Relationship Tips: ಪ್ರೀತಿಯಲ್ಲಿ ಸುಳ್ಳು ಹೇಳಿ, ಸಂಬಂಧ ಉಳಿಸಿಕೊಳ್ಳಿ
ಸಂಬಂಧ (Relationship)ಗಳಲ್ಲಿ ಕೆಲವೊಮ್ಮೆ ಹೀಗೆಯೂ ಆಗುತ್ತದೆ. ಒಬ್ಬರನ್ನೊಬ್ಬರು ಸಂತೋಷ (Happy) ವಾಗಿಡಬೇಕಾದರೆ ಸುಳ್ಳುಗಳನ್ನು ಹೇಳಲೇಬೇಕಾಗುತ್ತದೆ. ಆ ಸುಳ್ಳುಗಳು (Lie) ನಿಮ್ಮ ಸಂಬಂಧ(Relationship)ವನ್ನು ಮತ್ತಷ್ಟು ಸದೃಢಗೊಳಿಸುವಂತಿರಬೇಕು. ನೀವು ಪ್ರೀತಿಯಲ್ಲಿದ್ದೀರಾ ಎಂದರೆ ಕೆಲ ಸುಳ್ಳುಗಳನ್ನು ಹೇಳುವುದು ನಿಮಗೆ ತುಂಬಾ ಪ್ರಯೋಜನಕಾರಿಯಾಗಬಹುದು
ಸಂಬಂಧಗಳು (Relationship) ಎಂದರೆ ಪ್ರೀತಿ (Love), ವಿಶ್ವಾಸ, ನಂಬಿಕೆ (Trust)ಯ ಮೇಲೆ ರೂಪುಗೊಳ್ಳುವಂಥದ್ದು. ಹೀಗಾಗಿಯೇ ಸಂಬಂಧವೊಂದರಲ್ಲಿ ಏನಿದೆಯೋ ಇಲ್ವೋ ಸಂಗಾತಿಯ (Partner) ಮೇಲಿನ ನಂಬಿಕೆ ಮುಖ್ಯ ಎಂದು ಹೇಳುತ್ತಾರೆ. ಇಬ್ಬರು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಬೇಕು. ಯಾವುದೇ ಕಾರಣಕ್ಕೂ ಗಂಡ-ಹೆಂಡತಿ ಪರಸ್ಪರ ಸುಳ್ಳು ಹೇಳಬಾರದು, ಯಾವುದೇ ವಿಚಾರವನ್ನು ಪರಸ್ಪರ ಮುಚ್ಚಿಡಬಾರದು ಎಂದು ಹಿರಿಯರು ಹೇಳುತ್ತಾರೆ. ಆದರೆ ಕೆಲವೊಮ್ಮೆ ಸಂಬಂಧಗಳು ಚೆನ್ನಾಗಿರಬೇಕಾದರೆ ಸುಳ್ಳು ಹೇಳುವುದು ಅನಿವಾರ್ಯವಾಗುತ್ತದೆ. ದಂಪತಿಗಳು ಪರಸ್ಪರ ಹಾಗೆ ಸುಳ್ಳು ಹೇಳುತ್ತಾರೆ ಕೂಡಾ.
ಸುಳ್ಳು ಹೇಳುವುದರಿಂದ ಹೇಗೆ ಸಂಬಂಧ ಹಾಳಾಗಬಹುದಾ ಹಾಗೆಯೇ ಸುಳ್ಳು ಹೇಳದೇ ಇರುವುದರಿಂದಲೂ ದಾಂಪತ್ಯ (Married life) ಕೊನೆಗೊಳ್ಳುವ ಸಾಧ್ಯತೆಯಿದೆ. ಕೆಲವು ಸಂಬಂಧಗಳೇ ಹಾಗೆ ಒಬ್ಬರನ್ನು ಸಂತೋಷವಾಗಿಡಬೇಕಾದರೆ ಸುಳ್ಳುಗಳನ್ನು ಹೇಳಲೇಬೇಕಾಗುತ್ತದೆ. ಆ ಸುಳ್ಳುಗಳು ನಿಮ್ಮ ಸಂಬಂಧವನ್ನು ಮತ್ತಷ್ಟು ಸದೃಢಗೊಳಿಸುವಂತಿರುತ್ತದೆ. ನಾವು ಪ್ರೀತಿಯಲ್ಲಿದ್ದಾಗ ಆ ಸಂಬಂಧವನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಲು ಸಾಕಷ್ಟು ಕಷ್ಟಪಡುತ್ತೇವೆ ಈ ಪ್ರಪಂಚದಲ್ಲಿ ಸುಳ್ಳು ಹೇಳದ ವ್ಯಕ್ತಿ ಯಾರಿದ್ದಾರೆ ಹೇಳಿ. ಕೆಲವೊಮ್ಮೆ ಸಂಬಂಧಗಳನ್ನು ಉಳಿಸಿಕೊಳ್ಳಲು ಸುಳ್ಳು ಹೇಳಬೇಕಾಗುತ್ತದೆ.
