Airport Divorce : ಇತ್ತೀಚಿನ ದಿನಗಳಲ್ಲಿ ಏರ್ಪೋರ್ಟ್ ಡಿವೋರ್ಸ್ ವೈರಲ್ ಆಗ್ತಿದೆ. ಅನೇಕರು ಇದನ್ನು ಫಾಲೋ ಮಾಡ್ತಿದ್ದಾರೆ. ಈ ಏರ್ಪೋರ್ಟ್ ಡಿವೋರ್ಸ್ ಅಂದ್ರೇನು? ಅದರ ವಿಶೇಷತೆ ಏನು?
ಜನರೇಷನ್ ಬದಲಾಗ್ತಿದ್ದಂತೆ ಸಂಬಂಧ ಸುಧಾರಿಸಿಕೊಳ್ಳೋಕೆ ಜನರು ಬೇರೆ ಬೇರೆ ಮಾರ್ಗ ಹುಡುಕಿಕೊಳ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈಗ ಏರ್ಪೋರ್ಟ್ ಡಿವೋರ್ಸ್(Airport Divorce) ಪ್ರಸಿದ್ಧಿಗೆ ಬಂದಿದೆ. ಏರ್ ಪೋರ್ಟ್ ಡಿವೋರ್ಸ್ ಅಂದ್ರೆ ಏರ್ ಪೋರ್ಟ್ ನಲ್ಲಿ ವಿಚ್ಛೇದನ ನೀಡೋದಲ್ಲ. ವಿಮಾನ ಹತ್ತೋವರೆಗೆ ಬೇರೆಯಾಗಿರೋದು. ಜೆನ್ ಜೀಗಳಲ್ಲಿ ಹೆಚ್ಚಾಗ್ತಿರುವ ಈ ಏರ್ಪೋರ್ಟ್ ಡಿವೋರ್ಸ್ ಬಗ್ಗೆ ಮಾಹಿತಿ ಇಲ್ಲಿದೆ.
ಏರ್ ಪೋರ್ಟ್ ಡಿವೋರ್ಸ್ ಅಂದ್ರೇನು? :
ಹೆಂಡ್ತಿಗೆ ವಿಮಾನಕ್ಕಿಂತ ಕಾಫಿ ಇಂಪಾರ್ಟೆಂಟ್ ಆಯ್ತು ಅನ್ನೋ ಕಾರಣಕ್ಕೆ ಪತಿಯೊಬ್ಬ ಹೆಂಡ್ತಿಯನ್ನು ಏರ್ ಪೋರ್ಟ್ ನಲ್ಲೇ ಬಿಟ್ಟು ವಿಮಾನ ಏರಿದ್ದ. ಸಾರ್ವಜನಿಕ ಸಾರಿಗೆ ನಮಗೆ ಕಾಯೋದಿಲ್ಲ. ನಾವು ಅದ್ರ ಟೈಂಗೆ ಅಲ್ಲಿರ್ಬೇಕು. ಸರಿಯಾದ ಸಮಯಕ್ಕೆ ನಿಲ್ದಾಣಕ್ಕೆ ಹೋಗ್ಬೇಕು ಅನ್ನೋ ಟೆನ್ಷನ್ ನಲ್ಲಿ ಮನೆಯಲ್ಲಿ ಗಡಿಬಿಡಿ, ಗಲಾಟೆ ಸಾಮಾನ್ಯ. ಪತಿ – ಪತ್ನಿ ಮಧ್ಯೆ ಪ್ರವಾಸದ ಟೈಂನಲ್ಲಿ ಇಂಥ ಜಗಳ ಕಾಮನ್ ಆಗಿರುತ್ತೆ. ಬ್ಯಾಗ್ ದೊಡ್ಡದಾಯ್ತು, ರೆಡಿಯಾಗೋದು ಲೇಟ್ ಆಯ್ತು, ಪಾಸ್ಪೋರ್ಟ್ ಮರೆತು ಹೋಯ್ತು ಹೀಗೆ ನಾನಾ ವಿಷ್ಯಕ್ಕೆ ದಂಪತಿ ಗಲಾಟೆ ಮಾಡ್ತಾರೆ. ಇದು ಪ್ರವಾಸದ ಮೂಡ್ ಹಾಳು ಮಾಡುತ್ತೆ. ಸಣ್ಣ ಜಗಳವೇ ಮುಂದೆ ದೊಡ್ಡ ಗಲಾಟೆಗೆ ಕಾರಣವಾಗುತ್ತೆ. ಇದಕ್ಕೆ ಬ್ರೇಕ್ ನೀಡಲು ದಂಪತಿ ಶುರು ಮಾಡಿದ್ದೇ ಈ ಏರ್ ಪೋರ್ಟ್ ಡಿವೋರ್ಸ್.
