Asianet Suvarna News Asianet Suvarna News

Relationship Tips: ಹುಡುಗರೇಕೆ ಹುಡುಗೀರ ಬೆನ್ನು ಬೀಳ್ತಾರೆ? ಅದು ಅವರ ಹುಟ್ಟುಗುಣವಾ?

ಪುರುಷರು ತಮಗೆ ಇಷ್ಟವಾಗುವ ಮಹಿಳೆಯರನ್ನು ಭೇಟಿಯಾಗಲು ಯತ್ನಿಸುವುದು, ಪದೇ ಪದೆ ಪ್ರೊಪೋಸ್ ಮಾಡುವುದು, ತಮ್ಮ ಆಸಕ್ತಿಯನ್ನು ಪ್ರದರ್ಶಿಸುವುದು ಸಹಜ. ಬಹಳಷ್ಟು ಬಾರಿ ಅವರೇಕೆ ಹೀಗೆ ಮಾಡುತ್ತಾರೆ ಎಂದು ಬೇಸರ ಪಡುವಂತಾಗುತ್ತದೆ. ಅಸಲಿಗೆ, ತಮಗಿಷ್ಟವಾಗುವ ಮಹಿಳೆಯನ್ನು ಪಡೆಯಲು ಮುಂದಾಗುವುದು ಪುರುಷರ ಸಹಜ ಗುಣ.
 

Why men want to pursue woman and what is the reason for it
Author
First Published Feb 19, 2023, 11:03 AM IST

ಹುಡುಗರು ತಾವು ಇಷ್ಟಪಡುವ ಹುಡುಗಿಯನ್ನು ಹೇಗಾದರೂ ಮಾಡಿ ಓಲೈಸಲು ನಿರಂತರವಾಗಿ ಪ್ರಯತ್ನ ನಡೆಸುತ್ತಿರುತ್ತಾರೆ. ಪದೇ ಪದೆ ಫೋನ್ ಮಾಡುವುದು, ಮೆಸೇಜ್ ಮಾಡುವ ಮೂಲಕ ಅವರೊಂದಿಗೆ ಸಂಪರ್ಕದಲ್ಲಿರಲು ನೋಡುತ್ತಾರೆ. ಏನಾದರೂ ವಿಶೇಷ ಘಟನೆ ಸಂಭವಿಸಿದಾಗ, ಮಗದೊಮ್ಮೆ ತಮಗೇನಾದರೂ ಭಾವನೆಗಳು ಉಕ್ಕಿದಾಗ ತಾವು ಇಷ್ಟಪಡುವವರಿಗೆ ಅದನ್ನು ಹೇಳಲೇಬೇಕು ಎನ್ನುವ ಆತುರತೆ ತೋರುತ್ತಾರೆ. ಬೆನ್ನು ಬಿದ್ದಂತೆ ವರ್ತಿಸುವ ಪುರುಷರ ಈ ಸ್ವಭಾವದ ಬಗ್ಗೆ ಬಹಳಷ್ಟು ಮಹಿಳೆಯರು ಅಚ್ಚರಿ ಪಡುತ್ತಾರೆ. ಅಷ್ಟೇ ಅಲ್ಲ, ಕೆಲವೊಮ್ಮೆ ಅಸಹ್ಯವನ್ನೂ ಪಡಬಹುದು. ಏಕೆಂದರೆ, ಪುರುಷರು ಮಾಡುವುದು ಹಾಗೆಯೇ. ಆದರೆ, ತಮಗಿಷ್ಟವಾದ ಮಹಿಳೆಯರ ಬೆನ್ನು ಬೀಳುವುದು ಅವರ ಹುಟ್ಟುಗುಣ! ಚೇಸ್ ಮಾಡುವುದೆಂದರೆ ಅವರಿಗೆ ಇಷ್ಟ. ಅವರಲ್ಲಿ ಈ ಗುಣ ಅಡಕವಾಗಿರುತ್ತದೆ.

