Asianet Suvarna News Asianet Suvarna News

AIDS ಎದುರಿಸಿದ ಪೋರ್ನ್ ಇಂಡಸ್ಟ್ರಿ, ಕೊರೋನಾ ಜೊತೆ ಹೇಗೆ ಹೋರಾಡುತ್ತೆ?

1990ರ ದಶಕದಲ್ಲೂ ಇಂಥದೇ ಭಯವೊಂದು ಪೋರ್ನ್ ಇಂಡಸ್ಟ್ರಿಯನ್ನು ಕಾಡಿತ್ತು. ಆಗ ಎಚ್‌ಐವಿ ಅರ್ಥಾತ್ ಏಡ್ಸ್ ಬಲಿತುಕೊಂಡಿತ್ತು. ಕಾಂಡೋಮ್ ಇಲ್ಲದೆ ಲೈಂಗಿಕ ಸಂಪರ್ಕ, ಒಬ್ಬರು ಬಳಸುತ್ತಿದ್ದ ಡ್ರಗ್ಸ್‌ನ ಇಂಜೆಕ್ಷನ್‌ನ್ನು ಇನ್ನೊಬ್ಬರು ಬಳಸುವುದು, ಅಸುರಕ್ಷಿತ ರಕ್ತದಾನ ಇತ್ಯಾದಿಗಳಿಂದ ಅದು ಹರಡಲು ಆರಂಭವಾಯಿತು.

How porn industry fights corona virus
Author
Bengaluru, First Published May 9, 2020, 4:34 PM IST

ಪೋರ್ನ್ ಸಿನಿಮಾ ನಮ್ಮ ಯಾವುದೇ ಬಾಲಿವುಡ್ ಟಾಲಿವುಡ್ ಸಿನಿಮಾ ಇಂಡಸ್ಟ್ರಿಗಳಿಗಿಂತಲೂ ದೊಡ್ಡದು. ಕೋಟ್ಯಂತರ ಡಾಲರ್ ದುಡ್ಡು ಎಣಿಸುವ ಬಹುರಾಷ್ಟ್ರೀಯ ವ್ಯವಹಾರ. ಲಕ್ಷಾಂತರ ಮಂದಿ ಇದನ್ನು ನಂಬಿಕೊಂಡು ಬದುಕು ನಡೆಸುತ್ತಿದ್ದಾರೆ. ಇಂಥ ಬ್ಯುಸಿನೆಸ್ ಒಂದೇ ಒಂದು ವೈರಸ್‌ನಿಂದಾಗಿ ಮಕಾಡೆ ಮಲಗಿದೆ. ಯಾಕೆಂದರೆ ಈ ಉದ್ಯಮ‌ ದೇಹಗಳನ್ನೇ ನಂಬಿದೆ. ಆರೋಗ್ಯವಂತ ದೇಹಗಳು ಇದ್ದರೆ ಮಾತ್ರವೇ ಈ ಇಂಡಸ್ಟ್ರಿಗೆ ಪ್ರವೇಶ. 

ಒಬ್ಬ ಪೋರ್ನ್ ನಟ ಅಥವಾ ನಟಿ, ತಿಂಗಳಲ್ಲಿ ಸುಮಾರು ಇಪ್ಪತ್ತು ವಿಡಿಯೋ ಶೂಟ್ ನಡೆಸಬೇಕಾಗುತ್ತದೆ. ಅಂದರೆ ಅಷ್ಟು ಪುರುಷ ಅಥವಾ ಸ್ತ್ರೀಯ ಜೊತೆ ಲೈಂಗಿಕ ಕ್ರಿಯೆ ನಡೆಸಬೇಕು. ಶಾಟ್ ಸರಿ ಹೋಗದಿದ್ದರೆ ಮತ್ತೆ ಮತ್ತೆ ಈ ಕ್ರಿಯೆಯಲ್ಲಿ ತೊಡಗಬೇಕಾಗುತ್ತದೆ. ಅಲ್ಲಿ ಎಂಜಲು ಸೇರಿದಂತೆ ಗಂಡು ಹೆಣ್ಣಿನ ದೇಹದ ಹಲವು ಸ್ರಾವಗಳು ಒಂದಾಗುತ್ತವೆ. ಕೊರೋನಾ ವೈರಸ್ ಹರಡಲು ಧಾರಾಳ ಅವಕಾಶ.

