Real Story : ಮೊದಲ ಪ್ರೇಮಿ ನೆನೆದು ಕಣ್ಣೀರಿಡ್ತಾಳೆ ನನ್ನ ಹುಡುಗಿ

ಎಲ್ಲರಿಗೂ ಮೊದಲ ಮಾತು, ಮೊದಲ ಭೇಟಿ, ಮೊದಲ ಪ್ರೀತಿ ಸದಾ ನೆನಪಿನಲ್ಲಿರುತ್ತದೆ. ಇದನ್ನು ಮರೆಯೋದು ಅಷ್ಟು ಸುಲಭವಲ್ಲ. ಕೆಲವರು ಅದೇ ಗುಂಗಿನಲ್ಲಿ ಕಣ್ಮುಂದೆ ಇರುವ ನಿಜವಾದ ಪ್ರೀತಿಯನ್ನು ನಿರ್ಲಕ್ಷ್ಯ ಮಾಡ್ತಾರೆ.
 

Real Story He Love With Classmate But She Is Shedding Tears For Her First Boyfriend

ಮೊದಲ ಪ್ರೀತಿಯನ್ನು ಮರೆಯೋದು ಅಷ್ಟು ಸುಲಭವಲ್ಲ. ಒಬ್ಬರಿಗೆ ಮೊದಲ ಪ್ರೀತಿಯಲ್ಲಾದ ಮೋಸ ಮರೆಯೋಕೆ ಆಗ್ತಿಲ್ಲ. ಇನ್ನೊಬ್ಬರಿಗೆ ಮೊದಲ ಪ್ರೀತಿ ಧಕ್ಕುತ್ತಿಲ್ಲ. ಮಾಜಿ ಬಾಯ್ ಫ್ರೆಂಡ್ ಗುಂಗಿನಲ್ಲೇ ಇರುವ ಗೆಳತಿಯನ್ನು ಹೇಗೆ ಸರಿದಾರಿಗೆ ತರೋದು ಎಂಬ ಗೊಂದಲದಲ್ಲಿ ಹುಡುಗನಿದ್ದಾನೆ. ಅಷ್ಟಕ್ಕೂ ಆತನ ಕಥೆ ಏನು ಅನ್ನೋದನ್ನು ನಾವು ಹೇಳ್ತೆವೆ.

ಆತನಿಗೆ 22 ವರ್ಷ. ಸ್ನಾತಕೋತ್ತರ (Masters) ಪದವಿ ಓದುತ್ತಿದ್ದಾನೆ. ಕ್ಲಾಸ್ ಮೆಂಟ್ ಒಬ್ಬಳನ್ನು ಪ್ರೀತಿ (Love) ಮಾಡ್ತಿದ್ದಾನೆ. ಇಬ್ಬರು ಅನೇಕ ವರ್ಷಗಳಿಂದ ಪರಿಚಿತರು. 10ನೇ ಕ್ಲಾಸ್ ನಲ್ಲಿಯೇ ಇಬ್ಬರು ಸ್ನೇಹಿತರಾಗಿದ್ದರು. ಆಕೆಗೆ ಆಗ್ಲೇ ಒಬ್ಬ ಬಾಯ್ ಫ್ರೆಂಡ್  (Boyfriend  ) ಇದ್ದ. ಇಬ್ಬರು ಮೂರು ವರ್ಷ ಸಂಬಂಧದಲ್ಲಿದ್ದರು. ಆದ್ರೆ ಪದವಿ ಓದಲು ವಿದೇಶಕ್ಕೆ ಹೋದ ಬಾಯ್ ಫ್ರೆಂಡ್ ಈಕೆಯನ್ನು ಮರೆತಿದ್ದಾನೆ. ಒಂದು ಫೋನ್ ಕೂಡ ಮಾಡಿಲ್ಲವಂತೆ. ಆತ ಭಾರತ (India) ಕ್ಕೆ ಬಂದಾಗ ಇಬ್ಬರ ಮಧ್ಯೆ ದೊಡ್ಡ ಗಲಾಟೆಯಾಗಿತ್ತಂತೆ. ಒಟ್ಟಾರೆ ಕೆಟ್ಟ ರೀತಿಯಲ್ಲಿ ಇಬ್ಬರು ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. 
ಈ ಘಟನೆ ನಂತ್ರ ಆಕೆ ಈತ ಓದುತ್ತಿದ್ದ ಕಾಲೇಜ್ ಗೆ ಬಂದಿದ್ದಾಳೆ. ಈಗ ಒಂದೇ ವಿಶ್ವವಿದ್ಯಾನಿಲಯದಲ್ಲಿ ಸೀಟ್ ಸಿಕ್ಕಿದೆ. ಇದ್ರಿಂದ ಹುಡುಗ ಖುಷಿಯಾಗಿದ್ದಾನೆ. ಒಂದು ದಿನ ಆಕೆ ಮುಂದೆ ಪ್ರೀತಿ ನಿವೇದನೆ ಮಾಡಿದ್ದಾನೆ. ಆದ್ರೆ ಹುಡುಗ ಪ್ರೀತಿ ವಿಷ್ಯ ಹೇಳಿದ್ದಂತೆ ಆಕೆ ದಂಗಾಗಿದ್ದಾಳೆ. 

