ಪ್ರಶ್ನೆ
ನನಗೀಗ 30 ವರ್ಷ ವಯಸ್ಸು. ಹಿರಿಯರು ನೋಡಿದ ಹುಡುಗಿಯನ್ನೇ ಒಪ್ಪಿ ಮದ್ವೆ ಆಗ್ತಿದ್ದೀನಿ. ಮದುವೆಗೆ ಮುಂಚೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳೋದು, ಮಾತುಕತೆ ಆಡೋದು ಬಹಳ ಮುಖ್ಯ ಅಂತಾರೆ. ಹಾಗಂತ ನಾನು ಆ ಹುಡುಗಿ ಜೊತೆ ಮಾತನಾಡಲಿಕ್ಕೆ ಕರೆದರೆ ಬಿಗುಮಾನದಲ್ಲೇ ಬರುತ್ತಾಳೆ. ಬೇಕೋ ಬೇಡವೋ ಅಂತ ಮಾತಾಡ್ತಾಳೆ. ಅಪ್ಪಿ ತಪ್ಪಿ ನಾನೇನಾದರೂ ಕೊಂಚ ಕ್ಲೋಸ್ ಆಗಿ ಬಿಹೇವ್ ಮಾಡಲು ಶುರು ಮಾಡಿದರೆ, ಎದ್ದು ಹೋಗಿಯೇ ಬಿಡುತ್ತಾಳೆ. ನನಗೀಗ ನಿಜಕ್ಕೂ ಚಿಂತೆ ಶುರುವಾಗಿದೆ. ಈ ಹುಡುಗಿ ನನ್ನನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದಾಳಾ ಇಲ್ವಾ ಅಂತ. ಒಂದು ವೇಳೆ ಅವಳು ನಿಜ ಮನಸ್ಸಿಂದ ಒಪ್ಪಿಕೊಂಡರೆ ನನ್ನ ಜೊತೆಗೆ ಮನಸ್ಸು ಬಿಚ್ಚಿ ಯಾಕೆ ಮಾತನಾಡೋದಿಲ್ಲ. ಅವಳಿಗೆ ಬೇರೆ ಯಾರ ಜೊತೆಗಾದ್ರೂ ಅಫೇರ್ ಇಟ್ಕೊಂಡಿರಬಹುದಾ, ಅವಳಿಗೆ ಅವರ ಜೊತೆಗೆ ದೈಹಿಕ ಸಂಬಂಧ ಇರಬಹುದಾ? ಹಿರಿಯರ ಬಲವಂತಕ್ಕೆ ಅವಳು ಮದುವೆಗೆ ಒಪ್ಪಿರಬಹುದಾ? ಹಾಗೇನಾದ್ರೂ ಆಗಿದ್ರೆ ಇಂಥಾ ಟೈಮ್ ನಲ್ಲಿ ನಾನು ಏನು ಮಾಡಲಿ? ಅವಳ ಮನಸ್ಸನ್ನು ಅರಿಯುವ ದಾರಿ ಹೇಳುವಿರಾ? ಯಾಕೋ ಇಂಥಾ ಯೋಚನೆಗಳು ಬಂದು ಮನಸ್ಸು ಹಾಳಾಗುತ್ತಿದೆ. ಮದುವೆ ಅಂತ ಎಲ್ಲರೂ ಸಂಭ್ರಮದಲ್ಲಿದ್ರೆ ನಾನು ಮಾತ್ರ ನೋವಲ್ಲಿ ಒದ್ದಾಡೋ ಹಾಗಾಗಿದೆ. ಈಗಲೇ ಹೀಗಾದ್ರೆ ಮುಂದೆ ಏನ್ ಗತಿ ಅಂತ ಗೊತ್ತಾಗ್ತಿಲ್ಲ.