ಪೋರ್ನ್ ಚಿತ್ರಗಳಲ್ಲಿ ನಟಿಸಿದ ಖ್ಯಾತ ನಟಿಯ ಕಣ್ಣೀರು

1990ರ ದಶಕದಲ್ಲೂ ಇಂಥದೇ ಭಯವೊಂದು ಪೋರ್ನ್ ಇಂಡಸ್ಟ್ರಿಯನ್ನು ಕಾಡಿತ್ತು. ಆಗ ಎಚ್‌ಐವಿ ಅರ್ಥಾತ್ ಏಡ್ಸ್ ಬಲಿತುಕೊಂಡಿತ್ತು. ಕಾಂಡೋಮ್ ಇಲ್ಲದೆ ಲೈಂಗಿಕ ಸಂಪರ್ಕ, ಒಬ್ಬರು ಬಳಸುತ್ತಿದ್ದ ಡ್ರಗ್ಸ್‌ನ ಇಂಜೆಕ್ಷನ್‌ನ್ನು ಇನ್ನೊಬ್ಬರು ಬಳಸುವುದು, ಅಸುರಕ್ಷಿತ ರಕ್ತದಾನ ಇತ್ಯಾದಿಗಳಿಂದ ಅದು ಹರಡಲು ಆರಂಭವಾಯಿತು. ಹಲವು ದಿನಗಳ ಕಾಲ ಇದರೊಂದಿಗೆ ಹೋರಾಡಿದ ಅಡಲ್ಟ್ ಫಿಲಂ ಉದ್ಯಮ, ತನ್ನದೇ ಆದ ಕೆಲವು ವಿಧಾನಗಳೊಂದಿಗೆ ಏಡ್ಸ್‌ನ ಭಯವನ್ನು ಹಿಮ್ಮೆಟ್ಟಿಸಿತು. ಎಲ್ಲರಿಗೂ ಏಡ್ಸ್ ಟೆಸ್ಟ್ ಕಡ್ಡಾಯ. ಪಾಸಿಟಿವ್ ಬಂದವರು ಉದ್ಯಮದಲ್ಲಿ ಇರುವಂತಿಲ್ಲ, ಕೆಲಸ ಮಾಡುವಂತಿಲ್ಲ. ನೆಗೆಟಿವ್ ಬಂದವರು ಕೂಡ, ಪ್ರತಿ 14 ದಿವಸಕ್ಕೊಮ್ಮೆ ಪರೀಕ್ಷೆ ನಡೆಸಲೇಬೇಕು. ಕಂಪನಿ ಬದಲಿಸಲು, ಹೊಸ ಸಿನಿಮಾದಲ್ಲಿ ನಟಿಸಲು, ಎಲ್ಲದಕ್ಕೂ ಮೆಡಿಕಲ್‌ ಸರ್ಟಿಫಿಕೇಟ್ ಕಡ್ಡಾಯ. ಸೆಕ್ಸ್‌ನಲ್ಲಿ ಭಾಗವಹಿಸುವ ಗಂಡು- ಹೆಣ್ಣು ಕೂಡ ಪರಸ್ಪರ ತಾವು ಕ್ಲೀನ್ ಎಂಬುದಕ್ಕೆ ಮೆಡಿಕಲ್ ಪ್ರಮಾಣಪತ್ರದ ಸಾಕ್ಷಿ ತೋರಿಸಬೇಕು. ಇಷ್ಟೆಲ್ಲ ಮುನ್ನೆಚ್ಚರಿಕೆಯಿಂದಾಗಿ ಈಗ ಉದ್ಯಮದಲ್ಲಿ ಏಡ್ಸ್ ಭಯವಿಲ್ಲ.

ಬಾಯ್ ಫ್ರೆಂಡ್‌ವೀರ್ಯವೇ ಕೊರೋನಾಕ್ಕೆ ಔಷಧ, ವಾರಕ್ಕೆ ಮೂರು ಸಾರಿ! 

