ಡಿಸೆಂಬರ್ 26ಕ್ಕೆ ಮೈಸೂರಿನ ಯುವರಾಜ ಆದ್ಯವೀರ ನರಸಿಂಹರಾಜ ಒಡೆಯರ್‌ಗೆ ಮೂರು ವರ್ಷಗಳು ತುಂಬುತ್ತವೆ. ಅದೇ ಹೊತ್ತಿಗೆ ನವರಾತ್ರಿ ಕೂಡ ಆಚರಿಸಿ ಮುಗಿದಿರುವುದರಿಂದ ಮೈಸೂರಿನ ಅರಮನೆಯಲ್ಲಿ ಉಲ್ಲಾಸ ಉತ್ಸಾಹಗಳು ತುಂಬಿರುತ್ತವೆ.

ಮೈಸೂರಿನ ಅರಮನೆಯಲ್ಲಿ ಇರುವ ಒಂದು ವಿಶಿಷ್ಟ ಪದ್ಧತಿ ಎಂದರೆ, ಯುವರಾಜನ ಬರ್ತ್‌ಡೇಯನ್ನು ಅಂದೇ ಆಚರಿಸುವ ರೂಢಿ ಇಲ್ಲ. ಅದನ್ನು ಮುಂದೂಡಿ, ಬೇರೊಂದು ದಿನ ಆಚರಿಸಲಾಗುತ್ತದೆ. ಯುವರಾಜನ ಆಯುಷ್ಯ ವರ್ಧನೆಗಾಗಿ ಹೀಗೆ ಮಾಡಲಾಗುತ್ತದಂತೆ. ಇದು ತಲೆಮಾರುಗಳಿಂದ ನಡೆದು ಬಂದಿರುವ ರೂಢಿ.

ಬಸ್ಸಿನ ಖರ್ಚಿಗೆ 500 ರೂಪಾಯಿ ಸಾಲ ಕೊಟ್ಟಿದ್ದ ಶಿಕ್ಷಕನಿಗೆ 30 ಲಕ್ಷದ ಗಿಫ್ಟ್ ಕೊಟ್ಟ ಉದ್ಯಮಿ

ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ಅವರ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಅಕೌಮಟ್‌ಗಳಿಗೆ ಹೋಗಿ ನೋಡಿದರೆ ಮಗನ ಫೋಟೋಗಳೇ ಕಾಣಿಸುತ್ತವೆ. ಮೈಸೂರಿನ ಮಹಾರಾಜರು ತಮ್ಮ ಮಹಾರಾಣಿ ಹಾಗೂ ಯುವರಾಜನ ಜೊತೆ ಉಲ್ಲಾಸದಿಂದ ಇರುವು ಕ್ಷಣಗಳ ಫೋಟೋಗಳನ್ನು ಅದರಲ್ಲಿ ಅಪ್‌ಲೋಡ್‌ ಮಾಡುತ್ತಿರುತ್ತಾರೆ.

ಉದಾಹರಣೆಗೆ ಕಳೆದ ವರ್ಷದ ಯುವರಾಜನ ವರ್ಧಂತಿಯಂದು ಯದುವೀರ್, ಮಗ ಅರಮನೆಯೊಳಗೆ ತಮ್ಮ ಕೈಹಿಡಿದು ನಡೆಯುತ್ತಿರುವ, ರಾಜಮಾತೆ ಮತ್ತು ಅಜ್ಜಿ ಪ್ರಮೋದಾದೇವಿ ಒಡೆಯರ್ ಅವರ ಕೈಗಳ ಆಸರೆಯಲ್ಲಿ ಮನೆದೇವರ ಮುಂದೆ ನಿಂತಿರುವ, ಕಾವಿ ಬಟ್ಟೆ ತೊಟ್ಟ ತಮ್ಮ ಮತ್ತು ಮಹಾರಾಣಿಯ ಮಡಿಲ ಮೇಲೆ ಯುವರಾಜ ಪವಡಿಸಿರುವ, ಯುವರಾಜ ಮೆತ್ತೆಯ ಮೇಲೆ ಕೂತು ಮಂಗಳಾರತಿ ಪೂಜೆ ಮಾಡಿಸಿಕೊಳ್ಳುತ್ತಿರುವ, ಫೋಟೋಗಳನ್ನು ಹಾಕಿದ್ದರು, ಈ ಫೋಟೋಗಳಿಗೆ ಹದಿಮೂರು ಸಾವಿರಕ್ಕೂ ಹೆಚ್ಚು ಲೈಕುಗಳು ಕಾಮೆಂಟ್‌ಗಳು ಬಂದಿದ್ದವು. ಹೆಚ್ಚಿನದರಲ್ಲಿ ಯುವರಾಜನಿಗೆ ಆಯುಷ್ಯ ಆರೋಗ್ಯಗಳನ್ನು ಕೋರಿ ಶುಭ ಹಾರೈಸಲಾಗಿತ್ತು. 

ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವ ಸಂಪನ್ನ ...

ಶ್ರೀ ಕೃಷ್ಣ ಜಯಂತಿಯನ್ನು ಇತ್ತೀಚೆಗೆ ವಿಶೇಷವಾಗಿ ಅರಮನೆಯಲ್ಲಿ ಆಚರಿಸಲಾಗುತ್ತದೆ. ಈಗಂತೂ ಪುಟ್ಟ ಮುದ್ದು ಕೃಷ್ಣ ಅರಮನೆಯಲ್ಲಿ ಇರುವುದರಿಂದ ಅದಕ್ಕೆ ವಿಶೇಷ ಮಹತ್ವ. ಆದ್ಯವೀರನಿಗೆ ಶ್ರೀಕೃಷ್ಣದ ದಿರಿಸು ತೊಡಿಸಿ ನೋಡಿ ನಲಿಯುವ ಪರಿಪಾಠ ಬೆಳೆದುಬಂದಿದೆ.

