಭಾರತೀಯರಂತೆ. ಶೇಕಡಾ 40 ರಷ್ಟು ಮಹಿಳೆಯರಂತೆ. ಭಾರತದ ಬಳಕೆದಾರರಲ್ಲಿ ಶೇಕಡಾ 75ರಷ್ಟು ಪುರುಷರಾದ್ರೆ ಶೇಕಡಾ 35ರಷ್ಟು ಮಹಿಳೆಯರು ಎನ್ನುತ್ತದೆ ಕಂಪನಿ. ಈ ಅಪ್ಲಿಕೇಶನ್‌ನಲ್ಲಿ ಎಲ್ಲಾ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಇದ್ದಾರೆ. ಮಹಿಳೆಯರ ಸರಾಸರಿ ವಯಸ್ಸು 26 ವರ್ಷಗಳು ಮತ್ತು ಪುರುಷರ ಸರಾಸರಿ ವಯಸ್ಸು ಸುಮಾರು 30 ವರ್ಷಗಳು.

ಡೇಟಿಂಗ್ ಅಪ್ಲಿಕೇಶನ್‌ನಲ್ಲಿರುವ ಶೇಕಡಾ 44 ರಷ್ಟು ಜನರು ಶ್ರೇಣಿ 2 ಮತ್ತು ಶ್ರೇಣಿ 3 ನೇ ನಗರದವರು. ಅಂದರೆ 20 ಸಾವಿರದಿಂದ 1 ಲಕ್ಷದವರೆಗೆ ಜನಸಂಖ್ಯೆ ಹೊಂದಿರುವ ನಗರದಲ್ಲಿ ವಾಸಿಸುವವರು. ಸುಮಾರು ಶೇಕಡಾ 66ರಷ್ಟು ಜನರು ಶ್ರೇಣಿ 1ನೇ ನಗರದಿಂದ ಅಂದರೆ 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರದಲ್ಲಿ ವಾಸಿಸುವರು. ಆ್ಯಪ್‌ನಲ್ಲಿ ಮಹಿಳೆಯರಿಗಾಗಿ ಸುರಕ್ಷತಾ ಫೀಚರ್‌ಗಳಿದ್ದು, ಮಹಿಳೆಯರೂ ಇದನ್ನು ಹೆಚ್ಚು ಬಳಸುತ್ತಿದ್ದಾರೆ ಎನ್ನುತ್ತದೆ ಕಂಪನಿ.

Follow Us:
Download App:
  • android
  • ios