ಬರೀ ಸಾಂಗತ್ಯಕ್ಕೆ ಮಾತ್ರವಲ್ಲ, ಹುಡುಗ್ರು ಮದ್ವೆಯಾಗೋಕೆ ಬೇರೆ ಬೇರೆ ಕಾರಣಗಳಿವೆಯಂತೆ!
ಈಗಿನ ದಿನಗಳಲ್ಲಿ ಸಂಗಾತಿ ಸಿಕ್ಕಿ ಮದುವೆಯಾಗೋದೆ ಕಷ್ಟ ಎನ್ನುವ ಸ್ಥಿತಿ ಇದೆ. ಸಿಕ್ಕು ಮದುವೆಯಾದ್ರೂ ಅದು ಬಾಳಿಕೆ ಬರೋದು ಕಷ್ಟ. ಹಾಗಿರುವಾಗ ಈ ಹುಡುಗ್ರ ಮದುವೆ ಉದ್ದೇಶ ಅಚ್ಚರಿ ತರಿಸುತ್ತೆ.
ಮದುವೆ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ಅಭಿಪ್ರಾಯವಿದೆ. ಕೆಲವರು ಮದುವೆಯೆಂದರೆ ಅದು ಜೀವನಪೂರ್ತಿ ಇರುವ ಒಂದು ಬಾಂಧವ್ಯ ಎಂದು ತಿಳಿಯುತ್ತಾರೆ. ಮತ್ತೆ ಕೆಲವರು ಅದನ್ನು ಜವಾಬ್ದಾರಿ ಅಥವಾ ಕರ್ತವ್ಯ ಎಂದು ಭಾವಿಸುತ್ತಾರೆ. ಇನ್ನು ಕೆಲವು ಮಂದಿಗೆ ಮದುವೆಯೆಂದರೆ ಅದೊಂದು ಬಂಧನ, ಮದುವೆಯಾದರೆ ಸ್ವಾತಂತ್ರ್ಯವೇ ಇರುವುದಿಲ್ಲ ಎಂಬ ಭಾವನೆ ಕೂಡ ಇದೆ.
ಗಂಡು ಮಕ್ಕಳು ಹೆಚ್ಚು ಸ್ವಾತಂತ್ರ್ಯವನ್ನು (Freedom) ಬಯಸುತ್ತಾರೆ. ತಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವ ಯಾವ ಕೆಲಸವನ್ನು ಮಾಡಲೂ ಅವರು ಇಷ್ಟಪಡೊಲ್ಲ. ಮದುವೆ (Marriage) ಯು ಕೂಡ ಅವರಿಗೆ ಒಂದು ಬಂಧನವೇ. ಆದರೂ ಕೆಲವರು ಮನೆಯವರ ಮತ್ತು ಸಂಬಂಧಿಕರ ಒತ್ತಾಯಕ್ಕೋ ಅಥವಾ ಇನ್ಯಾವುದೋ ಕಟ್ಟುಪಾಡುಗಳಿಗೆ ಒಳಗಾಗಿ ಮದುವೆಯಾಗಲು ಒಪ್ಪಿಕೊಳ್ಳುತ್ತಾರೆ. ಇಂದಿನ ದಿನಗಳಲ್ಲಿ ಹುಡುಗನೇ ಆಗಲೀ ಹುಡುಗಿಯೇ ಆಗಲಿ ಮದುವೆಯಾಗುವ ಮೊದಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ ಮತ್ತು ಸಾಕಷ್ಟು ವಿಚಾರ ಮಾಡ್ತಾರೆ. ತಮಗೆ ಸರಿ ಹೊಂದದ ಸಂಗಾತಿಯನ್ನು ಕೈ ಹಿಡಿಯಲು ಮುಂದಾಗದ ಅನೇಕರು, ಅವಿವಾಹಿತ (Unmarried) ರಾಗೇ ಇರಲು ಇಷ್ಟಪಡುತ್ತಾರೆ.
Relationship Tips: ಸಂಬಂಧಕ್ಕೂ ಬ್ರೇಕ್ ಬೇಕಾಗುತ್ತೆ, ಭವಿಷ್ಯ ನಿರ್ಧಾರ ಮಾಡೋಕೆ ಈಸಿ ಆಗುತ್ತೆ!
