Asianet Suvarna News Asianet Suvarna News

ಮನಸ್ಸು ಬಿಚ್ಚು ಮಾತನಾಡಿ ಮೊದಲು, ಸಮಸ್ಯೆ ಹೋಗಲಿದೆ ಬಹು ದೂರ

ಒಂದೇ ಬೆಡ್‌ನಲ್ಲಿದ್ದರೂ ಅವರದ್ದು ಒಂದು ದಿಕ್ಕು, ಇವರದ್ದೊಂದು ದಿಕ್ಕು ಎಂಬಂತೆ ವರ್ತಿಸುವ ಸಂಗಾತಿಗಳಿದ್ದಾರೆ. ಪರಸ್ಪರ ಸ್ಪಂದಿಸುವಿಕೆಯೇ ಇಲ್ಲವಾಗಿ, ಎಷ್ಟು ಬೇಕೋ ಅಷ್ಟೇ ವ್ಯಾವಹಾರಿಕ ಮಾತುಕತೆಗೆ ಅವರ ದಿನಚರಿ ಮುಕ್ತವಾಗುತ್ತದೆ. ಪರಸ್ಪರ ಭಾವನೆಗಳನ್ನೇ ಹೊಂದಿಲ್ಲದ, ಭಾವನೆಗಳನ್ನು ವ್ಯಕ್ತಪಡಿಸದ ಜೋಡಿಗಳಲ್ಲಿ ಸಂಸಾರದ ಬಗ್ಗೆ ಅತಿಯಾದ ಅತೃಪ್ತಿ ಕಾಡುತ್ತದೆ. ಅಷ್ಟೇ ಅಲ್ಲ, ಅನೇಕ ರೀತಿಯ ಮಾನಸಿಕ, ದೈಹಿಕ ಸಮಸ್ಯೆಗಳೂ ಉಂಟಾಗಬಹುದು. 
 

When you withhold feelings from partner it effects relation and health
Author
First Published Dec 28, 2022, 4:59 PM IST

ತೀರಾ ಬೇಕಾಬಿಟ್ಟಿ ಮಾತನಾಡದ ಆತ ಅಂದು ಅದೊಂದು ಮಾತನ್ನಾಡಿಬಿಟ್ಟಿದ್ದ. “ನಿನಗೇನು? ನಿನ್ನಪ್ಪನ ಹಾಗೆಯೇ, ಯಾರೂ ಸರಿಬರೋದಿಲ್ಲ’ ಎಂದು ಹೆಂಡತಿಗೆ ಹೇಳಿಬಿಟ್ಟಿದ್ದ. ಅದೂ ಸಹ ತನ್ನ ಪಾಲಕರ ಎದುರು. ಸರಿ, ಅಲ್ಲಿಂದ ಶುರು. ಸಂಸಾರದ ಸರಿಗಮ ತಾಳತಪ್ಪಲು ಹೆಚ್ಚು ದಿನಗಳು ಬೇಕಾಗಲಿಲ್ಲ. ಆಕೆ ಮುಗುಮ್ಮಾಗಿ ಇರಲು ಆರಂಭಿಸಿದರೆ, ಈತ “ನನಗೇನು, ಅವಳೇ ಬೇಕಿದ್ದರೆ ಮಾತನಾಡಲಿ’ ಎನ್ನುವ ಧೋರಣೆ ಅನುಸರಿಸಿದ. ಇವರು ಮಾತ್ರವಲ್ಲ, ಸಂಗಾತಿಗಳಲ್ಲಿ ವಾಗ್ವಾದ, ವಿವಾದಗಳು ಸಹಜ. ಹೀಗಾಗಿ ಅವುಗಳನ್ನು ಸಹಜವಾಗಿಯೇ ತೆಗೆದುಕೊಳ್ಳುವುದು ಅಗತ್ಯ. ಆದರೇನು ಮಾಡುವುದು? ನಮ್ಮ ಈಗೋ ಅದಕ್ಕೆ ಅವಕಾಶ ನೀಡುವುದಿಲ್ಲ. ಅವರು ನಮ್ಮ ಪ್ರೀತಿಪಾತ್ರರೇ ಆಗಿದ್ದರೂ ಅವರಿಂದ ದೂರ ನಿಲ್ಲಲು ಕಲಿಸುತ್ತದೆ. ಅವರ ಬಗ್ಗೆ ಕಲ್ಲು ಮನಸ್ಸು ಹೊಂದಲು ಪ್ರೇರೇಪಿಸುತ್ತದೆ. ಭಾವನೆಗಳು ಆರ್ದೃಗೊಳ್ಳಲು ಅವಕಾಶ ನೀಡುವುದಿಲ್ಲ. ಭಾವನೆಗಳನ್ನು ತಡೆಹಿಡಿದುಕೊಳ್ಳಲು ಕಲಿಸುತ್ತದೆ. ಆದರೆ, ಇದರಿಂದ ಸಂಬಂಧದಲ್ಲಿ ಅತೃಪ್ತಿ ಮೂಡುತ್ತದೆ. ದೀರ್ಘಕಾಲ ಸಂಗಾತಿಯಿಂದ ಭಾವನೆಗಳನ್ನು ತಡೆಹಿಡಿಯುವುದು ದೈಹಿಕ, ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.  

