Vatsyayana Kamasutra: ಮಿಲನದ ಸಮಯದಲ್ಲಿ ಇದನ್ನೆಲ್ಲಾ ತಲೆಯೊಳಗಿಂದ ತೆಗೆದುಹಾಕಿ ಅಂತಾನೆ ವಾತ್ಸಾಯನ!

ವಾತ್ಸಾಯನನ ಕಾಮಸೂತ್ರದ ಪ್ರಕಾರ, ಮಿಲನದ ಸಂದರ್ಭದಲ್ಲಿ ಮನಸ್ಸಿನ ಸ್ಥಿತಿಯು ಸುಖದ ಮೇಲೆ ಪರಿಣಾಮ ಬೀರುತ್ತದೆ. ಮಿಲನದ ಸಂದರ್ಭದಲ್ಲಿ ಮನಸ್ಸು ಹೇಗಿದ್ದರೆ ಅದು ಸಂಪೂರ್ಣ ಸುಖಕರವಾಗಿರುತ್ತದೆ, ಹೇಗಿದ್ದರೆ ಅಷ್ಟೇನೂ ರಸಮಯವಾಗಿರುವುದಿಲ್ಲ ಈ ಕುರಿತು ವಾತ್ಸಾಯನ ಏನ್‌ ಹೇಳ್ತಾನೆ ಕೇಳೋಣ.  

What to remove from your mind in time of intimacy what Vatsyayana says bni

ವಾತ್ಸಾಯನನ ಕಾಮಸೂತ್ರ ಪ್ರಾಚೀನ ಭಾರತದ ಒಂದು ಶ್ರೇಷ್ಠ ಗ್ರಂಥ. ಗಂಡು ಹೆಣ್ಣಿನ ಕಾಮಕೂಟಕ್ಕೆ ಸಂಬಂಧಿಸಿದ ಎಲ್ಲವನ್ನೂ ಮುನಿ ವಾತ್ಸಾಯನ ಇದರಲ್ಲಿ ಬರೆದಿಟ್ಟುಬಿಟ್ಟಿದ್ದಾನೆ. ಮಿಲನದ ಸಂದರ್ಭದಲ್ಲಿ ಗಂಡು ಹೇಗಿರಬೇಕು, ಹೆಣ್ಣು ಹೇಗಿರಬೇಕು ಎಂಬುದೆಲ್ಲ ತುಂಬ ಮುಖ್ಯವಾದುದು. ಈ ಅಂಶಗಳಲ್ಲಿ ಮುಖ್ಯವಾದುದು, ಮಿಲನದ ಸಂದರ್ಭದಲ್ಲಿ ಮನಸ್ಸು ಹೇಗಿದ್ದರೆ ಅದು ಸಂಪೂರ್ಣ ಸುಖಕರವಾಗಿರುತ್ತದೆ, ಹೇಗಿದ್ದರೆ ಅಷ್ಟೇನೂ ರಸಮಯವಾಗಿರುವುದಿಲ್ಲ ಎಂಬುದು. ಈ ಕುರಿತು ವಾತ್ಸಾಯನ ಏನ್‌ ಹೇಳ್ತಾನೆ ಕೇಳೋಣ.  

1) ರತಿಕೂಟದ ಸಮಯದಲ್ಲಿ ನಿಮ್ಮ ಈ ಹಿಂದಿನ ಸಂಗಾತಿಗಳನ್ನು ನೆನಪಿಸಿಕೊಳ್ಳಬಾರದು. ಹೋಲಿಕೆಯು ದುಃಖಕರ. ಈಗಿನ ನಿಮ್ಮ ಸಂಗಾತಿ ಹಿಂದಿನ ಸಂಗಾತಿಯಷ್ಟು ಚಂದ ಇದ್ದಾರಾ ಇಲ್ವಾ, ಅಷ್ಟು ಸುಖ ಕೊಡ್ತಾರಾ ಇಲ್ವಾ ಎಂದೆಲ್ಲ ಹೋಲಿಸುವುದು ಅನಗತ್ಯ ಕಿರಿಕಿರಿಗೆ ಕಾರಣ. ಈ ಕುರಿತು ಯೋಚಿಸಲೂ ಬಾರದು, ಮಾತನಾಡುವುದಂತೂ ಕೂಡಲೇ ಕೂಡದು.