RELATIONSHIP TIPS : ಪ್ರೀತಿ ಪ್ರೇಮ ಹತ್ಯೆ…! ಇತ್ತೀಚಿಗೆ ಹೆಚ್ಚಾಗ್ತಿದೆ ಈ ಕೃತ್ಯ

ನನ್ನ ಹಿಂದಿನ ವಿಷ್ಯ ನಿನಗೆ ತಿಳಿದಿದೆ. ಆತನನ್ನು ಮರೆಯೋದು ನನಗೆ ಸಾಧ್ಯವಾಗ್ತಿಲ್ಲ. ನಾವಿಬ್ಬರು ಪ್ರೇಮಿಗಳಾಗಲು ಸಾಧ್ಯವೇ ಇಲ್ಲ. ಇಬ್ಬರು ಸ್ನೇಹಿತರಾಗಿ ಇರೋಣ ಎಂದು ಹುಡುಗಿ ಹೇಳಿದ್ದಾಳಂತೆ. ಇದನ್ನು ಕೇಳಿದ ಹುಡುಗನ ಹೃದಯ ಒಡೆದಿದೆ. ನಾನು ಆಕೆಯನ್ನು ತುಂಬಾ ಪ್ರೀತಿ ಮಾಡ್ತೇನೆ. ಆದ್ರೆ ಆಕೆ ಹಳೆ ಪ್ರೀತಿಯಲ್ಲಿಯೇ ಇನ್ನೂ ಕಾಲ ಕಳೆಯುತ್ತಿದ್ದಾಳೆ. ಮೊದಲ ಪ್ರೀತಿ ಮರೆಯೋದು ಹುಡುಗಿಯರಿಗೆ ಅಷ್ಟು ಕಷ್ಟವಾ ಎಂದು ಪ್ರಶ್ನೆ ಮಾಡ್ತಾನೆ ಹುಡುಗ.

ತಜ್ಞರ (Experts) ಸಲಹೆ : ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸೋಲನ್ನು ಅನುಭವಿಸುತ್ತಾನೆ. ಅದ್ರಿಂದ ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಈ ಸೋಲಿನಿಂದಲೇ ಜೀವನ ಕೊನೆಗೊಳ್ಳುತ್ತದೆ ಎಂದಲ್ಲ. ಪ್ರೀತಿಸಿದ್ದ ವ್ಯಕ್ತಿಯನ್ನು ಮರೆಯುವುದು ತುಂಬಾ ಕಷ್ಟ. ಆಕೆ ಇನ್ನೊಂದು ಸಂಬಂಧಕ್ಕೆ ಸಿದ್ಧವಾಗಿಲ್ಲ. ಹಾಗಂತ ನೀವು ಚಿಂತಿಸುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು. 

