ತಂದೆಯ ಅಂತ್ಯಕ್ರಿಯೆಯ ಜೊತೆ ಜೊತೆಗೇ ಮಗನ ಮದುವೆ!

ಮದುವೆ ಅನ್ನೋದು ಶುಭಕಾರ್ಯ. ಹೀಗಾಗಿಯೇ ಆ ದಿನ ಸ್ಪೆಷಲ್ ಆಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಹೀಗಾಗಿಯೇ ಮದುವೆಗೆ ಸ್ಪೆಷಲ್‌ ದಿನ, ಮುಹೂರ್ತ ನೋಡುತ್ತಾರೆ. ಆದ್ರೆ ಇಲ್ಲೊಬ್ಬ ಮಾತ್ರ ತಂದೆಯ ಅಂತ್ಯಕ್ರಿಯೆ ದಿನಾನೇ ಮದ್ವೆಯಾಗಿದ್ದಾನೆ. ಅದ್ಯಾಕೆ?

Wedding at funeral, Son fulfils fathers last wish in Kallakurichi Vin

ಮದುವೆ ಅನ್ನೋದು ಜೀವನದಲ್ಲಿ ಸ್ಪೆಷಲ್ ಡೇ. ಶುಭ ಮುಹೂರ್ತದಲ್ಲಿ ಹುಡುಗ-ಹುಡುಗಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕಷ್ಟನೋ ಸುಖನೋ ಜೀವನದುದ್ದಕ್ಕೂ ಜೊತೆಯಾಗಿ ಸಾಗೋ ನಿರ್ಧಾರ ಮಾಡುತ್ತಾರೆ. ಮನೆ ಮಂದಿ, ಸಂಬಂಧಿಕರು, ಸ್ನೇಹಿತರು ಇವರನ್ನು ಹಾರೈಸುತ್ತಾರೆ. ಮದ್ವೆಗೆ ಸೂಕ್ತವೆನಿಸುವ ಮುಹೂರ್ತ ನೋಡಿ, ಶುಭ ಘಳಿಗೆಯನ್ನು ತಿಳಿದು ತಾಳಿ ಕಟ್ಟಲಾಗುತ್ತದೆ. ಮದುವೆಯ ಬಗ್ಗೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸಿರುತ್ತದೆ. ಮದುವೆ ಇಷ್ಟು ದೊಡ್ಡ ಹಾಲ್‌ನಲ್ಲಿ ಮಾಡಬೇಕು, ಮನೆಯಲ್ಲೇ ಅದ್ಧೂರಿಯಾಗಿ ಮಂಟಪ ಸಿದ್ಧಪಡಿಸಿ, ಡೆಕೊರೇಷನ್ ಮಾಡಿ ಮಾಡ್ಕೊಳ್‌ಬೇಕು ಅಂದ್ಕೊಳ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಇದೆಲ್ಲಕ್ಕಿಂತ ವಿಭಿನ್ನವಾಗಿ ಅಂತ್ಯಕ್ರಿಯೆಯಲ್ಲೇ ಮದ್ವೆ ಮಾಡಿಕೊಂಡಿದ್ದಾನೆ.

ಹೌದು, ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ಚೆನ್ನೈನ ಕಲ್ಲಕುರಿಚಿಯಲ್ಲಿ ವ್ಯಕ್ತಿಯೊಬ್ಬ ತನ್ನ ತಂದೆಯ  ಕೊನೆಯ ಆಸೆಯಂತೆ (Fathers last wish) ಅವರ ಅಂತ್ಯಕ್ರಿಯೆಯಲ್ಲೇ ದಾಂಪತ್ಯ ಜೀವನಕ್ಕೆ (Married life) ಕಾಲಿಟ್ಟಿದ್ದಾನೆ. ತಂದೆಯ ಮೃತದೇಹದ ಮುಂದೆಯೇ ಪ್ರಿಯತಮೆಯನ್ನು ವಿವಾಹವಾಗುವ ಮೂಲಕ ತಂದೆಯ ಕೊನೆಯ ಆಸೆಯನ್ನುಈಡೇರಿಸಿದ್ದಾನೆ. ಸೋಮವಾರ ಮಧ್ಯಾಹ್ನ ಕಲ್ಲಕುರಿಚಿ ಬಳಿ ಘಟನೆ ನಡೆದಿದ್ದು, ಅದೇ ದಿನ ಸಂಜೆ ತಂದೆಯ ಅಂತಿಮ ವಿಧಿವಿಧಾನಗಳು ನಡೆದವು.