ಹಾಗಂತ ಎಲ್ಲ ಗಂಡುಮಕ್ಕಳೂ ಮದುವೆಯ ಬಗ್ಗೆ ನಕಾರಾತ್ಮಕ ಭಾವನೆ ಹೊಂದಿರುತ್ತಾರೆ ಎಂದೇನಿಲ್ಲ. ಮೊದಮೊದಲು ಮದುವೆಯ ಕಮಿಂಟ್ ಮೆಂಟ್ ಗೆ ಒಳಗಾಗಲು ಇಷ್ಟಪಡದೇ ಇರುವವರು ಕೂಡ ನಂತರ ಯಾವುದೋ ಕಾರಣದಿಂದ ಮದುವೆಯಾಗಲು ಒಪ್ಪುತ್ತಾರೆ. ಮದುವೆಯಾಗಲು ಅವರನ್ನು ಮೋಟಿವೇಟ್ ಮಾಡುವ ಕೆಲವು ಕಾರಣಗಳು ಇಲ್ಲಿವೆ.
ಪ್ರೀತಿ (Love) ಮತ್ತು ಒಳ್ಳೆಯ ಸಂಗಾತಿಗಾಗಿ ಮದುವೆ : ಪುರುಷರು ಜೀವನದುದ್ದಕ್ಕೂ ತಮ್ಮನ್ನು ಪ್ರೀತಿಸುವವರು ಮತ್ತು ಕೊನೆಯವರೆಗೂ ಜೊತೆಗೆ ಇರುವ ಒಬ್ಬ ಒಳ್ಳೆಯ ಸಂಗಾತಿ ಬೇಕೆಂಬ ಕಾರಣಕ್ಕೆ ಮದುವೆಯಾಗುತ್ತಾರೆ. ಒಂಟಿತನದ ಭಯದಿಂದಲೂ ಕೂಡ ಪುರುಷರು ಮದುವೆಗೆ ಒಪ್ಪುತ್ತಾರೆ. ಮದುವೆ ಗಂಡು, ಹೆಣ್ಣು ಇಬ್ಬರಿಗೂ ಒಟ್ಟಿಗೆ ಬಾಳುವ ಬದ್ಧತೆಯನ್ನು ಕಲಿಸುತ್ತದೆ. ಒಂಟಿತನವನ್ನು ದೂರ ಮಾಡಿ, ಜೀವನದಲ್ಲಿ ಬರುವ ಕಷ್ಟಸುಖಗಳನ್ನು ಹಂಚಿಕೊಳ್ಳಲು ಒಂದೊಳ್ಳೆ ಸಂಗಾತಿಯನ್ನು ನೀಡುತ್ತದೆ.
Sex-Life Tips: ಸೆಕ್ಸ್ ವೇಳೆ ಬೆಡ್ ರೂಮ್ ಲೈಟ್ ವಿಚಾರ ಕೂಡ ದಾಂಪತ್ಯ ಹಾಳ್ಮಾಡ್ಬಹುದು!
ಇನ್ನೊಬ್ಬರ ಸಂತೋಷಕ್ಕಾಗಿ ಮದುವೆ : ಕೆಲವೊಮ್ಮೆ ಪುರುಷರು ಮನೆ ಮತ್ತು ಸಮಾಜದವರ ಒತ್ತಾಯಕ್ಕೆ ಮಣಿದು ಮದುವೆಯ ಬಂಧನಕ್ಕೆ ಒಳಗಾಗುತ್ತಾರೆ. ಇನ್ನು ಕೆಲವರು ಲವ್ ಫೇಲ್ಯುಯರ್ ಅಥವಾ ಪ್ರೇಮಿಯ ಮದುವೆಯ ಸುದ್ದಿ ತಿಳಿದು ತಾವು ಕೂಡ ಮದುವೆಗೆ ಒಪ್ಪುತ್ತಾರೆ. ಹೀಗೆ ಇನ್ನೊಬ್ಬರ ಒತ್ತಾಯಕ್ಕೆ ಮದುವೆಯಾಗುವ ಕೆಲವು ಗಂಡಸರು ತಮ್ಮ ವಿವಾಹ ಜೀವನದಲ್ಲಿ ಸಂತೋಷವಾಗಿರುವುದಿಲ್ಲ.
