Fertility tips: ತಂದೆಯಾಗೋಕೆ ಯಾವ ವಯಸ್ಸು ಸೂಕ್ತ?
ತಂದೆಯಾಗುವುದು ಸಾಕಷ್ಟು ದೈಹಿಕ ಹಾಗೂ ಮಾನಸಿಕ ಆರೋಗ್ಯ- ಸಿದ್ಧತೆಯನ್ನು ಬೇಡುತ್ತದೆ. ನಿಮ್ಮ ವೀರ್ಯದ ಪ್ರಮಾಣ ಗರಿಷ್ಠ ಸಂಖ್ಯೆಯಲ್ಲಿ ಇರೋದು ಯಾವ ವಯಸ್ಸಿನಲ್ಲಿ, ಯಾವ ವಯಸ್ಸಿನಲ್ಲಿ ಮಗು ಮಾಡಿಕೊಂಡರೆ ಆರೋಗ್ಯಕರ ಎಂಬ ಮಾಹಿತಿ ಇಲ್ಲಿದೆ.
ಯಾವ ವಯಸ್ಸಿನಲ್ಲಿ ಬೇಕಿದ್ದರೂ ಮಗು ಮಾಡಿಕೊಳ್ತೀನಿ ಎಂದು ಗಂಡಸರು ಜಂಬ ಕೊಚ್ಚಿಕೊಳ್ಳುವುದುಂಟು. ಸಾಮಾನ್ಯವಾಗಿ ತಾಯಿಯಾಗಲು ಹೆಣ್ಣಿನ ವಯಸ್ಸು ಸೂಕ್ತವಾಗಿದೆಯೇ ಎಂದು ನೋಡುತ್ತಾರೆ. ಆದರೆ ನಿಮ್ಮ ವಯಸ್ಸಿಗೂ ನಿಮ್ಮ ವೀರ್ಯದ ಗುಣಮಟ್ಟ ಮತ್ತು ಪ್ರಮಾಣಕ್ಕೂ ಸಂಬಂಧವಿದೆ. ವಯಸ್ಸಾದಂತೆ ವೀರ್ಯದ ಗುಣಮಟ್ಟ ಕುಸಿಯುತ್ತದೆ. ಹಾಗಿದ್ದರೆ, ಯಾವ ವಯಸ್ಸು ತಂದೆಯಾಗಲು ಸೂಕ್ತ? ಪುರುಷರು 50-60ನೇ ವಯಸ್ಸಿನವರೆಗೂ ತಂದೆಯಾಗಲು ಸಾಧ್ಯವಿದೆ. ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, ತಂದೆಯಾದ ಅತ್ಯಂತ ಹೆಚ್ಚು ವಯಸ್ಸಿನ ವ್ಯಕ್ತಿ ಎಂದರೆ 92 ವರ್ಷದವರಾಗಿದ್ದರು. ಆದರೂ, 40 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ ಈ ವಿಚಾರದಲ್ಲಿ ಇಂದು ಯಶಸ್ಸಿನ ಸಾಧ್ಯತೆ ಕಡಿಮೆ. ಸಂಶೋಧನೆಗಳ ಪ್ರಕಾರ ಮನುಷ್ಯರ ಫಲವತ್ತತೆ ಪ್ರಮಾಣ ಕುಸಿಯುತ್ತ ಬರುತ್ತಿದೆ. ಜೈವಿಕ ದೃಷ್ಟಿಕೋನದಿಂದ, 20ರ ಹರೆಯದಿಂದ 30ರ ವರೆಗಿನ ವಯಸ್ಸು ಪಿತೃತ್ವಕ್ಕೆ ಸೂಕ್ತವಾದದ್ದು ಎಂದು ತಜ್ಞರು ಶಿಫಾರಸು ಮಾಡುತ್ತಾರೆ.
ಪುರುಷರಲ್ಲಿ ಸಾಮಾನ್ಯವಾಗಿ ವೀರ್ಯ ಉತ್ಪಾದನೆ ನಿಲ್ಲುವುದಿಲ್ಲ. ಗಂಡಸಿಗೆ ವಯಸ್ಸಾದಂತೆ ಅವನ ವೀರ್ಯ ಆನುವಂಶಿಕ ರೂಪಾಂತರಗಳಿಗೆ ಒಳಗಾಗುತ್ತದೆ. ಅವನ ವೀರ್ಯದ ಡಿಎನ್‌ಎ ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ. ಇದು ಫಲವತ್ತತೆಯ ಮೇಲೆ ಪ್ರಭಾವ ಬೀರಬಹುದು. ಆಗ ಹುಟ್ಟುವ ಮಕ್ಕಳ ಆರೋಗ್ಯದ ಮೇಲೆ ಪರಿಣಾಮಗಳನ್ನು ಉಂಟುಮಾಡಬಹುದು.