ಸಂಪ್ರದಾಯ ಉಳಿಸಲು ಎತ್ತಿನ ಗಾಡಿ ಏರಿ ಬಂದ ವಧು, ನವಜೋಡಿಯ ಕಾರ್ಯಕ್ಕೆ ಭೇಷ್ ಎಂದ ನೆಟ್ಟಿಗರು

ತಂದೆಯ ಕೊನೆಯಾಸೆಯನ್ನು ಈಡೇರಿಸಿದ ಮಗ
ಸಾಮಾಜಿಕ ಕಾರ್ಯಕರ್ತ ಹಾಗೂ ಡಿಎಂಕೆಯ ಸಕ್ರಿಯ ಸದಸ್ಯರಾಗಿರುವ ಪೆರುವಂಗೂರಿನ ವಿ ರಾಜೇಂದ್ರನ್ (65) ಕಳೆದೆರಡು ವರ್ಷಗಳಿಂದ ವಿವಿಧ ಆರೋಗ್ಯ ಸಮಸ್ಯೆಗಳಿಂದ (Health problem) ಬಳಲುತ್ತಿದ್ದರು. ತಿಂಗಳ ಹಿಂದೆ ಬಾತ್ ರೂಂನಲ್ಲಿ ಕಾಲು ಜಾರಿ ಬಿದ್ದು ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು. ಆದರೆ ಮಗನ ಮದುವೆ (Marriage) ನೋಡಬೇಕೆಂದು ಅವರ ಕೊನೆಯ ಆಸೆಯಾಗಿತ್ತು. ಅದರಂತೆ ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಆರ್.ಪ್ರವೀಣ್ (29) ವಿವಾಹವಾದರು. ಪ್ರವೀಣ್ ಅವರ ವಿವಾಹವನ್ನು ಅವರ ಕುಟುಂಬವು ಮಾರ್ಚ್ 27 ರಂದು ಕಲ್ಲಕುರಿಚಿಯಲ್ಲಿ ಪ್ರವೀಣ್‌ ಸಹೋದ್ಯೋಗಿ (Collegues), ಚೆನ್ನೈನ ಮೆಡವಕ್ಕಂನ ಎಸ್ ಸೌರ್ನಮಾಲಿಯಾ (23) ರೊಂದಿಗೆ ಏರ್ಪಡಿಸಿತ್ತು. ದುರದೃಷ್ಟವಶಾತ್ ಪ್ರವೀಣ್ ತಂದೆ ರಾಜೇಂದ್ರನ್‌, ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಅದೇ ರಾತ್ರಿ ನಿಧನರಾದರು (Death).

ಆದರೆ, ಪ್ರವೀಣ್ ತನ್ನ ತಂದೆಯ ಕೊನೆಯ ಆಸೆಯನ್ನು ಪೂರೈಸಲು ನಿರ್ಧರಿಸಿದರು ಮತ್ತು ಅವರ ಅಂತಿಮ ವಿಧಿವಿಧಾನಗಳ ಮೊದಲು ಮದುವೆಯನ್ನು ಆಯೋಜಿಸಿದರು ಎಂದು ದಿವಂಗತ ರಾಜೇಂದ್ರನ್ ಅವರ ಹತ್ತಿರದ ಸಂಬಂಧಿ ಮತ್ತು ಪೆರುವಂಗೂರಿನ ಸ್ಥಳೀಯ ಪಿಪಿಎಸ್ ಎಳಯರಾಜ ಹೇಳಿದರು. ರಾಜೇಂದ್ರನ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಸೌರ್ನಮಾಲಿಯಾ ಮತ್ತು ಅವರ ಕುಟುಂಬದೊಂದಿಗೆ ಪ್ರವೀಣ್ ಮಾತನಾಡಿದರು. ಅವರ ಒಪ್ಪಿಗೆ ಪಡೆದ ನಂತರ, ಪ್ರವೀಣ್ ಇದನ್ನು ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದು, ತಕ್ಷಣವೇ ಮದುವೆಯ ವ್ಯವಸ್ಥೆ ಮಾಡಲಾಗಿದೆ.

ಕುಬ್ಜ ವಿವಾಹ, ಮೂರಡಿ ಬಾಡಿಬಿಲ್ಡರ್‌ಗೆ ಒಲಿದ 4 ಅಡಿಯ ಹುಡುಗಿ!

ಮಗನಾಗಿ ಇದು ನನ್ನ ಕರ್ತವ್ಯ ಎಂದ ಪ್ರವೀಣ್‌
ರಾಜೇಂದ್ರನ್ ಅವರ ಆಶಯದಂತೆ ಬೌದ್ಧ ವಿಧಾನದ ಪ್ರಕಾರ ಆಚರಣೆಗಳನ್ನು ಅನುಸರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನಂತರ ರಾಜೇಂದ್ರನ್ ಅವರ ಪಾರ್ಥಿವ ಶರೀರವನ್ನು ಸ್ಮಶಾನಕ್ಕೆ ಕೊಂಡೊಯ್ದ ಅಂತಿಮ ಮೆರವಣಿಗೆ ಮಾಡಲಾಯಿತು. ಅಂತ್ಯಕ್ರಿಯೆಯಲ್ಲಿ ಮದುವೆ ಮಾಡಿರುವ ವಿಚಾರವಾಗಿ ಮಾತನಾಡಿದ ಪ್ರವೀಣ್, 'ಕೆಲವು ಗ್ರಾಮಸ್ಥರು ಮತ್ತು ಸಂಬಂಧಿಕರ ಹೇಳಿಕೆಗಳಿಗೆ ನಾನು ಹೆದರುವುದಿಲ್ಲ, ಏಕೆಂದರೆ ಇದು ಮಗನಾಗಿ ನನ್ನ ಕರ್ತವ್ಯ' ಎಂದು ಹೇಳಿದರು. 

ತಂಗಿಯನ್ನೇ ಮದ್ವೆಯಾಗಿ ಸಂಸಾರ ನಡೆಸಿದ್ದ, ಆರು ವರ್ಷದ ನಂತ್ರ ಗೊತ್ತಾಯ್ತು ಬೆಚ್ಚಿಬೀಳಿಸೋ ಸತ್ಯ!

Latest Videos
Follow Us:
Download App:
  • android
  • ios