Relationship Tips: ಸಂಬಂಧಕ್ಕೂ ಬ್ರೇಕ್ ಬೇಕಾಗುತ್ತೆ, ಭವಿಷ್ಯ ನಿರ್ಧಾರ ಮಾಡೋಕೆ ಈಸಿ ಆಗುತ್ತೆ!
ಕೆಲವೊಮ್ಮೆ ಸಂಬಂಧದಿಂದಲೂ ಬ್ರೇಕ್ ಬೇಕಾಗುತ್ತದೆ. ಬ್ರೇಕಪ್ ಅಲ್ಲ, ಬರೀ ಬ್ರೇಕ್ ಅಷ್ಟೆ. ಈ ಬ್ರೇಕ್ ಭವಿಷ್ಯದ ನಿರ್ಧಾರಕ್ಕೆ ಅನುಕೂಲವಾಗುತ್ತದೆ. ನಿಮ್ಮ ಸಂಬಂಧದಲ್ಲಿ ಹಿತವಿಲ್ಲದಿರುವಾಗ, ನಿಮ್ಮ ನಡುವೆ ಹೇಳಲು ಸಾಧ್ಯವಾಗದ ಅಸಹನೀಯ ಭಾವನೆಗಳಿರುವಾಗ ಬ್ರೇಕ್ ತೆಗೆದುಕೊಳ್ಳುವುದು ಉತ್ತಮ. ಅದರಿಂದ ನಿಮಗೆ ನಿಮ್ಮ ಭವಿಷ್ಯ ಸ್ಪಷ್ಟವಾಗುತ್ತದೆ.
ನಾವು ಎಲ್ಲದರಿಂದಲೂ ಬ್ರೇಕ್ ತೆಗೆದುಕೊಳ್ಳುತ್ತೇವೆ. ಕೆಲಸದಿಂದ ಬ್ರೇಕ್ ಪಡೆಯುತ್ತೇವೆ, ಒಂದೇ ತೆರನಾದ ಜೀವನದಲ್ಲಿ ಬ್ರೇಕ್ ಬೇಕು ಎನ್ನುತ್ತೇವೆ. ಆದರೆ, ಯಾವತ್ತಾದರೂ ಸಂಬಂಧದಲ್ಲಿ ಬ್ರೇಕ್ ತೆಗೆದುಕೊಂಡಿದ್ದೀವಾ? ಸಂಬಂಧದಲ್ಲಿ ಬ್ರೇಕ್ ಪಡೆಯುವುದು ಸಹ ಕೆಲವೊಮ್ಮೆ ಅಗತ್ಯ. ಬ್ರೇಕ್ ಎಂದರೆ, ಸಂಬಂಧದಿಂದ ಶಾಶ್ವತವಾಗಿ ದೂರವಾಗುವುದು ಎಂದಲ್ಲ. ಸಂಬಂಧದಲ್ಲಿ ಸ್ವಲ್ಪ ಸಮಯ ಬ್ರೇಕ್ ಪಡೆದುಕೊಳ್ಳುವುದರಿಂದ ಶಾಶ್ವತವಾಗಿ ದೂರವಾಗುವ ಅಗತ್ಯದ ಬಗ್ಗೆ ಪರಿಶೀಲನೆ ನಡೆಸಲು ಸಾಧ್ಯವಾಗುತ್ತದೆ. ಸಂಬಂಧ ಉಸಿರು ಕಟ್ಟಿದಂತಾದರೂ ಅದರಿಂದ ದೂರವಾಗದೇ ಮೀನಮೇಷ ಎಣಿಸುತ್ತಿರುವವರು ಬ್ರೇಕ್ ತೆಗೆದುಕೊಂಡರೆ ತಮ್ಮ ಸ್ಥಿತಿಗತಿಯನ್ನು ಅರಿತುಕೊಳ್ಳಲು ಸುಲಭವಾಗುತ್ತದೆ. ನೀವೇ ಒಮ್ಮೆ ಯೋಚನೆ ಮಾಡಿ, ನಿಮ್ಮ ಸಂಗಾತಿ ನಿಮ್ಮಿಂದ ತಿಂಗಳುಗಟ್ಟಲೆ ಯಾವುದೋ ಕಾರಣದಿಂದ ದೂರವಿದ್ದರೂ ನೀವು ಅವರನ್ನು ಮಿಸ್ ಮಾಡಿಕೊಳ್ಳದೇ ಇರುತ್ತೀರಾ? ಮಿಸ್ ಮಾಡಿಕೊಳ್ಳುತ್ತಿಲ್ಲ ಎಂದಾದರೆ ನಿಮ್ಮ ಸಂಬಂಧ ಎಷ್ಟು ಹದಗೆಟ್ಟಿದೆ ಎಂದು ಅರಿಯಬಹುದು. ಹೀಗಾಗಿ, ಇಂತಹ ಸಮಯದಲ್ಲಿ ಬ್ರೇಕ್ ಪಡೆದುಕೊಳ್ಳುವುದರಿಂದ ಶಾಶ್ವತವಾಗಿ ದೂರವಾಗುವ ಬಗ್ಗೆ ಚಿಂತನೆ ನಡೆಸಲು ಅನುಕೂಲವಾಗುತ್ತದೆ.
