Asianet Suvarna News Asianet Suvarna News

ಇದು ಭಾರತೀಯ ಯುವ ಮನಸ್ಸುಗಳ ಪೇಚಾಟ

ಯೌವನವೇ ಹಾಗೇ, ಭಾವನೆಗಳ ಹೊಯ್ದಾಟ, ಕಲ್ಪನೆಗಳ ಹುಚ್ಚಾಟ.ಆದ್ರೆ ಕೊರೋನಾ ಕಾರಣಕ್ಕೆ ಮನೆಯೊಳಗೆ ಬಂಧಿಯಾದ ಭಾರತದ ಯುವಜನರು ತಮ್ಮ ಭಾವನೆಗಳನ್ನು ಹಂಚಿ ಕೊಳ್ಳಲು ಸೂಕ್ತ ಮನಸ್ಸು ಸಿಗುತ್ತಿಲ್ಲ ಎಂಬ ಕೊರಗಿನಲ್ಲಿದ್ದಾರೆ ಎಂದು ಇತ್ತೀಚೆಗಿನ ಸಮೀಕ್ಷೆಯೊಂದು ತಿಳಿಸಿದೆ. ಏಕೆಂದ್ರೆ ಇವರಿಗೆ ಹೆತ್ತವರ ಮುಂದೆ ಮನಸ್ಸು ಬಿಚ್ಚಿಡಲು ಹಿಂಜರಿಕೆಯಂತೆ.
 

Why Indian youths unable to express their feelings with parents
Author
Bangalore, First Published Oct 14, 2020, 6:43 PM IST
  • Facebook
  • Twitter
  • Whatsapp

ಬಾಲ್ಯದಲ್ಲಿ ಶಾಲೆಗೆ ಹೋಗಲ್ಲ ಎಂದು ಅಮ್ಮನ ಸೆರಗು ಹಿಡಿದು ರಚ್ಚೆ ಹಿಡಿಯುತ್ತಿದ್ದಮಗು,ನಿಧಾನವಾಗಿ ಶಾಲೆಯೆಂಬ ಪರಿಸರಕ್ಕೆ ಹೊಂದಿಕೊಳ್ಳಲಾರಂಭಿಸುತ್ತದೆ. ಅಪ್ಪ,ಅಮ್ಮಹಾಗೂ ಕುಟುಂಬ ಸದಸ್ಯರನ್ನು ಹೊರತುಪಡಿಸಿಯೂ ಒಂದು ಲೋಕವಿದೆ ಎಂಬುದು ಮಗುವಿಗೆ ಅರಿವಾಗೋದು ಶಾಲೆಗೆ ಕಾಲಿಟ್ಟಾಗಲೇ. ಸ್ನೇಹಿತರು,ಶಿಕ್ಷಕರ ಜೊತೆ ಬೆರೆತು ಅಲ್ಲಿನ ಪರಿಸರಕ್ಕೆ ಒಗ್ಗಿಕೊಳ್ಳೋ ಮಗು ಸಂಜೆ ಮನೆಗೆ ಬಂದ ತಕ್ಷಣ ಆ ದಿನದ ಸಂಪೂರ್ಣ ವಾರ್ತೆಯನ್ನು ಅಮ್ಮ ಹಾಗೂ ಅಪ್ಪನ ಮುಂದೆ ಒಪ್ಪಿಸಲು ಮಾತ್ರ ಮರೆಯೋದೇ ಇಲ್ಲ.ಆದ್ರೆ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಾಲೆಗೆ ಕಾಲಿಟ್ಟ ತಕ್ಷಣ ವಯೋಸಹಜವಾಗಿ ಆತ ಅಥವಾ ಆಕೆಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಒಂದಿಷ್ಟು ಬದಲಾವಣೆಗಳಾಗುತ್ತವೆ.ಚೆನ್ನಾಗಿ ಓದು,ದೊಡ್ಡವರಿಗೆ ಗೌರವ ನೀಡು, ಹಾಗೇ ಮಾಡಬೇಡ,ಹೀಗೆ ಮಾಡಬೇಡ,ಅಲ್ಲಿ ಹೋಗಬೇಡ ಎಂದೆಲ್ಲಬುದ್ಧಿವಾದ ಹೇಳೋ,ಶಿಸ್ತಿನ ಪಾಠ ಮಾಡೋ ಅಪ್ಪ-ಅಮ್ಮನಿಗಿಂತ ಸ್ನೇಹಿತರ ಬಳಗ ಹೆಚ್ಚುಇಷ್ಟವಾಗತೊಡಗೋದು ಈ ವಯಸ್ಸಿನಲ್ಲೇ.

