ಜಗಳದಿಂದ ಗಂಡ-ಹೆಂಡತಿ ಬೇರೆಯಾಗೋದು ಕಾಮನ್, ಅಷ್ಟಕ್ಕೂ ಈ ಫೈಟ್ ಬೇಕಾ?

ಗಂಡ-ಹೆಂಡಿರ ನಡುವೆ ಜಗಳ ಆಗುವ ಕಾರಣಗಳನ್ನು ಶಾಂತ ಚಿತ್ತದಿಂದ ವಿಚಾರ ಮಾಡಿದರೆ ಸಿಲ್ಲಿ ಎಂದು ಭಾಸವಾಗುತ್ತವೆ. ಮತ್ತೊಬ್ಬರ ತಪ್ಪುಗಳನ್ನು ಇಟ್ಟುಕೊಂಡು ಪರಸ್ಪರ ಬೈದುಕೊಳ್ಳುವುದು, ಇಷ್ಟಾನಿಷ್ಟಗಳನ್ನು ತಪ್ಪು ಎನ್ನುವಂತೆ ಬಿಂಬಿಸುವುದರಿಂದ ಸಂಸಾರದಲ್ಲಿ ಸಾಮರಸ್ಯ ಹಾಳಾಗುತ್ತದೆ.
 

Why couple do fight for prove wrong things of other

ಎಲ್ಲ ಸಂಬಂಧದಲ್ಲೂ ಸಣ್ಣಪುಟ್ಟ ಜಗಳಗಳು ಸಾಮಾನ್ಯ, ಗಂಡ-ಹೆಂಡತಿ ಮಧ್ಯದಲ್ಲಂತೂ ಭಿನ್ನಾಭಿಪ್ರಾಯಗಳು, ಜಗಳ ಬಂದೇ ಬರುತ್ತವೆ. ವಿಚಿತ್ರವೆಂದರೆ, ಬೇರೆಯವರ ಕಾರಣಕ್ಕೆ ದಂಪತಿ ಮಧ್ಯದಲ್ಲಿ ಜಗಳವಾಗುವುದು ಹೆಚ್ಚು. ಅಂದರೆ, ಪತಿಯ ಮನೆಯವರ ಕಾರಣಕ್ಕೋ, ಪತ್ನಿಯ ಮನೆಯವರ ಕಾರಣಕ್ಕೋ ದಂಪತಿ ತೀವ್ರ ಹೋರಾಟಕ್ಕೆ ಬಿದ್ದುಬಿಡುತ್ತಾರೆ. ಅಂತಹ ಜಗಳನ್ನು ಖಂಡಿತವಾಗಿ ಅವಾಯ್ಡ್ ಮಾಡಬಹುದು, ಮಾಡಬೇಕು. ಕುಟುಂಬದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣ ಮಾಡಬೇಕಾದುದು ಪ್ರತಿಯೊಬ್ಬರ ಕರ್ತವ್ಯ. ಮನೆಯ ವಾತಾವರಣ ಮಕ್ಕಳ ಮೇಲೆ ಭಾರೀ ಪರಿಣಾಮ ಬೀರುವುದರಿಂದ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಸೊಸೆಯಂದಿರು ಅತ್ತೆಯ ವರ್ತನೆ ಬಗ್ಗೆ ಕಿರಿಕಿರಿ ಮಾಡಿಕೊಂಡರೆ ಅದು ಮಕ್ಕಳಿಗೆ ವಿಚಿತ್ರ ಎನಿಸುತ್ತದೆ. ಚಿಕ್ಕಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಮನೆಯನ್ನು ರಣರಂಗ ಮಾಡುವ ಅತ್ತೆಯಂದಿರು ಸೊಸೆಯನ್ನು ದುಃಖದ ಕೂಪಕ್ಕೆ ತಳ್ಳುತ್ತಾರೆ. ಹೀಗಾಗಿ, ಸಾಧ್ಯವಾದಷ್ಟೂ ಸಂಯಮದಿಂದ, ಯಾವುದೂ ಈಗೋ ಲೆವೆಲ್‌ಗ ಹೋಗದಂತೆ ಮುಂದುವರಿಯುವುದು ಮುಖ್ಯ. ಮನೆ ಎಂದರೆ ಅಲ್ಲಿ ಒಂದಿಷ್ಟು ಮಾತುಕತೆ ಇರಬೇಕಾಗುತ್ತದೆ. ಅದು ಕೇವಲ ದ್ವೇಷ, ಟೀಕೆ, ಈರ್ಷ್ಯೆಗಳಿಂದ ಕೂಡಿರಬಾರದು. ಸ್ವಲ್ಪ ಕಾಳಜಿ, ಹಾಸ್ಯ, ನಗುವೂ ಇರಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಸರಿ-ತಪ್ಪು, ಇಷ್ಟಾನಿಷ್ಟಗಳಿಗೆ ವ್ಯತ್ಯಾಸವಿದೆ ಎನ್ನುವುದನ್ನು ಅರಿತುಕೊಳ್ಳಬೇಕು. ಆತುರವಾಗಿ ಇನ್ನೊಬ್ಬರ ಮೇಲೆ ಅಟ್ಯಾಕ್ ಮಾಡುವುದನ್ನು ನಿಲ್ಲಿಸಿದರೆ ಸಂಸಾರದಲ್ಲಿ ಸೌಂದರ್ಯವನ್ನು ಕಾಣಬಹುದು. 

