ಮನುಷ್ಯ ಪ್ರಬುದ್ಧನಾದರೆ ಸುಮಧುರ ಸಂಬಂಧ ಗ್ಯಾರಂಟಿ!
ಹೇಗೆಂದರೆ ಹಾಗೆ ವರ್ತನೆ ಮಾಡುವ ವ್ಯಕ್ತಿ ತನ್ನ ಸಂಬಂಧಗಳನ್ನು ಹಾಳು ಮಾಡಿಕೊಳ್ಳುತ್ತಾನೆ. ಸಂಬಂಧ ಚೆನ್ನಾಗಿರಬೇಕು ಎಂದಾದರೆ ಪ್ರಬುದ್ಧತೆ ಬೇಕು. ಸಂಗಾತಿಯೊಂದಿಗೆ ಪ್ರಬುದ್ಧವಾಗಿ ವರ್ತಿಸಿದರೆ ಜೀವನ ಸುಖಮಯವಾಗುತ್ತದೆ.
ವ್ಯಕ್ತಿ ಬೆಳೆದಂತೆಲ್ಲ ತಿಳಿವಳಿಕೆ ಮೂಡಬೇಕು, ವಿವೇಚನೆ, ಪ್ರಬುದ್ಧತೆ ಬೆಳೆಯಬೇಕು ಎಂದು ಆಶಿಸುತ್ತೇವೆ. ಆದರೆ ಎಲ್ಲರಿಗೂ ಪ್ರಬುದ್ಧತೆ ಮೂಡುವುದಿಲ್ಲ. ದೊಡ್ಡವರಾಗಿ ಅವರ ಪ್ರಪಂಚ ದೊಡ್ಡದಾದರೂ ಹಲವರು ಪ್ರಬುದ್ಧವಾಗಿ ವರ್ತಿಸುವುದಿಲ್ಲ. ಹೀಗಾಗಿ, ಅಂತವರನ್ನು ಎಲ್ಲರೂ ದೂರವಿಡುತ್ತಾರೆ. ಯಾವುದೇ ಸಂಬಂಧವನ್ನು ನಿಭಾಯಿಸಲು ಪ್ರಬುದ್ಧತೆ ಅತ್ಯಂತ ಅಗತ್ಯ. ಪ್ರೀತಿ, ಆಪ್ತತೆಯೊಂದಿಗೆ ಪ್ರಬುದ್ಧವಾದ ಭಾವನೆಗಳೂ ಜತೆಗಿದ್ದುಬಿಟ್ಟರೆ ಸಂಬಂಧ ಅತ್ಯಂತ ಸುಖವಾಗಿರುತ್ತದೆ. ಇಲ್ಲವಾದರೆ ಗೊಂದಲ, ಗಜಿಬಿಜಿ ಹೆಚ್ಚಾಗಿ ಸಮಸ್ಯೆಗಳೂ ಹೆಚ್ಚುತ್ತವೆ. ಕುಟುಂಬದಲ್ಲಿ ಸಮಸ್ಯೆ ಎದುರಾಗುವುದು ಸಾಮಾನ್ಯ. ಪ್ರಬುದ್ಧತೆ ಇಲ್ಲವಾದರೆ ಈ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸುವ ಬದಲು ಮತ್ತಷ್ಟು ಹೆಚ್ಚಾಗುವಂತೆ ಆಗುತ್ತದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ದಂಪತಿಗಳಲ್ಲಿ ಪರಸ್ಪರ ಪ್ರೀತಿ ಇದ್ದರಷ್ಟೇ ಸಾಕಾಗುವುದಿಲ್ಲ. ಇಬ್ಬರಲ್ಲೂ ಪ್ರಬುದ್ಧತೆ ಬೇಕಾಗುತ್ತದೆ. ಆಗಲೇ ಮನೆಯಲ್ಲಿ ಶಾಂತಿ ನೆಲೆಸಲು ಸಾಧ್ಯ. ಪರಸ್ಪರರ ವಿಶ್ವಾಸ ಹೆಚ್ಚಾಗಲು ಸಾಧ್ಯ. ಅವರವರ ಪ್ರಬುದ್ಧತೆಯ ಮೇಲೆಯೇ ಸಂಬಂಧದಲ್ಲಿ ಸುರಕ್ಷಿತ ಭಾವನೆಯೂ ಮೂಡುತ್ತದೆ. ಸಂಗಾತಿಯ ಮೇಲೆ ನಿಜವಾಗಿಯೂ ಪ್ರೀತಿ, ಕಾಳಜಿ ಇದ್ದರೆ ಪ್ರಬುದ್ಧವಾಗಿ ವರ್ತಿಸಲು ಯತ್ನಿಸಬೇಕಾಗುತ್ತದೆ. ಮತ್ತು ಅದನ್ನು ಗಳಿಸಿಕೊಳ್ಳಲು ಶ್ರಮ ವಹಿಸಬೇಕಾಗುತ್ತದೆ.
