Zee Kannada DKD : ಜೀ ಕನ್ನಡದಲ್ಲಿ ಪ್ರಸಾರ ಆಗಲಿರುವ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋಗೆ ಸ್ಟಾರ್ ಕಲಾವಿದರ ಎಂಟ್ರಿಯಾಗಿದೆ. ಈ ಬಾರಿ ಭವ್ಯ ಗೌಡ ಜೊತೆ ಗುಂಡಮ್ಮ ಅಲಿಯಾಸ್ ಪ್ರತೀಕ್ಷಾ ಕೂಡ ವೇದಿಕೆ ಮೇಲೆ ಹೆಜ್ಜೆ ಹಾಕಲಿದ್ದಾರೆ.

ಜೀ ಕನ್ನಡದಲ್ಲಿ ಡಾನ್ಸ್ ಕರ್ನಾಟಕ ಡಾನ್ಸ್ (Dance Karnataka Dance) ರಿಯಾಲಿಟಿ ಶೋ ಮತ್ತೆ ಬರ್ತಿದೆ. ಈ ಬಾರಿ ರಕ್ಷಿತಾ ಪ್ರೇಮ್, ಆಕ್ಷನ್, ರಿಯಾಕ್ಷನನ್ನು ಫ್ಯಾನ್ಸ್ ಮಿಸ್ ಮಾಡ್ಕೊಂಡ್ರೂ ವಿಜಯ ರಾಘವೇಂದ್ರ, ರಚಿತಾ ರಾಮ್, ಶಿವರಾಜ್ ಕುಮಾರ್, ಅರ್ಜುನ್ ಜನ್ಯ ಜಡ್ಜ್ ಸ್ಥಾನ ತುಂಬ್ತಿದ್ದಾರೆ. ಸೆಲೆಬ್ರಿಟಿಗಳ ಜೊತೆ ಸಾಮಾನ್ಯ ಡಾನ್ಸರ್ ಗೂ ವೇದಿಕೆಯಲ್ಲಿ ಅವಕಾಶ ಸಿಗ್ತಿದ್ದು, ಈಗ ಸೆಲೆಬ್ರಿಟಿಗಳ ಪ್ರೋಮೋ ಒಂದೊಂದೇ ಹೊರ ಬರ್ತಿದೆ. ಈ ಬಾರಿ ಡಿಕೆಡಿಯಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಡಾನ್ಸ್ ಟ್ಯಾಲೆಂಟ್ ತೋರಿಸಲಿದ್ದಾರೆ. ಆದ್ರೆ ಇವರೆಲ್ಲರ ಮಧ್ಯೆ ಗಮನ ಸೆಳೆದಿದ್ದು ಗುಂಡಮ್ಮನ ಪ್ರೋಮೋ.

ಡಿಕೆಡಿ ವೇದಿಕೆ ಮೇಲೆ ಗುಂಡಮ್ಮನ ಭರ್ಜರಿ ಪರ್ಫಾರ್ಮೆನ್ಸ್ :

