ವಾತ್ಸಾಯನ ಕಾಮಸೂತ್ರದ ಪ್ರಕಾರ, ಪುರುಷರು ತಮ್ಮ ಸಂಗಾತಿಯಿಂದ ಹಾಸಿಗೆಯಲ್ಲಿ ಹೆಚ್ಚಿನ ಉತ್ಸಾಹ ಮತ್ತು ಸಕ್ರಿಯ ಭಾಗವಹಿಸುವಿಕೆಯನ್ನು ಬಯಸುತ್ತಾರೆ. ಪ್ರಚೋದನೆ, ಪೋಲಿ ಮಾತುಗಳು, ಹೊಸ ಚಲನೆಗಳು, ಮತ್ತು ಮುನ್ನಲಿವುಗಳಂತಹ ಕ್ರಿಯೆಗಳು ಪುರುಷರನ್ನು ಹೆಚ್ಚು ಖುಷಿಪಡಿಸುತ್ತವೆ.
ವಾತ್ಸಾಯನ ಕಾಮಸೂತ್ರದ ಪ್ರಕಾರ, ಕಾಮಕ್ರೀಡೆಯ ಬಗ್ಗೆ ಅರಿವು ಹೊಂದಿರುವ ಹೆಚ್ಚಿನ ಗಂಡಸರು ತಮ್ಮ ಸಂಗಾತಿಯನ್ನು ಹಾಸಿಗೆಯಲ್ಲಿ ಖುಷಿಪಡಿಸಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಕೆಲವೊಮ್ಮೆ ತಮ್ಮ ಸಂಗಾತಿ ಕೂಡ ತಮಗೆ ಹೆಚ್ಚಿನ ಸುಖ ಸಿಗುವಂತೆ ಕೆಲವು ಕ್ರಿಯೆಗಳನ್ನು ನಡೆಸಲಿ ಎಂದು ಅಪೇಕ್ಷೆಪಡುತ್ತಾರೆ. ತುಂಬಾ ಗಂಡಸರಿಗೆ ಇದರ ಕೊರತೆಯಿರುತ್ತದೆ. ಯಾಕೆಂದರೆ ಸ್ತ್ರೀಯರು ತಾವಾಗಿಯೇ ರತಿಕ್ರೀಡೆಯಲ್ಲಿ ಮುಂದುವರಿದು ಹೋಗುವುದಿಲ್ಲ. ಮಂಚದಲ್ಲಿ ವಿಶೇಷ ಸಂಗತಿಗಳನ್ನು ಕೈಗೊಂಡರೆ ಪುರುಷರು ತಮ್ಮ ಬಗ್ಗೆ ಕ್ಷುಲ್ಲಕವಾಗಿ ಯೋಚಿಸಬಹುದೇನೋ ಎಂಬ ಆತಂಕ ಅವರದಾಗಿರುತ್ತದೆ. ಹಾಗೇನೂ ಇಲ್ಲ. ತನ್ನ ಹುಡುಗಿ ಕಾಮಕಲೆಯಲ್ಲಿ ಪಳಗಿದ್ದರೆ ಪುರುಷನಿಗೆ ಅತ್ಯಂತ ಸಂತೋಷವಾಗುತ್ತದೆ. ಅಂತ ಕೆಲವು ವಿಷಯಗಳು ಇಲ್ಲಿವೆ.
1) ನೀವೇ ಮುಂದಾಗಿ ಶುರು ಮಾಡಿ
ಹುಡುಗಿ ಕಾಮಕ್ರೀಡೆಯ ಮೊದಲ ನಡೆಯನ್ನು ಇಟ್ಟರೆ ಪುರುಷರು ಹೆಚ್ಚು ಸಂತೋಷಪಡುತ್ತಾರೆ. ಇದರಿಂದ ಅವರಲ್ಲಿ ಆತ್ಮವಿಶ್ವಾಸವೂ ಮೂಡುತ್ತದೆ. ಮೊದಲಾಗಿ ಆತನನ್ನು ಪ್ರಚೋದಿಸಿ, ಕೆಣಕಿ. ಆತನನ್ನು ಉದ್ರೇಕಗೊಳಿಸಲು ಕೆಲವು ಸಂಚುಗಳನ್ನು ಹೂಡಿ. ಆತ ಮಂಚಕ್ಕೆ ಬರುವ ಮುನ್ನ ಕೆಣಕುವ ಬಿಗಿಯಾದ ಬಟ್ಟೆಯೊಂದಿಗೆ ಸಜ್ಜಾಗಿ ಅಥವಾ ಆತನನ್ನು ಉದ್ರೇಕಗೊಳಿಸುವ ಏನಾದರೂ ಮಾಡಿ. ಇದನ್ನು ಗಂಡಸರು ತುಂಬ ಇಷ್ಟಪಡುತ್ತಾರೆ.