Marriage Problems: ಯುವತಿಯನ್ನು ಈ ಕಾರಣಕ್ಕೆ ರಿಜೆಕ್ಟ್ ಮಾಡ್ತಿದ್ದಾರೆ ಹುಡುಗ್ರು
ಯಾವುದೇ ಸಂಬಂಧವಿರಲಿ ಅದರಲ್ಲಿ ನಂಬಿಕೆ (Trust), ವಿಶ್ವಾಸ ಬೆಳೆಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಏಕಾಏಕಿ ಯಾರ ಮೇಲೆಯೂ ನಂಬಿಕೆ ಬೆಳೆದುಬಿಡುವುದಿಲ್ಲ. ಒಮ್ಮೆ ವಿಶ್ವಾಸ ಹುಟ್ಟಿದ ನಂತರ ಅದನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಂಡು ಬರಬೇಕು,ಇಲ್ಲದಿದ್ದಲ್ಲಿ ಒಮ್ಮೆ ಕಷ್ಟಪಟ್ಟು ಗಳಿಸಿದ ವಿಶ್ವಾಸ,ನಂಬಿಕೆ ಒಂದು ಕ್ಷಣದಲ್ಲಿ ಮುರಿದು ಬೀಳಬಹುದು. ಸಾಕಷ್ಟು ಬಾರಿ ಸರಿಯಾದ ಸಮಯವನ್ನು ನೀಡಿದರೆ ಮತ್ತು ನೀವು ಮನಸ್ಸು ಮಾಡಿದರೆ ವಿಶ್ವಾಸವನ್ನು ಪುನಃ ಗಳಿಸಲು ಸಾಧ್ಯವಿದೆ.ಆದರೆ ನಿಮ್ಮ ಮನಸ್ಸಿನಲ್ಲಿ ಒಂದು ಅನುಮಾನ ಇದ್ದೇ ಇರುತ್ತದೆ.ಅದರ ಜೊತೆಗೆ ನೀವು ಇತರರನ್ನೂ ಕೂಡ ನಂಬುವುದು ಕಷ್ಟವಾಗಿಬಿಡುತ್ತದೆ. ಹೀಗಾಗಿ ಕೆಲವೊಮ್ಮೆ ಸಂಬಂಧಗಳನ್ನು ಉಳಿಸಿಕೊಳ್ಳಲು ಸಹ ಸುಳ್ಳು ಹೇಳಬೇಕಾಗಿ ಬರುತ್ತದೆ.-
ಸಂಬಂಧಗಳು ಹಾಳಾಗುತ್ತಿರುವಾಗ ಸುಳ್ಳುಗಳನ್ನು ಹೇಳಿ
ಕೆಲವೊಬ್ಬರು ಸಂಬಂಧಗಳಲ್ಲಿ ತುಂಬಾ ಪೊಸೆಸಿವ್ ಆಗಿರುತ್ತಾರೆ. ಹೀಗಾಗಿ ಇಂಥವರಿಗೆ ಸುಳ್ಳುಗಳನ್ನು ಹೇಳುವುದು ಅನಿವಾರ್ಯವಾಗಿ ಬಿಡುತ್ತದೆ. ಯಾಕೆಂದರೆ ಇಂಥವರು ತಾವು ಇಷ್ಟಪಟ್ಟವರು ಬೇರೆ ಯಾರೊಂದಿಗೂ ಕ್ಲೋಸ್ ಅಗಿರುವುದನ್ನು ಇಷ್ಟಪಡುವುದಿಲ್ಲ. ಒಂದೊಮ್ಮೆ ನಿಮ್ಮ ಸಂಬಂಧಗಳು ಹಾಳಾಗುತ್ತಿದೆ ಎನಿಸಿದಾಗ ಸುಳ್ಳುಗಳನ್ನು ಹೇಳಿ, ಪತಿ-ಪತ್ನಿ ನಡುವೆ ಯಾವುದೋ ವಿಷಯಕ್ಕೆ ಜಗಳವಾಗುವುದು ಸಾಮಾನ್ಯ, ಒಂದೊಮ್ಮೆ ನಿಮ್ಮ ಸಂಬಂಧ ಹಾಳಾಗುತ್ತಿದೆ ಎನ್ನುವಾಗ ನೀವು ಸುಳ್ಳುಗಳನ್ನು ಹೇಳಿ ಸಂಬಂಧ ಉಳಿಸಿಕೊಳ್ಳಿ, ಈ ಒಂದು ಸುಳ್ಳು ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗದಂತೆ ಮಾಡುತ್ತದೆ.