• ಅವರ ಹಾಜರಿ ಇಲ್ಲವಾದ್ರೆ (Absence) ನಿಮಗೆ ಹಿತವೆನಿಸುತ್ತಾ?
ಕೆಲವು ಸಮಯಗಳಲ್ಲಿ ಸಂಗಾತಿ (Partner) ಇಲ್ಲವೆಂದಾದರೆ ನಿಮಗೆ ಹಿತವೆನಿಸುತ್ತದೆಯೇ? ಇದೂ ಸಹ ಸಂಗಾತಿಯಿಂದ ಬ್ರೇಕ್ (Break) ಪಡೆದುಕೊಳ್ಳುವ ಸಮಯ ಎಂದು ಅರ್ಥೈಸಿಕೊಳ್ಳಬಹುದು. ನಿಮ್ಮ ಸ್ನೇಹಿತರ (Friends) ಜತೆ ಇರುವಾಗ, ಕುಟುಂಬಸ್ಥರ (Family) ನಡುವೆ ಇರುವ ಸಮಯದಲ್ಲಿ ಅವರಿರಿರಬಾರದು ಎನಿಸುತ್ತದೆಯೇ? ನಿಮ್ಮ ಖುಷಿಯ ಕ್ಷಣದಲ್ಲಿ ಅವರಿರಬಾರದು ಎನಿಸುತ್ತದೆ ಎಂದಾದರೆ ಆ ಸಂಬಂಧವಾದರೂ ಯಾಕಿರಬೇಕು? ಇದಕ್ಕೆ ಉತ್ತರ ಪಡೆದುಕೊಳ್ಳಲು ಬ್ರೇಕ್ ಬೇಕು.
Sex-Life Tips: ಸೆಕ್ಸ್ ವೇಳೆ ಬೆಡ್ ರೂಮ್ ಲೈಟ್ ವಿಚಾರ ಕೂಡ ದಾಂಪತ್ಯ ಹಾಳ್ಮಾಡ್ಬಹುದು!
• ಚಿಕ್ಕಪುಟ್ಟ ಸಂಗತಿಗಾಗಿ ನೆನಪಿಸಿಕೊಳ್ತೀರಾ?
ದಿನಸಿ ಕೊಳ್ಳಲು ಅಂಗಡಿಗೆ ಹೋಗಿದ್ದೀರಿ ಎಂದುಕೊಳ್ಳಿ. ಆಗ ಸಂಗಾತಿಗೆ (Partner) ಇಷ್ಟ (Like) ಎಂದು ಯಾವುದನ್ನಾದರೂ ಖರೀದಿ ಮಾಡುತ್ತೀರಾ? ಅವರ ಆರೋಗ್ಯಕ್ಕೆ ಪೂರಕ ಎಂದು ಏನನ್ನಾದರೂ ಕೊಂಡುಕೊಳ್ಳುತ್ತೀರಾ? ಒಂದೊಮ್ಮೆ, ಸಂಗಾತಿ ಇಲ್ಲದ ಸಮಯದಲ್ಲಿ ಅವರು ನೆನಪಿಸಿಕೊಂಡು ಮಿಸ್ (Miss) ಮಾಡಿಕೊಳ್ತೀರಾ? ಅವರು ಹತ್ತಿರವಿರುವಾಗ ನೆಮ್ಮದಿಯಿಂದಿದ್ದು, ದೂರವಿದ್ದಾಗ ಅವರನ್ನು ಮಿಸ್ ಮಾಡಿಕೊಳ್ಳುವುದು ಸಂಬಂಧದಲ್ಲಿ (Relation) ಅತಿ ಸಾಮಾನ್ಯ. ಅದೇ ಇಲ್ಲವಾದರೆ ಏನರ್ಥ?
