6 ಹೆಂಡತಿಯರೊಂದಿಗೆ ಶಾಪಿಂಗ್ ಹೋದ ಪತಿ: ಖರ್ಚು ಮಾಡಿದ್ದು ಎಷ್ಟು ಗೊತ್ತಾ?
ಬ್ರೆಜಿಲ್‌ನಲ್ಲಿ ಬಹುಪತ್ನಿತ್ವವು ಕಾನೂನುಬಾಹಿರವಾಗಿರುವುದರಿಂದ ವಿವಾಹವು ಕಾನೂನುಬದ್ಧವಾಗಿಲ್ಲದಿದ್ದರೂ ಆರ್ಥರ್ ಕಳೆದ ವರ್ಷ ಒಂಬತ್ತು ಮಹಿಳೆಯರನ್ನು ಒಟ್ಟಿಗೆ ವಿವಾಹವಾದರು.
ಬ್ರೆಜಿಲಿಯನ್ ಮಾಡೆಲ್ ಆರ್ಥರ್ ಒ ಉರ್ಸೊ, ಭರ್ತಿ 8 ಹೆಂಡತಿಯರ ಮುದ್ದಿನ ಗಂಡ. ಈತ ತನ್ನ 9 ಹೆಂಡತಿಯರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ. ಆದರೆ ಇತ್ತೀಚೆಗಷ್ಟೇ ಒಬ್ಬಳು ಪತ್ನಿ ಇವರಿಂದ ಬೇರ್ಪಟ್ಟಿದ್ದು, ಇದೀಗ 8 ಮಂದಿ ಪತ್ನಿಯರ ಜೊತೆ ಜೀವನ ನಡೆಸುತ್ತಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ 50,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಈ ಮಾಡೆಲ್ ತಮ್ಮ 6 ಹೆಂಡತಿಯರನ್ನು ಶಾಪಿಂಗ್ ಮಾಡಲು ಕರೆದುಕೊಂಡು ಹೋಗಿದ್ದಾರೆ. 6 ಹೆಂಡತಿಯರ ಶಾಪಿಂಗ್‌ಗೆ ಸುಮಾರು 9 ಲಕ್ಷ ರೂಪಾಯಿಗಳನ್ನು ಆರ್ಥರ್ ಖರ್ಚು ಮಾಡಿದ್ದಾರೆ.
ಬ್ರೆಜಿಲ್‌ನಲ್ಲಿ ಬಹುಪತ್ನಿತ್ವವು ಕಾನೂನುಬಾಹಿರವಾಗಿರುವುದರಿಂದ ವಿವಾಹವು ಕಾನೂನುಬದ್ಧವಾಗಿಲ್ಲದಿದ್ದರೂ ಆರ್ಥರ್ ಕಳೆದ ವರ್ಷ ಒಂಬತ್ತು ಮಹಿಳೆಯರನ್ನು ಒಟ್ಟಿಗೆ ವಿವಾಹವಾದರು. ಆದರೆ ಇತ್ತೀಚೆಗಷ್ಟೇ ಆರ್ಥರ್ ಅವರ ಪತ್ನಿಯೊಬ್ಬರು ವಿಚ್ಛೇದನಕ್ಕೆ ನಿರ್ಧರಿಸಿದ ಬಳಿಕ ಸುದ್ದಿಯಲ್ಲಿದ್ದರು. ಈಗ ಮತ್ತೆ ತಮ್ಮ 6 ಪತ್ನಿಯನ್ನು ಶಾಪಿಂಗ್‌ಗೆ ಕರೆದುಕೊಂಡುನ ಹೋಗಿ ಸುದ್ದಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಆರ್ಥರ್ "ನಾನು ಇನ್ನೂ ಈ ಎಲ್ಲಾ ವಿಷಯಗಳ ಬಗ್ಗೆ ಕಲಿಯುತ್ತಿದ್ದೇನೆ" ಎಂದಿದ್ದಾರೆ.