ಸಂಬಂಧದಲ್ಲಿ ಪ್ರಬುದ್ಧತೆ (Maturity) ಮೂಡಲು ನಾಲ್ಕು ವಿಧಾನಗಳನ್ನು ಅನುಸರಿಸಬೇಕು.
• ಸ್ವಾರ್ಥ (Selfish) ದೂರವಿಡಿ
ನಿಮ್ಮ ಸಂಬಂಧ (Relation) ಶಾಶ್ವತವಾಗಿ ಇರಬೇಕು ಎಂದಾದರೆ ನಿಮ್ಮಲ್ಲಿರುವ ಸ್ವಾರ್ಥವನ್ನು ಆಚೆ ತಳ್ಳಬೇಕು. ಕೇವಲ ನಿಮ್ಮದೊಂದೇ ಸುಖವನ್ನು ಪರಿಗಣಿಸದೆ ಸಂಗಾತಿಯ (Partner) ಅಭಿಪ್ರಾಯಗಳಿಗೂ ಮನ್ನಣೆ ನೀಡಬೇಕು. ಅವರ ಭಾವನೆಗಳಿಗೂ (Feelings) ಬೆಲೆ ನೀಡಬೇಕು. ಈ ಬಾರಿ ರಜಾ ದಿನದಲ್ಲಿ ಏನು ಮಾಡಬೇಕೆಂದು ನಿಮ್ಮನ್ನು ನೀವು ಕೇಳಿಕೊಳ್ಳುವ ಮುನ್ನ ಸಂಗಾತಿಯಲ್ಲಿ ಕೇಳಿ ನೋಡಿ. ಅವರ ಸಲಹೆಯಂತೆ ಮಾಡಿ. ಈ ಧೋರಣೆಯಿಂದ ತಮ್ಮ ಬಗ್ಗೆ ಸಂಗಾತಿ ನಿಜಕ್ಕೂ ಕಾಳಜಿ (Care) ಹೊಂದಿದ್ದಾರೆ ಎನ್ನುವ ಭಾವನೆ ಅವರಲ್ಲಿ ಮೂಡುತ್ತದೆ.
ಪತ್ನಿಯಲ್ಲಿ ಪುರುಷರು ಬಯಸೋ ಗುಣಗಳಿವು
• ಸಂಗಾತಿಯ ದೌರ್ಬಲ್ಯಗಳನ್ನು (Weakness) ಅರಿತುಕೊಳ್ಳಿ
ಪ್ರಬುದ್ಧವಾಗಿ ವರ್ತಿಸುವವರು ನೀವಾಗಿದ್ದರೆ ನಿಮ್ಮ ಸಂಗಾತಿಯಲ್ಲಿರುವ ದೌರ್ಬಲ್ಯಗಳನ್ನು ಅರಿತುಕೊಳ್ಳುತ್ತೀರಿ. ಯಾವುದೇ ಸಂಬಂಧ ಪರಿಪೂರ್ಣವಲ್ಲ (Perfect). ಹಾಗೆಯೇ, ಯಾವ ವ್ಯಕ್ತಿಗಳೂ ಪರಿಪೂರ್ಣರಲ್ಲ. ಎಲ್ಲರಲ್ಲೂ ಏನಾದರೊಂದು ದೌರ್ಬಲ್ಯ, ಕುಂದುಕೊರತೆಗಳು (Flaw) ಇದ್ದೇ ಇರುತ್ತವೆ. ಅವುಗಳನ್ನು ದೊಡ್ಡದು ಮಾಡಿಕೊಂಡು ಜೀವನವನ್ನು ಕಷ್ಟ ಮಾಡಿಕೊಳ್ಳುವುದಕ್ಕಿಂತ ಅವುಗಳನ್ನು ಅರಿತುಕೊಂಡು ವಾಸ್ತವವಾದಿಯಾಗಿರಬೇಕು. ಹಾಗೂ ನಿಮ್ಮ ಮಿತಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡಬೇಕು. ಸಂಗಾತಿಯ ದೌರ್ಬಲ್ಯವನ್ನು ಎತ್ತಿ ಆಡದೆ ಅದನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗುವಂತೆ ಬೆಂಬಲ ನೀಡಬೇಕು. ಸಾಧ್ಯವಾದರೆ ಈ ಕುರಿತು ಪರಸ್ಪರ ಮಾತಾಡಿಕೊಳ್ಳಬಹುದು. ಕೆಲವರ ಬಳಿ ಮಾತನಾಡುವ ಪರಿಸ್ಥಿತಿಯೂ ಇರುವುದಿಲ್ಲ. ಅಂತಹ ಸಮಯದಲ್ಲಿ ಯಾವುದೇ ಕಾರಣಕ್ಕೂ ಭರವಸೆ ಕಳೆದುಕೊಳ್ಳಬಾರದು.
