Asianet Suvarna News Asianet Suvarna News

ಮಕ್ಕಳಿಗೆ ಬ್ರ್ಯಾಂಡೆಡ್​ ವಸ್ತುಗಳನ್ನು ಕೊಡಿಸೋ ಮುನ್ನ ಇದನ್ನೊಮ್ಮೆ ಓದಿ!

ಅನೇಕ ಪಾಲಕರು ತಮ್ಮ ಮಕ್ಕಳಿಗೆ ಬ್ರ್ಯಾಂಡೆಡ್​ ವಸ್ತುಗಳನ್ನು ಕೊಳ್ಳಲು ಹಾತೊರೆಯುತ್ತಾರೆ. ಆದರೆ ನಿಜವಾಗಿಯೂ ಪಾಲಕರು ಯೋಚಿಸಬೇಕಾದದ್ದೇನು?
 

Read this before buying branded items for kids suc
Author
First Published Jun 29, 2023, 5:05 PM IST

ಛೇ... ನನ್​ ಮಕ್ಕಳಿಗೆ ಫುಟ್​ಪಾಥ್​ (Foothpath) ಮೇಲೆ ಸಿಗೋ ವಸ್ತು ಕೊಡಿಸೋದಾ? ಇಲ್ವೇ ಇಲ್ಲ. ನಾನೇನು, ನನ್ನ ಸ್ಟ್ಯಾಂಡರ್ಡ್​ ಏನು ಎಂದು ಹಲವು ಪಾಲಕರು ಹೇಳಿದರೆ, ಇನ್ನು ಕೆಲವರು ನನ್ನ ಮಗನಿಗೆ ಲೋಕಲ್​ ಐಟಮ್ಸ್​ ಆಗಿನೇ ಬರಲ್ಲ  ಅಂತಾರೆ, ಇನ್ನು ಕೆಲ ಅಪ್ಪ-ಅಮ್ಮ ಅಂತೂ ಬ್ರ್ಯಾಂಡೆಡ್​ ವಸ್ತುಗಳಲ್ಲಿಯೇ ಅತ್ಯುತ್ತಮ ಬ್ರ್ಯಾಂಡ್​ ಎಂಬ ಹಣೆಪಟ್ಟಿ ಇರೋ ವಸ್ತುಗಳನ್ನು ಖರೀದಿಸಿ ಕೊಡ್ತಾರೆ. ಹಲವರಿಗೆ ಇದು ಪ್ರೆಸ್ಟೀಜ್​ ಪ್ರಶ್ನೆ ಆಗಿರುತ್ತದೆ. ಬಟ್ಟೆಯನ್ನು ನೋಡಿಯೇ ಮನುಷ್ಯರನ್ನು ಅಳೆಯುವ ಈ ಜಮಾನಾದಲ್ಲಿ ಹಲವರಿಗೆ ಇದು ಅನಿವಾರ್ಯ ಕೂಡ ಆಗಿಬಿಟ್ಟಿದೆ. ಶಾಲೆಗಳಲ್ಲಿ ಇಲ್ಲವೇ ಸಭೆ ಸಮಾರಂಭಗಳಲ್ಲಿ ಮಕ್ಕಳಿಗೆ ಬ್ರ್ಯಾಂಡೆಡ್​ ಬಟ್ಟೆ ಹಾಕಿಸುವುದೋ ಇಲ್ಲವೇ ಬ್ರ್ಯಾಂಡೆಡ್​ ವಾಚ್​, ಶೂಸ್​... ಹೀಗೆ ಪಟ್ಟಿ ದೊಡ್ಡದಾಗಿ ಬೆಳೆಯುತ್ತದೆ. ಇದನ್ನು ನೋಡಿ ಉಳಿದವರು ಹೊಟ್ಟೆ ಉರಿದುಕೊಂಡರೆ ಈ ಅಪ್ಪ-ಅಮ್ಮಂದಿರಿಗೆ ಒಳಗೊಳಗೇ ಅದೇನೋ ಖುಷಿ, ಇನ್ನು ಮಕ್ಕಳನ್ನು ಕೇಳಬೇಕೆ? ಅಪ್ಪ-ಅಮ್ಮನಂತೆಯೇ ಮಕ್ಕಳೂ ಹೈ ಬ್ರ್ಯಾಂಡೆಡ್​ ವಸ್ತುಗಳಿಂದ ತಮ್ಮನ್ನು ಮುಳುಗಿಸಿಕೊಂಡು ಖುಷಿ ಪಡುತ್ತಾರೆ.