ಹುಡುಗಿಯರಿಗೆ ಇಷ್ಟವಾಗೋ ಹುಡುಗರ ಗುಣ

ಮನಸ್ಸಿನಲ್ಲಿ ಒಡಮೂಡೋ ಭಾವನೆಗಳನ್ನು ಸ್ನೇಹಿತರ ಮುಂದೆ ಹಂಚಿಕೊಂಡಷ್ಟು ಸುಲಭವಾಗಿ ಪೋಷಕರ ಮುಂದೆ ಹೇಳಿಕೊಳ್ಳಲು ಆಗೋದೇ ಇಲ್ಲ.ಅದ್ರಲ್ಲೂ ಭಾರತದ ಕೌಟುಂಬಿಕ ವ್ಯವಸ್ಥೆಯಲ್ಲಿ ಇಂದು ಸಾಕಷ್ಟು ಬದಲಾವಣೆಗಳಾಗಿದ್ರೂ ಪೋಷಕರ ಮುಂದೆ ಮನಬಿಚ್ಚಿ ಭಾವನೆಗಳನ್ನು ಹರವಿಕೊಳ್ಳೋದು ಮಕ್ಕಳಿಗೆ ಕಷ್ಟದ ಕೆಲಸವೇ ಆಗಿದೆ ಎನ್ನುತ್ತದೆ ಜನಪ್ರಿಯ ಆನ್‌ಲೈನ್‌ ವಿವಾಹ ವೇದಿಕೆ ಶಾದಿ ಡಾಟ್‌ ಕಾಮ್‌ ಇತ್ತೀಚೆಗೆ ನಡೆಸಿದ ಸಮೀಕ್ಷೆ. ಇದರ ಪ್ರಕಾರ ಭಾರತದಲ್ಲಿ ಶೇ.49ರಷ್ಟು ಯುವಜನತೆ ಪೋಷಕರೊಂದಿಗೆ ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲಾರರು.ಇನ್ನು ಶೇ.69ರಷ್ಟು ಮಂದಿ ಲವ್‌, ಗರ್ಲ್‌ಫ್ರೆಂಡ್‌, ಬಾಯ್‌ಫ್ರೆಂಡ್‌ ಮುಂತಾದ ಸಂಬಂಧಗಳ ಬಗ್ಗೆ ಪೋಷಕರ ಮುಂದೆ ಮಾತನಾಡಲು ಪರದಾಡುತ್ತಾರಂತೆ.

ಗಂಡಸರೆಲ್ಲ ಭೂಮಿಯ ಮೇಲಿನಿಂದ ಮಾಯವಾದರೆ, ಹೆಣ್ಮಕ್ಕಳು ಏನ್ಮಾಡುತ್ತಾರೆ?

