Asianet Suvarna News Asianet Suvarna News

ಪ್ರಾಚೀನ ಭಾರತದಲ್ಲಿ ಸೆಕ್ಸ್ ಹೀಗಿತ್ತು! ನಿಮಗಿವು ಗೊತ್ತೆ?

ನಾವು ಸೆಕ್ಸ್‌ನಲ್ಲಿ ತುಂಬಾ ಮುಂದಿದ್ದೇವೆ ಅಂದುಕೊಳ್ಳುತ್ತೇವೆ. ಆದರೆ ಅದು ನಿಜಾನಾ? ನಿಜಕ್ಕೂ ಸೆಕ್ಸ್ ವಿಚಾರದಲ್ಲಿ ನಮ್ಮ ಪ್ರಾಚೀನ ಭಾರತ ಹೇಗಿತ್ತು? ನಿಮಗೆ ಗೊತ್ತಿಲ್ಲದೇ ಇರಬಹುದಾದ ಕೆಲವು ವಿಚಾರಗಳು ಇಲ್ಲಿವೆ ನೋಡಿ.

 

What you know about Sex in ancient India
Author
Bengaluru, First Published May 5, 2021, 1:11 PM IST

ಘಟಕಂಚುಕೀ ಅಥವಾ ಚಕ್ರಪೂಜಾ
ಪ್ರಾಚೀನ ಭಾರತದಲ್ಲಿ ಇದ್ದ ಒಂದು ಲೈಂಗಿಕ ಆಟವಿದು. ಇದರಲ್ಲಿ ಗಂಡಸರು ಹೆಂಗಸರು ಗುಂಪಾಗಿ ಸೆಕ್ಸ್‌ನಲ್ಲಿ ತೊಡಗಿಕೊಳ್ಳುತ್ತಿದ್ದರು. ಅದು ನಡೆಯುತ್ತಿದ್ದುದು ಹೀಗೆ. ಸಮಾನ ಸಂಖ್ಯೆಯ ಆರೋಗ್ಯವಂತ ಗಂಡಸರು ಹಾಗೂ ಹೆಂಗಸರು ಒಂದೆಡೆ ಸೇರುತ್ತಿದ್ದರು. ನಂತರ ಸ್ತ್ರೀಯರ ರವಿಕೆ ಅಥವಾ ಕಂಚುಕಗಳನ್ನು ಕಳಚಿ ಒಂದು ಮಡಕೆ, ಕುಂಭ ಅಥವಾ ಘಟದಲ್ಲಿ ಇಡಲಾಗುತ್ತಿತ್ತು. ಗಂಡಸರು ಬಂದು ಆ ಘಟದಿಂದ ಒಂದು ರವಿಕೆಯನ್ನು ಎತ್ತಿಕೊಳ್ಳಬೇಕು. ಆತನಿಗೆ ಯಾರ ರವಿಕೆ ಸಿಗುತ್ತದೋ ಆ ರಾತ್ರಿಯ ಪಾಲಿಗೆ ಆ ಹೆಣ್ಣು ಮತ್ತು ಗಂಡು ಒಂದಾಗುತ್ತಿದ್ದರು. ಮರುದಿನ ಅವರಿಬ್ಬರಿಗೂ ಮತ್ತೆ ಸಂಬಂಧವಿರಬೇಕಿಲ್ಲ. ಇದನ್ನು ಪುರುಷರಲ್ಲಿ ಪುಂಸತ್ವ ಉತ್ತೇಜಿಸುವ, ಸಮುದಾಯದಲ್ಲಿ ಹಂಚಿ ಬಾಳುವ, ಆರೋಗ್ಯಕರ ಲೈಂಗಿಕ ಚಿಂತನೆ ರೂಪಿಸುವ ಉದ್ದೇಶದಿಂದ ಆಡಲಾಗುತ್ತಿತ್ತು. 