•    ಯಾವುದಕ್ಕೆ ಎಷ್ಟು ಮಹತ್ವ? 
ದಂಪತಿ (Couple) ನಡುವೆ ಇರುವ ಭಿನ್ನಾಭಿಪ್ರಾಯಗಳಿಗೆ (Difference) ಎಷ್ಟು ಮಹತ್ವ ನೀಡಬೇಕು ಎನ್ನುವುದನ್ನು ಪ್ರತಿಯೊಬ್ಬರೂ ಕಲಿತುಕೊಂಡರೆ ಜೀವನ (Life) ಸುಂದರವಾಗುತ್ತದೆ. ದಂಪತಿ ಮಧ್ಯೆ ಉಂಟಾಗುವ ಜಗಳವನ್ನು ಎಷ್ಟು ದೊಡ್ಡದು ಮಾಡಬೇಕು, ಮಾಡಬಾರದು ಎನ್ನುವ ಸ್ಪಷ್ಟತೆಯೂ ಬೇಕು. ಅತ್ತೆ (Mother in Law) ಏನೋ ತಪ್ಪು ಮಾತನಾಡಿದರು ಎಂದು ಅದರ ಬಗ್ಗೆ ಪತಿಯ (Husband) ಬಳಿ ಹೇಳಿಕೊಂಡು ಕೋಪಿಸಿಕೊಂಡರೆ, ಕಿರಿಕಿರಿ ಮಾಡಿದರೆ ಅವರೇನು ಮಾಡಬಲ್ಲರು ಎನ್ನುವ ವಾಸ್ತವದ ಅರಿವು ಬೇಕು.

ಹೆಣ್ಣು ನಂಬಬಹುದಾದ ಗಂಡಸರು ನೀವಾದರೆ ಈ ಸ್ವಭಾವಗಳು ಇರಲೇಬೇಕು!

•    ತಪ್ಪು ಪ್ರೂವ್ ಮಾಡಿ ಏನು ಲಾಭ?
ಇತ್ತೀಚೆಗೆ, ಮನೆಗಳಲ್ಲಿ ಸಿಸಿ ಕ್ಯಾಮರಾ ಹಾಕುವ ಪರಿಪಾಠ ಬೆಳೆಯುತ್ತಿದೆ. ಅದು ಸುರಕ್ಷತೆಗಾಗಿ ಅಲ್ಲ, ಯಾರು, ಏನು ತಪ್ಪು ಮಾಡಿದರು ಎನ್ನುವ ಕಣ್ಗಾವಲು ಇಡುವುದಕ್ಕೆ! ಯಾರು ತಪ್ಪು ಮಾಡಿದ್ದಾರೆ ಎನ್ನುವುದನ್ನು ಪ್ರೂವ್ (Prove) ಮಾಡುವುದರಿಂದ ಏನು ಲಾಭ ಎಂದು ಒಂದು ಕ್ಷಣ ಪ್ರಶ್ನಿಸಿಕೊಳ್ಳಿ. ಒಂದು ವಿಚಾರವನ್ನು ನೆನಪಿನಲ್ಲಿಡುವುದು ಒಳಿತು. ಯಾರನ್ನೂ ಬದಲಿಸಲು (Change) ಸಾಧ್ಯವಿಲ್ಲ. ಹೀಗಾಗಿ, ಅವರ ತಪ್ಪುಗಳನ್ನು ಸಾಬೀತುಪಡಿಸುವುದರಿಂದ ಏನಾಗುತ್ತದೆ, ಸಂಸಾರದಲ್ಲಿ (Family) ಇನ್ನಷ್ಟು ಬಿರುಕು ಹೆಚ್ಚುತ್ತದೆ ಅಷ್ಟೆ. 