ವೃದ್ಧ ಪೋಷಕರ ಹೊರ ಹಾಕಿದ್ದ ಮಕ್ಕಳು: ಹಸಿವಿನಿಂದ ಬೀದಿಯಲ್ಲಿ ಅಲೆಯುತ್ತಿದ್ದವರಿಗೆ ಪೊಲೀಸರಿಂದ ನೆರವು
ಏರ್ಪೋರ್ಟ್ ಡಿವೋರ್ಸ್ ಶುರು ಆಗಿದ್ದು ಹೇಗೆ? :
ಬ್ರಿಟಿಷ್ ಬರಹಗಾರ ಹಗ್ ಆಲಿವರ್, ಏರ್ ಪೋರ್ಟ್ ಡಿವೋರ್ಸ್ ಹೆಸರನ್ನು ಮೊದಲು ಪರಿಚಯ ಮಾಡಿದ್ರು. ಮೊದಲೇ ಹೇಳಿದಂಗೆ ಇದು ಶಾಶ್ವತವಾಗಿ ದಂಪತಿ ದೂರ ಆಗೋದಲ್ಲ. ತಾತ್ಕಾಲಿಕವಾಗಿ ಬೇರೆ ಆಗೋದು. ಸಂಬಂಧವನ್ನು ಬಲಪಡಿಸಲು ಇದು ಹೆಲ್ಪ್ ಮಾಡುತ್ತೆ. ಏರ್ಪೋರ್ಟ್ ಡಿವೋರ್ಸ್ ನಲ್ಲಿ, ಸೆಕ್ಯೂರಿಟಿ ಚೆಕ್ ನಂತ್ರ ದಂಪತಿ ಬೇರೆ ಆಗ್ತಾರೆ. ಏರ್ ಪೋರ್ಟ್ ನಲ್ಲಿ ಸ್ವಲ್ಪ ಸಮಯ ಇಬ್ಬರೂ ದೂರ ಇರ್ತಾರೆ. ವಿಮಾನ ಹತ್ತುತ್ತಿದ್ದಂತೆ ಮತ್ತೆ ಹತ್ತಿರವಾಗ್ತಾರೆ. ಸ್ವಲ್ಪ ಸಮಯದ ಈ ಅಂತರ ಸಂಬಂಧವನ್ನು ಬಲಪಡಿಸುತ್ತೆ ಅಂದ ಹಗ್ ಆಲಿವರ್ ಹೇಳಿದ್ರು. ದಿ ಟೈಮ್ಸ್ ನಲ್ಲಿ ಹಗ್ ಆಲಿವರ್, ತಾವು ಅನುಸರಿಸಿದ ವಿಧಾನವನ್ನು ಬರೆದಿದ್ದರು. ಇದು ಸೋಶಿಯಲ್ ಮೀಡಿಯಾ ಹಾಗೂ ಪೇಪರ್ ನಲ್ಲಿ ಪ್ರಸಿದ್ಧಿಗೆ ಬಂತು. ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡು ಇದನ್ನು ಫಾಲೋ ಮಾಡಿದ್ರು. ಆದ್ರೆ ಫಲಿತಾಂಶ ವರ್ಕ್ ಆಗಿತ್ತು. ಒತ್ತಡ ಕಡಿಮೆ ಮಾಡಲು ಇದು ಸಹಾಯ ಮಾಡಿತ್ತು. ಹಾಗಾಗಿ ದಿನ ಕಳೆದಂತೆ ಇದು ಹೆಚ್ಚು ಪ್ರಸಿದ್ಧಿಗೆ ಬಂದಿದೆ. ಅಮೇರಿಕನ್ ಟಿವಿ ನಿರೂಪಕಿ ಕೆಲ್ಲಿ ರಿಪಾ ಕೂಡ ತಮ್ಮ ಗಂಡನಿಗೆ ಈ ಏರ್ಪೋರ್ಟ್ ಡಿವೋರ್ಸ್ ಬಗ್ಗೆ ಹೇಳಿದ್ದರು. ಅದನ್ನು ಅವರು ಫಾಲೋ ಕೂಡ ಮಾಡಿದ್ದರು. ಆ ನಂತ್ರ ಇದಕ್ಕೆ ಮತ್ತಷ್ಟು ಪ್ರಸಿದ್ಧಿ ಸಿಕ್ಕಿದೆ.
"ಜೀವನದ ಅತಿ ದೊಡ್ಡ ಕನಸು ಈಡೇರಿದ 15 ದಿನದ ನಂತರ ಅಮ್ಮ ನಿಧನ".. ಮಗನ ಪೋಸ್ಟ್ ಕಣ್ಣಲ್ಲಿ ನೀರು ತರಿಸುತ್ತೆ
ವಿಮಾನ ನಿಲ್ದಾಣದಲ್ಲಿರುವ ಉದ್ದದ ಸಾಲುಗಳು, ಸೆಕ್ಯೂರಿಟಿ ಚೆಕ್, ಬ್ಯಾಗ್ ಸಮಸ್ಯೆ ಮತ್ತು ವಿಮಾನ ವಿಳಂಬ ಇವೆಲ್ಲವೂ ಹೆಚ್ಚಿದ ಆತಂಕಕ್ಕೆ ಕಾರಣವಾಗುತ್ತವೆ. ಪ್ರಯಾಣದ ಸಮಯದಲ್ಲಿ ದಂಪತಿ ಜಗಳ ಸಾಮಾನ್ಯವಾಗಿದೆ ಅಂತ ಅನೇಕ ಅಧ್ಯಯನಗಳು ಹೇಳಿವೆ. ಈ ಟೈಂನಲ್ಲಿ ಇಬ್ಬರಿಗೂ ವೈಯಕ್ತಿಕ ಸಮಯ ಸಿಕ್ಕಿದ್ರೆ ಒಳ್ಳೆಯದು. ಆದ್ರೆ, ಈ ವಿಧಾನ ಎಲ್ಲರಿಗೂ ಸೂಕ್ತವಲ್ಲ. ಮಕ್ಕಳ ಜೊತೆ ಅಥವಾ ದೀರ್ಘ ಪ್ರವಾಸಗಳಲ್ಲಿ ಇದನ್ನು ಕಾರ್ಯಗತಗೊಳಿಸುವುದು ಕಷ್ಟವಾಗುತ್ತೆ.
