Asianet Suvarna News Asianet Suvarna News

ಮಗನಿಗೆ ರಜನಿಕಾಂತ್-ಧ್ರುವ ಸರ್ಜಾ ಡೈಲಾಗ್ ಹೇಳಿಕೊಟ್ಟ ಮೇಘನಾ ರಾಜ್; ತಮಿಳು ಬೇಡ ಕನ್ನಡ ಕಲಿಸಿ ಎಂದ ನೆಟ್ಟಿಗರು!

ಶಾಲೆಗೆ ಕಾಲಿಟ್ಟಿರುವ ರಾಯನ್ ರಾಜ್ ಸರ್ಜಾ. ತುಂಟಾಟಗಳನ್ನು ಹೇಳಿಕೊಂಡು ನಗುತ್ತಿರುವ ಮೇಘನಾ ರಾಜ್....

Raayan raj sarja says Rajinikanth and Dhruva Sarja dailogue says Meghana Raj in Tatsama Tadbhava interview vcs
Author
First Published Sep 14, 2023, 4:25 PM IST

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ತತ್ಸಮ ತದ್ಭವ ಚಿತ್ರದ ಮೂಲಕ ಸೆಪ್ಟೆಂಬರ್ 15ರಂದು ಬಿಗ್ ಕಮ್ ಬ್ಯಾಕ್ ನೀಡಲಿದ್ದಾರೆ. ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ಮಲಯಾಳಂನಲ್ಲೂ ಗುರುತಿಸಿಕೊಂಡಿರುವ ಮೇಘನಾ ಕಮ್‌ಬ್ಯಾಕ್ ಚಿತ್ರದ ಪ್ರೀಮಿಯರ್ ಶೋನಲ್ಲಿ ಭಾವುಕರಾಗಿದ್ದರು. ಸಿನಿಮಾ ಚಿರು ಕನಸು ಯಶಸ್ಸು ಸಿಗಬೇಕು ಎಂದು ಸಾಕಷ್ಟು ಪ್ರಚಾರ ಮಾಡಿದ್ದಾರೆ. ಹೀಗೆ ತಮಿಳು ಯುಟ್ಯೂನ್ ಚಾನೆಲ್ ಸಂದರ್ಶನದಲ್ಲಿ ಪುತ್ರ ರಾಯನ್ ಬಗ್ಗೆನೂ ಮೇಘನಾ ಮಾತನಾಡಿದ್ದಾರೆ.

'ರಾಯನ್ ಬಹಳ ನಾಟಿ ಹುಡುಗ ಈಗಷ್ಟೇ ಅವನು ಶಾಲೆಗೆ ಹೋಗಲು ಆರಂಭಿಸಿದ್ದಾನೆ. ಈಗಾಗಲೆ ಶಾಲೆಯಿಂದ ಕಂಪ್ಲೇಂಟ್ ಬರುತ್ತಿದೆ. ಬಹಳ ನಾಟಿ ಹುಡುಗ ಒಂದು ಕಡೆ ಕೂರುವುದಿಲ್ಲ. ರೈಮ್ಸ್ ಹೇಳಿಕೊಂಡು ಓಡಾಡುತ್ತಿರುತ್ತಾನೆ' ಎಂದು ಮೇಘನಾ ರಾಜ್ ಮಾತನಾಡಿದ್ದಾರೆ.

ಚಿರು ಮೀರಿಸುತ್ತಾನೆ ರಾಯನ್ ರಾಜ್ ಸರ್ಜಾ; ಮೇಘನಾ ಪುತ್ರನ ಲೇಟೆಸ್ಟ್‌ ಫೋಟೋಗಳು

ಮೊದಲ ಸಿನಿಮಾ ಡೈಲಾಗ್:

ರಾಯನ್ ಚೆನ್ನಾಗಿ ಓದ ಬೇಕು ದೊಡ್ಡವನಾದ ಮೇಲೆ ವೃತ್ತಿ ಜೀವನ ಆಯ್ಕೆ ಮಾಡಿಕೊಳ್ಳಿ ಎಂದು ಈ ಹಿಂದೆ ಮೇಘನಾ ಹೇಳಿದ್ದರು. 'ಈಗ ರಾಯನ್ ಡೈಲಾಗ್ಸ್‌ ಹೇಳಲು ಆರಂಭಿಸಿದ್ದಾನೆ. ಇದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಗೊತ್ತಿಲ್ಲ. ರಾಯನ್‌ಗೆ ಮೊದಲು ಹೇಳಿಕೊಟ್ಟಿದ್ದು ರಜನಿಕಾಂತ್ ಸರ್ ಡೈಲಾಗ್ ಆಮೇಲೆ ಧ್ರುವ ಸರ್ಜಾ ಮಾರ್ಟಿನ್ ಡೈಲಾಗ್ ಹೇಳುತ್ತಾನೆ. ಚಿರು ರಜನಿಕಾಂತ್ ಸರ್ ಅವರ ದೊಡ್ಡ ಅಭಿಮಾನಿ ಅಗಿದ್ದರು. ಮನೆಯಲ್ಲಿ ರಜನಿಕಾಂತ್ ಸರ್ ಪೋಸ್ಟರ್ ಅಂಟಿಸಿಕೊಂಡಿದ್ದರು' ಎಂದು ಮೇಘನಾ ರಾಜ್ ಹೇಳಿದ್ದಾರೆ.

ಊಟ ಮಾಡ್ಸೋದೇ ದೊಡ್ಡ ಕಷ್ಟ: ತುಂಟ ರಾಯನ್ ಜೊತೆ ಮೇಘನಾ ರಾಜ್ ರೆಡಿ ಆಗೋದು ಹೀಗೆ

'ರಜನಿಕಾಂತ್ ಸರ್ ಅವರ ಎನ್ ವಳೀ ತನೀ ವಳಿ' ಡೈಲಾಗ್ ಹೇಳುತ್ತಾನೆ ಮತ್ತೊಂದು ಹೋ ಇಟ್ಸ್‌ ಮಾರ್ಟಿನ್ ಡೈಲಾಗ್ ಹೇಳುತ್ತಾನೆ. ರಜನಿಕಾಂತ್ ಡೈಲಾಗ್ ಮೊದಲು ರಾಯನ್ ಹೇಳಿದ್ದು' ಎಂದಿದ್ದಾರೆ ಮೇಘನಾ.  

Follow Us:
Download App:
  • android
  • ios