ಬಹುಪತಿತ್ವ
ಬಹುಪತಿತ್ವ ಎಂಬುದು ಬುಡಕಟ್ಟು ಸಮುದಾಯಗಳಲ್ಲಿ ಸಾಮಾನ್ಯವಾಗಿತ್ತು. ನಂತರ ಬಂದ ಮುಸ್ಲಿಂ, ಬ್ರಿಟಿಷ್ ಆಳ್ವಿಕೆ ಹಾಗೂ ಶಿಕ್ಷಣಕ್ರಮದಿಂದ ಇದು ಅಸಹ್ಯ ಎಂಬಂತೆ ಬಿಂಬಿಸಲಾಯಿತು. ಮಹಾಭಾರತದಲ್ಲಿ ಬರುವ ದ್ರೌಪದಿ- ಪಾಂಡವರ ದಾಂಪತ್ಯ ಇಂಥದೊಂದು ಬಹುಪತಿತ್ವಕ್ಕೆ ಉದಾಹರಣೆ. ಪಾಂಡವರ ತಾಯಿ ಕುಂತಿ ಕೂಡ ಬಹುಪತಿತ್ವ ಆಚರಿಸಿದವಳೇ. ಈಗಲೂ ಹಿಮಾಲಯದ ಕೆಲವು ಹಳ್ಳಿಗಳಲ್ಲಿ ಇದನ್ನು ಆಚರಿಸಲಾಗುತ್ತದೆ. ಒಂದೇ ಕುಟುಂಬದ ಅಣ್ಣತಮ್ಮಂದಿರು ಒಂದೇ ಹೆಣ್ಣನ್ನು ಮದುವೆಯಾಗಿ ಆಸ್ತಿ ಪಾಲು ಮಾಡದೆ ಉಳಿಸಿಕೊಳ್ಳುತ್ತಿದ್ದರು.

ತಾಂತ್ರಿಕ ಸೆಕ್ಸ್
ತಾಂತ್ರಿಕ ಕಾಮ ಅಥವಾ ಆಭಿಚಾರಿಕ ಸೆಕ್ಸ್ ಎಂಬುದನ್ನು ಆಚರಿಸುವ ಹಲವು ಪಂಥಗಳೇ ಭಾರತದಾದ್ಯಂತ ಇದ್ದವು. ಇದು ಒಂದು ಬಗೆಯ ಆಧ್ಯಾತ್ಮಿಕ ಸಾಧನೆಯೇ ಆಗಿತ್ತು. ಇದರಲ್ಲಿ ಶವದ ಪೂಜೆ. ಯೋನಿ ಪೂಜೆ. ಶವದೊಂದಿಗೆ ಸಂಭೋಗ ಮೊದಲಾದವು ಇರುತ್ತಿದ್ದವು. ಅಘೋರಿಗಳು ಈಗಲೂ ಇದನ್ನು ಆಚರಿಸುತ್ತಾರೆ.

#Feelfree: ನನ್ನ ಗಂಡ ಸಂಭೋಗದ ಉತ್ತುಂಗ ತಲುಪುವುದೇ ಇಲ್ಲ! ...

ಸ್ತ್ರೀಯರ ಕಾಮೋತ್ಕರ್ಷ
ಪುರುಷ ಸೆಕ್ಸ್‌ನಲ್ಲಿ ಅನುಭವಿಸುವಂತೆಯೇ ಕಾಮೋತ್ಕರ್ಷ ಸ್ಥಿತಿಯನ್ನು ಸ್ತ್ರೀ ಕೂಡ ಅನುಭವಿಸುತ್ತಾಳೆ; ಆಕೆಗೂ ಅದು ದೊರೆಯಬೇಕು ಎಂಬ ಪ್ರಜ್ಞೆ ಎಲ್ಲರಲ್ಲೂ ಜಾಗೃತವಾಗಿತ್ತು. ಕಾಮಶಾಸ್ತ್ರವನ್ನು ಬರೆದ ವಾತ್ಸಾಯನ ಈ ಬಗ್ಗೆ ವಿವರವಾಗಿ ಬರೆಯುತ್ತಾನೆ. ಅದರಲ್ಲಿ ಸ್ತ್ರೀ ಹೇಗೆಲ್ಲಾ ಕಾಮೋತ್ಕಟ ಸ್ಥಿತಿ ಅನುಭವಿಸಬಹುದು ಎಂಬುದನ್ನು ವಿವರಿಸಲಾಗಿದೆ. 

What you know about Sex in ancient India

ಲೈಂಗಿಕ ಶಿಕ್ಷಣ
ಪ್ರಾಚೀನ ಭಾರತದಲ್ಲಿ ಲೈಂಗಿಕ ಶಿಕ್ಷಣ ಸಾಮಾನ್ಯವಾಗಿತ್ತು. ಗುರುಕುಲದಿಂದ ಬಂದ ರಾಜಕುಮಾರ, ಕುಮಾರಿಯರಿಗೆ ಭಾವಿಜೀವನದ ಸೆಕ್ಸ್ ಬಗ್ಗೆ ಹೇಳಿಕೊಡುವವರೇ ಇದ್ದರು. ಅಂದಿನ ಪ್ರಾಚೀನ ದೇವಾಲಯದ ಹೊರಗಿನ ಗೋಡೆಗಳ ಮೇಲೂ ಮಿಥುನ ಶಿಲ್ಪಗಳಿದ್ದವು. ಇವುಗಳ ದೃಶ್ಯ ಮೂಲಕ ಲೈಂಗಿಕತೆಯ ಬಗ್ಗೆ ಹೇಳಿಕೊಡುವ ಕಲಿಕೆಯಾಗಿತ್ತು. ಹೆಚ್ಚಿನ ವಿವರಗಳಿಲ್ಲದೇ ಇದರ ಮೂಲಕ ಕಲಿಯುತ್ತಿದ್ದರು.

