Asianet Suvarna News Asianet Suvarna News

ಗಂಡಸರೆಲ್ಲ ಭೂಮಿಯ ಮೇಲಿನಿಂದ ಮಾಯವಾದರೆ, ಹೆಣ್ಮಕ್ಕಳು ಏನ್ಮಾಡುತ್ತಾರೆ?

ಗಂಡಸರೆಲ್ಲ ಒಂದು ದಿನದ ಮಟ್ಟಿಗೆ ಐ ಮೀನ್‌, ಇಪ್ಪತ್ತನಾಲ್ಕು ಗಂಟೆಗಳ ಮಟ್ಟಿಗೆ ಈ ಭೂಮಿಯ ಮೇಲಿನಿಂದ ಅದೃಶ್ಯರಾಗಿಬಿಟ್ಟರೆ ಮಹಿಳೆಯರು ಏನು ಮಾಡಬಹುದು?

 

What if men vanished from earth for 24 hours
Author
Bengaluru, First Published Oct 12, 2020, 2:14 PM IST

ಹೀಗೊಂದು ಕುತೂಹಲಕಾರಿ ಪ್ರಶ್ನೆಯನ್ನು ಇನ್‌ಸ್ಟಗ್ರಾಮ್‌ನಲ್ಲಿ ಯಾರೋ ಎಸೆದರು. ಕ್ರೌನ್ ದಿ ಬ್ರೌನ್ ಅನ್ನುವ ಅಕೌಂಟ್‌ನಿಂದ ಈ ಪ್ರಶ್ನೆಯನ್ನು ತೂರಿಬಿಡಲಾಗಿತ್ತು. ಇದಕ್ಕೆ ಉತ್ತರಿಸಿದವರು ಹೆಚ್ಚಾಗಿ ಸ್ತ್ರೀಯರು. ಏನು ಉತ್ತರಿಸಿದರು ಎಂಬುದು ಕುತೂಹಲಕಾರಿ.

ಕೆಲವರು, ನಾವು ಮಧ್ಯರಾತ್ರಿ ಮೂರು ಗಂಟೆಗೆ ಸಿಟಿಯ ಬೀದಿಗಳಲ್ಲಿ ಯಾರ ಭಯವೂ ಇಲ್ಲದೆ ವಾಕಿಂಗ್ ಹೋಗುತ್ತೇವೆ ಎಂದರು. ಇನ್ನು ಕೆಲವರು, ಸ್ವಿಮ್ ಸೂಟ್ ಅಥವಾ ಬಿಕಿನಿ ಧರಿಸಿಕೊಂಡು ಯಾರ ಟೀಸಿಂಗ್‌ನ ಭಯ ಆತಂಕವೂ ಇಲ್ಲದೆ ಬೀಚ್‌ನಲ್ಲಿ ಓಡಾಡುತ್ತೀವಿ, ಈಜುತ್ತೀವಿ ಎಂದರು. ಮೆಟ್ರೋ ಅಥವಾ ಸಿಟಿ ಬಸ್ಸಿನಲ್ಲಿ ಯಾರ ಕೆಣಕುವ ಕಣ್ಣುಗಳ ಭಯವಿಲ್ಲದೆ, ಮೈತುಂಬ ಶಾಲು ಸುತ್ತಿಕೊಳ್ಳುವ ಮುಜುಗರವಿಲ್ಲದೆ, ತನ್ನ ಸೊಂಟದ ಪಕ್ಕ ಇನ್ಯಾರೋ ಕೈಹಾಕಿ ಕೆಣಕುತ್ತಾರೆ ಎಂಬ ಆತಂಕವಿಲ್ಲದೆ ಮೈಮರೆತು ಪ್ರಯಾಣಿಸುತ್ತೀನಿ ಎಂದು ಇನ್ನೊಬ್ಬರು ಬರೆದುಕೊಂಡರು. ಬೆಂಗಳೂರಿನಂಥ ನಗರದಲ್ಲೂ ಶಾರ್ಟ್ ಚಡ್ಡಿ ಧರಿಸಿ ಎಂಜಿರೋಡಿನಲ್ಲೂ ಓಡಾಡೋಕೆ ಭಯವಾಗುತ್ತಾ ಇರುತ್ತೆ. ಅಲ್ಲೂ ಪೊರ್ಕಿಗಳ ಕಾಟ ತಪ್ಪಿದ್ದಲ್ಲ. ಒಂದು ದಿನ ಭಯವಿಲ್ಲದೆ ಓಡಾಡಬಹುದು ಅಂತ ಇನ್ನೊಬ್ಬರು. ಪಬ್ಬುಗಳಲ್ಲಿ ಗಂಡಸರ ಹಾರಾಟ ಹೆಚ್ಚು. ಅಲ್ಲಿ ವಕ್ರ ಕಂಗಳ ನೋಟವಿಲ್ಲದೆ ನಮಗೆ ಬೇಕಾದುದನ್ನು ಸೇವಿಸಿ ಮೈಮರೆತು ಇರೋಕೆ ಮಜವಾಗಿರುತ್ತೆ ಅಂತ ಮತ್ತೊಬ್ಬರು.