ಏನಿದು ಸಮೀಕ್ಷೆ?
ಶಾದಿ ಡಾಟ್‌ ಕಾಮ್‌ನ ಸಾಮಾಜಿಕ ಕಾರ್ಯಗಳ ವೇದಿಕೆ ಶಾದಿ ಕೇರ್ಸ್‌ ಕೊರೋನಾ ಪೆಂಡಾಮಿಕ್‌ ಅವಧಿಯಲ್ಲಿ ಮನೆಯೊಳಗ ಪೋಷಕರೊಂದಿಗೆ ಹೆಚ್ಚಿನ ಸಮಯ ಕಳೆದ ಭಾರತದ ಯುವಸಮುದಾಯ ಆ ಸಮಯದಲ್ಲಿ ಎದುರಿಸಿದ ಸವಾಲುಗಳು ಹಾಗೂ ಅವರ ಮಾನಸಿಕ ಆರೋಗ್ಯದ ಕುರಿತು ಅಧ್ಯಯನ ನಡೆಸಲು ಸಮೀಕ್ಷೆ ಕೈಗೊಂಡಿತ್ತು.ಒಂದರ್ಥದಲ್ಲಿ ಈ ಸಮೀಕ್ಷೆಯಲ್ಲಿ ಅನಾವರಣಗೊಂಡ ವಿಚಾರಗಳು ಭಾರತೀಯ ಯುವ ಪೀಳಿಗೆಯ ಮನಸ್ಥಿತಿಗೆ ಕನ್ನಡಿ ಹಿಡಿದಿದೆ. ಪೋಷಕರ ಮುಂದೆ ಮಕ್ಕಳು ವಯೋಸಹಜ ಭಾವನೆಗಳು,ಆಕರ್ಷಣೆಗಳು ಹಾಗೂ ಮನಸ್ಸಿನ ತುಮುಲಗಳನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಾರೆ. ಬೇರೆ ಸಮಯದಲ್ಲಾದ್ರೆ ಕಾಲೇಜು,ಟ್ಯೂಷನ್‌,ಪಾರ್ಟಿ ಹೀಗೆ ಸ್ನೇಹಿತರನ್ನು ಭೇಟಿಯಾಗಲು ಹಲವು ಮಾರ್ಗಗಳಿದ್ದವು. ಅವರ ಬಳಿ ಮುಕ್ತವಾಗಿ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು.ಆದ್ರೆ ಕೊರೋನಾ ಬಂದ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಕಾಲೇಜಿಗೆ ರಜೆ, ಆಫೀಸ್‌ಗೆ ಹೋಗೋವರಿಗೆ ಅದೂ ಇಲ್ಲ. ಪರಿಣಾಮ ಮನೆಯೊಳಗೇ ಹೆಚ್ಚಿನ ಸಮಯ ಕಳೆಯಬೇಕಾದ ಅನಿವಾರ್ಯತೆ. ಈ ಸಮಯದಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ಅವರದ್ದೇ ಮನಸ್ಥಿತಿಯ ಜೀವವೊಂದರ ಕೊರತೆ ಬಹುತೇಕರನ್ನು ಕಾಡಿದೆ.

 

ಕಾಲ್‌ ಅಥವಾ ಚಾಟ್‌ ಮೂಲಕ ಸ್ನೇಹಿತರನ್ನು ಸಂಪರ್ಕಿಸಿದರೂ ಕೆಲವು ವಿಷಯಗಳನ್ನು ಮುಖಾಮುಖಿಯಾಗಿ ಕುಳಿತು ಮಾತನಾಡಿದಾಗಲೇ ಮನಸ್ಸು ಹಗುರವಾಗೋದು.ಆದ್ರೆ ಮನೆಯಲ್ಲಿ ಅಪ್ಪ- ಅಮ್ಮನ ಮುಂದೆ ಹಾಗೆಲ್ಲ ಮಾತನಾಡಲು ಆಗೋದಿಲ್ಲ.ಹೀಗೆ ಮನಸ್ಸಿನೊಳಗೇ ಭಾವನೆಗಳನ್ನು ಅದುಮಿಟ್ಟುಕೊಂಡ ಪರಿಣಾಮ ಒತ್ತಡ ಹಾಗೂ ಉದ್ವೇಗ ಹೆಚ್ಚುತ್ತಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.53ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.ಇನ್ನುಈ ಸಮೀಕ್ಷೆಯಲ್ಲಿ ಪೋಷಕರ ಅಭಿಪ್ರಾಯಗಳನ್ನು ಕೂಡ ಸಂಗ್ರಹಿಸಲಾಗಿದೆ. ಶೇ.92 ಮಂದಿ ಪೋಷಕರು ಮಕ್ಕಳು ತಮ್ಮೊಂದಿಗೆ ಯಾವುದೇ ವಿಷಯವನ್ನು ಮಾತನಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡಿರೋದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಶೇ.72ರಷ್ಟು ಪೋಷಕರ ಪ್ರಕಾರ ಮಕ್ಕಳೊಂದಿಗಿನ ಅವರ ಕಮ್ಯೂನಿಕೇಷನ್‌ ಗ್ಯಾಪ್‌ಗೆ ಜನರೇಷನ್‌ ಗ್ಯಾಪ್‌ ಕಾರಣ ಅಲ್ಲವೇ ಅಲ್ಲ.ಇನ್ನು ಶೇ.42 ಪೋಷಕರ ಪ್ರಕಾರ ವಿವಾಹಕ್ಕೂ ಮುನ್ನ ತಮ್ಮ ಮಕ್ಕಳು ಯಾರೊಂದಿಗೂ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದ್ರೆ ಅದನ್ನು ನಮಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಏಕೆಂದ್ರೆ ನಾವು ಮದುವೆಗೂ ಮುನ್ನ ಅಂಥ ಯಾವುದೇ ಸಂಬಂಧ ಹೊಂದಿರಲಿಲ್ಲಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಲ್ಕೋಹಾಲ್ ಸೇವಿಸಿ ರೊಮ್ಯಾನ್ಸ್‌ ಮಾಡಬೇಕು ಎಂದು ಯೋಚಿಸೋರು ಸ್ವಲ್ಪ ಇದನ್ನ ಓದಿ

