Extra marital affair: ವಿವಾಹೇತರ ಸಂಬಂಧಗಳು ಕೇವಲ ವ್ಯಕ್ತಿತ್ವ ಅಥವಾ ನೈತಿಕತೆಯ ವಿಷಯ ಎಂದು ಭಾವಿಸುವುದು ಮೇಲ್ನೋಟಕ್ಕೆ ಮಾತ್ರ. ಅದರ ಹಿಂದೆ ಆಳವಾದ ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಕಾರಣಗಳಿವೆ.
ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ದರ ಹೆಚ್ಚುತ್ತಿದೆ. ಇದರಲ್ಲಿ ಎರಡೂ ರೀತಿಯ ಜೋಡಿಗಳು ಸೇರಿವೆ. ಅಂದರೆ ಅರೆಂಜ್ ಮ್ಯಾರೇಜ್ ಮತ್ತು ಲವ್ ಮ್ಯಾರೇಜ್. ಪ್ರೀತಿ ಇದ್ದಲ್ಲಿ ದ್ರೋಹಕ್ಕೆ ಅವಕಾಶವಿಲ್ಲ ಎಂದು ಸಾಮಾನ್ಯವಾಗಿ ನಂಬಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ನಂಬಿಕೆಯೂ ಸುಳ್ಳಾಗಿದೆ. ಏಕೆಂದರೆ ತಮ್ಮ ಪ್ರೀತಿಪಾತ್ರರನ್ನು ಮದುವೆಯಾದ ನಂತರವೂ ಜನರು ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆ.
ಇದು ತಪ್ಪೆಂದು ಎಲ್ಲರೂ ಹೇಳುತ್ತಾರೆ. ಆದರೆ ಹಾಗೆ ಹೇಳುವುದರಿಂದ ಎಲ್ಲವೂ ಸರಿಯಾಗುತ್ತದೆಯೇ?. ಇಲ್ಲ. ಹಾಗಾದರೆ ಇದು ಏಕೆ ಸಂಭವಿಸುತ್ತದೆ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳುವುದು ಮುಖ್ಯ. ಮನಶಾಸ್ತ್ರಜ್ಞೆ ಡಾ. ಮಾಲಿನಿ ಸಾಬಾ ಈ ಬಗ್ಗೆ ಕೆಲವು ಮಾಹಿತಿಗಳನ್ನು ಇಲ್ಲಿ ಶೇರ್ ಮಾಡಿದ್ದಾರೆ.
ವಿವಾಹೇತರ ಸಂಬಂಧಗಳು ಕೇವಲ ವ್ಯಕ್ತಿತ್ವ ಅಥವಾ ನೈತಿಕತೆಯ ವಿಷಯ ಎಂದು ಭಾವಿಸುವುದು ಮೇಲ್ನೋಟಕ್ಕೆ ಮಾತ್ರ. ಅದರ ಹಿಂದೆ ಆಳವಾದ ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಕಾರಣಗಳಿವೆ. ಆದರೆ ಜನರು ಹೀಗೇಕೆ ಮಾಡುತ್ತಾರೆ ಎಂಬುದನ್ನು ವೈದ್ಯರಿಂದ ವಿವರವಾಗಿ ತಿಳಿದುಕೊಳ್ಳೋಣ.
