ಹೆಣ್ಣು ನಂಬಬಹುದಾದ ಗಂಡಸರು ನೀವಾದರೆ ಈ ಸ್ವಭಾವಗಳು ಇರಲೇಬೇಕು!
ಭೇಟಿಯಾದವರೆಲ್ಲರೂ ನೆನಪಿನಲ್ಲಿ ಉಳಿಯುವುದಿಲ್ಲ. ಆದರೆ ಕೆಲವರನ್ನು ಮರೆಯುವುದು ಸಾಧ್ಯವಾಗುವುದಿಲ್ಲ. ಅವರಿಲ್ಲಿರುವ ಅದ್ಯಾವುದೋ ಗುಣವೊಂದು ಎಲ್ಲರನ್ನೂ ಸೆಳೆಯುತ್ತದೆ. ಅದರಲ್ಲೂ ಮಹಿಳೆಯರು ಪುರುಷರ ಕೆಲವು ಗುಣಗಳನ್ನು ಎಂದಿಗೂ ಮರೆಯುವುದಿಲ್ಲ.
ಹೊಸಬರನ್ನು ಭೇಟಿಯಾದಾಗ ಅವರ ನಡೆನುಡಿ, ಹಾವಭಾವಗಳನ್ನು ಗಮನಿಸುವುದು ಸಹಜ. ಅಷ್ಟೆ, ಕೆಲವು ಸಮಯದಲ್ಲಿ ಅವರು ಮರೆತೇ ಹೋಗುತ್ತಾರೆ. ಅದರಲ್ಲೂ ಪುರುಷರು ನೆನಪಿನಲ್ಲಿ ಉಳಿಯುವುದು ಕಡಿಮೆ. ಆದರೆ, ಕೆಲವು ಪುರುಷರನ್ನು ಮರೆಯಲು ಸಾಧ್ಯವಾಗುವುದಿಲ್ಲ. ಪ್ರೀತಿ-ಪ್ರೇಮ ಅಥವಾ ಸ್ನೇಹ ಏನೂ ಇಲ್ಲದೆಯೂ ಕೆಲವು ಪುರುಷರು ಮಹಿಳೆಯರ ಹೃದಯದಲ್ಲಿ ಸ್ಥಾನ ಗಿಟ್ಟಿಸಬಲ್ಲರು. ತಮ್ಮ ಗುರುತನ್ನು ಶಾಶ್ವತವಾಗಿ ಇರಿಸಬಲ್ಲರು. ತಮ್ಮ ಛಾಪನ್ನು ಮೂಡಿಸಬಲ್ಲರು. ಅದಕ್ಕೆ ಅವರೇನೂ ಭಾರೀ ಶ್ರಮ ಪಡಬೇಕಾಗಿಲ್ಲ. ಆದರೆ, ಅವರು ಖಂಡಿತವಾಗಿ ಕೆಲವು ಸ್ವಭಾವ, ವರ್ತನೆಗಳನ್ನು ಸಹಜವಾಗಿ ಹೊಂದಿರುತ್ತಾರೆ. ಪುರುಷರು ಎಂದರೆ ಒರಟಾಗಿ ಅಥವಾ ಉಪೇಕ್ಷೆ, ಮೇಲರಿಮೆಯಿಂದ ವರ್ತಿಸಬೇಕಾಗಿಲ್ಲ. ಅಂಥವರು ನೆನಪಿನಲ್ಲಿ ಉಳಿದರೂ ಒಂದು ರೀತಿಯ ನಕಾರಾತ್ಮಕ ಭಾವನೆಯಿಂದ ಸ್ಮರಿಸುವಂತಾಗುತ್ತದೆ. ಆದರೆ, ಯಾವುದೇ ಸಂಬಂಧ ಇರದಿದ್ದರೂ ಹೆಮ್ಮೆಯಿಂದ, ಖುಷಿಯಿಂದ, ನೆನಪಾದೊಡೆ “ಎಲ್ಲರೂ ಹೀಗೆಯೇ ಇರುವಂತಾದರೆ’ ಎನ್ನುವ ಭಾವನೆ ಮೂಡಿಸುವ ಪುರುಷರೂ ಇರುತ್ತಾರೆ. ಅಂಥವರು ಸಾಮಾನ್ಯವಾಗಿ ಅತ್ಯುತ್ಸಾಹದಿಂದ, ಪ್ರೇರಣೆಯಿಂದ ಕೂಡಿರುತ್ತಾರೆ. ಇತರರನ್ನು ಹುರಿದುಂಬಿಸುವಲ್ಲಿ ಮುಂದಿರುತ್ತಾರೆ. ಒಮ್ಮೆ ನಿಮ್ಮ ಇತಿಹಾಸವನ್ನು ನೆನಪಿಸಿಕೊಳ್ಳಿ. ನಿಮ್ಮ ಸ್ಮರಣೆಯಲ್ಲಿ ಸದಾ ಇರುವ ಯಾವುದಾದರೂ ಹುಡುಗ, ಯುವಕ ಅಥವಾ ಪುರುಷರ ಗುಣವನ್ನು ನೆನಪಿಸಿಕೊಂಡರೆ ಅವರಲ್ಲಿ ಈ ಗುಣವಿರುವುದು ಖಚಿತವಾಗುತ್ತದೆ. ಕೆಲವು ಹುಡುಗರು ಅದೆಷ್ಟು ಪ್ರೇರಣೆ, ಮಹತ್ವಾಕಾಂಕ್ಷೆಯಿಂದ ಕೂಡಿರುತ್ತಾರೆ ಎಂದರೆ, ಯಾವುದೇ ಅಡೆತಡೆ ಅವರನ್ನು ಕಟ್ಟಿಹಾಕಲು ಸಾಧ್ಯವಿರುವುದಿಲ್ಲ. ಅಂಥವರು ಇತರರ ನೆನಪಿನಲ್ಲಿ ಸದಾ ಇರುತ್ತಾರೆ.
· ಭಾವನೆಗಳ ಪರಿಶೀಲನೆ (Check Feelings)
ಪುರುಷರು ಭಾವನಾತ್ಮಕ (Emotions) ಜೀವಿಗಳಲ್ಲ ಎನ್ನಲಾಗುತ್ತದೆ. ಆದರೆ, ಅವರಲ್ಲೂ ಹಲವು ಭಾವನೆಗಳು ಸಾಕಷ್ಟಿರುತ್ತವೆ. ಆದರೆ, ಯಾವುದಾದರೂ ಪುರುಷ (Male) ತಮ್ಮ ಭಾವನೆಗಳನ್ನು ಪರಿಶೀಲನೆಗೆ ಒಳಪಡಿಸುವ ಗುಣ ಹೊಂದಿದ್ದಾನೆ ಎಂದರೆ ಆತ ಖಂಡಿತವಾಗಿ ಗಮನಾರ್ಹ ಪ್ರಗತಿ (Develop) ಸಾಧಿಸುತ್ತಾನೆ ಹಾಗೂ ಇತರರು ಗುರುತಿಸುವಂತೆ ಆಗುತ್ತಾನೆ. ಪ್ರತಿಯೊಂದು ಘಟನೆಯನ್ನೂ ಸಮಗ್ರವಾಗಿ ನೋಡಿ, ಭಾವನೆಗಳನ್ನು ಪಕ್ಕದಲ್ಲಿರಿಸಿ ಪರಿಸ್ಥಿತಿ ಅರಿಯುವ ಪುರುಷನಲ್ಲಿ ನಾಯಕತ್ವದ (Leadership) ಗುಣವಿರುತ್ತದೆ.
Relationship Tips: ಹುಡುಗರೇಕೆ ಹುಡುಗೀರ ಬೆನ್ನು ಬೀಳ್ತಾರೆ? ಅದು ಅವರ ಹುಟ್ಟುಗುಣವಾ?
· ಹೃದಯವಂತರು (Untamed Heart)
ಮಾನವೀಯ (Humanity) ಗುಣವುಳ್ಳ, ಹೃದಯವಂತರನ್ನು ಭೇಟಿಯಾದ ಬಳಿಕ ಅವರನ್ನು ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ. ಅಂತಹ ಪುರುಷರು ಮುಂದೇನು ಮಾಡುತ್ತಾರೆ ಎನ್ನುವ ಅಂದಾಜು ಯಾರಿಗೂ ಇರುವುದಿಲ್ಲ. ತಮ್ಮ ಕೃತ್ಯಗಳಿಗೆ ಜವಾಬ್ದಾರಿ (Responsibility) ತಮ್ಮದೇ ಎನ್ನುವಂತಹ, ಇತರರನ್ನು ದೋಷಾರೋಪಣೆಗೆ ಗುರಿ ಮಾಡದಿರುವಂತಹ, ತಮ್ಮ ಬಗ್ಗೆ ಹಾಗೂ ಎಲ್ಲರ ಬಗ್ಗೆಯೂ ಗೌರವದ (Respect) ಭಾವನೆ ಹೊಂದಿರುವ ಪುರುಷರು ದೀರ್ಘ ಕಾಲ ನೆನಪಿನಲ್ಲಿರುತ್ತಾರೆ.