ಉತ್ತರ
ಮದುವೆಯಾಗುವ ಪ್ರತೀ ಗಂಡು ಹೆಣ್ಣಿಗೂ ಇರುವ ಸಂದೇಹ, ಅನುಮಾನಗಳೇ ನಿಮಗೂ ಬಂದಿವೆ. ಮುಖ್ಯವಾಗಿ ಅರೇಂಜ್ಡ್ ಮ್ಯಾರೇಜ್ ನಲ್ಲಿ ಹುಡುಗ ಹುಡುಗಿ ಹೆಚ್ಚು ಕ್ಲೋಸ್ ಆಗೋದು ಮದುವೆ ಆದಮೇಲೆಯೇ. ಮದುವೆಗೂ ಮೊದಲೇ ಕೆಲವರಿಗಷ್ಟೇ ಪರಸ್ಪರ ಅರ್ಥ ಮಾಡಿಕೊಳ್ಳೋಕೆ ಸಾಧ್ಯವಾಗುತ್ತೆ. ಸಾಮಾನ್ಯವಾಗಿ ಸಂಪ್ರದಾಯಸ್ಥ ಕುಟುಂಬಗಳಲ್ಲಿ ಬೆಳೆದ ಹುಡುಗಿಯರು ಹುಡುಗರಷ್ಟು ಓಪನ್ ಮೈಂಡೆಡ್ ಆಗಿರೋದಿಲ್ಲ. ಮದುವೆಗೆ ಮುಂಚೆ ಹೆಚ್ಚು ಮಾತಾಡೋದೂ ಅವರಿಗೆ ಅಪರಾಧದದ ಹಾಗೆ ಕಾಣುವ ಮನಸ್ಥಿತಿಯಲ್ಲಿ ಅವರು ಬೆಳೆದಿರಬಹುದು ಅಥವಾ ಅವರ ಮನೆಯ ಪರಿಸರ ಹಾಗಿದ್ದಿರಬಹುದು. ಒಬ್ಬೊಬ್ಬ ವ್ಯಕ್ತಿ ಅದು ಹೆಣ್ಣೇ ಆಗಿರಲಿ, ಗಂಡೇ ಆಗಿರಲಿ ಮನಸ್ಥಿತಿ ಭಿನ್ನವಾಗಿರುವ ಕಾರಣ ನಿಮ್ಮ ಹುಡುಗಿಯ ವರ್ತನೆಯ ಬಗ್ಗೆ ಇದೇ ಅಂತಿಮ ಅನ್ನೋ ತೀರ್ಮಾನಕ್ಕೆ ಬರಲಾಗದು. ಆದರೆ ಆಕೆ ಮನಸ್ಸು ಬಿಚ್ಚಿ ಮಾತನಾಡುವಂಥಾ ಕಂಫರ್ಟ್ ವಾತಾವರಣ ನೀವು ಸೃಷ್ಟಿಸಬಹುದು. ಅವಳು ಸ್ವಲ್ಪ ಓಪನ್ ಅಪ್ ಆದಕೂಡಲೇ ಹೆಚ್ಚು ಕ್ಲೋಸ್ ಆಗಿ ಬಿಹೇವ್ ಮಾಡಿದಾಗ ಅವರಿಗೆ ನಿಮ್ಮ ಉದ್ದೇಶ ಬೇರೆ ಥರ ಕಾಣುವ ಅಪಾಯವಿದೆ. ನೀವು ದೈಹಿಕ ಬಯಕೆಯನ್ನಿಟ್ಟು ಹೀಗೆ ಮಾಡುತ್ತಿರಬಹುದು ಅನ್ನುವ ಭಯ ಇರಬಹುದು. ಸಾಂಪ್ರದಾಯಿಕವಾಗಿ ಬೆಳೆದ ತುಸು ಹೆಚ್ಚೇ ಭಾವುಕವಾಗಿರುವ ಹೆಣ್ಮಕ್ಕಳು ಗಂಡಸರಷ್ಟು ಬೇಗ ದೈಹಿಕ ಕ್ಲೋಸ್ ನೆಸ್ ಅನ್ನು ಎಕ್ಸೆಪ್ಟ್ ಮಾಡಿಕೊಳ್ಳೋದಿಲ್ಲ. ಕೊಂಚ ತಾಳ್ಮೆ ಇರಲಿ. ಆಕೆಯ ಜೊತೆಗೆ ಸ್ನೇಹಿತನಂತೆ ವ್ಯವಹರಿಸಿ. ಆಗ ಆಕೆ ಹೆಚ್ಚು ಆಪ್ತವಾಗುತ್ತಾ ಹೋಗಬಹುದು. ಅವಳ ಮನಸ್ಥಿತಿ ಅರಿಯಲು ಪ್ರಯತ್ನಿಸಿ. ಆಗ ಈ ಕಹಿ ಕಡಿಮೆಯಾಗುತ್ತದೆ. 

#Feelfree: ಮದುವೆಯಾಗಿ ವರ್ಷವಾದರೂ ಆಕೆ ಬೆತ್ತಲಾಗಿಲ್ಲ ...