 

 
 
 
 
 
 
 
 
 
 
 
 
 

"what would you do if there were no men on earth for 24 hrs?" Recently on tiktok a user raised this question. The answers they received from other women depicts how Women around the world are yenning for Freedom and Invulnerability. . Take a look, scroll further. It's 2020, but women are still afraid to walk alone in the night, They are afraid for their lives, They are afraid to dress up how they want to. They are afraid to jog with their headphones on... . When I lived in India I thought it's just my country which makes me feel unsafe, after moving to Berlin I felt vulnerable here too. . Things are different when I am walking with my husband next to me in night, No one dares to catcall me, But when he isn't around and I am walking home alone, I hear "Baby", "wallah", "habibi" Sometimes they get too close, Sometimes they stop their car to invite me to Party with them. Does this mean that I need my husband's protection all the time? Does it make me approachable on the streets if I am not accompanied by another man? . . I have nothing against men, I am raising a boy, I understand all men are not the same. But when will this get over?? What's the solution for this? . I too want to walk alone on the streets in night without fearing for my life, I don't want to keep on checking if someone is following me home, I am not your baby or habibi, I don't want you to stop your car and invite me inside, I don't want you to slip your hands around my waist in a packed train. Enough is enough. Image source : Bored Panda via @illentric_ _____________________________________________________________________________ To be featured be sure to follow @crownthebrown_ , tag us! Use the hashtag #crownthebrown ! 👑

A post shared by Crown The Brown © 👑 (@crownthebrown_) on Oct 11, 2020 at 1:29am PDT

 

ಗಂಡಸರಿಲ್ಲದ ಜಗತ್ತನ್ನು ಊಹಿಸೋದೇನೋ ಕಷ್ಟ ನಿಜ. ಆದರೆ ಗಂಡಸರಿಲ್ಲದೆ ಇದ್ದರೆ ನಾವು ಹಾಯಾಗಿರ್ತೀವಿ ಅಂತ ಇಷ್ಟೊಂದು ಮಂದಿ ಹೆಂಗಳೆಯರು ಹೇಳುವಾಗ, ಗಂಡಸರಲ್ಲೇ ಏನೋ ಸೀರಿಯಸ್ ದೋಷ ಇದೆ ಅಂತ ನಾವು ತಿಳೀಬೇಕಾದ್ದು ಇದೆ ಅಲ್ವಾ? ಅಂದ್ರೆ ಇವರಿಗೆ ಪುರುಷರು ದೈನಂದಿನ ಜೀವನದಲ್ಲಿ ಎಷ್ಟು ಕಾಟ ಕೊಟ್ಟಿರಬಹುದು ಅಂತ ಗಂಡಸರಲ್ಲೇ ಒಬ್ಬರು ಬರೆಯುತ್ತಾರೆ. ಅದು ನಿಜ ಕಣ್ರೀ. ಹೆಂಗಸರಿಲ್ಲದ ಜಗತ್ತಿನಲ್ಲಿ ನಾವು ಹಾಯಾಗಿರ್ತೀವಿ ಅತ ಒಬ್ಬ ಗಂಡಸಾದಾರೂ ಭಾವಿಸೋಕೆ ಸಾಧ್ಯಾನಾ? ಯಾಕಂದ್ರೆ ಮಹಿಳೆಯರು ಹಾಗೆ ಗಂಡಸರನ್ನು ಕೆಣಕುವ, ಮುಜುಗರಕ್ಕೆ ಒಳಪಡಿಸುವ ಸನ್ನಿವೇಶಗಳು ಇಲ್ಲ. ಇದೇ ಗಂಡಸರಿಗೂ ಹೆಂಗಸರಿಗೂ ಇರುವ ವ್ಯತ್ಯಾಸ ಅಂತ ಇನ್ನೊಬ್ಬರು.

ಆನ್‌ಲೈನ್‌ ಕ್ಲಾಸಿಗೆ 'ಬೆತ್ತಲೆ' ತಾಯಿ ಪ್ರವೇಶ.. ಹೌಹಾರಿದ ಟೀಚರ್! 