ಆರ್ಥರ್ ಬ್ರೆಜಿಲಿಯನ್ ಪ್ರೇಮಿಗಳ ದಿನದಂದು ಪತ್ನಿಯರ ಮೇಲಿನ ಪ್ರೀತಿಯನ್ನು ತೋರಿಸಲು ಉಡುಗೊರೆಗಳನ್ನು ಖರೀದಿಸಲು ನಿರ್ಧರಿಸಿದ್ದರು. ಬ್ರೆಜಿಲಿಯನ್ ಪ್ರೇಮಿಗಳ ದಿನವನ್ನು ಜೂನ್ 12 ರಂದು ಆಚರಿಸಲಾಗುತ್ತದೆ. ಆರ್ಥರ್ ಬ್ರೆಜಿಲಿಯನ್ ವ್ಯಾಲೆಂಟೈನ್ಸ್ ಡೇಗೆ ಶಾಪಿಂಗ್ ಮಾಡಲು ತನ್ನ 6 ಹೆಂಡತಿಯರೊಂದಿಗೆ ಹೋಗಿದ್ದಾರೆ. ಈ ವೇಳೆ ಆರ್ಥರ್ ಮೊದಲ ಪತ್ನಿ ಲುವಾನಾ ಕಾಜ್ಕಿ ಕೂಡ ಜೊತೆಗಿದ್ದರು. ಮಾಲ್‌ನಲ್ಲಿ ಆರ್ಥರ್ ಪತ್ನಿಯರಿಗೆ ಉಡುಗೊರೆಗಳನ್ನೂ ಖರೀದಿಸಿದ್ದಾರೆ.
ಇದನ್ನೂ ಓದಿ: ನಿಮಗೆ ಎಷ್ಟು ಮದುವೆಯಾಗೋ ಯೋಗವಿದೆ? ಜಾತಕ ಹೇಳುತ್ತೆ ಕೇಳಿ
ಆರ್ಥರ್ ಅವರು 8 ಪತ್ನಿಯರಿಗೆ ಉಡುಗೊರೆಗಳನ್ನು ಖರೀದಿಸಲು ಸುಮಾರು 8 ಲಕ್ಷ 64 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಎಲ್ಲಾ ಪತ್ನಿಯರು ಒಂದೇ ರೀತಿಯ ಉಡುಗೊರೆಗಳನ್ನು ಖರೀದಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. "ನಾನು ಎಲ್ಲರಿಗೂ ಒಂದೇ ರೀತಿಯ ಉಡುಗೊರೆಗಳನ್ನು ನೀಡಬೇಕೆಂದು ಬಯಸಿದ್ದೆ, ಹೆಚ್ಚೆಂದರೆ ಬಣ್ಣಗಳು ವಿಭಿನ್ನವಾಗಿರಬಹುದು, ಇಲ್ಲದಿದ್ದರೆ ಅವರ ನಡುವೆ ಜಗಳ ಪ್ರಾರಂಭವಾಗುತ್ತದೆ ಎಂದು ಹೇಳಿದ್ದೆ, ಇದಕ್ಕೆ ಅವರೂ ಒಪ್ಪಿದ್ದರು" ಎಂದು ಆರ್ಥರ್ ಹೇಳಿದ್ದಾರೆ.
ಅವರ ಸಂಬಂಧದ ಬಗ್ಗೆ ಮಾತನಾಡುತ್ತಾ "ನಾನು ಇನ್ನೂ ಈ ಎಲ್ಲಾ ವಿಷಯಗಳ ಬಗ್ಗೆ ಕಲಿಯುತ್ತಿದ್ದೇನೆ, ಆದರೆ ನಾನು ಯಾವಾಗಲೂ ನನ್ನ ಕೈಲಾದಷ್ಟು ಮಾಡಲು ಪ್ರಯತ್ನಿಸುತ್ತೇನೆ. ನಾನು ಒಂದಕ್ಕಿಂತ ಹೆಚ್ಚು ಹೆಂಡತಿಯನ್ನು ಹೊಂದಿರುವುದರಿಂದ ಮಿತಿ ಮೀರಿ ಪ್ರಯತ್ನಿಸುತ್ತೇನೆ, ಹಾಗಾಗಿ ನಾನು ಎಲ್ಲರಿಗೂ ಉತ್ತಮವಾಗಿರಬೇಕು. ನಾನು ಹಣ ಸಂಪಾದಿಸುತ್ತೇನೆ ಮತ್ತು ಅವರಿಗೆ ಉತ್ತಮವಾದದ್ದನ್ನು ನೀಡುವಲ್ಲಿ ನನ್ನ ಕಡೆಯಿಂದ ಎಲ್ಲ ಪ್ರಯತ್ನವನ್ನು ಮಾಡುತ್ತೇನೆ" ಎಂದು ಆರ್ಥರ್ ಹೇಳಿದ್ದಾರೆ. .
ಇದನ್ನೂ ಓದಿ: ಅಮ್ಮನಾ? ಹೆಂಡತಿಯಾ? ಕಾಡುವ ಹೆಂಗಸರ ನಿಭಾಯಿಸೋದು ಹೀಗೆ