ಇತ್ತೀಚೆಗೆ ಯದುವೀರರು ಹಾಕಿದ ಫೋಟೋಗಳಲ್ಲಿ ಆದ್ಯವೀರ ಕೃಷ್ಣ ಬಟ್ಟೆ ತೊಟ್ಟು ಆಸನದಲ್ಲಿ ವಿರಾಜಮಾನ ಆಗಿರುವ, ಅಜ್ಜಿಯ ಕೈಹಿಡಿದು ಕೆತ್ತನೆಯ ಕಂಬದ ಬಳಿ ನಿಂತಿರುವ, ಎತ್ತಿನ ಗಾಡಿಯ ಮೆರವಣಿಗೆಯ ಮುಂದೆ ಪ್ರಮೋದಾದೇವಿ ಸಹಿತ ಯದುವೀರ್ ಫ್ಯಾಮಿಲಿ ರಾಜಪೋಷಾಕಿನಲ್ಲಿ ಕೊಳಲು ಹಿಡಿದ ಆದ್ಯವೀರನ ಸಹಿತ ನಿಂತಿರುವ, ಆದ್ಯವೀರ ಗೋಪೂಜೆ ಮಾಡುತ್ತಿರುವ ಚಿತ್ರಗಳನ್ನು ಹಾಕಿದ್ದಾರೆ.ಕೃಷ್ಣನ ಪೋಷಾಕಿನಲ್ಲಿ ಆದ್ಯವೀರ ಮುದ್ದಾಗಿ ಕಾಣುತ್ತಾನೆ.

ಯದುವೀರ್‌ ಇನ್ನೂ ಬಾಲಕ, ತಾಯಿ ಹೇಳಿದ್ದಕ್ಕೆ ತಲೆ ಅಲ್ಲಾಡಿಸ್ತಾನೆ: ಮಾಜಿ ಮೇಯರ್ 

ಗಣೇಶನ ಚೌತಿಯಂದೂ ಹೀಗೇ ಶಾಸ್ತ್ರೋಕ್ತ ಪೂಜೆಯ ವಿಧಿವಿಧಾನಗಳಲ್ಲಿ ತೊಡಗಿರುವ ಯದುವೀರರ ಜೊತೆಗೆ ಆದ್ಯವೀರ ಕಾಣಿಸಿಕೊಳ್ಳುತ್ತಾನೆ. ಅರಮನೆಯ ಎಲ್ಲ ಕಾರ್ಯಕ್ರಮಗಳೂ ಒಂದಲ್ಲ ಒಂದು ರೀತಿಯಲ್ಲಿ ಆದ್ಯವೀರನನ್ನು ಕೇಂದ್ರೀಕರಿಸಿವೆ ಎಂದು ಹೇಳಬಹುದು. ಮಹಾರಾಣಿ ತ್ರಿಶಿಕಾ ಕುಮಾರಿ ದೇವಿ ಕೂಡ ಆದ್ಯವೀರನ ಆರೈಕೆ, ಆಟೋಟ ಪಾಠಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ಯವೀರನ ಹ್ಯಾಪಿ ಗಳಿಗೆಗಳನ್ನು ಸೋಶಿಯಲ್‌ ಸೈಟ್‌ಗಳಲ್ಲಿ ಹಂಚಿಕೊಂಡು ಖುಷಿಪಡುವುದು ಯದುವೀರರ ಹವ್ಯಾಸಗಳಲ್ಲೊಂದು.

ವಾಚ್ ಕದ್ದ ವಿದ್ಯಾರ್ಥಿ ಶಿಕ್ಷಕನಾಗಿದ್ದು ಹೇಗೆ? ಓಶೋ ಹೇಳಿದ ಕತೆ 

ಯದುವೀರರಿಗೆ ಸಾಕಷ್ಟು ಫ್ಯಾನ್‌ ಪೇಜ್‌ಗಳೂ ಇವೆ. ಅದರಲ್ಲೂ ಆದ್ಯವೀರನ ನಾನಾ ಭಂಗಿಯ ಫೋಟೋಗಳು ಕಾಣಲು ಸಿಗುತ್ತವೆ. ಇತ್ತೀಚೆಗೆ ಯದುವೀರ್‌ ತಾವು ಕಬಿನಿ ಅರಣ್ಯದಲ್ಲಿ ತಿರುಗಾಡುತ್ತಿರುವಾಗ ತೆಗೆದ ಒಂದು ಫೋಟೋವನ್ನು ಹಾಕಿಕೊಂಡಿದ್ದರು. ಅದರಲ್ಲಿ ಒಂದು ಚಿರತೆ, ದನದ ಕರುವೊಂದನ್ನು ಹಿಡಿಯುವ ದೃಶ್ಯವಿತ್ತು. ಇದಕ್ಕೆ ನಾನಾ ಬಗೆಯ ಕಮೆಂಟ್‌ಗಳು ಬಂದಿವೆ. ಯದುವೀರ್ ಫೋಟೋ ತೆಗೆಯುವ ಬದಲು ಆ ಕರುವನ್ನು ಬಿಡಿಸಬೇಕಿತ್ತು ಅಂತ ಕೆಲವರು; ಹಾಗೆ ಮಾಡಬಾರದು, ಅದು ಪ್ರಕೃತಿಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂದು ಇನ್ನು ಕೆಲವರೂ ಕಮೆಂಟ್‌ ಮಾಡಿದ್ದಾರೆ.