ಒಂದು ಕುಟುಂಬ (Family) ಕಟ್ಟಿಕೊಳ್ಳುವ ಆಸೆ : ಮಹಿಳೆಯರು ಸಿಂಗಲ್ ಪೇರೆಂಟ್ (Single Parent) ಆಗಿ ಜೀವನ ನಡೆಸಲು ಸಮರ್ಥರಾಗಿರುತ್ತಾರೆ. ಆದರೆ ಪುರುಷರಿಗೆ ಅದು ಕಷ್ಟ. ಗಂಡಸರಿಗೆ ತಮ್ಮ ಕುಟುಂಬವನ್ನು ಕಟ್ಟಿಕೊಳ್ಳಲು, ಮಕ್ಕಳ ಲಾಲನೆ ಪಾಲನೆ ಮಾಡಲು ಹೆಂಡತಿಯ ಅಗತ್ಯ ಇದ್ದೇ ಇರುತ್ತೆ. ಕುಟುಂಬ, ಮಕ್ಕಳನ್ನು ಇಷ್ಟಪಡುವ ಗಂಡಸರು ಸಂತೋಷದಿಂದಲೇ ಮದುವೆಗೆ ಒಪ್ಪುತ್ತಾರೆ.
ಹಣವನ್ನು ಉಳಿತಾಯಕ್ಕೆ (Savings) ಮದುವೆ : ಇದು ನಿಮಗೆ ವಿಚಿತ್ರ ಎನ್ನಿಸಬಹುದು. ಒಂದು ಅಧ್ಯಯನದ ಪ್ರಕಾರ, ಮದುವೆಯಾದ ಗಂಡಸರು ಅವಿವಾಹಿತ ಗಂಡಸರಿಗಿಂತ ಹೆಚ್ಚು ದುಡಿಯುತ್ತಾರೆ ಮತ್ತು ಹೆಚ್ಚು ಹಣ ಉಳಿತಾಯ ಮಾಡುತ್ತಾರೆ. ಮದುವೆಯಾದ ಗಂಡಸರ ಆದಾಯ ಪ್ರತಿಶತ 10ರಿಂದ 24 ರಷ್ಟು ಹೆಚ್ಚುತ್ತದೆ ಎಂದು ಅಧ್ಯಯನ ಹೇಳುತ್ತೆ. ಇದರ ಹೊರತಾಗಿ ಮದುವೆಯಾದ ನಂತರ ಅನೇಕ ಫೆಡರಲ್ ಬೆನಿಫಿಟ್ ಗಳು ಸಿಗುತ್ತವೆ ಎಂದು ಕೂಡ ಅನೇಕರು ವಿಚಾರಮಾಡುತ್ತಾರೆ.
ಕೆಲವರು ಸ್ಟೇಟಸ್ ಮೆಂಟೇನ್ ಮಾಡಲೆಂದೇ ಮದುವೆಯಾಗ್ತಾರೆ : ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಇಮೋಶನ್ (Innovation) ಕಡಿಮೆ ಇರುತ್ತದೆ. ಅವರು ತಮ್ಮ ಪವರ್, ಸ್ಟೇಟಸ್ (Status) ಮತ್ತು ಶ್ರೀಮಂತಿಕೆಗೇ ಹೆಚ್ಚು ಬೆಲೆ ಕೊಡುತ್ತಾರೆ. ಅಂತಹ ಮೆಂಟಾಲಿಟಿ ಹೊಂದಿರುವವರು ಮದುವೆಯನ್ನು ಕೂಡ ತಮ್ಮ ಲೈಫ್ ಸ್ಟೈಯಿಲ್ ಅಥವಾ ಸ್ಟೇಟಸ್ ಅನ್ನು ತೋರಿಸುವುದಕ್ಕಾಗಿಯೇ ಬಳಸಿಕೊಳ್ಳುತ್ತಾರೆ. ಅವರಲ್ಲಿ ಮದುವೆ ಅಥವಾ ಸಂಗಾತಿಯ ಬಗ್ಗೆ ಯಾವುದೇ ಇಮೋಶನ್ಸ್ ಇರುವುದಿಲ್ಲ.