ಈ ಬಗೆಯ ಕಠಿಣ ಮೆಡಿಕಲ್ ಪ್ರೊಸೀಜರ್‌ಗಳ ಮೂಲಕ ಕೊರೊನಾವೈರಸ್ ಅನ್ನು ಮಣಿಸಬಹುದು. ಆದರೆ ಕೊರೊನಾ ತಂದಿಟ್ಟಿರುವ ಸವಾಲುಗಳು ಇನ್ನೂ ಹೆಚ್ಚು. ಇಲ್ಲಿ ಸೋಂಕು ಹರಡಲು ಪರಸ್ಪರ ದೇಹದ ಸಂಪರ್ಕಗಳೇ ಆಗಬೇಕು ಎಂದೇನಿಲ್ಲ. ಒಬ್ಬ ಮುಟ್ಟಿದ ವಸ್ತುವನ್ನು ಇನ್ನೊಬ್ಬ ಮುಟ್ಟಿ ಮುಖ ಉಜ್ಜಿಕೊಂಡರೂ ಸಾಕಾಗುತ್ತದೆ. ಹಲವು ಸೇಫ್ಟಿ ಕ್ರಮಗಳನ್ನು ಸೆಕ್ಸ್ ಚಿತ್ರ ಇಂಡಸ್ಟ್ರಿ ಅನುಸರಿಸುತ್ತಿದೆ. ಮಾಸ್ಕ್, ಗ್ಲವ್ಸ್, ಸ್ಯಾನಿಟೈಸರ್ ಇವೆಲ್ಲ ಕಡ್ಡಾಯ. ಇದರ ಜೊತೆಗೆ ಪ್ರತಿ ಎರಡು ವಾರಕ್ಕೊಮ್ಮೆ ಏಡ್ಸ್ ಟೆಸ್ಟ್ ಕಡ್ಡಾಯ. ಈಗ ಕೋವಿಡ್ ಪರೀಕ್ಷೆಯನ್ನೂ ಕಡ್ಡಾಯ ಮಾಡಬಹುದು. ಕೋವಿಡ್19 ಪರೀಕ್ಷೆ ಪಾಸಿಟಿವ್ ಬಂದರೆ ಆತ ಅಥವಾ ಆಕೆ ಶೂಟಿಂಗ್‌ನಲ್ಲಿ ಭಾಗವಹಿಸಿದ ಯುನಿಟ್ ಅನ್ನು ಎರಡು ತಿಂಗಳು ಕಡ್ಡಾಯ ಮುಚ್ಚಲಾಗುತ್ತದೆ. ಭಾಗವಹಿಸಿದ ಮತ್ತು ಸಂಪರ್ಕವಿದ್ದ ಎಲ್ಲರಿಗೂ ಟೆಸ್ಟ್, ಕ್ವಾರಂಟೈನ್ ಕಡ್ಡಾಯ.

#FeelFree: ಆ ಜಾಗ ತುರಿಸುತ್ತಲೇ ಇರಬೇಕು ಅನಿಸುತ್ತೆ ! 

ಬಹುಶಃ ಪೋರ್ನ್ ಉದ್ಯಮದಲ್ಲಿರುವ ಈ ಬಿಗಿಯಾದ ನೀತಿ ಕಾನೂನುಗಳು ಇತರ ಉದ್ಯಮ, ಸಂಸ್ಥೆಗಳಿಗೂ ಮಾದರಿ ಆಗಬಹುದು. ಇಲ್ಲಿನಷ್ಟೇ ಕಟ್ಟೆಚ್ಚರದಿಂದ ಎಲ್ಲಾ ಕಡೆಯೂ ಕೋವಿಡ್ ಪರೀಕ್ಷೆ, ಶಿಸ್ತು, ಅಂತರ, ಸ್ವಚ್ಛತೆ ಕಾಪಾಡಿಕೊಳ್ಳಬೇಕು ಅಂತಾರೆ ತಜ್ಞರು. ಕಡೆಗೂ ನಮಗೆ ಆರೋಗ್ಯದ ಪಾಠ ಹೇಳಿಕೊಡೋಕೆ ಪೋರ್ನ್ ಫಿಲಂ ಉದ್ಯಮವೇ ಬರಬೇಕಾಯ್ತು ನೋಡಿ!

Follow Us:
Download App:
  • android
  • ios