• ಜತೆಗಿದ್ದಾಗ ಬರೀ ಜಗಳ (Fight)
ನೀವಿಬ್ಬರು ಜತೆಗಿದ್ದೀರಿ ಎಂದಾದರೆ ಬರಿ ಜಗಳದಲ್ಲೇ ಸಮಯ ಕಳೆಯುತ್ತದೆಯಾ? ಹಾಗಿದ್ದರೆ ನಿಮಗೆ ಬ್ರೇಕ್ ಅಗತ್ಯ. ಪರಸ್ಪರ ದೂಷಣೆ (Blame), ಕೆಟ್ಟ ಶಬ್ದಗಳ ಬಳಕೆ ಮಾಡುವುದು ಅನೇಕರ ಸ್ವಭಾವ. ಎಲ್ಲರೂ ಫೈಟ್ ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಅದು ಪದೇ ಪದೆ ಆಗುತ್ತಿದ್ದರೆ, ಮನಸ್ಥಿತಿಯನ್ನು (Mental) ಹಾಳುಮಾಡುತ್ತಿದ್ದರೆ ಅದರ ಬಗ್ಗೆ ಗಮನ ಹರಿಸುವುದು ಅಗತ್ಯ. ಅಲ್ಲದೇ, ಅದಾದ ಬಳಿಕ ಇಬ್ಬರೂ ಪರಸ್ಪರ ಕ್ಷಮೆ ಯಾಚಿಸುತ್ತೀರಾ? ಕ್ಷಮಿಸುತ್ತೀರಾ? ನಿಮ್ಮ ಸಂಬಂಧದ ಆಳ ಎಷ್ಟಿದೆ ಎನ್ನುವುದು ಇದರಲ್ಲಿ ತಿಳಿಯುತ್ತದೆ.
ಒಂದು ಹುಡುಗ - ಹುಡುಗಿ ಒಳ್ಳೆ ಗೆಳೆಯರಾಗಿರಲು ಸಾಧ್ಯವೇ ಇಲ್ವಾ?
ಬ್ರೇಕ್ ಅಂದ್ರೆ ಹೇಗೆ?
ಸಂಬಂಧದಲ್ಲಿರುವ ಸಮಸ್ಯೆಗಳನ್ನು ನಿವಾರಣೆ ಮಾಡಲೋಸುಗ ಅಥವಾ ಸಮಸ್ಯೆ ಯಾವುದು ಎನ್ನುವುದನ್ನು ಗುರುತಿಸಲಾದರೂ ಕೆಲವೊಮ್ಮೆ ಬ್ರೇಕ್ ಅನಿವಾರ್ಯ. ಬ್ರೇಕ್ ಅಂದರೆ ಬ್ರೇಕಪ್ (Breakup) ಅಲ್ಲ ಎನ್ನುವುದು ನೆನಪಿನಲ್ಲಿರಲಿ. ಸಂಬಂಧವನ್ನು ಮತ್ತೆ ಪುನಃ ಚೆನ್ನಾಗಿ ದೃಢವಾಗಿ ಬೆಸೆಯಲೂ ಸಹ ಇದು ಕಾರಣವಾಗುವ ಸಾಧ್ಯತೆ ಹೆಚ್ಚು. ಜತೆಗ, ನಿಮ್ಮನ್ನು, ಸಂಗಾತಿಯನ್ನು, ಸಂಬಂಧವನ್ನು ಹೆಚ್ಚು ಅರಿತುಕೊಳ್ಳಲು ನೆರವಾಗುತ್ತದೆ. ಇಲ್ಲೂ ಕೆಲವೊಂದು ನಿಯಮಗಳಿವೆ.
• ಸಮಯದ ಮಿತಿ (Time Limit) ಇರಲಿ. ತಜ್ಞರ ಪ್ರಕಾರ, ಸಂಬಂಧದಲ್ಲಿ ಬ್ರೇಕ್ ಪಡೆದುಕೊಳ್ಳಲು ಒಂದು ವಾರದಿಂದ ಒಂದು ತಿಂಗಳವರೆಗೆ ಸಮಯ ಸಾಕು. ಈ ಅವಧಿಯಲ್ಲಿ ನಿಮಗೆ ಏನೆಲ್ಲ ಅರಿವಿಗೆ ಬರುತ್ತದೆಯೋ ಅದೇ ಅಂತಿಮವಾಗಬಹುದು. ಈ ಸಮಯದಲ್ಲಿ ಯಾವಾಗ ಸಂಪರ್ಕದಲ್ಲಿರಬೇಕು, ಭೇಟಿಯಾಗಬೇಕೇ ಬೇಡವೇ ಇತ್ಯಾದಿ ನಿರ್ಧರಿಸಿಕೊಳ್ಳಬಹುದು. ಈ ಅವಧಿಯಲ್ಲಿ ನಿಮಗೆ ಬೇರೊಬ್ಬರೊಂದಿಗೆ ಆಕರ್ಷಣೆ ಹುಟ್ಟಿತಾ, ಸಂಗಾತಿ ಈ ಸಮಯದಲ್ಲಿ ಹೇಗಿದ್ದಾರೆ ಎಂದು ಚೆಕ್ ಮಾಡಿಕೊಳ್ಳಬೇಕು.