ಸಂಗಾತಿ ಬಗ್ಗೆ ವಿಪರೀತ ಡೌಟ್‌, ಇಂಥಾ ಭಾವನೆ ಹೋಗಲಾಡಿಸೋದು ಹೇಗೆ ?

ಪ್ರೀತಿ (Love)ಯಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಅನುಮಾನಿಸುವ ಅಭ್ಯಾಸ (Habit) ವೊಂದನ್ನು ಬಿಟ್ಟು. ಸುಂದರ ಸಂಬಂಧದಲ್ಲಿ ಅನುಮಾನ ಕಾಣಿಸಿಕೊಂಡರೆ ಅಲ್ಲಿಗೆ ಎಲ್ಲವೂ ಮುಗಿಯಿತು. ಹಾಗಿದ್ರೆ ಇಂಥಾ ಅನುಮಾನ (Doubt) ಕಾಡದಿರಲು ಏನು ಮಾಡ್ಬೋದು ?

Tips To Stop Doubting Your Partner In Your Relationship Vin

ಯಾವುದೇ ಸಂಬಂಧವಾದರೂ ಚೆನ್ನಾಗಿರಬೇಕಾದರೆ ಅಲ್ಲಿ ಪ್ರೀತಿಯ ಜೊತೆಗೆ ನಂಬಿಕೆ, ಕಾಳಜಿ, ವಿಶ್ವಾಸವೂ ಇರಬೇಕಾದುದು ಅತೀ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಸಂಬಂಧಗಳಲ್ಲಿ ಪ್ರೀತಿಗಿಂತ ಅನುಮಾನವೇ ಹೆಚ್ಚಾಗಿರುತ್ತದೆ. ಸಂಬಂಧದಲ್ಲಿನ ಅನುಮಾನವು ದೊಡ್ಡ ಸಮಸ್ಯೆಯಾಗಿದೆ. ಅಪನಂಬಿಕೆ ಕಾಳ್ಗಿಚ್ಚಿನಂತೆ ಹರಡಬಹುದು. ಅನುಮಾನವು ಅತ್ಯಂತ ಶಕ್ತಿಯುತವಾದ ಭಾವನೆಯಾಗಿದೆ. ಮತ್ತು ನಿಮ್ಮ ಸಂಗಾತಿಯನ್ನು ಅನುಮಾನಿಸುವುದು ವಾದಗಳು, ಅಪನಂಬಿಕೆ ಮತ್ತು ಅಸಮಾಧಾನಕ್ಕೆ ಕಾರಣವಾಗಬಹುದು. ಅನುಮಾನ, ಸಂಬಂಧದಲ್ಲಿ ಇಬ್ಬರಿಗೂ ಉದ್ವಿಗ್ನತೆಯನ್ನು ಉಂಟುಮಾಡಬಹುದು. ದೀರ್ಘಕಾಲದ ಅನುಮಾನವು ಇಬ್ಬರು ಪರಸ್ಪ ಬೇರೆ ಬೇರೆಯಾಗಲು ಸಹ ಕಾರಣವಾಗಬಹುದು.  ಆದ್ದರಿಂದ, ನಿಮ್ಮ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು, ನಿಮ್ಮ ಸಂಗಾತಿಯನ್ನು ಅನುಮಾನಿಸುವುದನ್ನು ಮೊದಲು ಬಿಟ್ಟು ಬಿಡಬೇಕು. 

ಸಂಗಾತಿಯನ್ನು ಅನುಮಾನಿಸುವುದನ್ನು ನಿಲ್ಲಿಸಲು ಮತ್ತು ವಿಶ್ವಾಸವನ್ನು ಹೆಚ್ಚಿಸಲು ಕೆಲವು ಉತ್ತಮ ಮಾರ್ಗಗಳನ್ನು ಮುಂಬೈನ ಮೀರಾ ರೋಡ್‌ನ ವೊಕಾರ್ಡ್ ಹಾಸ್ಪಿಟಲ್ಸ್‌ನ ಮನೋವೈದ್ಯರಾದ ಡಾ.ಸೋನಲ್ ಆನಂದ್ ಹಂಚಿಕೊಂಡಿದ್ದಾರೆ.