ಕೆಲವು ತಮಾಷೆ ಉತ್ತರಗಳೂ ಬಂದಿವೆ. ಒಂದು ದಿನದ ಮಟ್ಟಿಗೆ ಗಂಡಸರು ಭೂಮಿಯಿಂದ ಮಾಯವಾದರೆ ಏನಾಗುತ್ತೆ? ಬಾರ್‌ಗಳು ಮುಚ್ಚಿಹೋಗುತ್ತವೆ. ಕಾಂಡೋಮ್ ಕಂಪನಿಗಳು ದಿವಾಳಿಯಾಗುತ್ತವೆ. ಸೆಕ್ಸ್ ಥೆರಪಿಸ್ಟ್‌ಗಳಿಗೆ ಕೆಲಸವಿರೋಲ್ಲ. ಒಂದು ದಿನದ ಮಟ್ಟಿಗೆ ಕ್ರೈಮುಗಳು ಇರೋಲ್ಲ. ಯಾಕಂದ್ರೆ ಹೆಚ್ಚಿನ ಕ್ರೈಮುಗಳು ಆಗೋದು ಗಂಡಸರಿಂದ. ರೇಪ್‌ಗಳು ನಡೆಯುವುದು ಗಂಡಸರಿಂದ. ಇವೆಲ್ಲ ನಡೆಯದೇ ಇರೋದರಿಂದ ಪೊಲೀಸರಿಗೆ ಕೆಲಸವಿರೋಲ್ಲ. ಆಕ್ಚುಯಲೀ ಪೊಲೀಸರೂ ಹೆಚ್ಚಾಗಿ ಗಂಡಸರೇ ಅಲ್ವಾ. ಹೀಗಾಗಿ ಅವರೂ ಇರೋಲ್ಲ.

ಬ್ರಿಟಿಷ್ ಕಮಿಷನರ್ ಆದ ದೆಹಲಿಯ ಬಾಲೆ..! 

ಹೆಂಗಸರು ಇಡೀ ದಿನ ಶಾಪಿಂಗ್‌ ಮಾಡಬಹುದು. ಮುಗೀತೇನೇ ಅಂತ ನಿಮಿಷಕ್ಕೊಮ್ಮೆ ಕೇಳಿ ಕಿರಿಕಿರಿ ಮಾಡುವ ಗಂಡಂದಿರು ಇರೋಲ್ಲ. ತಾನು ದುಡಿದದ್ದನ್ನು ತಾನೇ ಖರ್ಚು ಮಾಡೋಕೆ ಮಹಿಳೆಗೆ ಭಯವಿರೋಲ್ಲ. ಒಬ್ಬಳೇ ಹೋಗಿ ರಾತ್ರಿ ಕಾಫಿ ಕುಡಿದುಬರಬಹುದು. ಕಿವಿಗೆ ಇಯರ್‌ಫೋನ್‌ ಸಿಕ್ಕಿಸಿಕೊಂಡು ಗುಡ್ಡ ಬೆಟ್ಟ ಹತ್ತಬಹುದು. ಸಮುದ್ರತೀರದಲ್ಲಿ ಅಡ್ಡಾಡಬಹುದು. ಬಿಸಿಲಿಗೆ ಮೈಚಾಚಿ ಮಲಗಬಹುದು. ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳಬಹುದು. ಒಬ್ಬಳೇ ಸ್ಕೂಟಿ ಬಿಟ್ಟುಕೊಂಡು ಎಷ್ಟು ದೂರ ಬೇಕಾದರೂ ಪ್ರಯಾಣಿಸಬಹುದು. ದಾರಿ ಮಧ್ಯೆ ಸಿಕ್ಕುವ ಯಾರೋ ಡ್ರಾಪ್ ಕೇಳಿದರೆ ಭಯವಿಲ್ಲದೆ ಹತ್ತಿಸಿಕೊಳ್ಳಬಹುದು.

ಆದ್ಯವೀರ ಒಡೆಯರ್‌ ಹುಟ್ಟಿದ ದಿನ ಬರ್ತ್‌ಡೇ ಆಚರಿಸಲ್ಲ..! ಇದರ ಹಿಂದಿದೆ ವಿಶೇಷ ನಂಬಿಕೆ ...

ಈ ಪ್ರಶ್ನೆಗೆ ಬಂದ ಉತ್ತರಗಳು ತಮಾಷೆಯಾಗಿರುವಷ್ಟೇ ಚಿಂತನೆಗೂ ಹಚ್ಚುವ ಹಾಗಿದೆ ಅಲ್ವೇ. ಯಾಕಂದರೆ ಗಂಡಸರು ಸ್ತ್ರೀಯರ ಪಾಲಿಗೆ ಎಷ್ಟೊಂದು ಉಪದ್ರಕಾರಿಗಳು ಅನ್ನೋದು ಈ ಉತ್ತರಗಳಿಂದ್ಲೇ ಗೊತ್ತಾಗುತ್ತೆ. ಹಾಗೇ ಹೆಂಗಸರು ಒಂದು ದಿನ ಇಲ್ಲದ ಭೂಮಿಯನ್ನೂ ಕಲ್ಪಿಸಿಕೊಳ್ಳಬಹುದು. ಆದರೆ ಅದು ಗಂಸರ ಪಾಲಿಗೆ ಪರಮ ಬೋರಿಂಗ್‌ ಆಗಿರುತ್ತೆ ಅನ್ನೋದರಲ್ಲಿ ಸಂಶಯವಿಲ್ಲ.

What if men vanished from earth for 24 hours

Follow Us:
Download App:
  • android
  • ios