ಉದ್ದೇಶಪೂರ್ವಕವಾಗಿ ಹಾಗೂ ಅನುದ್ದೇಶಪೂರ್ವಕವಾಗಿ ಮಹಿಳೆಯ ಬೆನ್ನಟ್ಟುವುದು ಅವರ ರಕ್ತದಲ್ಲಿರುತ್ತದೆ. ಏಕೆಂದರೆ, ಸಂಗಾತಿಯನ್ನು ಗುರುತಿಸಿ ಸಂತಾನೋತ್ಪತ್ತಿಗೆ ಮುಂದಾಗುವುದು ಅವರ ಮೂಲ ಪ್ರೇರಣೆ. ಹೀಗಾಗಿ, ಯಾರಾದರೂ ಅವರಿಗೆ ಇಷ್ಟವಾದರು ಎಂದರೆ ಅವರ ಹಿಂದೆ ಬೀಳುವ ಗುಣ ಅವರಿಗೆ ಸಹಜವಾದದ್ದು. ಒಂದೊಮ್ಮೆ ಹುಡುಗನೊಬ್ಬ ನಿಮ್ಮ ಹಿಂದೆ ಬಿದ್ದಿಲ್ಲ ಎಂದಾದರೆ ಅವರು ಖಂಡಿತವಾಗಿ ನಿಮ್ಮನ್ನು ಪ್ರೀತಿಸುತ್ತಿಲ್ಲ ಅಥವಾ ನಿಮ್ಮ ಆಕರ್ಷಣೆಗೆ ಒಳಗಾಗಿಲ್ಲ ಎಂದರ್ಥ. 

ಬಯಸಿದ್ದನ್ನು ಪಡೆಯುವ ಗುಣ: ಪುರುಷರಿಗೆ (Male) ತಾವು ಬಯಸಿದ್ದನ್ನು ಪಡೆದುಕೊಳ್ಳಬೇಕೆಂಬ ಹಠ ಹೆಚ್ಚು. ಜತೆಗೆ, ತಮಗೆ ಸರಿಯಾದವರನ್ನು ಗುರುತಿಸಿ, ಸಂತಾನೋತ್ಪತ್ತಿ (Reproduction) ಮಾಡುವ ಉದ್ದೇಶ ಅವರ ಅರಿವಿಗೆ ಬಾರದಿದ್ದರೂ ಅಂತರಾಳದಲ್ಲಿರುತ್ತದೆ. ಹೀಗಾಗಿ, ಅವರು ಎಂತದ್ದೇ ರಿಸ್ಕ್ (Risk) ತೆಗೆದುಕೊಳ್ಳಲು ಸಿದ್ಧರಾಗುತ್ತಾರೆ ಎನ್ನುತ್ತದೆ ವಿಜ್ಞಾನ.

Real Story : ಮೊದಲ ಪ್ರೇಮಿ ನೆನೆದು ಕಣ್ಣೀರಿಡ್ತಾಳೆ ನನ್ನ ಹುಡುಗಿ

ಲೈಂಗಿಕ ಆಸೆ: ಒಂದೊಮ್ಮೆ ಯಾವುದಾದರೂ ಗಂಡಸು (Man) ನಿಮ್ಮ ಹಿಂದೆ ಬಿದ್ದಿದ್ದಾನೆ (Want to Pursue) ಎಂದರೆ ಆತ ನಿಮ್ಮ ಬಗ್ಗೆ ಲೈಂಗಿಕ ಬಯಕೆ ಹೊಂದಿದ್ದಾನೆ ಎಂದೂ ತಿಳಿಯಬಹುದು. ಏಕೆಂದರೆ, ಪುರುಷರು ಲೈಂಗಿಕತೆಯನ್ನು ಸಹಜವಾಗಿ ಇಷ್ಟಪಡುತ್ತಾರೆ. ಆದರೆ, ಕೆಲವರು ಲೈಂಗಿಕತೆಯೊಂದಿಗೆ ಇನ್ನೂ ಹೆಚ್ಚಿನ ಸಂಬಂಧವನ್ನು ಆಶಿಸುತ್ತಾರೆ. ಅದಕ್ಕಾಗಿ ಸ್ವಲ್ಪ ಸಿದ್ಧತೆ ನಡೆಸಬೇಕು ಎಂದುಕೊಳ್ಳುತ್ತಾರೆ.