ನಿಷಿದ್ಧ ಲೈಂಗಿಕ ಸಂಬಂಧಗಳು
ಸಹಜ ಹಾಗೂ ಆರೋಗ್ಯಕರ ಕಾಮ ಇದ್ದಂತೆ ಅಸಹಜ ಹಾಗೂ ಅನಾರೋಗ್ಯಕರ ಕಾಮ ಸಂಬಂಧಗಳೂ ಪ್ರಾಚೀನ ಭಾರತದಲ್ಲಿ ಇದ್ದವು ಎಂಬುದಕ್ಕೆ ದಾಖಲೆಗಳಿವೆ. ಚಂದ್ರ ತನ್ನ ಗುರು ಬೃಹಸ್ಪತಿಯ ಪತ್ನಿಯಾದ ತಾರೆಯನ್ನೇ ಮೋಹಿಸುತ್ತಾನೆ. ಬ್ರಹ್ಮ ತನ್ನ ಮಗಳನ್ನೇ ಮೋಹಿಸುತ್ತಾನೆ. 

#Feelfree: ವಿವಾಹೇತರ ಸಂಬಂಧದ ಬಯಕೆ, ನಿಭಾಯಿಸೋದು ಹೇಗೆ? ...

ವಿವಾಹಪೂರ್ವ ಕಾಮ
ವಿವಾಹಕ್ಕೂ ಮುನ್ನವೇ ಲೈಂಗಿಕ ಅನುಭವ ಪಡೆಯುವುದು ನಿಷಿದ್ಧವಾಗಿರಲಿಲ್ಲ; ಅಥವಾ ಅದು ತಿಳಿದುಬಂದರೂ ಅದೇನೂ ಮಹಾ ಅಪರಾಧ ಎಂದು ತಿಳಿಯುತ್ತಿರಲಿಲ್ಲ. ಉದಾಹರಣೆಗೆ ಸತ್ಯವತಿ, ಮುನಿ ಪರಾಶರನ ಜೊತೆಗೂಡಿ ಮಗು ವೇದವ್ಯಾಸರನ್ನು ಪಡೆಯುತ್ತಾಳೆ. ನಂತರ ಈಕೆಗೆ ಶಂತನುವಿನ ಜೊತೆಗೆ ಮದುವೆಯಾಗುತ್ತದೆ. ಕರ್ಣ ಕೂಡ ಕುಂತಿಗೆ ವಿವಾಹಕ್ಕೂ ಮೊದಲೇ ಜನಿಸಿದವನು.

ಸಲಿಂಗಕಾಮ
ಪ್ರಾಚೀನ ಭಾರತದ ಅರಸು ಮನೆತನಗಳಲ್ಲಿ ಸಲಿಂಗಕಾಮ ಎಂಬುದು ಸಹಜವೇ ಆಗಿತ್ತು. ರಾಜನಿಗೆ ನೂರಾರು ಪತ್ನಿಯರಿದ್ದರು, ಎಲ್ಲರನ್ನೂ ಸಂತೃಪ್ತಿಪಡಿಸಲು ಆಗುತ್ತಿರಲಿಲ್ಲ. ಆಗ ಅಂತಃಪುರದಲ್ಲೇ ಸಲಿಂಗ ಸಂಬಂಧಗಳು ಹುಟ್ಟಿಕೊಳ್ಳುತ್ತಿದ್ದವು. ಕೆಲವು ಮೊಘಲ್ ಸುಲ್ತಾನರು ಸೆಕ್ಸ್ ಸುಖಕ್ಕಾಗಿಯೇ ಮಂಗಳಮುಖಿಯರನ್ನು ಸಾಕಿಕೊಂಡ ಉದಾಹರಣೆಗಳು ಇವೆ.

#Feelfree: ತಂದೆಗೆ ಇನ್ನೊಬ್ಬ ಮಹಿಳೆ ಜತೆ ಸಂಬಂಧ, ಏನ್ ಮಾಡ್ಲಿ? ...

 

Follow Us:
Download App:
  • android
  • ios