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಅಣ್ಣಯ್ಯ ಸೀರಿಯಲ್ ಗುಂಡಮ್ಮ ಅಲಿಯಾಸ್ ಪ್ರತೀಕ್ಷಾ ಶ್ರೀನಾಥ್, ನಟನೆಯಲ್ಲಿ ವೀಕ್ಷಕರ ಮೆಚ್ಚುಗೆ ಗಳಿಸಿಯಾಗಿದೆ. ನಟನೆ, ಡಾನ್ಸ್, ಹಾಡಿಗೆ ದೇಹದ ಆಕಾರ, ಸೌಂದರ್ಯ ಮುಖ್ಯ ಅಲ್ವೇ ಅಲ್ಲ. ಆಸಕ್ತಿ ಇದ್ರೆ, ಶ್ರಮವಹಿಸಿ ಉತ್ಸಾಹದಿಂದ ಮಾಡಿದ್ರೆ ಯಾರು ಬೇಕಾದ್ರೂ ಡಾನ್ಸ್ ಮಾಡ್ಬಹುದು. ಇದಕ್ಕೆ ಪ್ರತೀಕ್ಷಾ ಶ್ರೀನಾಥ್ ಉದಾಹರಣೆಯಾಗಲಿದ್ದಾರೆ. ಡಿಕೆಡಿ ಓಪನಿಂಗ್ ನಲ್ಲಿ ಪ್ರತೀಕ್ಷಾ ಡಾನ್ಸ್ ಮಾಡ್ತಿದ್ದು, ಅದ್ರ ಪ್ರೋಮೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ನಿನ್ನ ನೋಡಿ ಸುಮ್ನಹ್ಯಾಂಗ್ ಇರಲಿ ಹಾಡಿಗೆ ಹೆಜ್ಜೆ ಹಾಕಿರುವ ಪ್ರತೀಕ್ಷಾ, ಜಡ್ಜ್ ಕುತೂಹಲ ಹೆಚ್ಚಿಸಿದ್ದಾರೆ. ಆರಂಭದಲ್ಲಿಯೇ ಅದ್ಭುತ ಪರ್ಫಾರ್ಮೆನ್ಸ್ ನೀಡಿರುವ ಗುಂಡಮ್ಮನ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸ್ಪರ್ಧಿಗಳಿಗೆ ನೀವು ಒಳ್ಳೆ ಕಾಂಪಿಟೇಷನ್ ಕೊಡ್ತೀರಾ ಅಂತ ಜಡ್ಜ್ಸ್ ಪ್ರತೀಕ್ಷಾ ಅವರನ್ನು ಹೊಗಳಿದ್ದಾರೆ.

ಸೀಮಂತದ ಸಂಭ್ರಮದಲ್ಲಿ ‘ರಾಮಾಚಾರಿ’ ವಿಲನ್ ಐಶ್ವರ್ಯ ಸಾಲಿಮಠ್: PHOTOS

ಬರೀ ಡಾನ್ಸ್ ಮಾಡೋದು ಮಾತ್ರವಲ್ಲ ಪ್ರತೀಕ್ಷಾ ಉತ್ತಮ ಹಾಡುಗಾರರು. ಹಣೆ ಬರಹಕೆ ಹೊಣೆ ಯಾರು ಎನ್ನುವ ಹಾಡನ್ನು ವೇದಿಕೆ ಮೇಲೆ ಹಾಡಿದ ಗುಂಡಮ್ಮ, ತಾವು ಯಾವುದ್ರಲ್ಲೂ ಕಮ್ಮಿ ಇಲ್ಲ ಎಂಬುದನ್ನು ಸಾಭೀತುಪಡಿಸಿದ್ದಾರೆ. ನನ್ನನ್ನು ನೋಡಿ, ಇವಳ ಕೈನಲ್ಲೇ ಆಗುತ್ತೆ, ಇನ್ನು ನನಗೆ ಮಾಡೋಕೆ ಆಗಲ್ವ ಅನ್ನೋ ಒಂದಿಷ್ಟು ಕಾನ್ಫಿಡೆನ್ಸ್ ಬಂದ್ರೆ ನಾನು ವಿನ್ ಆದಂಗೆ ಅಂತ ಪ್ರತೀಕ್ಷಾ ಹೇಳಿದ್ದಾರೆ. ಪ್ರತೀಕ್ಷಾ ಎಲ್ಲರಿಗೂ ಸ್ಪೂರ್ತಿಯಾಗೋದು ಗ್ಯಾರಂಟಿಯಾಗಿದೆ.