ಪತಿಯಾಗಲೀ, ಪತ್ನಿಯಾಗಲೀ, ಭಾವನೆಗಳನ್ನು ಹತ್ತಿಕ್ಕುವ (Emotional Supression), ಪರಸ್ಪರ ಪ್ರೀತಿ-ಕಾಳಜಿ (Love and Care) ವ್ಯಕ್ತಪಡಿಸದ ವರ್ತನೆ ಹೊಂದಿದ್ದಾಗ ಇಬ್ಬರಲ್ಲೂ ವೈವಾಹಿಕ (Marital) ಜೀವನದ ಬಗ್ಗೆ ಸಮಾಧಾನ ಇರುವುದಿಲ್ಲ. ಬದಲಿಗೆ, ಭಾವನೆಗಳನ್ನು ವ್ಯಕ್ತಪಡಿಸುವ ಧೋರಣೆ ಹೊಂದಿದ್ದಾಗ ಇಬ್ಬರಲ್ಲೂ ಆತ್ಮೀಯತೆ (Intimacy) ಹಾಗೂ ಬೆಂಬಲದ ನಂಟು ಗಾಢವಾಗಿರುತ್ತದೆ. ಭಾವನೆಗಳನ್ನು ವ್ಯಕ್ತಪಡಿಸುವುದೆಂದರೆ, ಕೇವಲ ಮಾತುಗಳ ಮೂಲಕ ಮಾತ್ರವಲ್ಲ, ವರ್ತನೆ (Behavior), ಮುಖಭಾವ ಹಾಗೂ ದೇಹಭಾಷೆಗಳ (Body Language) ಮೂಲಕವೂ ಪರಸ್ಪರ ಕಾಳಜಿ, ಪ್ರೀತಿ ಹೊರಹಾಕಲು ಸಾಧ್ಯ ಎನ್ನುವುದು ಗಮನದಲ್ಲಿರಬೇಕು.

ದಾಂಪತ್ಯದಲ್ಲಿ ಮೌನಕ್ಕಿಂತ ಮಾತು ಸಮಸ್ಯೆ ಬಗೆಹರಿಸುತ್ತೆ! ಹೇಗಿರಬೇಕು ಮಾತುಕತೆ?

ಸಂಗಾತಿಗೆ ಸ್ಪಂದಿಸುತ್ತೀರಾ?
ಸಂಗಾತಿಯ (Partner) ಕುರಿತು ಭಾವನೆಗಳೇ ಇಲ್ಲವಾದರೆ ಅಥವಾ ವಿವಿಧ ಕಾರಣದಿಂದ ಕಲ್ಲು ಹೃದಯ (Stonewalling) ಹೊಂದಿದ್ದರೆ ಮಾನಸಿಕ ಸಮಸ್ಯೆಗಳು ಕಾಡುತ್ತವೆ. ಪರಸ್ಪರ ಸ್ಪಂದಿಸುವಿಕೆ (Responsiveness) ಉತ್ತಮ ಸಂಬಂಧಕ್ಕೆ ಅತ್ಯಗತ್ಯ. ಸ್ಪಂದಿಸುವುದೇ ಇಲ್ಲವಾದರೆ ಸಂಬಂಧದಲ್ಲಿ ಆತ್ಮೀಯತೆ ಮೂಡಲು ಸಾಧ್ಯವಿಲ್ಲ. ಆಗ ಒತ್ತಡಕ್ಕೆ ಕಾರಣವಾಗುವ ಪ್ರಮುಖ ಹಾರ್ಮೋನ್ (Stress Hormone) ಆಗಿರುವ ಕಾರ್ಟಿಸೋಲ್ (Cortisol) ಹೆಚ್ಚು ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಮಧುಮೇಹ, ಹೃದಯದ ರೋಗಗಳೂ ಉಂಟಾಗುತ್ತವೆ. 

