ಮದುವೆಯಾಗಲು ಪುರುಷರಿಗೆ ಚಿಕ್ಕ ವಯಸ್ಸಿನ ಹುಡುಗಿಯೇ ಬೇಕು ! ಅದಕ್ಕೆ ಕಾರಣ ಇದೇ ನೋಡಿ

ವಯಸ್ಸಾದ ಪುರುಷರು (Men) ತಮಗಿಂತ ಚಿಕ್ಕ ವಯಸ್ಸಿನ ಮಹಿಳೆ (Woman)ಯರೊಂದಿಗೆ ಡೇಟಿಂಗ್ (Dating) ಮಾಡಲು, ಅವರನ್ನೇ ಮದುವೆ (Marriage)ಯಾಗಲು ಬಯಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಪುರುಷರು ಕಿರಿಯ ಮಹಿಳೆಯರೊಂದಿಗೆ ಡೇಟಿಂಗ್ ಮಾಡಲು ಒಲವು ತೋರಲು ಕೆಲವು ಕಾರಣಗಳು ಇಲ್ಲಿವೆ.

Why Do Men Tend To Date, Marry Younger Women Vin

ವಯಸ್ಸಾದ ಪುರುಷರು (Men) ಡೇಟಿಂಗ್ ಮಾಡುವ ಉದ್ದೇಶದಿಂದ ಕಿರಿಯ ಮಹಿಳೆ (Women)ಯರೊಂದಿಗೆ ಸುತ್ತಾಡುವುದನ್ನು ನೀವೆಲ್ಲಾ ನೋಡಿರಬಹುದು. ಮಾತ್ರವಲ್ಲ ಪುರುಷರು ಮದುವೆ (Marriage)ಯಾಗುವಾಗಲೂ ಯಾವಾಗಲೂ ಚಿಕ್ಕ ವಯಸ್ಸಿನ ಹುಡುಗಿಯರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ತನಗೆ ವಯಸ್ಸು (Age) ಮೀರಿದ್ದರೂ ಸರಿ, ಹುಡುಗಿ ಮಾತ್ರ ಸಣ್ಣ ವಯಸ್ಸಿನವಳಾಗಿರಬೇಕು ಎಂಬ ಡಿಮ್ಯಾಂಡ್ ಇಡುತ್ತಾರೆ. ವಯಸ್ಸಾದ ಪುರುಷರು ತಮಗಿಂತ ಚಿಕ್ಕ ವಯಸ್ಸಿನ ಮಹಿಳೆಯರೊಂದಿಗೆ ಡೇಟಿಂಗ್ (Dating) ಮಾಡಲು, ಮದುವೆಯಾಗಲು ಬಯಸುವುದು ಯಾಕೆ ? ಪುರುಷರು ಕಿರಿಯ ಮಹಿಳೆಯರೊಂದಿಗೆ ಡೇಟಿಂಗ್ ಮಾಡಲು ಒಲವು ತೋರಲು ಕೆಲವು ಕಾರಣಗಳು ಇಲ್ಲಿವೆ.

ಹುಡುಗಿಯರ ಸೌಂದರ್ಯಕ್ಕೆ ಆಕರ್ಷಿತರಾಗುತ್ತಾರೆ
ಪುರುಷರು ಕಿರಿಯ ಮಹಿಳೆಯರಿಗೆ ಆದ್ಯತೆ ನೀಡುವುದಕ್ಕೆ ಮುಖ್ಯ ಕಾರಣಗಳಲ್ಲೊಂದು ಅವರು ಹೆಚ್ಚು ಆಕರ್ಷಕವಾಗಿರುತ್ತಾರೆ (Attractive). ಕಿರಿಯ ವಯಸ್ಸಿನ ಹುಡುಗಿಯರ ಸುಂದರವಾದ ತ್ವಚೆ ಹಾಗೂ ದೇಹದ ಆಕಾರಕ್ಕೆ ಪುರುಷರು ಸೆಳೆಯಲ್ಪಡುತ್ತಾರೆ. ವಯಸ್ಸಾದ ಮಹಿಳೆಯರ ಸೌಂದರ್ಯ (Beauty) ಕಡಿಮೆಯಾಗಿರುತ್ತದೆ ಮತ್ತು ಅವರು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಹೀಗಾಗಿ ಇಂಥವರನ್ನು ಪುರುಷರು ಪರಿಗಣಿಸುವುದಿಲ್ಲ.

Relationship Tips: ಮೊದಲ ಭೇಟಿಯ ನಾಚಿಕೆ ಬದಿಗಿಡಿ-ಮಾತುಕತೆಗೆ ಸಿದ್ಧತೆ ಮಾಡಿಕೊಳ್ಳಿ

ಜೀವನದಲ್ಲಿ ನಿರಾತಂಕದ ವಿಧಾನ
ವಯಸ್ಸಾದ ಪುರುಷರು ಕಿರಿಯ ಮಹಿಳೆಯರೊಂದಿಗೆ ಇರಲು ಬಯಸುತ್ತಾರೆ. ಏಕೆಂದರೆ ಕಿರಿಯ ವಯಸ್ಸಿನವರು ಜೀವನದ ಬಗ್ಗೆ ತಾಜಾ, ಅನನ್ಯ ಮತ್ತು ಹೆಚ್ಚು ನಿರಾತಂಕದ ಮನೋಭಾವವನ್ನು ಹೊಂದಿದ್ದಾರೆ. ಅದು ಪುರುಷರಿಗೆ ಜೀವನದಲ್ಲಿ ಒತ್ತಡ (Pressure) ಅಥವಾ ಆತಂಕವನ್ನು ಕಡಿಮೆ ಮಾಡುತ್ತದೆ. ಪುರುಷರು ವಯಸ್ಸಾದಂತೆ ಹಲವಾರು ಸಮಸ್ಯೆ (Problem)ಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಅವರು ತಮ್ಮದೇ ವಯಸ್ಸಿನವರೊಂದಿಗಿದ್ದು ಹೆಚ್ಚು ಒತ್ತಡವನ್ನು ಎದುರಿಸಲು ಸಿದ್ಧವಿರುವುದಿಲ್ಲ.

ಕಡಿಮೆ ವಯಸ್ಸಿನವರರಲ್ಲಿ ಹೆಚ್ಚು ಕೇರಿಂಗ್ ಸ್ವಭಾವ
ಹೆಚ್ಚು ವಯಸ್ಸಾಗಿರುವವರು ಜೀವನದಲ್ಲಿ ಈಗಾಗಲೇ ಎಲ್ಲಾ ರೀತಿಯ ಜವಾಬ್ದಾರಿಗಳನ್ನು (Responsibility) ನಿರ್ವಹಿಸಿ ಬೇಸತ್ತು ಹೋಗಿರುತ್ತಾರೆ. ಹೀಗಾಗಿ ರಿಲೇಶನ್‌ ಶಿಪ್‌ನಲ್ಲಿ ಹೆಚ್ಚು ಪಾತ್ರವನ್ನು ವಹಿಸಲು ಅವರು ಇಷ್ಟಪಡುವುದಿಲ್ಲ. ಬಾಯ್‌ಫ್ರೆಂಡ್ ಅಥವಾ ಗಂಡ ಪ್ರತಿಯೊಂದಕ್ಕೂ ತಮ್ಮನೇ ಅಲವಂಬಿಸುವುದನ್ನು ಅವರು ವಿರೋಧಿಸುತ್ತಾರೆ. ಆದರೆ ಕಡಿಮೆ ವಯಸ್ಸಿನ ಮಹಿಳೆಯರಿಗೆ ಕಾಳಜಿ (Care), ಗಂಡನ ಕೆಲಸಗಳನ್ನು ಮಾಡಲು ಹೆಚ್ಚು ಉತ್ಸಾಹವಿರುತ್ತದೆ.