ಸಮಾಜದಿಂದಲೂ ಅದೇ ನಿರೀಕ್ಷೆ (Expectation):  21ನೇ ಶತಮಾನದಲ್ಲಿ ನಾವಿದ್ದರೂ ಮನುಷ್ಯನ ಕೆಲವು ಮೂಲ ಧೋರಣೆಗಳು ಬದಲಾಗಿಲ್ಲ. ಪುರುಷನೊಬ್ಬ ಮಹಿಳೆಯನ್ನು (Woman) ಇಷ್ಟಪಟ್ಟಿದ್ದಾನೆ ಎಂದರೆ ಆತನೇ ಮುಂದಾಗಿ ಆಕೆಯನ್ನು ಅಪ್ರೋಚ್ (Approach) ಮಾಡಬೇಕು ಎನ್ನುವುದು ಸಮಾಜದ ಧೋರಣೆ. ಹೀಗಾಗಿ, ಅಂಥದ್ದೊಂದು ಒತ್ತಡವೂ ಪುರುಷರ ಮೇಲಿರುತ್ತದೆ. ಅಲ್ಲದೆ, ಆತನಿಗೆ ಮಹಿಳೆಯನ್ನು ಸಂಪರ್ಕಿಸುವುದು ಸುಲಭ. ನೇರವಾಗಿ ಮಾತನಾಡಬಹುದು, ಭೇಟಿಯಾಗಲು ಸ್ಥಳ ನಿಗದಿ ಮಾಡಬಹುದು. ಫೋನ್, ಮೆಸೇಜ್ ಹೀಗೆ ಸಾಕಷ್ಟು ಅವಕಾಶಗಳಿವೆ. ಆದರೆ, ಮಹಿಳೆ ಪ್ರೊಪೋಸ್ ಮಾಡಲು ಸಾಕಷ್ಟು ಹೆಣಗಾಡಬೇಕಾಗುತ್ತದೆ.  

ಬೆನ್ನಟ್ಟುವುದು ರೋಮ್ಯಾಂಟಿಕ್ (Romantic) ಹಾಗೂ ಧೈರ್ಯದ ಕ್ರಿಯೆ: ಇಷ್ಟಪಟ್ಟ ಹುಡುಗಿಯ ಹಿಂದೆ ಬೀಳುವುದಕ್ಕೆ ಧೈರ್ಯ (Brave) ಬೇಕು. ಅಲ್ಲದೆ, ಅದು ರೋಮ್ಯಾಂಟಿಕ್ ಆಗಿರುತ್ತದೆ ಎನ್ನುವುದು ಹುಡುಗರ ನಂಬಿಕೆ. ಅದಕ್ಕಾಗಿ ಪ್ರಯತ್ನಿಸಬೇಕು ಎನ್ನುವ ಭಾವನೆ ಹೊಂದಿರುತ್ತಾರೆ. ಯಾವುದೇ ಹುಡುಗಿಯನ್ನು (Girl) ಪಡೆಯಲು ಸ್ಪರ್ಧೆ ಇರುತ್ತದೆ ಎನ್ನುವುದನ್ನು ಅವರು ಅರಿತಿರುತ್ತಾರೆ. ಹೀಗಾಗಿ, ಸಾಕಷ್ಟು ಪ್ರಯತ್ನ ನಡೆಸುತ್ತಾರೆ. 

ನಿಮ್ಮ ಗೆಳತಿಯೂ ಒತ್ತಡ ಹಾಕಿ, ಸ್ವಾರ್ಥ ಈಡೇರಿಸಿಕೊಳ್ತಾರಾ?

ಏನೂ ಮಾಡದಿದ್ದರೆ ಹುಡುಗಿ ಇಲ್ಲ!: ಹುಡುಗಿಗಾಗಿ ಪ್ರಯತ್ನ (Try) ಪಡದಿದ್ದರೆ ಆಕೆ ಎಂದಿಗೂ ದಕ್ಕುವುದಿಲ್ಲ ಎನ್ನುವ ಸತ್ಯ ಹುಡುಗರಿಗೆ ತಿಳಿದಿರುತ್ತದೆ. ಹೀಗಾಗಿ, ಪ್ರಯತ್ನ ಮಾಡಲೇಬೇಕು ಎಂದು ಮುಂದಾಗುತ್ತಾರೆ. ಅಲ್ಲದೆ, ಬೇಕಾದುದನ್ನು ಪಡೆಯುವುದು ತಮ್ಮ ಹಕ್ಕು ಎನ್ನುವ ಭಾವನೆ ಹುಡುಗರಿಗೆ ಸಾಮಾನ್ಯವಾಗಿರುವುದರಿಂದ ಒಂದೊಮ್ಮೆ ಆಕೆ ಇಲ್ಲ ಎಂದರೂ ಅವರಿಗೆ ತಮ್ಮ ಪ್ರಯತ್ನ ತಪ್ಪು ಎಂದು ಅನ್ನಿಸುವುದಿಲ್ಲ.

Follow Us:
Download App:
  • android
  • ios