'ಐಐಟಿ ಬಾಂಬೆ ವರ, ಐಐಟಿ ಡೆಲ್ಲಿ ವಧು..' ಮದುವೆ ಕಾರ್ಡ್ ವೈರಲ್, 'ಸ್ಯಾಲರಿ' ಕೂಡ ಪ್ರಿಂಟ್ ಮಾಡ್ಸಿ ಎಂದ ನೆಟ್ಟಿಗರು!
ಮದುವೆ ಕಾರ್ಡ್‌ನಲ್ಲಿ ಎಂಬಿಬಿಎಸ್, ಎಎಲ್‌ಬಿ ಅಂತಾ ಹಾಕೋದನ್ನು ನೋಡಿದ್ದೇವೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಮದುವೆ ಕಾರ್ಡ್‌ನಲ್ಲಿ ಹುಡುಗ ತಾನು ಐಐಟಿ ಬಾಂಬೆಯಲ್ಲಿ ಕಲಿತಿದ್ದು ಎಂದು ಪ್ರಿಂಟ್ ಮಾಡಿಸಿದ್ದರೆ, ಮದುವೆಯಾಗುವ ಹುಡುಗಿ ಐಐಟಿ ಡೆಲ್ಲಿಯಲ್ಲಿ ಕಲಿತಿದ್ದಾಗಿ ಪ್ರಿಂಟ್ ಮಾಡಿಸಿಕೊಂಡಿದ್ದಾರೆ.
ನವದೆಹಲಿ (ಸೆ.14): ಮದುವೆ ಬಗ್ಗೆ ಈಗನ ಹುಡುಗ ಹುಡುಗಿಯರು ಬಹಳ ಯೋಚನೆ ಮಾಡ್ತಾರೆ. ಮದುವೆಗೂ ಮುನ್ನ ಎಷ್ಟು ಕ್ರಿಯೇಟಿವ್ ಆಗಿ ಫೋಟೋಶೂಟ್ ಮಾಡಿಸ್ಬೇಕು ಅನ್ನೋದರಿಂದ ಹಿಡಿದು, ಮದುವೆಯಾದ ಬಳಿಕ ಉಳಿಯುವ ಮನೆಯಲ್ಲಿ ಯಾವ ಕಲರ್ ಬಣ್ಣ ಇರಬೇಕೆಂದು ಕೂಡ ಮೊದಲೇ ನಿರ್ಧಾರ ಮಾಡುತ್ತಾರೆ. ಇನ್ನು ಇದರ ನಡುವೆ ಬರುವ ಹಲವು ವಿಚಾರಗಳಲ್ಲಿ ಪ್ರಮುಖವಾಗಿರುವುದು ಮದುವೆ ಆಮಂತ್ರಣ ಪತ್ರಿಕೆ. ಅದರ ವಿನ್ಯಾಸ ಹೇಗಿರಬೇಕು, ಯಾವ ಬಣ್ಣದಲ್ಲಿ ಪ್ರಿಂಟ್ ಮಾಡಬೇಕು ಅನ್ನೋದರೊಂದಿಗೆ ಯಾರೆಲ್ಲರ ಹೆಸರು ಪ್ರಿಂಟ್ ಮಾಡಬೇಕು ಅನ್ನೋದನ್ನೂ ಕೂಡ ನಿರ್ಧಾರ ಮಾಡುತ್ತಾರೆ. ಕೆಲವರು ಮದುವೆಯ ಆಮಂತ್ರಣ ಪತ್ರದೊಂದಿಗೆ ಗಿಫ್ಟ್‌ಗಳನ್ನು ಕಳುಹಿಸಿಕೊಡುವ ಅಭ್ಯಾಸ ಮಾಡಿಕೊಂಡಿದ್ದರೆ, ಇನ್ನೂ ಕೆಲವರು ಪರಿಸರ ಸ್ನೇಹಿ ವೆಡ್ಡಿಂಗ್ ಕಾರ್ಡ್ ಹಾಗೂ ಗಿಫ್ಟ್‌ಅನ್ನು ನೀಡುತ್ತಾರೆ. ಸಾಮಾನ್ಯವಾಗಿ ಮದುವೆ ಪತ್ರಿಕೆಯಲ್ಲಿ ವಧು ಹಾಗೂ ವರ ಏನು ಓದಿದ್ದಾರೆ ಅನ್ನೋದನ್ನು ಪ್ರಿಂಟ್ ಮಾಡುವುದನ್ನು ಕಂಡಿದ್ದೇವೆ. ಎಂಬಿಬಿಎಸ್, ಎಲ್‌ಎಲ್‌ಬಿ ಹೀಗೆ ಪ್ರಿಂಟ್ ಮಾಡಿಸಿರುತ್ತಾರೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಮಂತ್ರಣ ಪತ್ರಿಕೆಯಲ್ಲಿ ವಧು ಹಾಗೂ ವರ ತಾವು ಯಾವ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದೇವೆ ಅನ್ನೋದನ್ನೂ ಪ್ರಿಂಟ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವರನ ಹೆಸರಿನ ಪಕ್ಕದಲ್ಲಿ ಐಐಟಿ ಬಾಂಬೆ ಎನ್ನುವ ಶಬ್ದ ಪ್ರಿಂಟ್ ಆಗಿದ್ದರೆ, ವಧುವಿನ ಹೆಸರಿನ ಪಕ್ಕದಲ್ಲಿ ಐಐಟಿ ದೆಹಲಿ ಎಂದು ಪ್ರಿಂಟ್ ಆಗಿದೆ. ಅದರ ಅರ್ಥ ವರ ಐಐಟಿ ಬಾಂಬೆಯಲ್ಲಿ ಕಲಿತಿದ್ದು ಎಂದು ಬರೆದುಕೊಂಡಿದ್ದರೆ ವಧು ಐಐಟಿ ಡೆಲ್ಲಿಯಲ್ಲಿ ಕಲಿತಿದ್ದು ಎಂದು ತಿಳಿಸಲಾಗಿದೆ. ಆಮಂತ್ರಣದಲ್ಲಿ, "... ಮಮತಾ ಮಿಶ್ರಾ (ಐಐಟಿ ದೆಹಲಿ) ಅವರೊಂದಿಗೆ ಪಿಯೂಷ್ ಬಾಜ್‌ಪೇಯ್ (ಐಐಟಿ ಬಾಂಬೆ) ಅವರ ಮಂಗಳಕರ ವಿವಾಹ ಸಮಾರಂಭಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇನೆ." ಎಂದು ಬರೆಯಲಾಗಿದೆ.
