ಅಂಬಾನಿ ಫ್ಯಾಮಿಲಿ ಲೈಫ್‌ಸ್ಟೈಲ್‌ನಿಂದ ಕಲಿಯಬಹುದಾದ 7 ಪಾಠಗಳು

ಅಂಬಾನಿ ಕುಟುಂಬದ ಯಶಸ್ಸಿನ ಹಿಂದೆ ಅವರ ವ್ಯವಹಾರ ಕುಶಾಗ್ರಮತಿ ಮಾತ್ರವಲ್ಲ, ಆರೋಗ್ಯಕರ ಮತ್ತು ಸಮತೋಲಿತ ಜೀವನಶೈಲಿಯೂ ಇದೆ. ಆಧ್ಯಾತ್ಮಿಕತೆ, ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಒತ್ತಡ ನಿರ್ವಹಣೆ, ಸಾಕಷ್ಟು ನಿದ್ರೆ, ಕುಟುಂಬದೊಂದಿಗೆ ಸಮಯ, ಮತ್ತು ನಿರಂತರ ಕಲಿಕೆ ಅವರ ಜೀವನದ ಪ್ರಮುಖ ಅಂಶಗಳು.

What can we learn from Mukesh Ambani family lifestyle bni

ಅಂಬಾನಿಗಳ ಬ್ಯುಸಿನೆಸ್‌ ಯಶಸ್ಸು, ಅವರ ವಿಲಾಸಿ ಜೀವನ ಇವನ್ನೆಲ್ಲ ನೋಡಿ ನಮ್ಮ ಲೈಫೂ ಹೀಗೆ ಇರಬೇಕಿತ್ತು ಎಂದುಕೊಳ್ಳುವವರೇ ಜಾಸ್ತಿ. ಆದರೆ ಅವರ ಫ್ಯಾಮಿಲಿ ಲೈಫಿನಿಂದ ನಾವು ಏನಾದರೂ ಕಲಿಯಬಹುದಾ ಎಂದು ಯೋಚಿಸುವವರು ಕಡಿಮೆ. ಅವರ ವ್ಯವಹಾರದ ಕುಶಾಗ್ರಮತಿ ಮಾತ್ರವಲ್ಲ, ಆರೋಗ್ಯಕರ ಮತ್ತು ಸಮತೋಲಿತ ಜೀವನಶೈಲಿ ಕೂಡ ನಮಗೆ ಪ್ರೇರಕ. ಈ ಫ್ಯಾಮಿಲಿಯ ದಿನಚರಿಯಲ್ಲಿ ಕೂಡ ನಿರ್ದಿಷ್ಟ ಆರೋಗ್ಯ ಅಭ್ಯಾಸಗಳಿವೆ. ಅವುಗಳನ್ನು ಶಿಸ್ತುಬದ್ಧವಾಗಿ ಮಾಡಿ ಯಶಸ್ವಿಯಾಗುತ್ತಾರೆ. ನಮ್ಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಅಂಬಾನಿ ಕುಟುಂಬದಿಂದ ನಾವು ಕಲಿಯಬಹುದಾದ ಏಳು ಅಗತ್ಯ ಲೈಫ್‌ಸ್ಟೈಲ್‌ ಪಾಠಗಳು ಇಲ್ಲಿವೆ.