•    ಸಂಸಾರದಲ್ಲಿ ನಂಬಿಕೆ (Trust) ಇರಲಿ
ಸಂಸಾರದಲ್ಲಿ ನಂಬಿಕೆ ಅತಿ ಮುಖ್ಯ. ಒಂದೊಮ್ಮೆ ನೀವೇ ತಪ್ಪು ಮಾಡಿದ್ದರೆ ಅದನ್ನು ನೇರವಾಗಿ ಹೇಳಿ. ಸುಳ್ಳು (Lie) ಹೇಳುವ ಅಭ್ಯಾಸ ಮಾಡಿಕೊಳ್ಳಲೇಬೇಡಿ. ಗಂಡ-ಹೆಂಡಿರ ವಿಚಾರದಲ್ಲಿ ಸುಳ್ಳು ಹೇಳುವುದು ತಪ್ಪು. ಹಾಗೆ ಏಕೆ ಮಾಡಿದೆ ಅನ್ನುವ ಬಗ್ಗೆ ವಿವರಣೆ ನೀಡಬಹುದು. ಮುಂದಿನ ಬಾರಿ ಹಾಗಾಗದಂತೆ ನೋಡಿಕೊಳ್ಳಬಹುದು. 

•    ಆರೋಪದಿಂದ (Blame) ದೂರವಿರಿ
ಆರೋಪ ಮಾಡುವ ಅಭ್ಯಾಸ ಆರಂಭಿಸಿದರೆ ಅದಕ್ಕೆ ಕೊನೆಯೆಂಬುದೇ ಇರುವುದಿಲ್ಲ. ಅಷ್ಟಕ್ಕೂ ಇನ್ನೊಬ್ಬರ ಇಷ್ಟಾನಿಷ್ಟಗಳ ಬಗ್ಗೆ ಆರೋಪ, ಆಪಾದನೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಹೆಂಡತಿ (Wife) ಇಷ್ಟದ ಬಗ್ಗೆ ಆಪಾದನೆ ಮಾಡುವ ಅಧಿಕಾರ ಗಂಡನಿಗೂ ಇಲ್ಲ, ಗಂಡನ ಇಷ್ಟಾನಿಷ್ಟಗಳ (Likings) ಬಗ್ಗೆ ಹೆಂಡತಿಗೂ ಇಲ್ಲ. ಅವರಿಗೆ ಇಷ್ಟವಾದುದನ್ನು ಮಾಡುವುದಕ್ಕೆ ಅವರಿಗೆ ಸ್ವಾತಂತ್ರ್ಯ (Freedom) ಇರಬೇಕು. ಆಗಲೇ ಸಂಸಾರದಲ್ಲಿ ಸಂತಸ ಇರುತ್ತದೆ. 

Personal Finance : ಕೆಲಸ ಕಳೆದುಕೊಂಡಿದ್ದೀರಾ? ಹೀಗೂ ಜೀವನ ನಡೆಸ್ಬಹುದು ಯೋಚಿಸ್ಬೇಡಿ!

•    ತಪ್ಪು (Wrong) ಬೇರೆ, ಇಷ್ಟ ಬೇರೆ
ಸಾಕಷ್ಟು ಅತ್ತೆಯಂದಿರು ಸೊಸೆಯ ಬಟ್ಟೆ, ಧೋರಣೆ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಆಕೆ ಹಾಗಿರೋದು ತಪ್ಪು ಎನ್ನುವ ಭಾವನೆ ಹೊಂದಿರುತ್ತಾರೆ. ಆದರೆ, ಅವರ ಇಷ್ಟಾನಿಷ್ಟಗಳನ್ನು ತಪ್ಪು ಎಂದು ಭಾವಿಸುವುದು ಸಂಸಾರದಲ್ಲಿ ಖಂಡಿತ ಬಿರುಕನ್ನು ತರುತ್ತದೆ. ಹೀಗಾಗಿ, ಪತಿ ಅಥವಾ ಪತ್ನಿ ನಿಮಗಾಗದಿರುವುದನ್ನು ಮಾಡಿದಾಗ ಅದನ್ನು ತಪ್ಪು ಎಂದು ಭಾವಿಸುವುದರಲ್ಲಿ ಅರ್ಥವಿಲ್ಲ. 