ಹೆತ್ತವರು ಮಕ್ಕಳ ನಡುವೆ ಈ ಗ್ಯಾಪ್‌ ಏಕೆ?
ಮಗ ಅಮ್ಮನ ಮುಂದೆ ʼನಾನು ಕಾಲೇಜಿನಲ್ಲಿ ಒಂದು ಹುಡ್ಗೀನ ಇಷ್ಟಪಡುತ್ತಿದ್ದೇನೆ ಎಂದ ತಕ್ಷಣ ಬಹುತೇಕ ಭಾರತೀಯ ಅಮ್ಮಂದಿರು ಮಾಡೋ ಕೆಲ್ಸ ಬೈಯಲು ಪ್ರಾರಂಭಿಸೋದು.ಇದನ್ನು ಮೊದಲೇ ಊಹಿಸಿರೋ ಮಗ ಟಾಪಿಕ್‌ ಚೇಂಜ್‌ ಮಾಡ್ಬಹುದು ಅಥವಾ ಆ ವಿಷಯ ಅಲ್ಲಿಗೇ ಬಿಟ್ಟು ಬಿಡಬಹುದು. ಮುಂದೆ ಎಂದೂ ಅಮ್ಮನ ಬಳಿ ಆತ ಹದಿಹರೆಯದ ಮನಸ್ಸಿನಲ್ಲಿ ಮುಡೋ ಭಾವನೆಗಳ ಬಗ್ಗೆ ಮಾತನಾಡಲಾರ. ಅದೇ ಮಗ ಪ್ರೀತಿಸುತ್ತಿದ್ದೇನೆ ಎಂಬ ವಿಷಯ ಹೇಳಿದಾಗ ಒಬ್ಬ ತಾಯಿ ಆ ಕ್ಷಣಕ್ಕೆ ಕೋಪಗೊಳ್ಳದೆ ಆತನ ವಯಸ್ಸಿಗೇ ಇಳಿದು ಅದೇ ದಾಟಿಯಲ್ಲಿ ಮಾತನಾಡಲಾರಂಭಿಸಿದ್ರೆ ಆತ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳುತ್ತಾನೆ. ಆ ಬಳಿಕ ಆ ತಾಯಿ ಹದಿಹರೆಯದಲ್ಲಿ ಇದೆಲ್ಲ ಕಾಮನ್‌. ನಂಗೂ ಆಗಿತ್ತು. ಆದ್ರೆ ಪ್ರೀತಿ-ಪ್ರೇಮಕ್ಕೆ ಇದು ಸರಿಯಾದ ವಯಸ್ಸಲ್ಲ ಎಂದು ನಿಧಾನವಾಗಿ ತಿಳಿ ಹೇಳಿದ್ರೆ ಮಗ ಅಮ್ಮನ ಮಾತಿನ ವಾಸ್ತವಾಂಶವನ್ನು ಖಂಡಿತಾ ಅರ್ಥೈಸಿಕೊಳ್ಳುತ್ತಾನೆ. ಹದಿಹರೆಯದ ಮಕ್ಕಳಿಗೆ ಪೋಷಕರು ಉತ್ತಮ ಸ್ನೇಹಿತರಾದ್ರೆ ಮಾತ್ರ ಅವರ ಮನಸ್ಸಿನ ತುಮುಲಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತೆ. ಅವರು ತಪ್ಪು ದಾರಿಯಲ್ಲಿ ಸಾಗುತ್ತಿದ್ರೆ ಎಚ್ಚರಿಸಲು ಕೂಡ ಅವಕಾಶ ಸಿಗುತ್ತೆ. 

Follow Us:
Download App:
  • android
  • ios