ನಲುವತ್ತರ ಮೇಲೆ ತಂದೆಯಾದರೆ ಮಕ್ಕಳ ನರಗಳ ಬೆಳವಣಿಗೆಯು ಅಸ್ವಸ್ಥತೆ ಹೊಂದಿರುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ತೋರಿಸಿವೆ. 2010ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, 40 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಂದ ಜನಿಸಿದ ಮಕ್ಕಳು ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಅನ್ನು ಹೊಂದುವಲ್ಲಿ ಐದು ಪಟ್ಟು ಅಪಾಯವನ್ನು ಹೊಂದಿದೆ.
Relationship Doubts: ಆ ಹುಡುಗಿ ಬಗ್ಗೆ ಮಾತಾಡುವಾಗ ಪತಿಯ ಮುಖ ಹೊಳಪೇರುತ್ತದೆ!
ವೀರ್ಯ ಹೇಗಿರಬೇಕು?
ಪುರುಷರಿಗೆ ವಯಸ್ಸಾದಂತೆ ಅವರ ವೀರ್ಯಾಣು ಗುಣಮಟ್ಟದಲ್ಲಿ ಇಳಿಯುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ವೀರ್ಯದ ಗುಣಮಟ್ಟಕ್ಕೆ ನಿಯತಾಂಕಗಳನ್ನು ನಿಗದಿಪಡಿಸಿದೆ. ಇದು ಆರೋಗ್ಯಕರ ವೀರ್ಯಕ್ಕೆ ಮಾನದಂಡ. ಇದರಲ್ಲಿ ವೀರ್ಯದ್ರವದಲ್ಲಿನ ವೀರ್ಯಾಣುಗಳ ಸಂಖ್ಯೆ, ಆಕಾರ ಮತ್ತು ಚಲನಶೀಲತೆ ಸೇರಿವೆ. 35 ವರ್ಷ ವಯಸ್ಸಿನಿಂದ ನಂತರ ವೀರ್ಯದ ನಿಯತಾಂಕಗಳು ಹದಗೆಡುತ್ತವೆ.
ಒಮ್ಮೆ ಸ್ಖಲನದಲ್ಲಿ ವಿಸರ್ಜನೆಯಾಗುವ ವೀರ್ಯದ್ರವದಲ್ಲಿ ಪ್ರತಿ ಮಿಲಿಲೀಟರ್‌ಗೆ ಕನಿಷ್ಠ 15 ಮಿಲಿಯ ವೀರ್ಯಾಣುಗಳನ್ನು ಹೊಂದಿದ್ದರೆ ಫಲವತ್ತತೆ ಹೆಚ್ಚಾಗಿ ಇರುತ್ತದೆ. ಸ್ಖಲನದಲ್ಲಿ ತುಂಬಾ ಕಡಿಮೆ ವೀರ್ಯವಿದ್ದರೆ ಗರ್ಭಿಣಿಯಾಗಲು ಸಾಧ್ಯವಿಲ್ಲ. ಚಲನಶೀಲತೆಯ ವಿಷಯಕ್ಕೆ ಬಂದಾಗ, ಸ್ಖಲನದ್ರವದಲ್ಲಿ 40%ಕ್ಕಿಂತ ಅಧಿಕ ವೀರ್ಯಾಣುಗಳು ಈಜುತ್ತಿದ್ದರೆ ಗರ್ಭಧಾರಣೆ ಸಾಧ್ಯ.
ಮನುಷ್ಯನ ಹೆಚ್ಚು ಫಲವತ್ತಾದ ವಯಸ್ಸು ಎಂದರೆ 22ರಿಂದ 25 ವರ್ಷ. 35 ವರ್ಷಕ್ಕಿಂತ ಮುಂಚೆಯೇ ಮಕ್ಕಳನ್ನು ಹೊಂದಲು ಸೂಚಿಸಲಾಗುತ್ತದೆ. ಈ ವಯಸ್ಸಿನ ನಂತರ ಪುರುಷ ಫಲವತ್ತತೆ ಕುಸಿಯಲಾರಂಭಿಸುತ್ತದೆ. 35ರ ನಂತರ, ವೀರ್ಯಾಣು ರೂಪಾಂತರಗಳು ಆಗುತ್ತವೆ. ಪುರುಷನ ವಯಸ್ಸು 45 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ಗರ್ಭಿಣಿ ಮಹಿಳೆಯ ವಯಸ್ಸನ್ನು ಲೆಕ್ಕಿಸದೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು.
ಯಾವ ವಯಸ್ಸಿನಲ್ಲಿ ತಂದೆಯಾಗಬಾರದು?