ಹುಡುಗಿಯರಿಗೆ ಹೆಚ್ಚು ಹೈಟ್ ಇರೋ ಹುಡುಗರು ಇಷ್ಟವಾಗೋದು ಯಾಕೆ ?

ಅನುಮಾನ ಉಂಟು ಮಾಡುವ ಕಾರಣವನ್ನು ವಿಶ್ಲೇಷಿಸಿ: ಸಂಗಾತಿ (Partner)ಯನ್ನು ಅನುಮಾನಿಸುವುದನ್ನುDoubt) ನಿಲ್ಲಿಸಲು ಇದು ಬಹಳ ಮುಖ್ಯವಾದ ಹೆಜ್ಜೆಯಾಗಿದೆ. ನಿಮ್ಮ ಸಂಗಾತಿಯನ್ನು ಪ್ರಶ್ನಿಸುವ ಮೊದಲು, ನಿಮ್ಮ ಸ್ವಂತ ಭಯವೇ ನಿಮಗೆ ಅನುಮಾನಾಸ್ಪದ ಆಲೋಚನೆಗಳನ್ನು ಉಂಟುಮಾಡುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಿ ಕೆಲವೊಮ್ಮೆ, ಹಿಂದಿನ ಅನುಭವಗಳು ಭವಿಷ್ಯದ ಸಂಬಂಧಗಳ (Relationship) ಬಗ್ಗೆ ಅನುಮಾನಕ್ಕೆ ಕಾರಣವಾಗಬಹುದು. ಹೀಗಾಗಿ ನಿಮ್ಮ ವಿಚಾರದಲ್ಲಿಯು ಇಂಥಾ ವಿಚಾರಗಳನ್ನು ಗಮನಿಸಿಕೊಳ್ಳಿ. ಸಂಬಂಧದಲ್ಲಿ ನಿಮ್ಮ ಆಲೋಚನೆಗಳನ್ನು ಬಗ್ಗೆ ಸ್ಪಷ್ಟವಾಗಿರಲು ಸಮಯಾವಕಾಶ ತೆಗೆದುಕೊಳ್ಳಿ.

ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಿ: ಆತ್ಮವಿಶ್ವಾಸ ಇಲ್ಲದಿರುವುದು ಸಂಬಂಧದಲ್ಲಿ ಅಭದ್ರತೆಗಳಂತಹ ಸಮಸ್ಯೆಗಳನ್ನು ಉಂಟುಮಾಡಬಹುದು, ನಿಮ್ಮ ಸಂಗಾತಿಯನ್ನು ಪೂರ್ಣ ಹೃದಯದಿಂದ ನಂಬದಿರುವುದು ಮತ್ತು ಅವನನ್ನು ಅಥವಾ ಅವಳನ್ನು ಅನುಮಾನಿಸುವುದು ಇದೇ ಕಾರಣದಿಂದ ಆಗಿರಬಹುದು. ಹೀಗಾಗಿ ಮೊದಲಿಗೆ ನಿಮ್ಮ ಆತ್ಮವಿಶ್ವಾಸದ ಮಟ್ಟವನ್ನು ಪರಿಶೀಲಿಸಿ. ನಿಮಗೆ ಆತ್ಮವಿಶ್ವಾಸ ಕಡಿಮೆಯಾಗಿದ್ದರೆ, ನಿಮ್ಮೊಂದಿಗೆ ಮಾತನಾಡುವ ವ್ಯಕ್ತಿಯಲ್ಲಿಯೂ ನೀವು ಅನುಮಾನಗಳನ್ನೇ ಕಾಣುತ್ತೀರಿ. ಹೀಗಾಗಿ ಸ್ವ ಆತ್ಮವಿಶ್ವಾಶವನ್ನು ಹೆಚ್ಚಿಸಿಕೊಳ್ಳಿ