ಏನು ಮಾಡಬೇಕೆಂದೇ ತೋಚದು!
ಇತ್ತೀಚೆಗೆ ನಡೆದಿದ್ದ ಒಂದು ಅಧ್ಯಯನದ (Study) ಪ್ರಕಾರ, ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೂ, ಸಂಬಂಧದಲ್ಲಿ ತೃಪ್ತಿ (Satisfaction) ಮೂಡುವುದಕ್ಕೂ ಸಮೀಪದ ಬಂಧವಿದೆ. ಕೆಲವು ಜನ ತಮ್ಮ ಸಂಗಾತಿಗೆ ತುಂಬ ಕೃತಜ್ಞರಾಗಿರುವುದು, ಆಳವಾದ ಬಾಂಧವ್ಯ (Relation) ಹೊಂದಿರುವುದು ಈ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಏಕೆಂದರೆ, ಅವರ ಸಂಗಾತಿಯಲ್ಲಿ ಸ್ಪಂದಿಸುವ ಹಾಗೂ ಭಾವನೆಗಳನ್ನು ನೇರವಾಗಿ ವ್ಯಕ್ತಪಡಿಸುವ (Expression) ಗುಣಗಳು ಮೇಲುಗೈ ಪಡೆದಿದ್ದವು. ಸಂಬಂಧದಲ್ಲಿ ಪಾರದರ್ಶಕತೆ ಇರುವುದೂ ಸಹ ಅಷ್ಟೇ ಮುಖ್ಯ. ಇಂತಹ ಜೋಡಿಗಳಿಗೆ ಯಾವ ಸಮಸ್ಯೆ ಎದುರಾದರೂ ಪರಸ್ಪರ ಮಾತುಕತೆ ಹಾಗೂ ಸಹಕಾರದ ಮೂಲಕ ಅದನ್ನು ಎದುರಿಸುವ ಸಾಮರ್ಥ್ಯ ಸುಲಭವಾಗಿ ಬಂದುಬಿಡುತ್ತದೆ ಎನ್ನುವುದು ಸಹ ಈ ಅಧ್ಯಯನದಲ್ಲಿ ಸಾಬೀತಾಗಿದೆ. ಆದರೆ, ಭಾವನೆಗಳನ್ನು ಹತ್ತಿಕ್ಕುವ, ಭಾವನೆಗಳೇ ಇಲ್ಲದ ಜೋಡಿಗಳು ಸಮಸ್ಯೆ ಎದುರಾದಾಗ ಏನು ಮಾಡಬೇಕೆಂದು ತೋಚದೆ ಆತಂಕಕ್ಕೆ (Anxiety) ಒಳಗಾಗುತ್ತಾರೆ. ಇಂತಹ ಸಂಗಾತಿಗಳಿಗೆ ತಮ್ಮ ಸಂಗಾತಿಯ ಮಾನಸಿಕ ಏರಿಳಿತ ಅರ್ಥವಾಗುವುದಿಲ್ಲ ಹಾಗೂ ತಮ್ಮ ಸಂಗಾತಿ ಯಾಕೆ ಅಪ್ಸೆಟ್ ಆಗಿದ್ದಾರೆ ಎನ್ನುವುದು ಸಹ ತಿಳಿದುಬರುವುದಿಲ್ಲ. 

ಸಂಗಾತಿ ಸನಿಹದಲ್ಲಿಯೇ ಇರಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ!

ಭಾವನೆಗಳ ವ್ಯಕ್ತಪಡಿಸುವಿಕೆ ಅತೀ ಅಗತ್ಯ
ಸಂಬಂಧದಲ್ಲಿ ಆರೋಗ್ಯಕರ (Healthy) ಮುಕ್ತ ಮಾತುಕತೆ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವಿಕೆ ಅತ್ಯಂತ ಅಗತ್ಯ. ಇದರಿಂದ ಸಂಘರ್ಷಗಳನ್ನು ಎದುರಿಸುವ ಶಕ್ತಿ ದೊರೆಯುತ್ತದೆ. ಅಲ್ಲದೆ, ಕಂಫರ್ಟ್ ಆಗಿ ಬದುಕಲು ಸಾಧ್ಯವಾಗುತ್ತದೆ. ಪರಸ್ಪರರಲ್ಲಿ ಪ್ರೀತಿ, ಗೌರವ (Respect) ಗಳಿದ್ದರೆ ಸಂಬಂಧದ ಗುಣಮಟ್ಟ ಹೆಚ್ಚುತ್ತದೆ.  ಹಾಗೂ ತಾತ್ಕಾಲಿಕವಾಗಿ ಉಂಟಾಗುವ ಭಿನ್ನಾಭಿಪ್ರಾಯಗಳನ್ನು (Difference) ಬಹುಬೇಗ ದೂರವಿಡಲು ಸಾಧ್ಯವಾಗುತ್ತದೆ. 

Follow Us:
Download App:
  • android
  • ios