ಪ್ರೇಮ ವಿವಾಹಗಳಲ್ಲಿ ನಿರೀಕ್ಷೆಗಳ ಹೊರೆ
ಪ್ರೇಮ ವಿವಾಹಗಳಲ್ಲಿ ಸಂಗಾತಿಯು ಏನನ್ನೂ ಹೇಳದೆಯೇ ಪ್ರತಿಯೊಂದು ಭಾವನೆಯನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇರುತ್ತದೆ ಎಂದು ಮನಶಾಸ್ತ್ರಜ್ಞರು ವಿವರಿಸುತ್ತಾರೆ. ಕಾಲಾನಂತರದಲ್ಲಿ ವೃತ್ತಿ, ಕುಟುಂಬ, ಮಕ್ಕಳು ಹೀಗೆ ಜವಾಬ್ದಾರಿಗಳು ಹೆಚ್ಚಾದಂತೆ ಸಂಬಂಧದಲ್ಲಿ ಸಂವಹನ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಭಾವನಾತ್ಮಕ ಅಂತರವು ಸದ್ದಿಲ್ಲದೆ ಉದ್ಭವಿಸುವುದು ಇಲ್ಲಿಯೇ. ಒಬ್ಬ ವ್ಯಕ್ತಿಯು ತನ್ನ ಸಂಗಾತಿ ಕೇಳಿಸಿಕೊಳ್ಳುತ್ತಿಲ್ಲ, ಅರ್ಥಮಾಡಿಕೊಂಡಿಲ್ಲ ಅಥವಾ ಮೆಚ್ಚುಗೆ ಪಡೆದಿಲ್ಲ ಎಂದು ಭಾವಿಸಿದಾಗ ಅವರು ಹೊರಗಿನ ಭಾವನಾತ್ಮಕ ಸಂಪರ್ಕವನ್ನು ಹುಡುಕಲು ಪ್ರಾರಂಭಿಸುತ್ತಾರೆ.
ಭಾವನಾತ್ಮಕ ಬೆಂಬಲ
ಪುರುಷರಿಗಾಗಲಿ ಅಥವಾ ಮಹಿಳೆಯರಿಗಾಗಲಿ ಮದುವೆಯ ನಂತರ ಇಬ್ಬರಿಗೂ ಹೊರಗಿನ ಯಾರಾದರೂ ಹೊಗಳಿಕೆ, ಗಮನ ಅಥವಾ ಭಾವನಾತ್ಮಕ ಬೆಂಬಲ ನೀಡಿದಾಗ ಈ ಸಂಬಂಧವು ದೈಹಿಕಕ್ಕಿಂತ ಹೆಚ್ಚಾಗಿ ಭಾವನಾತ್ಮಕವಾಗಿರುತ್ತದೆ ಎಂದು ಡಾ. ಸಾಬಾ ಹೇಳುತ್ತಾರೆ.
ಏನು ಮಾಡಿದರೂ ನಡೆಯುತ್ತದೆ ಎಂಬ ಭ್ರಮೆ
ಪ್ರೇಮ ವಿವಾಹದಲ್ಲಿ ಹೆಚ್ಚಾಗಿ ಏನು ಮಾಡಿದರೂ ನಡೆಯುತ್ತದೆ ಎಂಬ ಭ್ರಮೆ ಹೊಂದಿರುತ್ತಾರೆ. ಆದ್ದರಿಂದಲೇ ಜನರು ಡೇಟಿಂಗ್, ಮನಮುಟ್ಟುವ ಡೈಲಾಗ್ಸ್, ಸರ್‌ಪ್ರೈಸ್ ಇಂತಹ ಎಲ್ಲಾ ಪ್ರಯತ್ನಗಳನ್ನು ಕ್ರಮೇಣ ನಿಲ್ಲಿಸುತ್ತಾರೆ. ಕ್ರಮೇಣ ಸಂಬಂಧದಲ್ಲಿ ಪ್ರೀತಿ ಕಡಿಮೆಯಾಗುತ್ತದೆ. ಆಗ ಹೊರಗಿನಿಂದ ಯಾರೋ ಆ ಕಳೆದುಹೋದ ಭಾವನೆಯನ್ನು ನಮಗೆ ನೆನಪಿಸುತ್ತಾರೆ.
ಹೀಗೇಕೆ ಮಾಡುತ್ತಾರೆ?