ನಿರೀಕ್ಷೆ (Expectations) ಬೇಡ ಎನ್ನುತ್ತಾರೆ ತಜ್ಞರು : ಆಕೆ ಸ್ನೇಹಿತೆಯಾಗಿ ಇರ್ತೇನೆ ಎಂದಿದ್ದಾಳೆ. ನೀವು ಪದೇ ಪದೇ ಪ್ರೀತಿ ವಿಷ್ಯ ಹೇಳಿದ್ರೆ ಆಕೆಯ ಸ್ನೇಹವನ್ನೂ ನೀವು ಕಳೆದುಕೊಳ್ಳಬಹುದು. ಪ್ರತಿಯೊಬ್ಬರ ಆಯ್ಕೆ ಭಿನ್ನವಾಗಿರುತ್ತದೆ. ಆಕೆಯ ಆಯ್ಕೆ ನೀವಾಗಿಲ್ಲದೆ ಇರಬಹುದು. ಹಾಗಾಗಿ ಆಕೆ ಮೇಲೆ ಹೆಚ್ಚು ನಿರೀಕ್ಷೆ ಇಡಬೇಡಿ. ಆಕೆಯ ಜೊತೆ ಸ್ನೇಹವನ್ನು ಮಾತ್ರ ಮುಂದುವರೆಸಿ ಎನ್ನುತ್ತಾರೆ ತಜ್ಞರು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆಲೋಚನೆ ಮಾಡಿ ಹೆಜ್ಜೆಯಿಡಿ. 

ನಿಮ್ಮ ಗೆಳತಿಯೂ ಒತ್ತಡ ಹಾಕಿ, ಸ್ವಾರ್ಥ ಈಡೇರಿಸಿಕೊಳ್ತಾರಾ?

ಸಮಯ ವ್ಯರ್ಥ ಮಾಡ್ಬೇಡಿ : ಪ್ರೀತಿಸುವ ವ್ಯಕ್ತಿ ನಿಮ್ಮನ್ನು ನಿರಾಕರಿಸಿದ್ದರೆ ಅಲ್ಲಿಗೆ ಎಲ್ಲವೂ ಮುಗಿಯಿತು ಎಂದಲ್ಲ. ಆಕೆ ಹಿಂದೆ ಸುತ್ತುತ್ತ ಸಮಯ ಹಾಳ್ಮಾಡ್ಬೇಕಾಗಿಲ್ಲ. ಹೊಸದನ್ನು ಕಲಿಯಿರಿ. ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಗಮನ ನೀಡಿ. ಜೀವನದಲ್ಲಿ ಏನಾಗಬೇಕು ಎಂಬುದನ್ನ ನಿರ್ಧರಿಸಿ. ನಿಮಗೆ ಅವರಿಗಿಂತ ಹೆಚ್ಚು ಪ್ರೀತಿಸುವ ವ್ಯಕ್ತಿ ಸಿಗಬಹುದು. ಸ್ನೇಹಿತೆ ಮನಸ್ಸು ಒಡೆದಿರುವ ಕಾರಣ ಕೆ ಮತ್ತೆ ನಿಮ್ಮ ಬಳಿ ಬರದೆ ಇರಬಹುದು. ಪ್ರೀತಿಸುವಂತೆ ಆಕೆಗೆ ಒತ್ತಡ ಹೇರಿದ್ರೆ ಆಕೆಗೆ ಇನ್ನಷ್ಟು ಹಿಂಸೆಯಾಗ್ಬಹುದು. ನಿಮ್ಮಿಂದ ಶಾಶ್ವತವಾಗಿ ದೂರ ಸರಿಯಬಹುದು. ಹಾಗಾಗಿ ಎಲ್ಲವನ್ನೂ ಬಿಟ್ಟು ಭವಿಷ್ಯದ ಬಗ್ಗೆ ಆಲೋಚಿಸಿ ಎನ್ನುತ್ತಾರೆ ತಜ್ಞರು. 

Latest Videos
Follow Us:
Download App:
  • android
  • ios