2) ಪೋಲಿ ಮಾತನಾಡಿ!
ಗಂಡಸರು ಪೋಲಿ ಮಾತಾಡುವುದು ಸಹಜ. ಮಹಿಳೆಯರು ಹಾಗೆ ಮಾತಾಡಬಾರದು ಎಂದು ತಿಳಿಯಲಾಗುತ್ತದೆ. ಇದು ಸುಳ್ಳು. ಕಾಮಕ್ರೀಡೆಯ ಸದರ್ಭದಲ್ಲಿ ನೀವು ಸಂದರ್ಭಕ್ಕೆ ಇನ್ನಷ್ಟು ಕಾವೇರಿಸುವಂಥ ಕೆಲವು 'ಡರ್ಟಿ' ಮಾತುಗಳನ್ನು ಖಂಡಿತ ಆಡಬಹುದು. ಆತ ಅದನ್ನು ಖಂಡಿತ ಇಷ್ಟಪಡುತ್ತಾನೆ. ಪ್ರಚೋದನಕಾರಿಯಾದ, ಪೋಲಿಯಾದ ವಿಷಯವನ್ನು ಮಧ್ಯೆ ಆಡಿ ನೋಡಿ, ನಿಮ್ಮ ಪುರುಷ ಹೇಗೆ ಉದ್ರೇಕಿತನಾಗುತ್ತಾನೆ ಎಂಬುದನ್ನು ನೀವೇ ಕಾಣುವಿರಿ.
3) ನೀವೇ ಕಂಟ್ರೋಲ್ ಮಾಡಿ
ಹೌದು, ಪುರುಷ ಹಾಸಿಗೆಯಲ್ಲಿ ಹಿಡಿತ ಸಾಧಿಸಲು ಇಷ್ಟಪಡುತ್ತಾನೆ ಆದರೆ ನೀವು ಮುಂದಾಳತ್ವ ವಹಿಸಿದರೆ ಏನಾಗುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ಅದು ನಿಮ್ಮ ಗಂಡನನ್ನು ಹೆಚ್ಚು ಸಂತೋಷಪಡಿಸುತ್ತದೆ. ಹಾಸಿಗೆಯ ಮೇಲೆ ಪ್ರಾಬಲ್ಯ ಸಾಧಿಸುವ ಮತ್ತು ಪ್ರತಿ ಲೈಂಗಿಕ ಚಲನೆಯನ್ನು ಪ್ರಾರಂಭಿಸುವ ಮಹಿಳೆಗಿಂತ ಹಾಟ್ ಹಾಟ್ ಬೇರೇನೂ ಇಲ್ಲ. ಜಸ್ಟ್ ನೀವೇ ಆತನನ್ನು ಹಾಸಿಗೆಗೆ ತಳ್ಳಿ, ಅವನ ಮೇಲೇರಿ, ಅವನ ತೋಳುಗಳನ್ನು ಕಟ್ಟಿಹಾಕಿ- ಏನು ಬೇಕಾದರೂ ಮಾಡಿ.
4) ಚಕಿತಗೊಳಿಸಿ
ಲೈಂಗಿಕತೆಯ ವಿಷಯಕ್ಕೆ ಬಂದಾಗ ಪುರುಷರೂ ನಿಮ್ಮಂತೆಯೇ ಆಶ್ಚರ್ಯಚಕಿತಗೊಳಿಸುವ ಅಂಶಗಳನ್ನು ಪ್ರೀತಿಸುತ್ತಾರೆ. ಮುಂಜಾನೆಯೇ ಅವನ ದೇಹದ ಮರ್ಮಗಳಲ್ಲಿ ಮೇಲೆ ನಿಮ್ಮ ತುಟಿ ಚಲನೆ ಅಥವಾ ಕೈಯ ಚಲನೆಯಿಂದ ಆಶ್ಚರ್ಯಗೊಳಿಸಬಹುದು ಅಥವಾ ಅನಿರೀಕ್ಷಿತವಾಗಿ ಅವನನ್ನು ಆಕ್ರಮಿಸಬಹುದು. ಹೊಸ ಲೈಂಗಿಕ ಪ್ರಚೋದಕಗಳನ್ನು, ಆಟಿಕೆಗಳನ್ನು ಬಳಸಬಹುದು. ಮಾದಕ ಒಳಉಡುಪುಗಳನ್ನು ಬಳಸಬಹುದು. ಆಗಾಗ್ಗೆ ಗಂಡಸನ್ನು ಆಶ್ಚರ್ಯಗೊಳಿಸಿದರೆ ಅವನು ಎಂದಿಗಿಂತಲೂ ಹೆಚ್ಚಾಗಿ ನಿಮಗಾಗಿ ಹೇಗೆ ಹಂಬಲಿಸಲು ಪ್ರಾರಂಭಿಸುತ್ತಾನೆ ಎಂಬುದನ್ನು ನೋಡಿ.
