ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತೆಂಟು. ಗಂಡನ ವಯಸ್ಸು ಮೂವತ್ತು. ಮದುವೆಯಾಗಿ ಒಂದು ವರ್ಷವಾಗಿದೆ. ನಾನು ಸಾಕಷ್ಟು ಸುಂದರಿ ಎಂದು ನನ್ನ ಗಂಡ, ಕುಟುಂಬದವರು, ಗೆಳತಿಯರೆಲ್ಲ ಒಪ್ಪಿಕೊಳ್ಳುತ್ತಾರೆ. ಗಂಡನೂ ಒಳ್ಳಡಯವರು, ದೃಢಕಾಯ. ಮದುವೆಯಾದ ಆರು ತಿಂಗಳು ನಮ್ಮ‌ಸೆಕ್ಸ್ ಲೈಫ್ ಚೆನ್ನಾಗಿತ್ತು. ನಂತರ ಸಂಭೋಗದಲ್ಲಿ ನನಗೆ ಸರಿಯಾಗಿ ಸುಖ ಸಿಗಲಿಲ್ಲ. ಪತಿಯ ಶಿಶ್ನ ಸರಿಯಾಗಿ ನಿಮಿರುತ್ತಲೇ ಇಲ್ಲ. ನಾನು ಸಾಕಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗುತ್ತಿಲ್ಲ. ಇದರಿಂದ ನೊಂದ ಅವರು ನನ್ನೊಡನೆ ಸೆಕ್ಸ್‌ನಲ್ಲಿ ಭಾಗವಹಿಸಲೇ ಹಿಂಜರಿಯುತ್ತಿದ್ದಾರೆ. ಕೇಳಿದರೆ, ಇವತ್ತು ಮನಸ್ಸಿಲ್ಲ, ಮೂಡ್ ಇಲ್ಲ ಎನ್ನುತ್ತಾರೆ. ಮನಸ್ಸಿಗೂ ಶಿಶ್ನ ನಿಗುರುವುದಕ್ಕೂ ಏನು‌ ಸಂಬಂಧ? ಗಂಡಸರಿಗೆ ಪೂರ್ತಿ ಮನಸ್ಸು ಇಲ್ಲದಿದ್ದರೂ ಸಂಭೋಗಿಸುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಕೇಳಿದ್ದೇನೆ. ಇದು ನಿಜವಲ್ಲವೇ?

ಉತ್ತರ: ನಿಮ್ಮ ಅನುಮಾನ ಸ್ವಾರಸ್ಯಕರವಾಗಿದೆ. ಸೆಕ್ಸ್‌ನಲ್ಲಿ ತೊಡಗುವುದು ನಮ್ಮ ದೇಹಗಳೇ, ಅನುಮಾನವಿಲ್ಲ. ಅದಕ್ಕೆ ಪೂರಕವಾದ ಆರೋಗ್ಯವೂ ಇರಬೇಕು. ಆದರೆ ಮನಸ್ಸು ಸರಿಯಾಗಿ ಇಲ್ಲವಾದರೆ ಸಂಭೋಗದಲ್ಲಿ ಪೂರ್ಣ ಆಸಕ್ತಿಯಿಂದ ತೊಡಗಿಕೊಳ್ಳುವುದು ಸಾಧ್ಯವಿಲ್ಲ. ಇದು ನಿಮ್ಮ‌ ಅನುಭವಕ್ಕೂ ಬಂದಿರಬಹುದು. ನಿಮ್ಮ‌ಗಂಡನಿಗೆ ಪೂರ್ತಿ ಉದ್ರೇಕವಿದ್ದು, ನಿಮಗೆ ಇಲ್ಲದೆ ಹೋದ ಸಂದರ್ಭದಲ್ಲಿ ಸಂಭೋಗಿಸಿದರೆ ಅದು ನಿಮ್ಮ‌ ಪಾಲಿಗೆ ನೋವಿನ‌ ಅನುಭವವೇ ಆದೀತು.

#Feelfree: ನನ್ನ ಗಂಡನಿಗೆ ಯೋನಿ ಕಂಡರೆ ಭಯ, ಇದ್ಯಾಕೆ? ...

ಹಾಗೇ ಇದರ ಉಲ್ಟಾ ಕೂಡ ನಿಜ. ಪುರುಷರಿಗೂ ಕಾಮಕ್ರಿಯೆಯಲ್ಲಿ ಮನಸ್ಸು ಮಹತ್ವದ ಪಾತ್ರ ವಹಿಸುತ್ತದೆ. ಮನ ಉದ್ರೇಕಗೊಳ್ಳದೆ ಶಿಶ್ನ‌ ನಿಮಿರದು. ನಿಮ್ಮ ಪತಿ ಮದುವೆಯಾದ ಹೊಸದರಲ್ಲಿ‌ಪೂರ್ತಿ ಮನಸ್ಸಿಟ್ಟು ಕ್ರೀಡೆಯಲ್ಲಿ ತೊಡಗಿಕೊಳ್ಳುತ್ತಿದ್ದರು ಎಂದಿದ್ದೀರಿ. ಹಾಗಿದ್ದರೆ ಈಗ ಯಾಕೆ ಅವರಿಗೆ ಮನಸ್ಸು ಅರಳುತ್ತಿಲ್ಲ ಹಾಗೂ ಸೆಕ್ಸ್‌ನಲ್ಲಿ ಯಾಕೆ ಪಾಲ್ಗೊಳ್ಳೋಕೆ ಆಗ್ತಿಲ್ಲ ಅಂತ ನೋಡಬೇಕು.

