Asianet Suvarna News Asianet Suvarna News

Romance Scam : ಪ್ರೀತಿ ಹೆಸರಿನಲ್ಲಿ ಲಕ್ಷಾಂತರ ಲೂಟಿ! ಎಚ್ಚರ ತಪ್ಪಿದ್ರೆ ಕಥೆ ಮುಗಿದಂತೆ

ಪ್ರೀತಿ ಹೆಸರಿನಲ್ಲಿ ಸಾಕಷ್ಟು ಮೋಸಗಳು ನಡೆಯುತ್ವೆ. ಅದ್ರಲ್ಲಿ ಹಣ ಲೂಟಿ ಕೂಡ ಸೇರಿದೆ. ಆನ್ಲೈನ್ ಅಪ್ಲಿಕೇಷನ್ ಗಳ ಹಾವಳಿ ಹೆಚ್ಚಾದ ನಂತ್ರ ಮೋಸಗಾರರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಪ್ರೀತಿ ಗುಂಗಿನಲ್ಲಿ ಹಣ ಕಳೆದುಕೊಳ್ಳುವ ಮುನ್ನ ಇದನ್ನೋದಿ.
 

What Is Romance Scam roo
Author
First Published Jun 30, 2023, 11:45 AM IST

ಪ್ರೀತಿ, ಪ್ರೇಮ ಎನ್ನುವುದು ಮಧುರವಾದದ್ದು. ಪ್ರೀತಿಯಲ್ಲಿ ಬಿದ್ದವರು ಜಗತ್ತು ಮರೆಯುತ್ತಾರೆ ಎನ್ನುವ ಮಾತಿದೆ. ಇಬ್ಬರ ಮಧ್ಯೆ ಪ್ರೀತಿ ಚಿಗುರೊಡೆದು ಮರವಾದಾಗ ಪ್ರಪಂಚ ಸುಂದರವಾಗಿ ಕಾಣುತ್ತದೆ. ಅದೇ ಇಬ್ಬರ ನಡುವಿದ್ದ ಪ್ರೀತಿ ಮುರಿದು ಬಿದ್ದಾಗ ಜಗತ್ತಿನ ಮೇಲೆ ಕೋಪ, ದ್ವೇಷ, ದುಃಖವುಂಟಾಗುತ್ತದೆ. ಪ್ರೀತಿಸಿದ ವ್ಯಕ್ತಿ ಜೊತೆ ಬ್ಯಾಂಕ್ ಬ್ಯಾಲೆನ್ಸ್ ಕೂಡ ಖಾಲಿಯಾದಾಗ ವ್ಯಕ್ತಿ ಕುಗ್ಗಿಹೋಗ್ತಾನೆ. ಬರಿಗೈನಲ್ಲಿ ಬೀದಿ ಸುತ್ತುವ ಸ್ಥಿತಿ ನಿರ್ಮಾಣವಾಗುತ್ತದೆ. ಮೋಸ ಮಾಡಿದ ವ್ಯಕ್ತಿಗೆ ಎಷ್ಟೇ ಹಿಡಿಶಾಪ ಹಾಕಿದ್ರೂ ಕಳೆದುಕೊಂಡ ಹಣ ಮರಳಿ ಸಿಗೋದಿಲ್ಲ. ಈಗಿನ ದಿನಗಳಲ್ಲಿ ಆನ್ಲೈನ್ ಡೇಟಿಂಗ್ ಹೆಚ್ಚಾಗಿರುವ ಕಾರಣ ಮೋಸ ಮಾಡುವ, ಮೋಸ ಹೋಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ.

ಬ್ಯಾಂಕ್ (Bank) ಬ್ಯಾಲೆನ್ಸ್ ಖಾಲಿಯಾಗದಂತೆ ಹೇಗೆ ಡೇಟಿಂಗ್ ಮಾಡ್ಬೇಕು ಎನ್ನುವ ಟಿಪ್ಸ್ ನೀಡುವ ಮುನ್ನ, ಟಿಂಡರ್ ಬಳಕೆದಾರಳೊಬ್ಬಳು ಹೇಗೆ ಮೋಸ (Cheating) ಹೋಗಿದ್ದಾಳೆ ಅನ್ನೋದನ್ನು ತಿಳಿದುಕೊಳ್ಳಿ.  