 2) ನಿಮ್ಮ ನೋಟ ಎಲ್ಲೋ ಇರಬಾರದು. ಅದು ಸಂಗಾತಿಯ ಕಡೆಗೇ ಇರಬೇಕು. ಸಂಗಾತಿಯ ಕಣ್ಣುಗಳನ್ನು ದಿಟ್ಟಿಸುತ್ತಿದ್ದರೆ ಆನಂದ ಉಕ್ಕೇರುತ್ತದೆ. ಸಂಗಾತಿಯ ಆನಂದವನ್ನು ನೋಡುತ್ತ ನಿಮ್ಮ ಅನಂದ ಇಮ್ಮಡಿಸುತ್ತದೆ. ನೋಟ ಎತ್ತಲೋ ಇದ್ದರೆ ನಿಮಗೂ ಸಂಗಾತಿಗೂ ಕ್ರಿಯೆಯಲ್ಲಿ ಇರುವ ಸ್ವಾರಸ್ಯ ಹೊರಟುಹೋಗುತ್ತದೆ. 

3) ನಾನು ಸರಿಯಾಗಿ ಮಾಡ್ತಿದೀನೋ ಇಲ್ವೋ ಎಂಬ ಆತಂಕ ಅಥವಾ ಕಾರ್ಯಕ್ಷಮತೆಯ ಆತಂಕ ಇರಬಾರದು. ನನ್ನಿಂದ ಸಂಗಾತಿಯನ್ನು ತೃಪ್ತಿಪಡಿಸುವುದು ಸಾಧ್ಯವಾ, ಸಂಗಾತಿಗೆ ತೃಪ್ತಿ ಆಗದಿದ್ದರೆ ಏನ್‌ ಮಾಡ್ಲಿ, ಸುಖಪಡಿಸುವುದು ಹೇಗೆ ಅಂತೆಲ್ಲಾ ಯೋಚನೆ ಮಾಡುತ್ತಿರಬಾರದು. ಆ ಕ್ಷಣದಲ್ಲಿ ಯಾವುದು ಉತ್ಕರ್ಷಕರವೋ ಅದನ್ನು ಮಾಡಬೇಕು.  

4) ಕೆಲಸದ ಒತ್ತಡವನ್ನು ಬದಿಗಿಡಿ. ಆಫೀಸಿನಲ್ಲಿ ನಡೆದದ್ದನ್ನು ಮಂಚಕ್ಕೆ ತರುವುದು ಬೇಡ. ಕಚೇರಿಯಲ್ಲಿ ನಡೆಯುವುದೆಲ್ಲಾ ಅಲ್ಲೇ ಇರಲಿ. ಬೆಡ್‌ರೂಮಿನ ಸಂಗತಿಯನ್ನು ಕಚೇರಿಗೆ ಒಯ್ಯುತ್ತೀರಾ? ಇಲ್ಲ ಅಲ್ವೇ? ಮತ್ಯಾಕೆ ಅಲ್ಲಿನದು ಇಲ್ಲಿಗೆ?  

5) ನಿಮ್ಮ ಹಾಗೂ ಸಂಗಾತಿಯ ನಡುವೆ ನಡೆದ ಹಳೆಯ ಜಗಳವನ್ನು ನೆನಪಿಸಿಕೊಳ್ಳಬೇಡಿ. ಹಳೆಯ ಮುನಿಸುಗಳು ಮರೆಗೆ ಸರಿಯಲಿ. ಇಂದು ಬೆಳಗ್ಗಿನ ವಿರಸ ಆ ಹೊತ್ತಿಗೇ ನಂದಿಹೋಗಲಿ. ನಿನ್ನೆಯ ಕೋಪ ನಿನ್ನೆಗೇ ಇರಲಿ. ಅದನ್ನು ಮಂಚದಲ್ಲಿ ನೆನಪಿಸಿಕೊಳ್ಳುವುದೂ ಬೇಡ. ಹಾಗೆ ಮಾಡಿದರೆ ಸುಖ ಸಿಗದು. 