ಪ್ರತೀಕ್ಷಾ ಯಕ್ಷಗಾನ ಕಲಾವಿದೆಯೂ ಹೌದು. ಅವಕಾಶ ಸಿಕ್ಕಾಗ ಯಕ್ಷಗಾನ ವೇಷ ಧರಿಸಿ ಅವರು ಪ್ರೇಕ್ಷಕರನ್ನು ರಂಜಿಸುತ್ತಾರೆ. ರಂಗಭೂಮಿ ಕಲಾವಿದೆಯಾಗಿರುವ ಪ್ರತೀಕ್ಷಾ ಶ್ರೀನಾಥ್, ಜೀ ಕನ್ನಡದ ಗುಂಡಮ್ಮನಾಗಿಯೇ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಜಿಮ್ ಸೀನನನ್ನು ಮದುವೆ ಆಗಿರುವ ಗುಂಡಮ್ಮ, ಫಸ್ಟ್ ನೈಟ್ ನಲ್ಲಿ ಮಂಚ ಮುರಿದಿದ್ದು ಹೆಚ್ಚು ಸುದ್ದಿ ಮಾಡಿತ್ತು.

ರಾತ್ರಿ ನಿದ್ರೆ ಬರಲ್ಲ, ಮೈ ಬೆವರೋದು ನಿಲ್ಲಲ್ಲ, ಈ ಹಾರರ್ ಸಿನಿಮಾ ನೋಡೋಕೆ ಗುಂಡಿಗೆ ಗಟ್ಟಿ ಇರ್ಬೇಕು

ಪ್ರತೀಕ್ಷಾ ದಪ್ಪಗಿದ್ದಾರೆ. ಆದ್ರೆ ಎಂದೂ ತಾವು ದಪ್ಪ ಇರೋದು ಸಮಸ್ಯೆ ಅಂತ ಪ್ರತೀಕ್ಷಾ ಅಂದುಕೊಂಡಿಲ್ಲ. ದಪ್ಪಗಾಗಲು ಕಾರಣ ಏನು ಅನ್ನೋದನ್ನು ಸಂದರ್ಶನವೊಂದರಲ್ಲಿ ಹೇಳಿದ್ದ ಪ್ರತೀಕಾ, ದಪ್ಪಗಿದ್ರೂ ಆರೋಗ್ಯವಂತಾಗಿರೋದು ಮುಖ್ಯ ಎಂದಿದ್ದರು. ಬಾಡಿ ಶೇಮಿಂಗ್ ಮಾಡೋರಿಗೆ ತಕ್ಕ ಉತ್ತರ ನೀಡೋದನ್ನು ಕಲಿತಿರುವ ಪ್ರತೀಕಾ, ಎಂದೂ ಕಾನ್ಫಿಡೆನ್ಸ್ ಕಳೆದುಕೊಂಡಿಲ್ಲ. ಡಿಕೆಡಿಯಲ್ಲಿ ಉತ್ತಮ ಸ್ಪರ್ಧೆ ನೀಡ್ತಾರೆ ಎನ್ನುವ ನಿರೀಕ್ಷೆ ಅಭಿಮಾನಿಗಳಿಗಿದೆ.

ಇನ್ನು ಡಿಕೆಡಿ (DKD) ವಿಷ್ಯಕ್ಕೆ ಬರೋದಾದ್ರೆ ಇದೇ ನವೆಂಬರ್ 15 ರಿಂದ ಡಿಕೆಡಿ ಶುರುವಾಗಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಶೋ ಪ್ರಸಾರವಾಗಲಿದೆ. ಒಂದಾದ್ಮೇಲೆ ಒಂದು ರಿಯಾಲಿಟಿ ಶೋ ತರುವ ಜೀ ಕನ್ನಡ, ಈ ಬಾರಿ ಡಿಕೆಡಿಯಲ್ಲಿ ಜನಸಾಮಾನ್ಯರಿಗೂ ಅವಕಾಶ ನೀಡಿದೆ. ಅನೇಕ ಕಡೆ ಆಡಿಷನ್ ಕೂಡ ನಡೆದಿದೆ.

View post on Instagram