ಸಂಬಂಧದ ವಾಸ್ತವವನ್ನು ಒಪ್ಪಿಕೊಳ್ಳಿ: ಯಾವುದೇ ಸಂಬಂಧವು 100 ಪ್ರತಿಶತ ಪರಿಪೂರ್ಣವಾಗುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳಿ. ಎಲ್ಲಾ ಸಂಬಂಧಗಳು ಅಸ್ಪಷ್ಟತೆ ಮತ್ತು ನಿಗೂಢತೆಯ ಕೆಲವು ಅಂಶಗಳನ್ನು ಹೊಂದಿವೆ. ದೋಷರಹಿತ ಸಂಗಾತಿಯನ್ನು ಹುಡುಕಲು ಯಾವುದೇ ಮಾರ್ಗವಿಲ್ಲ. ತಪ್ಪು ತಿಳುವಳಿಕೆ ಸಾಮಾನ್ಯವಾಗಿದೆ. ಕೆಲವೊಮ್ಮೆ ನೀವು ಒಬ್ಬರನ್ನೊಬ್ಬರು ಲಘುವಾಗಿ ಪರಿಗಣಿಸಲು ಪ್ರಾರಂಭಿಸುತ್ತೀರಿ ಮತ್ತು ವಿಭಿನ್ನ ದಿಕ್ಕಿನಲ್ಲಿ ಚಲಿಸುತ್ತೀರಿ, ನಿಮ್ಮ ಸಂಗಾತಿ ನಿಮ್ಮನ್ನು ಅನುಸರಿಸುತ್ತಾರೆ ಎಂದು ನಿರೀಕ್ಷಿಸಬಹುದು, ಆದರೆ ಪಾಲುದಾರರು ವಿಭಿನ್ನ ದೃಷ್ಟಿಕೋನವನ್ನು ಹೊಂದಿರಬಹುದು. ಹೀಗಾಗಿ ತಪ್ಪುಗಳನ್ನು ಸರಿಪಡಿಸುತ್ತಾ ವಾಸ್ತವವನ್ನು ಒಪ್ಪಿಕೊಂಡು ಮುಂದೆ ಸಾಗಿ.

30ವರ್ಷ ವಯಸ್ಸಿನ ಬಳಿಕ ಗೆಳೆಯರನ್ನು ಕಳೆದುಕೊಳ್ಳಲು ಕಾರಣವೇನು?

ಸಂಗಾತಿಯೊಂದಿಗೆ ಸಂವಹನ ನಡೆಸಿ: ಸಂಬಂಧದಲ್ಲಿನ ಪ್ರತಿಯೊಂದು ಸಮಸ್ಯೆಗೆ ಪರಿಹಾರವೆಂದರೆ ನಿಮ್ಮ ಕಾಳಜಿ ಮತ್ತು ಭಯವನ್ನು ನಿಮ್ಮ ಸಂಗಾತಿಯೊಂದಿಗೆ ಮಾತನಾಡುವುದು. ಮಾತನಾಡದೇ ಹಾಗಿರಬಹುದು, ಹೀಗಿರಬಹುದು ಎಂದು ಅಂದುಕೊಳ್ಳುವುದರಿಂದಲೇ ಅರ್ಧಕರ್ಧ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಹೀಗಾಗಿ ಮುಕ್ತವಾಗಿ ನಿಮ್ಮ ಭಾವನೆಗಳ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ. ನಿಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಿ.

ನಕಾರಾತ್ಮಕ ಆಲೋಚನೆಗಳಿಂದ ನಿಮ್ಮನ್ನು ದೂರವಿಡಿ: ನಿಮ್ಮ ಆಲೋಚನೆಗಳನ್ನು ಮಾಡ್ಯುಲೇಟ್ ಮಾಡಲು ಕಲಿಯಿರಿ ಇದರಿಂದ ನಕಾರಾತ್ಮಕ ಆಲೋಚನೆಗಳನ್ನು ಧನಾತ್ಮಕವಾಗಿ ಬದಲಾಯಿಸಬಹುದು. ಏನಾದರೂ ತಪ್ಪಾಗಿರುವ ಅವಕಾಶವಿದ್ದರೆ, ವಿಷಯಗಳು ಸರಿಯಾಗಿರಲು ಸಮಾನ ಅವಕಾಶವಿದೆ. ಆತಂಕವನ್ನು ಕಡಿಮೆ ಮಾಡಲು ಯೋಗ ಮತ್ತು ಧ್ಯಾನದ ಸಹಾಯವನ್ನು ಪಡೆಯಬಹುದು.

Latest Videos
Follow Us:
Download App:
  • android
  • ios