ನಂಬಿಕೆಯಲ್ಲಿ ಬಲವಿದೆ

ಅಂಬಾನಿ ಕುಟುಂಬದ ಆಧ್ಯಾತ್ಮಿಕತೆಯ ಮೇಲಿನ ನಂಬಿಕೆಯು ಅವರ ಜೀವನಶೈಲಿಯ ಮೂಲಾಧಾರವಾಗಿದೆ. ಈ ಭಕ್ತಿಯ ಗುಣ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ವೇಳೆ ಎಲ್ಲರಿಗೆ ತಿಳಿದುಬಂತು. ಆ ಭವ್ಯವಾದ ಈವೆಂಟ್‌ನ ಪ್ರತಿಯೊಂದು ವಿವರವೂ ಅವರ ಆಧ್ಯಾತ್ಮಿಕ ಮೌಲ್ಯಗಳನ್ನು ಪ್ರತಿಬಿಂಬಿಸಿತು.  ಪವಿತ್ರ ಆಚರಣೆಗಳಿಂದ ಹಿಡಿದು ಅಲ್ಲಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಧ್ಯಾನ ಕೋಣೆಯವರೆಗೆ. ಹಲವು ಆಧ್ಯಾತ್ಮಿಕ ಗುರುಗಳು ಬಂದು ನವದಂಪತಿಗಳನ್ನು ಆಶೀರ್ವದಿಸಿದರು. ಇದಲ್ಲದೆ ಇತ್ತೀಚೆಗೆ ಇಡೀ ಫ್ಯಾಮಿಲಿ ಹೋಗಿ ಕುಂಭಮೇಳದಲ್ಲಿ ಭಾಗವಹಿಸಿ ಗಂಗಾಸ್ನಾನ ಮಾಡಿ ಬಂದರು. 2010 ರಲ್ಲಿ ಮುಖೇಶ್ ಅಂಬಾನಿ ತಮ್ಮ ಪುತ್ರರಾದ ಆಕಾಶ್ ಮತ್ತು ಅನಂತ್ ಅವರಿಬ್ಬರಿಗೂ ಬ್ರಹ್ಮೋಪದೇಶ ಸಮಾರಂಭ ಮಾಡಿಸಿದರು. ಅದೂ ಗುಜರಾತ್‌ನ ಬಾಬಾಜಿ ಆಶ್ರಮದಲ್ಲಿ. 

ನೋ ಜಂಕ್‌ಫುಡ್‌, ಓನ್ಲೀ ಹೋಮ್‌ ಫುಡ್‌ 

ಅಂಬಾನಿಗಳ ಆರೋಗ್ಯಕರ ಜೀವನಶೈಲಿಗೆ ಬ್ಯಾಲೆನ್ಸ್‌ಡ್‌ ಆಹಾರವು ಇನ್ನೊಂದು ಕಾರಣ. ಅವರು ಜೀವಸತ್ವಗಳು, ಖನಿಜಗಳು, ಪ್ರೋಟೀನ್‌ಗಳು ಮತ್ತು ಆರೋಗ್ಯಕರ ಫ್ಯಾಟ್‌ನಂತಹ ಅಗತ್ಯ ಪೋಷಕಾಂಶಗಳು ತುಂಬಿದ ಊಟಕ್ಕೆ ಆದ್ಯತೆ ನೀಡುತ್ತಾರೆ. ಜಂಕ್ ಫುಡ್ ಅನ್ನು ತಪ್ಪಿಸುತ್ತಾರೆ. ಮನೆಯಲ್ಲಿ ತಯಾರಿಸಿದ ಊಟವನ್ನು ಆರಿಸಿಕೊಳ್ಳುತ್ತಾರೆ. ಆಹಾರದಲ್ಲಿ ಸಾಕಷ್ಟು ತಾಜಾ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ನೇರ ಪ್ರೋಟೀನ್‌ಗಳು ಸೇರಿರುತ್ತವೆ. ಇದು ಆರೋಗ್ಯವನ್ನು ಬೆಂಬಲಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದಿನವಿಡೀ ನಿರಂತರ ಎನರ್ಜಿ ಮಟ್ಟವನ್ನು ಕಾಪಾಡುತ್ತದೆ. ಮುಖೇಶ್ ಅಂಬಾನಿ ಕಟ್ಟುನಿಟ್ಟಾಗಿ ಪೌಷ್ಟಿಕಾಂಶವುಳ್ಳ ಗುಜರಾತಿ ಶೈಲಿಯ ಆಹಾರ ಸೇವಿಸುತ್ತಾರೆ.