6) ನಕಾರಾತ್ಮಕ ಯೋಚನೆಗಳು ಬೇಡ. ಯಾರ ಬಗ್ಗೆಯೋ ಸಿಟ್ಟಿದ್ದರೆ ಅದನ್ನು ನೆನೆಯಬೇಡಿ. ಯಾರ ಬಗೆಗೋ ಅಸಮಾಧಾನ ಇದ್ದರೆ ಅದನ್ನು ಆ ಹೊತ್ತಿಗೆ ತಲೆಯಲ್ಲಿ ಧರಿಸಿರಬೇಡಿ. ಗಮನವನ್ನು ಬೇರೆಡೆಗೆ ಸೆಳೆಯುವಂತಹ ವಿಷಯಗಳ ಬಗ್ಗೆ ಯೋಚಿಸದಿರಲು ಪ್ರಯತ್ನಿಸಿ. ನಿಮ್ಮ ಸಂಗಾತಿಯ ಜತೆಗೆ ನೀವು ಈ ಕ್ಷಣದಲ್ಲಿ ಸಂಪೂರ್ಣವಾಗಿ ಇರಿ. ಮೂಲಭೂತವಾಗಿ, ಮಾನಸಿಕ ದೂರವನ್ನು ಸೃಷ್ಟಿಸುವ ಅಥವಾ ಅನುಭವದ ಅನ್ಯೋನ್ಯತೆಯಿಂದ ದೂರವಿಡುವ ಯಾವುದೇ ಆಲೋಚನೆಗಳನ್ನು ತಪ್ಪಿಸಿ. 

ಡಾಕ್ಟ್ರೇ, ಮಿಲನ ಮುಗಿದ ತಕ್ಷಣ ಇನ್ನೊಮ್ಮೆ ಬೇಕು ಅಂತಾಳೆ, ಏನ್ಮಾಡ್ಲಿ?

ಹಾಗಾದರೆ ಸಂಗಾತಿಯ ಜೊತೆ ಸುಖವಾಗಿರಲು ಏನಿರಬೇಕು? ನೆನಪಿಡಬೇಕಾದ ಪ್ರಮುಖ ಅಂಶಗಳು:

ಪ್ರಸ್ತುತ ಕ್ಷಣದ ಮೇಲೆ ಕೇಂದ್ರೀಕರಿಸಿ. ನಿಮ್ಮ ಸಂಗಾತಿಯೊಂದಿಗೆ ಸಂಪೂರ್ಣವಾಗಿ ಪ್ರಸ್ತುತವಾಗಿರುವುದು ತೃಪ್ತಿಕರ ಲೈಂಗಿಕ ಅನುಭವಕ್ಕೆ ಪ್ರಮುಖವಾಗಿದೆ. ಹೋಲಿಕೆಗಳನ್ನು ತಪ್ಪಿಸಿ. ನಿಮ್ಮ ಪ್ರಸ್ತುತ ಸಂಗಾತಿ ಅಥವಾ ಲೈಂಗಿಕ ಅನುಭವವನ್ನು ಹಿಂದಿನ ಸಂಬಂಧಗಳಿಗೆ ಹೋಲಿಸಬೇಡಿ. ಆತ್ಮವಿಮರ್ಶೆ ಬಿಡಿ. ನೀವು ಹೇಗೆ ಕಾಣುತ್ತೀರಿ ಅಥವಾ ಹೇಗೆ ಕಾರ್ಯನಿರ್ವಹಿಸುತ್ತೀರಿ ಎಂಬುದರ ಕುರಿತು ಆಲೋಚನೆಗಳಲ್ಲಿ ಸಿಲುಕಿಕೊಳ್ಳಬೇಡಿ. ಮುಕ್ತವಾಗಿ ಸಂವಹಿಸಿ. ಒತ್ತಡದ ಆಲೋಚನೆಗಳೊಂದಿಗೆ ಹೋರಾಡುತ್ತಿದ್ದರೆ, ಅದರ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ ಮುಕ್ತರಾಗಿ.

ರೀಲ್ಸ್ ವೀಕ್ಷಣೆ ವ್ಯಸನ: ಗಂಡ-ಹೆಂಡತಿ ಸಂಬಂಧಕ್ಕೆ ಮಾರಕ!
 

Latest Videos
Follow Us:
Download App:
  • android
  • ios