ನಿಮ್ಮ ವೈವಾಹಿಕ ಜೀವನವನ್ನು ಯಶಸ್ವಿಗೊಳಿಸುವ ಸೂತ್ರಗಳಿವು
ಸುಳ್ಳು ಹೊಗಳಿಕೆ : ಗಂಡ ಅಥವಾ ಹೆಂಡತಿ ಯಾರೇ ಆಗಿರಲಿ ತಾವು ಚೆನ್ನಾಗಿ ರೆಡಿಯಾದಾಗ ಸಂಗಾತಿ ತಮ್ಮನ್ನು ಹೊಗಳಬೇಕೆಂದು ಬಯಸುತ್ತಾರೆ. ಪ್ರತಿಯೊಬ್ಬರಿಗೂ ತಮ್ಮ ಪಾರ್ಟ್‌ನರ್ ಚೆಂದವಾಗಿ ಕಾಣಬೇಕು, ಒಳ್ಳೊಳ್ಳೆ ಬಟ್ಟೆಗಳನ್ನು ಧರಿಸಬೇಕು ಎಂಬ ಆಶಯವಿರುತ್ತದೆ, ಆದರೆ ಕೆಲವೊಮ್ಮೆ ಸಂಗಾತಿ ಧರಿಸಿದ ಬಟ್ಟೆ ನಿಮಗೆ ಇಷ್ಟವಾಗುವುದಿಲ್ಲ, ಆದರೆ ಅದನ್ನು ಅವರಿಗೆ ಹೇಳಲು ನಿಮ್ಮಿಂದ ಸಾಧ್ಯವಾಗದಿದ್ದಾಗ ಹೊಗಳಿಕೆಯ ಮಾತನ್ನಾಡಿ. ಚೆನ್ನಾಗಿ ಕಾಣುತ್ತಿಲ್ಲವೆಂದು ಹೇಳಿ ಅವರ ಮನಸ್ಸನ್ನು ನೋಯಿಸುವುದಕ್ಕಿಂತ ಇದೇ ಒಳ್ಳೆಯದು ಅಲ್ವಾ.
ತಿಳಿಯದೇ ಮಾಡಿದ ತಪ್ಪುಗಳನ್ನು ಹೇಳಬೇಡಿ: ಕೆಲವೊಮ್ಮೆ ಹೀಗೂ ಆಗುತ್ತದೆ. ಏನೋ ಮಾಡಲು ಹೋಗಿ ಇನ್ನೇನೋ ಆಗಿಬಿಡುತ್ತದೆ. ಹೀಗೆ ಸಣ್ಣಪುಟ್ಟ ತಪ್ಪುಗಳಾದಾಗ ಗಂಡನಿಗೆ ಅಥವಾ ಹೆಂಡತಿಗೆ ಹೇಳಲು ಹೋಗಬೇಡಿ. ಇದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆಯೂ ಇದೆ. ಹೀಗಾಗಿ ಇಂಥಾ ಸಂದರ್ಭದಲ್ಲಿ ಸುಳ್ಳು ಹೇಳಿದರೂ ಪರವಾಗಿಲ್ಲ.
ಶಾಪಿಂಗ್: ಸಾಮಾನ್ಯವಾಗಿ ಹೆಂಗಸರು ಶಾಪಿಂಗ್ಗೆ ಹೋದರೆ ಮನೆಗೆ ಬರುವಾಗ ಶಾಪಿಂಗ್ ಮಾಡಿದ ವಸ್ತುಗಳನ್ನು ಕಾರಿನಲ್ಲೇ ಇಟ್ಟು ಬರುತ್ತಾರೆ, ಪತಿ ಕಚೇರಿಗೆ ತೆರಳಿದ ಬಳಿಕ ಅವುಗಳನ್ನು ಮನೆಯೊಳಗೆ ತರುತ್ತಾರೆ, ಪತಿಗೆ ಶಾಪಿಂಗ್ನ ಅರ್ಧ ಬೆಲೆ ಮಾತ್ರ ಹೇಳುತ್ತಾರೆ. ಇಂಥಾ ವಿಚಾರದಲ್ಲಿ ನಿಜಾಂಶ ಹೇಳುವುದು ಗಂಡನ ಸಿಟ್ಟಿಗೆ ಕಾರಣವಾಗುವುದಾದರೆ ಈ ವಿಚಾರವನ್ನು ಹೇಳದಿರುವುದು ಒಳ್ಳೆಯದು.