ಫಿಟ್‌ನೆಸ್‌ಗೆ ಫಿದಾ 

ಅಂಬಾನಿಗಳು ನಿಯಮಿತ ವ್ಯಾಯಾಮ ಮಾಡುತ್ತಾರೆ ಎಂದು ಮೂಲಗಳು ಬಹಿರಂಗಪಡಿಸಿವೆ. ಉದಾಹರಣೆಗೆ, ನೀತಾ ಅಂಬಾನಿ ಯಾವತ್ತೂ ಫಿಟ್‌ನೆಸ್‌ ವ್ಯಾಯಾಮ ಬಿಡುವುದೇ ಇಲ್ಲ. ನಿಯಮಿತವಾಗಿ ಯೋಗ, ಈಜು ಮತ್ತು ನೃತ್ಯ ಅಭ್ಯಾಸ ಮಾಡುತ್ತಾರೆ. ಮುಕೇಶ್ ಅಂಬಾನಿ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಡೈಲಿ ವ್ಯಾಯಾಮಗಳಿಗೆ ಸಮಯವನ್ನು ಕಂಡುಕೊಳ್ಳುತ್ತಾರೆ. ಈ ಬದ್ಧತೆಯು ಅವರಿಗೆ ಫಿಟ್ ಆಗಿರಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಆನಂದಿಸುವ ವ್ಯಾಯಾಮದ ದಿನಚರಿಯನ್ನು ಕಾಪಾಡಿಕೊಳ್ಳುವುದು ಮುಖ್ಯ.
 
ಒತ್ತಡ ನಿರ್ವಹಣೆಯ ಕಲೆ

ಅಂಬಾನಿಗಳು ತಮ್ಮ ದಿನಚರಿಯಲ್ಲಿ ಒತ್ತಡ ನಿರ್ವಹಣೆಗೆ ವಿವಿಧ ತಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ. ಮಾನಸಿಕ ಶಾಂತಿ ಮತ್ತು ಸಮತೋಲನವನ್ನು ಕಾಪಾಡಿಕೊಳ್ಳಲು ನೀತಾ ಅಂಬಾನಿ ನಿಯಮಿತವಾಗಿ ಧ್ಯಾನ ಮಾಡುತ್ತಾರೆ. ಇಂಥ ಅಭ್ಯಾಸಗಳು ಆತಂಕವನ್ನು ಕಡಿಮೆ ಮಾಡಲು, ಏಕಾಗ್ರತೆಯನ್ನು ಹೆಚ್ಚಿಸಲು ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ. ಆರೋಗ್ಯಕರ ಜೀವನಶೈಲಿಗಾಗಿ ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಬಹಳ ಮುಖ್ಯ. ನಮ್ಮ ದಿನಚರಿಯಲ್ಲಿ ಧ್ಯಾನವನ್ನು ಸೇರಿಸುವುದು ನಿಜವಾಗಿಯೂ ಸಹಾಯಕ.

ನಿದ್ರೆಗೆಡುವ ಪ್ರಶ್ನೆಯೇ ಇಲ್ಲ

ಗುಣಮಟ್ಟದ ನಿದ್ರೆ ಮಾಡಲು ಅಂಬಾನಿಗಳು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ದೈಹಿಕ ಆರೋಗ್ಯ, ಮಾನಸಿಕ ಸ್ಪಷ್ಟತೆ ಮತ್ತು ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳಲು ನಿದ್ರೆಯು ನಿರ್ಣಾಯಕ ಎಂದು ಅವರು ಭಾವಿಸುತ್ತಾರೆ. ನಿಯಮಿತವಾದ ಸ್ಲೀಪಿಂಗ್‌ ಹ್ಯಾಬಿಟ್‌ಗೆ ಅಂಟಿಕೊಳ್ಳುವ ಮೂಲಕ ಮತ್ತು ವಿಶ್ರಾಂತಿ ವಾತಾವರಣ ಕಾಪಾಡಿಕೊಂಡು, ದಿನದ ಕೊನೆಯಲ್ಲಿ ಅಗತ್ಯವಾದ ವಿಶ್ರಾಂತಿ ಪಡೆಯುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ವ್ಯಾಪಾರ ಪ್ರಪಂಚದ ಟ್ವೆಂಟಿಫೋರ್‌ ಸೆವೆನ್‌ ಎಚ್ಚರವಾಗಿರಬೇಕಾದ ಅಗತ್ಯದ ಹೊರತಾಗಿಯೂ ಅಂಬಾನಿಗಳು ನಿದ್ರೆಯ ವೇಳಾಪಟ್ಟಿ ಕಾಪಾಡಕೊಳ್ಳುತ್ತಾರೆ. 
 