ಆದರೆ ನಿಮಗೆ ಗೊತ್ತೆ? ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಈ ರೀತಿ ಬ್ರ್ಯಾಂಡೆಡ್​ (branded) ಎಂಬ ಹಣೆಪಟ್ಟಿ ಇರುವ ಐಷಾರಾಮಿ ವಸ್ತುಗಳನ್ನು (Luxurious Items) ಅವರಿಗೆ ಕೊಟ್ಟರೆ ಅದು ಅವರ ಮೇಲೆ ತೀವ್ರ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಬಹುತೇಕ ಪಾಲಕರಿಗೆ ತಿಳಿದಂತೆ ಇಲ್ಲ. ವಸ್ತುವಿನ ಬೆಲೆ ಕಾಸ್ಲ್ಟಿಯಾದಷ್ಟೂ ತಮ್ಮ ಬೆಲೆಯೂ ಹೆಚ್ಚುತ್ತದೆ ಎನ್ನುವ ಕೆಟ್ಟ ಮನಸ್ಥಿತಿ ಪಾಲಕರಿಂದ ಮಕ್ಕಳ ತಲೆಗೂ ಇಳಿದು ಬಿಡುತ್ತದೆ. ಎಲ್ಲ ಅಪ್ಪ-ಅಮ್ಮಂದಿರೂ ತಮ್ಮ ಮಕ್ಕಳಿಗೆ ಎಲ್ಲಾ ವಿಷಯಗಳಲ್ಲಿಯೂ ತಮ್ಮ ಕೈಲಾದಷ್ಟು ದಿ ಬೆಸ್ಟ್​ ಕೊಡಬೇಕು ಎಂದೇ ಎಂದುಕೊಳ್ಳುತ್ತಾರೆ. ಇದಕ್ಕೆ ಹಲವು ಕಾರಣಗಳೂ ಇವೆ. ಅದೇನೆಂದರೆ, ನಾವು ಚಿಕ್ಕವರಿರುವಾಗ ನಮಗೆ ಬ್ರ್ಯಾಂಡೆಡ್​ ವಸ್ತುಗಳು ಸಿಕ್ಕಿರಲಿಲ್ಲ, ಯಾರೋ ಹಾಕಿಕೊಂಡಿರುವ ಡ್ರೆಸ್ಸೋ ಇಲ್ಲವೇ ಧರಿಸಿರುವ ಇನ್ನಾವುದೇ ವಸ್ತುಗಳನ್ನು ನೋಡಿ ನೋವು ಅನುಭವಿಸಿದ್ದು ಇದೆ. ಆ ಸ್ಥಿತಿ ನಮ್ಮ ಮಕ್ಕಳಿಗೂ ಬರಬಾರದು ಎನ್ನುವ ಕಾರಣಕ್ಕೆ ಮಕ್ಕಳನ್ನು ಸದಾ ಖುಷಿಯಾಗಿಡಲು ಇಂಥ ಬ್ರ್ಯಾಂಡೆಡ್​ಗೆ ಮೊರೆ ಹೋಗುವುದು ಇದೆ.