· ಅಪಾರ ಶಕ್ತಿ (Strength)
ಕೆಲವರು ಸಿಕ್ಕಾಪಟ್ಟೆ ದೈಹಿಕ ಶಕ್ತಿ ಹೊಂದಿರುತ್ತಾರೆ. ಅಮೆರಿಕದ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಪುರುಷರಲ್ಲಿ ಟೆಸ್ಟಾಸ್ಟಿರೋನ್ ಹಾರ್ಮೋನ್ (Hormone) ಸಾಂದ್ರತೆ ಅಧಿಕವಾಗಿರುತ್ತದೆ. ಕೊಬ್ಬಿನ ಪ್ರಮಾಣ ಕಡಿಮೆಯಿದ್ದು, ಹೆಚ್ಚು ಸದೃಢರಾಗಿರುತ್ತಾರೆ. ಈ ಸದೃಢತೆ ಸಹ ಕೆಲವೊಮ್ಮೆ ಜನರ ಮೇಲೆ ಮರೆಯಲಾಗದ ಪ್ರಭಾವ ಬೀರಬಹುದು.
· ಆರೋಗ್ಯಕರ ಸ್ವಾಭಿಮಾನ (Self Esteem)
ಹಲವು ಪುರುಷರು ಕೇವಲ ಕೊಚ್ಚಿಕೊಳ್ಳುವುದರಲ್ಲಿ ಆಸಕ್ತರಾಗಿರುತ್ತಾರೆ. ಆದರೆ, ಅವರಲ್ಲಿ ನೈಜವಾದ ಸ್ವಾಭಿಮಾನ ಇರುವುದಿಲ್ಲ. ಆರೋಗ್ಯಕರ (Healthy) ಸ್ವಾಭಿಮಾನ ಹೊಂದಿರುವ ಪುರುಷರು ಇನ್ನೊಬ್ಬರ ಬಗ್ಗೆ ಅಸೂಯೆ ಪಡುವುದಿಲ್ಲ. ಅವಾಸ್ತವಿಕ (Unrealistic) ನಿರೀಕ್ಷೆ ಮಾಡುವುದಿಲ್ಲ. ಹಾಗೂ ತಾವು ಗಳಿಸಿದ್ದರಲ್ಲಿ ತೃಪ್ತಿಯಿಂದಿರುತ್ತಾರೆ.
Relationship Tips: ವಿವಾಹಿತ ಪುರುಷ ಪ್ರೊಪೋಸ್ ಮಾಡ್ತಿದ್ದಾನಾ? ಹೇಗೆ “ನೋ’ ಅನ್ನೋದು?
· ನೈಜ ಭಾವನೆ (Natural Feelings)
ಪುರುಷರಲ್ಲಿರಬೇಕಾದ ದೊಡ್ಡ ಶಕ್ತಿ ಎಂದರೆ ವಿನಯ ಹಾಗೂ ನೈಜ ಭಾವನೆ. ಸಹಜವಾಗಿರುವ ಪುರುಷರು “ತಾವು ಗಂಡಸು’ ಎನ್ನುವ ಸೋಗಿಗೆ ಬೀಳದೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ, ಕೆಲವು ಸನ್ನಿವೇಶಗಳಲ್ಲಿ ಅಳಬಹುದು. ಇದು ಅವರನ್ನು ಆಪ್ತರನ್ನಾಗಿಸುತ್ತದೆ. ಅಷ್ಟೇ ಅಲ್ಲ, ಇನ್ನೊಬ್ಬರನ್ನು ದೂರದ (Complain) ಪುರುಷರು ಮಹಿಳೆಯರಿಗೆ ಇಷ್ಟವಾಗುತ್ತಾರೆ. ಸಮಯವನ್ನು ಅನುಸರಿಸುವ, ಶಿಸ್ತುಬದ್ಧವಾಗಿರುವ (Discipline) ಪುರುಷರು ಸದಾಕಾಲ ನೆನಪಿನಲ್ಲಿ ಉಳಿಯುತ್ತಾರೆ.