• ತಪ್ಪನ್ನು ಒಪ್ಪಿಕೊಳ್ಳಿ ಸಾರಿ (Say Sorry) ಕೇಳಿ
ಯಾವುದೇ ಸಂಬಂಧ ಚೆನ್ನಾಗಿರಬೇಕು ಎಂದಾದರೆ ಮೊದಲಿಗೆ ನಿಮ್ಮದೇನಾದರೂ ತಪ್ಪಿದ್ದರೆ ಅದನ್ನು ಒಪ್ಪಿಕೊಳ್ಳಬೇಕು. ಹಾಗೂ ಅದರ ಬಗ್ಗೆ ಸಂಗಾತಿಯಲ್ಲಿ ಮುಕ್ತ ಮನಸ್ಸಿನಿಂದ ಸಾರಿ ಕೇಳಬೇಕು. ನಿಮ್ಮನ್ನು ನೀವು ಸುಧಾರಿಸಿಕೊಳ್ಳುವ ಕುರಿತು ಮಾತನಾಡುವುದು ಮತ್ತು ನಿಮ್ಮ ತಪ್ಪುಗಳಿಂದ ಪಾಠ ಕಲಿಯುವುದು ಹೊಸ ಆರಂಭಕ್ಕೆ ಅತ್ಯುತ್ತಮ ಹೆಜ್ಜೆ. ಆದರೆ, ನೀವು ಏನು ಹೇಳುತ್ತೀರೋ ಅದನ್ನು ಕೃತಿಗೆ ಇಳಿಸಬೇಕು. ಮಾತಿಗೆ ತಪ್ಪಬಾರದು. ಮಾತಿಗೆ ತಪ್ಪಿದರೆ ಸಂಗಾತಿಗೆ ನಿಮ್ಮ ಮೇಲೆ ವಿಶ್ವಾಸ ಮೂಡುವುದಿಲ್ಲ. ನಾವು ಸದಾಕಾಲ ಸರಿಯಾದ ಮಾರ್ಗದಲ್ಲಿಯೇ ಇರುತ್ತೇವೆ ಎನ್ನುವುದು ಅಂಧವಿಶ್ವಾಸ. ಹೀಗಾಗಿ, ಪರಾಮರ್ಶೆ ನಡೆಯುತ್ತಿರಲಿ.
ಮ್ಯಾರೀಡ್ ಲೈಫ್ ಕಷ್ಟ ಎನಿಸೋದು ಏಕೆ?
• ಬದ್ಧತೆ ಇರಲಿ
ನಿರಂತರವಾದ ಬದ್ಧತೆ ಸಂಗಾತಿಯ ಕಡೆಗಿರಬೇಕು. ಏನಾದರೂ ವಚನ ನೀಡಿದರೆ ಅದನ್ನು ಈಡೇರಿಸಿ. ಈ ಬದ್ಧತೆ ನಿಮ್ಮ ಸಂಬಂಧಕ್ಕೆ ಅತ್ಯುತ್ತಮ ಆಯಾಮ ನೀಡುತ್ತದೆ. ಇದರಿಂದ ನಿಮ್ಮ ಬಗ್ಗೆ ಸಂಗಾತಿಗೆ ಸಂಪೂರ್ಣ ನಂಬಿಕೆ ಮೂಡುತ್ತದೆ.