5) ಪ್ರೋತ್ಸಾಹಿಸಿ
ಪುರುಷರು ಮಂಚದಲ್ಲಿ ಮಾಡುವ ಹೊಸ ಸಾಹಸಗಳನ್ನು ಪ್ರೋತ್ಸಾಹಿಸುವುದು ತುಂಬಾ ಮುಖ್ಯ. ಮದುವೆಯಾದ ಹೊಸದರಲ್ಲಿ ಹಾಗೂ ಮಧ್ಯವಯಸ್ಸಿನ ನಂತರ, ಹೊಸ ಲೈಂಗಿಕ ಸಾಹಸಗಳನ್ನು ಮಾಡಲು ಗಂಡಸು ಮುಂದಾಗುತ್ತಾನೆ. ಆಗ ಆತನಿಗೆ ಸೂಕ್ತ ಪ್ರೋತ್ಸಾಹ ಸಿಗದೇ ಹೋದರೆ ನಿರುತ್ಸಾಹಿಯಾಗುತ್ತಾನೆ. ಪುರುಷ ಮಾಡುವ ಪ್ರತಿಯೊಂದು ಹೊಸ ಲೈಂಗಿಕ ಚಲನೆಗೆ ಮಹಿಳೆ ಪೂರಕವಾಗಿ, ಪ್ರೀತಿಯಿಂದ ಸ್ಪಂದಿಸಿದರೆ ಅದು ಮತ್ತೊಂದು ಮಧುಚಂದ್ರವೇ ಆಗುತ್ತದೆ.
ಪಿರಿಯಡ್ಸ್ ಸಮಯದಲ್ಲಿ ಗಂಡ ಹೆಂಡತಿಗೆ ಹೀಗೆ ಮಾಡಬೇಕಂತೆ ಗೊತ್ತಾ?
6) ಪುರುಷರು ಮುನ್ನಲಿವನ್ನು ಪ್ರೀತಿಸುತ್ತಾರೆ
ಫೋರ್‌ಪ್ಲೇ ಅಥವಾ ಮುನ್ನಲಿವನ್ನು ಇಷ್ಟಪಡದ ಪುರುಷರಿಲ್ಲ. ಪ್ರತಿಯೊಬ್ಬ ಗಂಡಸೂ ನೇರವಾಗಿ ನುಗ್ಗುವಿಕೆಯನ್ನು ಅಪೇಕ್ಷಿಸುವುದಿಲ್ಲ. ಪುರುಷರೂ ಮಹಿಳೆಯರಂತೆ ಮುನ್ನಲಿವನ್ನು ಬಯಸುತ್ತಾರೆ. ಪುರುಷರು ನಿಧಾನ ಮತ್ತು ಮಾದಕ ಮೂವ್‌ಮೆಂಟ್‌ಗಳನ್ನು ಪ್ರೀತಿಸುತ್ತಾರೆ. ಮುಂದಿನ ಬಾರಿ ಅವನಿಗೆ ಸಾಕಷ್ಟು ಫೋರ್‌ಪ್ಲೇ ನೀಡಿ.
7) ಪುರುಷರು ಆಗ ನಿಮ್ಮನ್ನು ವೀಕ್ಷಿಸಲು ಇಷ್ಟಪಡುತ್ತಾರೆ
ನಿಮ್ಮ ಗಂಡಸಿಗೆ ನೀವು ಉದ್ರೇಕಗೊಳ್ಳುವ, ಮಿಲನವನ್ನು ಆನಂದಿಸುವ ದೃಶ್ಯವನ್ನು ನೋಡುವ ಕುತೂಹಲ ತುಂಬಾ ಇರುತ್ತದೆ. ಪುರುಷರು ನಿಜವಾಗಿಯೂ ದೃಶ್ಯ ಪ್ರಚೋದನೆಯನ್ನು ಪ್ರೀತಿಸುತ್ತಾರೆ ಮತ್ತು ಅದನ್ನು ಪಡೆದಾಗಲೆಲ್ಲಾ ಹೆಚ್ಚು ತೃಪ್ತರಾಗುತ್ತಾರೆ. ಕೌಗರ್ಲ್ ಪೊಸಿಷನ್ ಅಥವಾ ಮಿಷನರಿ ಪೊಸಿಷನ್ ಕೂಡ ಪುರುಷರನ್ನು ಕೆರಳಿಸುತ್ತದೆ.
ನಿಮ್ಮ ಸಂಗಾತಿ ಸೋನಮ್ ರಘುವಂಶಿಯಂತೆ ಮೋಸ ಮಾಡುತ್ತಿದ್ದಾರಾ? ಈ ರೀತಿಯ ತಪ್ಪುಗಳನ್ನು ಗುರುತಿಸಿ