•    ಮಾತುಕತೆ (Conversation) ಇರಲಿ 
ಪತಿಯೊಂದಿಗೆ ಪತ್ನಿ, ಪತ್ನಿಯೊಂದಿಗೆ ಪತಿ ಇಷ್ಟೇ ಅಲ್ಲ, ಮನೆಯಲ್ಲಿರುವ ಎಲ್ಲರೊಂದಿಗೂ ಮಾತನಾಡಬೇಕು. ಕುಟುಂಬದಲ್ಲಿ ಒಳ್ಳೆಯ ವಾತಾವರಣ ಇರಬೇಕು ಅಂದರೆ ಮಾತಾಡಬೇಕು. ಮತ್ತೊಬ್ಬ ವ್ಯಕ್ತಿಯನ್ನು ದ್ವೇಷಿಸುವ ವಾತಾವರಣ ಮನೆಯಲ್ಲಿ ಇರಬಾರದು. ಅತ್ತೆಯೊಂದಿಗೆ ಮಾತನಾಡದ ಸೊಸೆಯಂದಿರು ನಮ್ಮಲ್ಲಿದ್ದಾರೆ. ಇದರಿಂದ ಇನ್ನಷ್ಟು ಕಿರಿಕಿರಿ ಹೆಚ್ಚುತ್ತದೆಯೇ ವಿನಾ ಕಡಿಮೆ ಆಗುವುದಿಲ್ಲ. ಮನೆಯಲ್ಲಿರುವ ಎಲ್ಲರ ಬಳಿ ಮಾತನಾಡದಷ್ಟು ಸಂಬಂಧ ಹದಗೆಡಿಸಿಕೊಳ್ಳುವುದು ಸರಿಯಲ್ಲ. ಆ ಸಂಬಂಧಗಳಿಗೆ ಯಾವ ಮೌಲ್ಯವೂ (Value) ಇರುವುದಿಲ್ಲ. 

•    ಒತ್ತಾಯ (Force) ಮಾಡ್ಬೇಡಿ
ನಿಮಗಿಷ್ಟವಾಗದ ವಿಚಾರಗಳ ಬಗ್ಗೆ ಯಾರನ್ನೂ ಒತ್ತಾಯ ಮಾಡಲು ಹೋಗಬಾರದು. ಬೇರೆಯವರು ನಿಮ್ಮನ್ನು ಯಾವುದಾದರೂ ಕೆಲಸ ಮಾಡುವಂತೆ ಒತ್ತಾಯ ಮಾಡಿದರೆ ಹೇಗಿರುತ್ತದೆ ಯೋಚಿಸಿ. ಹೀಗಾಗಿ, ಸಂಸಾರದಲ್ಲಿ ಒತ್ತಾಯ ಸಲ್ಲದು. ಮನೆಯಲ್ಲಿ ಯಾರಿಂದ ನಿಮಗೆ ಹೆಚ್ಚು ತೊಂದರೆಯಾಗುತ್ತಿದೆ ಎನ್ನುವುದನ್ನು ತಿಳಿದು, ಅವರ ಸ್ವಭಾವ (Behavior) ಅರಿತುಕೊಂಡು ನಾವು ಭಾವನಾತ್ಮಕವಾಗಿ ಅವರಿಂದ ದೂರ ಕಾಯ್ದುಕೊಳ್ಳುವುದು ಉತ್ತಮ. ಅಂದರೆ, ಅವರು ಹೇಳಿದ್ದನ್ನು ಮನಸ್ಸಿಗೆ ಹಚ್ಚಿಕೊಳ್ಳಬಾರದು. ಅದನ್ನು ದೊಡ್ಡದು ಮಾಡಿಕೊಂಡರೆ ಸಾಮರಸ್ಯ (Harmony) ಹಾಳಾಗುತ್ತದೆ. 
 

Latest Videos
Follow Us:
Download App:
  • android
  • ios