ಸ್ತನ ಬೆವರುವಿಕೆ ಕಿರಿಕಿರಿಯಿಂದ ಮುಕ್ತ ಮುಕ್ತ... ಕೂಲ್​ ಕೂಲ್​ ಅನುಭವ ನೀಡಲಿದೆ TTT

ಆದರೆ ಸತ್ಯವೇ ಬೇರೆ. ಹೀಗೆ ಮಾಡುವುದರಿಂದ  ಮಕ್ಕಳ ಭವಿಷ್ಯವನ್ನು ಪಾಲಕರೇ ಅವರ ಕೈಯಾರೆ ಸಮಸ್ಯೆಗೆ ನೂಕಲ್ಪಡುತ್ತಿದ್ದಾರೆ. ಮಕ್ಕಳಿಗೆ ಉತ್ತಮ ನಡತೆ ಕಲಿಸುವ ಬದಲು ಉತ್ತಮ ಬ್ರ್ಯಾಂಡೆಡ್​ ವಸ್ತುಗಳನ್ನು ನೀಡಿದರೆ ಮಕ್ಕಳಿಗೆ ನಡತೆಗಿಂತ ತಮ್ಮ ಬಾಹ್ಯ ಸೌಂದರ್ಯವೇ ಲೇಸು ಎನ್ನಿಸಲು ಶುರುವಾಗುತ್ತದೆ. ಚಿಕ್ಕ ಮಕ್ಕಳ ತಲೆಯಲ್ಲಿ ಒಮ್ಮೆ ಏನಾದರೂ ಹೊಕ್ಕಿದರೆ ಅದು ದೊಡ್ಡವರಾಗುತ್ತಿದ್ದಂತೆಯೇ ಬದಲಾಗುವುದು ಕಷ್ಟ. ಅದರಲ್ಲಿಯೂ ತಮ್ಮ ಪಾಲಕರೂ ಈ ಬ್ರ್ಯಾಂಡೆಡ್​ ಎಂಬ ಕೂಪದೊಳಗೆ ಹೋದರಂತೂ ಮುಗಿದೇ ಹೋಯ್ತು. ಅದರ ಮುಂದೆ ನಡತೆ, ಗುಣ ಎಲ್ಲವೂ ಮಕ್ಕಳಿಗೆ ಅಮುಖ್ಯ ಎನಿಸಿಬಿಡುತ್ತದೆ.  ಮೌಲ್ಯ ಹಾಗೂ ಸ್ವಾಭಿಮಾನ (self worth and self esteem) ಎನ್ನುವುದು ಮಕ್ಕಳಿಂದ ದೂರವಾಗುತ್ತದೆ ಎನ್ನುವುದು ತಜ್ಱರ ಅಭಿಮತ. 

ಜೀವನಕ್ಕೆ ಬೇಕಿರುವುದು ಮೌಲ್ಯಗಳಲ್ಲ, ಬದಲಿಗೆ ಬಟ್ಟೆ, ಸಾಮಗ್ರಿಗಳ ಮೇಲೆ ಇರುವ ಬ್ರ್ಯಾಂಡೆಡ್​ ಲೋಗೋಗಳು (Logo)ಎಂಬ ಅನಿಸಿಕೆ ಆ ಪುಟ್ಟ ಮನಸ್ಸಿನಲ್ಲಿ ಊರಿಬಿಟ್ಟರೆ ಮುಂದೆ ಅದೆಂಥ ಅಪಾಯ  ತಂದೊಡ್ಡಬಲ್ಲುದು ಎಂದು ಪಾಲಕರು ಒಮ್ಮೆಯಾದರೂ ಯೋಚನೆ ಮಾಡಿದ್ದೀರಾ? ಮುಂದೆ ಸಾಮಗ್ರಿ ಖರೀದಿ ಮಾಡುವ ಮುನ್ನ ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಕೊಡುತ್ತೀರಾ ಅಥವಾ ಉತ್ತಮ ಬ್ರ್ಯಾಂಡೆಡ್​ ಸಾಮಗ್ರಿ ಕೊಡುತ್ತೀರಾ ಎಂದು ಯೋಚನೆ ಮಾಡಿ ಎನ್ನುವ ವಿಡಿಯೋ ಈಗ ವೈರಲ್​ ಆಗಿದೆ. 

Mental Health Tips: ವೃದ್ಧಾಪ್ಯ ಚೆನ್ನಾಗಿರ್ಬೇಕು ಅಂದ್ರೆ ಯವೌನದ ಈ ಗುಣಗಳನ್ನ ಬಿಡ್ಲೇ ಬೇಕು

Follow Us:
Download App:
  • android
  • ios