ಪ್ರೀತಿ (Love) ಹೆಸರಿನಲ್ಲಿ ಹಣ ಕಳೆದುಕೊಂದ ಮೂರು ಮಕ್ಕಳ ತಾಯಿ : 42 ವರ್ಷದ ಮಹಿಳೆ, ಮೂರು ಮಕ್ಕಳ ತಾಯಿ, ಆನ್ಲೈನ್ ಡೇಟಿಂಗ್ ನಲ್ಲಿ ತನ್ನ ಜೀವಮಾನದ ಸಂಪಾದನೆಯನ್ನು ಕಳೆದುಕೊಂಡಿದ್ದಾಳೆ. ಆಕೆ ಪ್ರೇಮಿಗಾಗಿ ಬರೋಬ್ಬರಿ 80 ಲಕ್ಷ ರೂಪಾಯಿ ಖರ್ಚು ಮಾಡಿ ಈಗ ಕೈ ಕೈ ಹಿಸುಕಿಕೊಳ್ತಿದ್ದಾಳೆ. ಆಕೆ ಹೆಸರು ರೆಬೆಕಾ ಹಾಲೋವೇ. ಅವಳು ಡೇಟಿಂಗ್ ಅಪ್ಲಿಕೇಶನ್ ಮೂಲಕ ಫ್ರೆಡ್ ಎಂಬ ವ್ಯಕ್ತಿಯನ್ನು ಭೇಟಿಯಾದಳು. ಆನ್ಲೈನ್ ನಲ್ಲಿ ಚಾಟಿಂಗ್ ಮಾಡ್ತಿದ್ದವರು ನಂತ್ರ ಭೇಟಿಯಾಗಿದ್ದಾರೆ. ಆತನ ಮೇಲೆ ರೆಬೆಕಾಗೆ ನಂಬಿಕೆ ಬಂದಿದೆ. ಆ ನಂತ್ರ ಫ್ರೆಡ್ ಗಾಗಿ ಒಂದು ಯೋಜನೆಯಲ್ಲಿ 80 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾಳೆ. ಆರಂಭದಲ್ಲಿ ಚೆನ್ನಾಗಿದ್ದ ಫ್ರೆಡ್ ಬರ್ತಾ ಬರ್ತಾ ಫೋನ್ ರಿಸೀವ್ ಮಾಡೋದನ್ನು ಬಿಟ್ಟಿದ್ದಾನೆ. ಕೊನೆಯಲ್ಲಿ ರೆಬೆಕಾಗೆ ಸತ್ಯ ಗೊತ್ತಾಗಿದೆ. ಇದು ರೆಬೆಕಾ ಕಥೆ ಮಾತ್ರವಲ್ಲ. ಇನ್ನೂ ಅನೇಕರು ಹೀಗೆ ಮೋಸ ಹೋದವರಿದ್ದಾರೆ. ಇದನ್ನು ನಾವು ರೋಮ್ಯಾನ್ಸ್ ಸ್ಕ್ಯಾಮ್ ಅಂತಾ ಕರೆಯಬಹುದು.

ವೈಬ್ರೇಟರ್‌ ಬಳಕೆ ಓಕೆ, ಬಳಸೋ ಮುನ್ನ 7 ವೆರೈಟಿ ಬಗ್ಗೆ ತಿಳಿದುಕೊಳ್ಳದಿದ್ರೆ ಹೇಗೆ?

ರೋಮ್ಯಾನ್ಸ್ ಸ್ಕ್ಯಾಮ್ ಅಂದರೇನು? : ಆನ್ಲೈನ್ ಮೂಲಕ ಶುರುವಾಗುವ ರೋಮ್ಯಾನ್ಸ್ ಬ್ಯಾಂಕ್ ಬ್ಯಾಲೆನ್ಸ್ ವರೆಗೆ ಬಂದು ನಿಲ್ಲುತ್ತದೆ. ಅದನ್ನು ರೋಮ್ಯಾನ್ಸ್ ಸ್ಕ್ಯಾಮ್ ಎಂದು ಕರೆಯಬಹುದು. ಆನ್ಲೈನ್ ನಲ್ಲಿ ಹುಡುಗ ಅಥವಾ ಹುಡುಗಿಯ ಪರಿಚಯ ಬೆಳೆಸುವ ಜನರು ಪ್ರೀತಿ ಹೆಸರಿನಲ್ಲಿ ಅವರಿಗೆ ಮೋಸ ಮಾಡ್ತಾರೆ. ನಾನಾ ವಿಧಗಳಲ್ಲಿ ಅವರಿಂದ ಹಣ ಪಡೆಯುತ್ತಾರೆ. ಡೇಟಿಂಗ್ ಸೈಟ್ ಅಥವಾ ಡೇಟಿಂಗ್ ಅಪ್ಲಿಕೇಶನ್‌, ಸಾಮಾಜಿಕ ಜಾಲತಾಣದಲ್ಲಿ ಒಂಟಿಯಾಗಿರುವ ಜನರೇ ಇವರ ಟಾರ್ಗೆಟ್.