ಹುಡುಗಿಯನ್ನು ಹೊಗಳಿ ಮೆಚ್ಚಿಸುವ ಪ್ರಯತ್ನ ನಿಮ್ಮದಾಗಿದ್ದರೆ ಇವಿಷ್ಟು ವಿಚಾರ ಗೊತ್ತಿರಲಿ

ಯೌವನದ ನೆನಪು ಇಷ್ಟವಾಗುತ್ತದೆ
ಸಮಯ ಕಳೆದಂತೆ, ಪ್ರತಿಯೊಬ್ಬರೂ ಚಿಕ್ಕವರಾಗಬೇಕೆಂದು ಬಯಸುತ್ತಾರೆ. ಹದಿಹರೆಯದ (Young) ನೆನಪುಗಳು ಎಲ್ಲರಿಗೂ ಖುಷಿ ಕೊಡುತ್ತವೆ. ಹೀಗಾಗಿಯೇ ಪುರುಷರು ಕಡಿಮೆ ವಯಸ್ಸಿನ ಮಹಿಳೆಯರ ಜೊತೆ ಸಮಯ ಕಳೆಯುವ ಮೂಲಕ ತಮ್ಮ ನೆನಪುಗಳನ್ನು ತಾಜಾಗೊಳಿಸಲು ಬಯಸುತ್ತಾರೆ. ಕಿರಿಯ ವಯಸ್ಸಿನ ಯುವತಿಯರೊಂದಿಗೆ ಇರುವುದರಿಂದ ಮತ್ತೊಮ್ಮೆ ಯೌವನದ ಮಾಧುರ್ಯವನ್ನು ಸವಿಯಬಹುದು ಎಂದು ಅಂದುಕೊಳ್ಳುತ್ತಾರೆ.

ಕಿರಿಯ ವಯಸ್ಸಿನ ಮಹಿಳೆಯರು ಸ್ಪರ್ಧಿಗಳಲ್ಲ
ಸಾಮಾನ್ಯವಾಗಿ ಕಡಿಮೆ ವಯಸ್ಸಿನ ಯುವತಿಯರು ಭವಿಷ್ಯದ ಬಗ್ಗೆ ಹೆಚ್ಚು ಗಾಢವಾಗಿ ಯೋಚಿಸುವುದಿಲ್ಲ. ಹೆಚ್ಚು ಜೀವನಾನುಭವವೂ ಇಲ್ಲದ ಕಾರಣ ಸ್ವಾಭಿಮಾನ, ಆರ್ಥಿಕ ವಿಷಯಗಳ ಬಗ್ಗೆ ಹೆಚ್ಚು ಚಿಂತಿಸಲು ಹೋಗುವುದಿಲ್ಲ ಇಂಥಾ ವರ್ತನೆ ಪುರುಷರಿಗೆ ಹೆಚ್ಚು ಇಷ್ಟವಾಗುತ್ತದೆ. ತಮ್ಮಂತೆಯೇ ಚಿಂತಿಸಬಲ್ಲ, ಆರ್ಥಿಕವಾಗಿ ಸದೃಢಳಾಗಿರುವವರ ಜೊತೆ ಸಂಬಂಧ ಇಟ್ಟುಕೊಳ್ಳಲು ಅವರು ಭಯಪಡುತ್ತಾರೆ. ಅವರನ್ನು ಪ್ರತಿಸ್ಪರ್ಧಿಯಂತೆ ಭಾವಿಸುತ್ತಾರೆ.

Life Story: 1966ರಲ್ಲಿ ಸುಂದರ ಹುಡುಗನ ಹುಡುಕಾಟಕ್ಕೆ ಹುಡುಗಿಯರು ಮಾಡಿದ್ದ ಆ ಕೆಲಸವೇನು ಗೊತ್ತಾ?

ಲೈಂಗಿಕ ಅನ್ಯೋನ್ಯತೆ ಹೆಚ್ಚು
ಕಿರಿಯ ಮಹಿಳೆಯರು ಲೈಂಗಿಕ ಜೀವನ (Sex)ದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಎಂದು ಪುರುಷರು ಅಂದುಕೊಳ್ಳುತ್ತಾರೆ. ಇದು ಪ್ರೀತಿಸಲು, ಮದುವೆಯಾಗಲು ಕಿರಿಯ ವಯಸ್ಸಿನ ಹುಡುಗಿಯರನ್ನು ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣ. ವಯಸ್ಸಾದ ಮಹಿಳೆಯರಿಗೆ ಹೋಲಿಸಿದರೆ ಕಿರಿಯ ಮಹಿಳೆಯರು ಹೆಚ್ಚು ಖುಷಿಯಿಂದ ಸೆಕ್ಸ್‌ನಲ್ಲಿ ಭಾಗವಹಿಸುತ್ತಾರೆ. ಮತ್ತು ಹೊಸತನ್ನು ಟ್ರೈ ಮಾಡಲು ಇಷ್ಟಪಡುತ್ತಾರೆ

Latest Videos
Follow Us:
Download App:
  • android
  • ios