ಜರ್ನಲ್ ಆಫ್ ಎಪಿಡೆಮಿಯಾಲಜಿ & ಕಮ್ಯುನಿಟಿ ಹೆಲ್ತ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, 25 ವರ್ಷಕ್ಕಿಂತ ಮೊದಲು ತಂದೆಯಾಗುವುದು ಗಂಭೀರ ಆರೋಗ್ಯ ಪರಿಣಾಮಗಳಿಗೆ ಕಾರಣವಾಗಬಹುದು ಮತ್ತು ಮಧ್ಯವಯಸ್ಸಿನಲ್ಲಿ ಅಕಾಲಿಕ ಮರಣಕ್ಕೆ ಕಾರಣವಾಗಬಹುದು. ಬಹಳ ಬೇಗ ತಂದೆಯಾಗುವ ಪುರುಷರು ಕಳಪೆ ಆರೋಗ್ಯವನ್ನು ಹೊಂದಿರುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಇದಲ್ಲದೇ ಸಣ್ಣ ವಯಸ್ಸಿನಲ್ಲಿ ಪಿತೃತ್ವಕ್ಕೆ ತಯಾರಾಗಿರದೆ ಇದ್ದಾಗ ಸೃಷ್ಟಿಯಾಗುವ ಮಾನಸಿಕ ಮತ್ತು ಆರ್ಥಿಕ ಒತ್ತಡವು ನಿಮ್ಮ ಆರೋಗ್ಯವನ್ನು ಬಲಿ ಪಡೆಯಬಹುದು.
Feel free: ಮೊದಲ ಸೆಕ್ಸ್ ತುಂಬಾ ನೋವುಂಟು ಮಾಡುತ್ತದೆಯೇ? ಮೊದಲ ರಾತ್ರಿಯ ಬಗ್ಗೆ ತಪ್ಪು ಕಲ್ಪನೆಗಳು
ಫಲವತ್ತತೆಗೆ ಅಡ್ಡಿಯಾಗುವ ಜೀವನಶೈಲಿ
ವೀರ್ಯದ ಗುಣಮಟ್ಟವನ್ನು ಕೆಡಿಸುವ ಅನೇಕ ಜೀವನಶೈಲಿ ಅಂಶಗಳಿವೆ. ಕಳಪೆ ಆಹಾರ, ಧೂಮಪಾನ, ಮದ್ಯಪಾನ, ಡ್ರಗ್ಸ್ ಸೇವನೆ, ಮತ್ತು ಸ್ಥೂಲಕಾಯ ಇದರಲ್ಲಿ ಸೇರಿವೆ. ಒಳ್ಳೆಯ ಪ್ರಮಾಣದ ವೀರ್ಯವನ್ನು ಉತ್ಪಾದಿಸಲು, ಆರೋಗ್ಯಕರ ಆಹಾರವನ್ನು ಸೇವಿಸುವುದು ಅವಶ್ಯಕ.
ನೀವು ಹೆಚ್ಚಿನ ಮೈತೂಕ ತೂಕ ಹೊಂದಿದ್ದರೆ, ಕೆಲವು ಕಿಲೋಗಳನ್ನು ಕಳೆದುಕೊಳ್ಳುವುದು ಒಳ್ಳೆಯದು. ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವ ಆಹಾರಗಳು ಇದಕ್ಕೆ ಸಹ ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಸೂಚಿಸಿವೆ. ನಿಮ್ಮ ವೀರ್ಯದ ಗುಣಮಟ್ಟವನ್ನು ಸುಧಾರಿಸಲು ಆಲ್ಕೋಹಾಲ್ ಮತ್ತು ಧೂಮಪಾನವನ್ನು ಕಡಿಮೆ ಮಾಡಿ. ಎರಡನ್ನೂ ಕ್ರಮೇಣ ತ್ಯಜಿಸುವುದು ಉತ್ತಮ.
ವೀರ್ಯವನ್ನು ಉತ್ಪಾದಿಸುವ ನಿಮ್ಮ ವೃಷಣಗಳು ನಿಮ್ಮ ದೇಹದ ಉಳಿದ ಭಾಗಗಳಿಗಿಂತ ಸ್ವಲ್ಪ ತಂಪಾಗಿರಬೇಕು. ನಿಮ್ಮ ತೊಡೆಸಂದು ತಂಪಾಗಿ ಇರುವಂತೆ ನೋಡಿಕೊಳ್ಳಿ. ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ಲ್ಯಾಪ್‌ಟಾಪ್ ಅನ್ನು ನಿಮ್ಮ ತೊಡೆಗಳ ಮೇಲೆ ದೀರ್ಘಕಾಲ ಇಡಬೇಡಿ. ಬಿಸಿಯಾದ ವಾತಾವರಣದಲ್ಲಿ ಹೆಚ್ಚು ಸಮಯ ಕಳೆಯುವುದು ಅಥವಾ ದೀರ್ಘಕಾಲ ಕುಳಿತುಕೊಳ್ಳುವುದು ಬೇಡ. ಅತಿಯಾದ ಬಿಸಿನೀರಿನಲ್ಲಿ ಸ್ನಾನ ಬೇಡ.
Sex as exercise: ಸೆಕ್ಸ್ ಮಾಡಿದ್ರೆ ಬೇರೆ ವ್ಯಾಯಾಮ ಬೇಕಿಲ್ವಾ? ಏನು ಹೇಳ್ತಾರೆ ಎಕ್ಸ್‌ಪರ್ಟ್ಸ್?