#Feelfree: ಸೆಕ್ಸ್‌ಗೆ ಮೊದಲು ಅಲ್ಲಿಗೆ ಸ್ಯಾನಿಟೈಸರ್ ಹಚ್ಕೋ ಅಂತಾಳೆ.! 

ಪುರುಷರೇ ಆಗಲಿ, ಸ್ತ್ರೀಯರೇ ಆಗಲಿ, ಅವರ ಕಾಮ ಪ್ರಚೋದಕಗಳಿರುವುದು ಮೆದುಳಿನಲ್ಲೇ. ಅಂದರೆ ಕಾಮಕ್ರಿಯೆಯಲ್ಲಿ ತೊಡಗಿಕೊಳ್ಳುವ ಮುನ್ನ, ಮನಸ್ಸು ಅದರಲ್ಲಿ ಭಾಗಿಯಾಗಲೇಬೇಕು. ಸಂಗಾತಿಯ ನಗ್ನ ದೇಹವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಬೇಕು. ಅಥವಾ ಕಾಮವನ್ನು ಪ್ರಚೋದಿಸುವ ದೃಶ್ಯ ನೋಡಿರಬಹುದು, ಪ್ರಚೋದಿಸುವ ಆಡಿಯೋ ಕೇಳಿರಬಹುದು. ಸಂಗಾತಿಯ ಮಾತುಗಳು ಕಾಮೋತ್ತೇಜಕ ಆಗಿರಬಹುದು. ಇದೆಲ್ಲವೂ ಕಾಮಕ್ರೀಡೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದಲೇ ಸಂಭೋಗದಲ್ಲಿ ದೇಹದ ಪಾತ್ರ ಎಷ್ಟೋ, ಪ್ರಜ್ಞೆ ಅಥವಾ  ಮೆದುಳು ಅಥವಾ ಮನಸ್ಸಿನ‌ ಪಾತ್ರವೂ ಅಷ್ಟೇ ಇದೆ.ಮನಸ್ಸು ಕಾಮಕ್ರೀಡೆಯ ಪ್ರಚೋದಕಗಳನ್ನು ಸ್ವೀಕರಿಸಿದಾಗ,  ದೇಹದಲ್ಲಿ ಆನಂದೋತ್ತೇಜಕಗಳಾದ ಡೋಪಮೈನ್ ಹಾರ್ಮೋನ್‌ಗಳು ಸ್ರವಿಸಲು ಆರಂಭಿಸುತ್ತವೆ. ಪುರುಷರಿಗೆ ಶಿಶ್ನದ ಪ್ರದೇಶಕ್ಕೆ ರಕ್ತ ಸರಬರಾಜು ದ್ವಿಗುಣಗೊಳ್ಳುತ್ತದೆ. ಶಿಶ್ನ ಉಬ್ಬಿಕೊಂಡು ನೆಟ್ಟಗಾಗುತ್ತದೆ.

#Feelfree: ಪೀರಿಯೆಡ್ಸ್ ಟೈಮ್‌ನಲ್ಲಿ ಸೆಕ್ಸ್ ಬಗ್ಗೆ ಒಂದಿಷ್ಟು ಮಾಹಿತಿ 

ಕೆಲವರಲ್ಲಿ ಸಾಕಷ್ಟು ರಕ್ತ ಪೂರೈಕೆಯಾಗದೆ ಇರುವುದರಿಂದ ಶಿಶ್ನ ನಿಮಿರದೆ ಇರಬಹುದು. ಇದಕ್ಕೆ ಮಧುಮೇಹ, ಹೃದಯದ ಸಮಸ್ಯೆ, ಮರೆವಿನ ಕಾಯಿಲೆಗಳಾದ ಅಲ್ಝೀಮರ್ ಮುಂತಾದವು ಕಾರಣಗಳಾಗಿರಬಹುದು. ಆದರೆ ನಿಮ್ಮ ಪತಿ ಇನ್ನೂ ಯಂಗ್ ಆಂಡ್ ಎನರ್ಜಿಟಿಕ್ ಆಗಿರುವುದರಿಂದ ಇದಾವುದೂ ಕಾರಣ ಆಗಿರಲಾರದು. ಬೇರೆ ಚಿಂತೆಗಳು ಯಾವುದಾದರೂ ನಿಮ್ಮ ಗಂಡನನ್ನು ಕಾಡುತ್ತಿವೆಯೇ ಎಂದು ಪರಿಶೀಲಿಸಿ ಖಚಿತಪಡಿಸಿಕೊಳ್ಳಿ.  ಕಚೇರಿ ಒತ್ತಡದಿಂದಾಗಿ ಹೀಗಾಗಿರಬಹುದು, ಖಿನ್ನತೆಯೂ ಕಾಡುತ್ತಿರಬಹುದು. ಅದರಿಂದಲೂ ಹಾಗಾಗಲು ಸಾಧ್ಯವಿದೆ. ಶೃಂಗಾರದ ಮಾತುಕತೆ, ದೃಶ್ಯಗಳ ಮೂಲಕ ಗಂಡನನ್ನು ಪ್ರಚೋದಿಸಿ. ಪೋರ್ನ್ ಕೂಡ ತೋರಿಸಬಹುದು. ಇದ್ಯಾವುದೂ ವರ್ಕೌಟ್ ಆಗಲಿಲ್ಲ ಅಂದರೆ ಲೈಂಗಿಕ ತಜ್ಞರಲ್ಲಿಗೆ ಭೇಟಿ ಕೊಡಿ.