ರೋಮ್ಯಾನ್ಸ್ ಸ್ಕ್ಯಾಮ್ ನಿಂದ ತಪ್ಪಿಸಿಕೊಳ್ಳೋದು ಹೇಗೆ? : 

ಎ1 ವಿಡಿಯೋದಿಂದ ನಡೆಯುತ್ತೆ ಮೋಸ : ಈಗಿನ ದಿನಗಳಲ್ಲಿ ಎ1 ವಿಡಿಯೋಗಳ ಮೂಲಕ ಸ್ಕ್ಯಾಮರ್ ಆರಾಮವಾಗಿ ಹಣ ಮಾಡ್ತಿದ್ದಾರೆ. ಎ1 ವಿಡಿಯೋದಲ್ಲಿ ಒಂದು ನಂಬರ್ ನಿಂದ ನಿಮಗೆ ಕರೆ ಬರುತ್ತದೆ. ನಿಮ್ಮ ಆಪ್ತರ ವಿಡಿಯೋ ನಮ್ಮಲ್ಲಿದೆ ಎಂದು ಬೆದರಿಸಿ, ಹಣ ಹಾಕುವಂತೆ ಹೇಳ್ತಾರೆ. ಭಯಗೊಂಡ ಜನರು ಹಣ ವರ್ಗಾವಣೆ ಮಾಡ್ತಾರೆ. ಹೀಗೆ ಮಾಡುವ ಮೊದಲು, ಆಪ್ತರಿಗೆ ಕರೆ ಮಾಡಿ ಮಾಹಿತಿ ತಿಳಿಯಿರಿ. ಆಗ ಅದು ಸ್ಕ್ಯಾಮ್ ಹೌದೋ ಅಲ್ಲವೋ ಎಂಬುದು ನಿಮ್ಮ ಅರಿವಿಗೆ ಬರುತ್ತದೆ.

ಮಕ್ಕಳಿಗೆ ಬ್ರ್ಯಾಂಡೆಡ್​ ವಸ್ತುಗಳನ್ನು ಕೊಡಿಸೋ ಮುನ್ನ ಇದನ್ನೊಮ್ಮೆ ಓದಿ!

ಸರಿಯಾಗಿ ನೋಡಿ ಡೇಟಿಂಗ್ ಅಪ್ಲಿಕೇಷನ್ ಗೆ ಸೈನ್ ಇನ್ ಆಗಿ : ನೀವು ಮೂರನೇ ವ್ಯಕ್ತಿ ಅಪ್ಲಿಕೇಷನ್ ಮೂಲಕ ಯಾವುದೇ ಡೇಟಿಂಗ್ ಅಪ್ಲಿಕೇಷನ್ ಗೆ ಸೈನ್ ಇನ್ ಆಗ್ಬೇಡಿ. ಪ್ರಸಿದ್ಧವಾದ ಸೈಟ್ ನಲ್ಲಿ ಮಾತ್ರ ನಿಮ್ಮ ಖಾತೆ ತೆರೆಯಿರಿ. ಅಲ್ಲಿಯೂ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಎಲ್ಲ ವಿಷ್ಯಗಳ ಹಂಚಿಕೆ ಬೇಡ : ಡೇಟಿಂಗ್ ಅಪ್ಲಿಕೇಷನ್ ಇರಲಿ ಇಲ್ಲ ಬೇರೆ ಮಾಧ್ಯಮದ ಮೂಲಕ ವ್ಯಕ್ತಿಯ ಪರಿಚಯ ನಿಮಗಾಗಿರಲಿ, ಯಾವುದೇ ಕಾರಣಕ್ಕೂ ನೀವು ನಿಮ್ಮೆಲ್ಲ ಮಾಹಿತಿಯನ್ನು ಅವರಿಗೆ ನೀಡಬೇಡಿ. ನಿಮ್ಮ ಮನೆ ವಿಳಾಸ, ಇಮೇಲ್ ಐಡಿ, ಫೋನ್ ನಂಬರ್ ಯಾವುದನ್ನೇ ನೀಡುವಾಗ್ಲೂ ಸಮಯ ತೆಗೆದುಕೊಂಡು, ಅವರ ಬಗ್ಗೆ ಸರಿಯಾಗಿ ಮಾಹಿತಿ ಪಡೆದು ಮುಂದುವರೆಯಿರಿ.
 

Follow Us:
Download App:
  • android
  • ios