ಮನಶಾಸ್ತ್ರಜ್ಞರ ಪ್ರಕಾರ ಮಹಿಳೆಯರು ಹೆಚ್ಚಾಗಿ ಭಾವನಾತ್ಮಕ ಕಾರಣಗಳಿಗಾಗಿ ಪ್ರಣಯ ಸಂಬಂಧಗಳಿಗೆ ಪ್ರವೇಶಿಸುತ್ತಾರೆ. ಅಂದರೆ ಅವರ ಮಾತನ್ನು ಕೇಳಿಸಿಕೊಳ್ಳದಿರುವುದು, ಮೆಚ್ಚುಗೆಯ ಕೊರತೆ, ಭಾವನಾತ್ಮಕ ಒಂಟಿತನ, ತಮ್ಮ ಗುರುತನ್ನು ಕಳೆದುಕೊಳ್ಳುವ ಭಾವನೆ. ಹಾಗೆಯೇ ಪುರುಷರ ವಿಷಯದಲ್ಲಿ ಕಾರಣಗಳು ವಿಭಿನ್ನವಾಗಿರಬಹುದು. ಉದಾಹರಣೆಗೆ ಗಮನದ ಅವಶ್ಯಕತೆ, ತನ್ನನ್ನು ತಾನು ಸಾಬೀತುಪಡಿಸುವ ಬಯಕೆ, ಭಾವನಾತ್ಮಕ ವಿಷಯಗಳನ್ನು ಹಂಚಿಕೊಳ್ಳಲು ಸಾಧ್ಯವಾಗದ ಅಭ್ಯಾಸ, ಮದುವೆಯನ್ನು ಜವಾಬ್ದಾರಿಯಾಗಿ ಪರಿಗಣಿಸುವುದು
ಹಾಗಾಗಿ ಪುರುಷರು ಇದನ್ನು ಕೇವಲ ದೈಹಿಕ ಕಾರಣಗಳಿಗಾಗಿ ಮಾಡುತ್ತಾರೆ ಎಂದು ಭಾವಿಸುವುದು ತಪ್ಪು. ಭಾವನಾತ್ಮಕ ಅತೃಪ್ತಿಯೂ ಇಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.
ವಿವಾಹೇತರ ಸಂಬಂಧ ಯಾವಾಗಲೂ ವಿವಾಹದ ಅಂತ್ಯದ ಸೂಚನೆಯೇ?
ಅಗತ್ಯವಾಗಿ ಅಲ್ಲ. ಕೆಲವೊಮ್ಮೆ ಇದು ಸಂಬಂಧದಲ್ಲಿ ಏನೋ ತಪ್ಪಾಗಿದೆ ಎಂಬ ಎಚ್ಚರಿಕೆಯಾಗಿದೆ. ಇಬ್ಬರೂ ಪ್ರಾಮಾಣಿಕವಾಗಿ ಸಂವಹನ ನಡೆಸಿದರೆ, ವೃತ್ತಿಪರರ ಸಹಾಯವನ್ನು ಪಡೆದರೆ ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಸಂಬಂಧವು ಇನ್ನಷ್ಟು ಬಲಗೊಳ್ಳಬಹುದು.
ಪರಿಹಾರವೇನು?
*ಮುಕ್ತ ಮತ್ತು ಸುರಕ್ಷಿತ ಸಂವಹನ.
*ಭಾವನಾತ್ಮಕ ಅಗತ್ಯತೆಗಳನ್ನು ಗುರುತಿಸುವುದು.
*ಒಬ್ಬರನ್ನೊಬ್ಬರು ಹಗುರವಾಗಿ ಪರಿಗಣಿಸದಿರುವುದು.
*ಸಂಬಂಧವನ್ನು ಕಾಪಾಡಿಕೊಳ್ಳುವುದಷ್ಟೇ ಅಲ್ಲ, ಅದರ ಮೇಲೆ ಕೆಲಸ ಮಾಡುವುದು
*ಸಮಯಕ್ಕೆ ಸರಿಯಾಗಿ ಸಮಾಲೋಚನೆ ಪಡೆಯುವುದು.
ವೈದ್ಯರ ಸಲಹೆಯೇನು?
ವಿವಾಹೇತರ ಸಂಬಂಧವನ್ನು ಮೋಸ ಎಂದು ತಳ್ಳಿಹಾಕುವುದು ಪರಿಹಾರವಲ್ಲ ಎಂದು ಡಾ. ಮಾಲಿನಿ ಸಾಬಾ ಹೇಳುತ್ತಾರೆ. ಇದು ಅತೃಪ್ತ ಭಾವನೆಗಳು, ಅತೃಪ್ತ ಸಂವಹನ ಮತ್ತು ಅತೃಪ್ತ ತಿಳುವಳಿಕೆಯ ಸಂಕೇತವಾಗಿದೆ. ಸಂಬಂಧಗಳನ್ನು ಉಳಿಸಲು ಮೊದಲು ಅವುಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.