ಪ್ರಶ್ನೆ
ನನ್ನ ತಂದೆಗೆ ವಯಸ್ಸು ಅರವತ್ತು. ಈಗೀಗ ಅವರು ಪ್ರಾಯದ ಹುಡುಗಿಯರ ಕಡೆ ಹೆಚ್ಚೆಚ್ಚು ನೋಡೋದು, ಮೈಮೇಲೆ ಬಿದ್ದು ಮಾತಾಡೋದು ನನ್ನ ಗಮನಕ್ಕೆ ಬರುತ್ತಿದೆ. ಈ ವಯಸ್ಸಲ್ಲಿ ಅಪ್ಪ ಯಾಕೆ ಹೀಗಾಡ್ತಾರೆ ಅಂತಲೇ ಗೊತ್ತಾಗ್ತಿಲ್ಲ. ಅಮ್ಮಂಗೆ ಇದೆಲ್ಲ ಗೊತ್ತಾಗಲ್ವೋ ಅಥವಾ ನೋಡಿಯೂ ಸುಮ್ಮನುಳಿದಿದ್ದಾರೋ ಗೊತ್ತಿಲ್ಲ. ನನಗಂತೂ ಅಪ್ಪನ ಈ ಬಿಹೇವಿಯರ್ ಕಂಡರೆ ಒಂಥರಾ ಅನಿಸುತ್ತದೆ. ನಾನು ಒಬ್ಬ ಹುಡುಗಿಯ ಜೊತೆಗೆ ರಿಲೇಶನ್ ಶಿಪ್ ನಲ್ಲಿದ್ದೇನೆ. ಆಕೆ ನಮ್ಮನೆಯಲ್ಲಿ ಎಲ್ಲರಿಗೂ ಪರಿಚಿತಳೇ. ಅಪ್ಪ ಅವಳ ಜೊತೆಗೂ ಹೆಚ್ಚು ಕ್ಲೋಸ್ ಆಗಿ ಮಾತನಾಡುವ ಹಾಗೆ ಕಾಣುತ್ತದೆ. ಅವಳಿದನ್ನು ಕೇರ್ ಮಾಡಿದಂತೆ ಕಾಣೋದಿಲ್ಲ. ಆದರೆ ನನಗೆ ಟೆನ್ಶನ್ ಆಗುತ್ತೆ.

#Feelfree: ಮಗಳು ನನ್ನ ಹತ್ರಾನೇ ಬರೋಲ್ಲ, ಏನು ಮಾಡಲಿ? ...

ಉತ್ತರ
ನಿಮ್ಮ ತಂದೆಯ ಬಿಹೇವಿಯರ್ ನಿಜಕ್ಕೂ ಹಾಗೇ ಇದೆಯಾ ಅಥವಾ ನೀವು ಹಾಗೆ ಅಂದುಕೊಳ್ಳುತ್ತಿದ್ದೀರಾ ಅನ್ನೋದನ್ನು ಮೊದಲು ನಿಮಗೆ ನೀವೇ ಮನವರಿಕೆ ಮಾಡಿಕೊಳ್ಳಿ. ಮೆನೊಪಾಸ್ ನಂತರ ಕೆಲವು ಹೆಣ್ಮಕ್ಕಳು ದೈಹಿಕ ಸಂಪರ್ಕಕ್ಕೆ ನಿರಾಕರಿಸುತ್ತಾರೆ. ನಿಮ್ಮ ಅಪ್ಪನ ವಿಚಾರದಲ್ಲಿ ಇಂಥದ್ದೇನಾದರೂ ಸಮಸ್ಯೆ ಆಗಿರಬಹುದಾ ಅಂತ ಗಮನಿಸಿ. ಇನ್ನೂ ಅನುಮಾನಗಳಿದ್ದರೆ ಆಪ್ತ ಸಲಹೆಗಾರರನ್ನು ಸಂಪರ್ಕಿಸಿ. ಇದು ನಿಮಗೂ ಒಳ್ಳೆಯದು. ಅವರಿಗೂ ಒಳ್ಳೆಯದು. 

#Feelfree: ದಣಿದ ಬಂದ ದಂಪತಿಗೆ ಸೆಕ್ಸ್‌ನಲ್ಲಿ ಎಲ್ಲಿರುತ್ತೆ ಆಸಕ್ತಿ? ...