ಫ್ಯಾಮಿಲಿ, ಫ್ರೆಂಡ್ಸ್‌ಗೆ ಹೆಚ್ಚು ಆದ್ಯತೆ

ನಾವು ಈಗಾಗಲೇ ನೋಡಿದ ಹಾಗೆ ಫ್ಯಾಮಿಲಿ ಮತ್ತು ಫ್ರೆಂಡ್ಸ್‌ ಜೊತೆಗೆ ಸದಾ ಇರುತ್ತಾರೆ. ಅಂಬಾನಿಗಳು ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯಲು ಆದ್ಯತೆ ನೀಡುತ್ತಾರೆ. ಸಾಮಾಜಿಕ ಸಂಪರ್ಕಗಳನ್ನು ಪೋಷಿಸುವುದು ಅವರ ಜೀವನಶೈಲಿಯ ಭಾಗ. ಆಗಾಗ ಕುಟುಂಬದ ಆಚರಣೆಗಳು ಮತ್ತು ರಜಾದಿನಗಳಲ್ಲಿ ಭಾಗವಹಿಸುತ್ತಾರೆ. ಇದು ಅವರ ಸಂಬಂಧಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ. ಅಂಬಾನಿಗಳು ಬಹುತೇಕ ಎಲ್ಲಾ ಹಬ್ಬಗಳು ಮತ್ತು ವಿಶೇಷ ಸಂದರ್ಭಗಳನ್ನು ವಿಸ್ತೃತ ಕುಟುಂಬವಾಗಿ ಒಟ್ಟಿಗೆ ಆಚರಿಸುತ್ತಾರೆ. ಇದು ಫ್ಯಾಮಿಲಿ ನಿಕಟ ಸಂಬಂಧ, ಸಂತೋಷವನ್ನು ಹೆಚ್ಚಿಸುತ್ತವೆ.

ಅದಿತಿ ಸೌಂದರ್ಯದ ಗುಟ್ಟು ಮನೆಯಲ್ಲೇ ಮಾಡುವ ಫೇಸ್​ ಪ್ಯಾಕ್​, ಬಾಡಿ ಮಸಾಜ್​! ನಟಿ ತಿಳಿಸಿರೋ ಟಿಪ್ಸ್​ ಕೇಳಿ
 

ಲೈಫ್‌ಲಾಂಗ್‌ ಕಲಿಕೆ 

ಅಂಬಾನಿ ಕುಟುಂಬ ಯಾವಾಗಲೂ ಇತ್ತೀಚಿನ ಟ್ರೆಂಡ್‌ಗಳಿಗೆ ಹತ್ತಿರವಾಗಿರುತ್ತದೆ. ಸದಾ ಹೊಸಹೊಸ ವಿಷಯಗಳ ಕಲಿಕೆ ತಪ್ಪಿಸುವುದಿಲ್ಲ. ಅನಂತ್ ಅಂಬಾನಿ ವಂತರಾ ಅನಿಮಲ್ ಮೃಗಾಲಯ ರೂಪಿಸಿದರು. ಭಾರತದ ಅತಿದೊಡ್ಡ ಶೋ ಮತ್ತು ಸಮಾವೇಶ ಸೌಲಭ್ಯ ಹೀಗೆ ತಮ್ಮ ಬೆಳವಣಿಗೆಯನ್ನು ಹೆಚ್ಚಿಸಲು ಹೊಸ ಹೊಸ ಉಪಕ್ರಮ ಪ್ರಾರಂಭಿಸುತ್ತಾರೆ.  ಈ ವರ್ಷದ ರಿಲಯನ್ಸ್ ಫ್ಯಾಮಿಲಿ ಡೇ ಆಚರಣೆಯಲ್ಲಿ ಮುಕೇಶ್ ಅಂಬಾನಿ ಉದ್ಯೋಗಿಗಳಿಗೆ ಹಿಂದಿನ ತಪ್ಪುಗಳ ಬಗ್ಗೆ ಚಿಂತಿಸುವ ಬದಲು ಭವಿಷ್ಯದ ತಪ್ಪುಗಳನ್ನು ತಡೆಯುವತ್ತ ಗಮನ ಹರಿಸುವಂತೆ ಸಲಹೆ ನೀಡಿದರು.

ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯಲು ನಟಿ ಜಯಾ ಬಚ್ಚನ್ ಸೀಕ್ರೆಟ್‌ ಹೇರ್ ಆಯಿಲ್
 

Latest Videos
Follow Us:
Download App:
  • android
  • ios