ವೆಡ್ಡಿಂಗ್ ಕಾರ್ಡ್ ವೈರಲ್: ಈ ಆಮಂತ್ರಣ ಪತ್ರಿಕೆಯನ್ನು ಅನಾಮಿಕ ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಮದುವೆಯಾಗಲು ಕೊನೆಯದಾಗಿ ಬೇಕಾಗಿರುವುದು ಪ್ರೀತಿ ಮಾತ್ರ ಎಂದು ಬರೆದಿದ್ದಾರೆ. ಟ್ವೀಟ್ ವೈರಲ್ ಆಗಿದ್ದು, 62,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅದರೊಂದಿಗೆ ಕೆಲವರು ಭಿನ್ನ ಭಿನ್ನ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಮಗನಿಗೆ ರಜನಿಕಾಂತ್-ಧ್ರುವ ಸರ್ಜಾ ಡೈಲಾಗ್ ಹೇಳಿಕೊಟ್ಟ ಮೇಘನಾ ರಾಜ್; ತಮಿಳು ಬೇಡ ಕನ್ನಡ ಕಲಿಸಿ ಎಂದ ನೆಟ್ಟಿಗರು!
ಇಲ್ಲಿ ಪ್ರಮುಖವಾದ ವಿಷಯವನ್ನೇ ಅವರು ಮಿಸ್ ಮಾಡಿದ್ದಕ್ಕೆ ಬೇಸರವಾಗಿದೆ. ತಮ್ಮ ಸ್ಯಾಲರಿ ಎಷ್ಟು, ಲಿಂಕ್ಡಿನ್ ಪ್ರೊಫೈಲ್ ಮಾಹಿತಿಯನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಿಲ್ಲ ಎಂದು ಒಬ್ಬರು ಲೇವಡಿ ಮಾಡಿದ್ದರೆ, ಮತ್ತೊಬ್ಬರು ಪರೀಕ್ಷೆಯಲ್ಲಿ ತಾವು ತೆಗೆದುಕೊಂಡ ಶ್ರೇಯಾಂಕವನ್ನು ಪ್ರಿಂಟ್ ಮಾಡಲು ಮರೆತುಹೋದಂತೆ ಕಾಣುತ್ತಿದೆ ಎಂದು ಕಾಲೆಳೆದಿದ್ದಾರೆ.
ಸೋನುಗೌಡನಿಂದ ಪ್ರೇರಿತರಾದ ಸ್ಕೂಲ್ ಗರ್ಲ್ಸ್: ಬೆನ್ನು ಹುಡಿ ಹಾರಿಸಿದ ಅಮ್ಮ: ವೈರಲ್ ವೀಡಿಯೋ
ಇನ್ನೊಬ್ಬರು, “ನಾನು ಈ ಮದುವೆಯಲ್ಲಿದ್ದೆ. ಕಾಜು ಕಟ್ಲಿ, ಮದುವೆಯ ಕೇಕ್ ಮತ್ತು ಚಾಟ್‌ನಲ್ಲಿಯೂ ಇದನ್ನು ಉಲ್ಲೇಖಿಸಲಾಗಿದೆ. ಅತಿಥಿಗಳು ಶಗುನ್ ಕಾ ಲಿಫಾಫಾದಲ್ಲಿ ಅದನ್ನು ನಮೂದಿಸಲು ಸೂಚಿಸಲಾಗಿದೆ' ಎಂದು ಬರೆದಿದ್ದಾರೆ. ಇನ್ನೊಬ್ಬರು “ಇದು ಅಸಂಬದ್ಧ! ಅವರು ತಮ್ಮ ಜಿಪಿಎಯನ್ನು ಏಕೆ ಉಲ್ಲೇಖಿಸಿಲ್ಲ??" ಎಂದು ಕಾಲೆಳೆದಿದ್ದಾರೆ.