ನೀರಿನಾಳಕ್ಕೆ ಬಂದ ಡೈವರ್‌ನ ತಬ್ಬಿ ಮುದ್ದಾಡಿದ ನೀರು ನಾಯಿ: ವೈರಲ್ ವೀಡಿಯೋ

 ಸಮುದ್ರದಾಳಕ್ಕೆ ಡೈವ್ ಹೋದ ಡೈವರ್ ಓರ್ವನನ್ನು ವಿಶೇಷ ಅತಿಥಿಯೊಂದು ಬಹಳ ಕುತೂಹಲದಿಂದ ಭೇಟಿಯಾಗಿ ಸ್ವಾಗತಿಸಿದೆ.

Water dog seal hugs and cuddles diver in  under water watch viral video akb

ಸಮುದ್ರದಾಳದಲ್ಲಿ ಹಲವರು ಜಲಚರಗಳು ಜೀವನ ಕಂಡು ಕೊಂಡಿವೆ. ಶಾರ್ಕ್‌, ನೀರು ಹಾವು, ಆಕ್ಟೋಪಸ್‌ನಂತಹ ಅಪಾಯಕಾರಿ ಜಲಚರಗಳ ಜೊತೆ ಸಮುದ್ರದದ ಒಡಲಿನಲ್ಲಿ ಮೀನು, ನೀರು ನಾಯಿ ಮುಂತಾದ ಸೌಮ್ಯ ಸ್ವಭಾವದ ಪ್ರಾಣಿಗಳು ಇವೆ. ತನ್ನೊಡಲಲ್ಲಿ ಅಸಂಖ್ಯ ಜೀವ ವೈವಿಧ್ಯಗಳನ್ನು ಹೊಂದಿರುವ ಸಮುದ್ರದಾಳ ಸದಾ ಕೌತುಕದ ಗೂಡಾಗಿದೆ.  ಜೀವ ವೈವಿಧ್ಯಕ್ಕೆ ತನ್ನದೇ ಕೊಡುಗೆ ನೀಡುವ ಈ ಜಲಚರಗಳು ಮನುಷ್ಯನ ಒಡನಾಟ ಇಷ್ಟಪಡುತ್ತವೆಯೋ ಗೊತ್ತಿಲ್ಲ ಆದರೆ ಮನುಷ್ಯರಂತೆ ಪ್ರಾಣಿಗಳು ಕುತೂಹಲ ಭಯ ಆತಂಕದಿಂದ ಮನುಷ್ಯರನ್ನು ನೋಡುವುದಂತೂ ನಿಜ.  ಹಾಗೆಯೇ ಇಲ್ಲೊಂದು ಸಮುದ್ರದಾಳದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

B&S @_B___S ಎಂಬ ಟ್ವಿಟ್ಟರ್ ಪೇಜ್‌ನಿಂದ ಅಪ್ಲೋಡ್ ಮಾಡಲಾಗಿದ್ದು,  ಸಮುದ್ರದಾಳಕ್ಕೆ ಡೈವ್ ಹೋದ ಡೈವರ್ ಓರ್ವನನ್ನು ವಿಶೇಷ ಅತಿಥಿಯೊಂದು ಬಹಳ ಕುತೂಹಲದಿಂದ ಭೇಟಿಯಾಗಿ ಸ್ವಾಗತಿಸಿದೆ. ಹೌದು, ಸಮುದ್ರದಡಿಗೆ ಇಳಿದ ಡೈವರ್‌ಗೆ ನೀರು ನಾಯಿಯೊಂದು ಮುಖಾಮುಖಿಯಾಗಿದೆ. ಆದರೆ ಇದ್ಯಾವುದು ವಿಚಿತ್ರ ಪ್ರಾಣಿ ಎಂದು ಡೈವರ್ ನೊಡಿ ದೂರ ಓಡಿ ಹೋಗಿಲ್ಲ.  ಬದಲಾಗಿ ಡೈವರ್‌ನ ಕೈ ಹಿಡಿದು ಬಹಳ ಹೊತ್ತು ಆತನೊಂದಿಗೆ ಆಟವಾಡಿದೆ, ಆತನ ಕೈಯನ್ನು ಹಿಡಿದುಕೊಂಡು ಕಚ್ಚಲು ನೋಡಿದೆ. ಇತ್ತ ಡೈವರ್ ಈ ನೀರುನಾಯಿಯ ಬೆನ್ನು ಸವರುತ್ತ ಮತ್ತಷ್ಟು ಆ ಪ್ರಾಣಿಗೆ ಹತ್ತಿರವಾಗಿದ್ದಾನೆ. ಆದರೆ ನೀರು ನಾಯಿ ಮಾತ್ರ ಬಹಳ ಕುತೂಹಲದಿಂದ ಆತನನ್ನೇ  ನೋಡುತ್ತಾ ಆತನೊಂದಿಗೆ ಕಾಲ ಕಳೆದಿದೆ. ಈ ವಿಡಿಯೋ ನೋಡುಗರನ್ನು ಭಾವುಕರನ್ನಾಗಿಸಿದ್ದು,  ಒಂದು ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

Goblin Shark: ಸಮುದ್ರದಾಳದಲ್ಲಿ ಇದು ಥೇಟ್‌ ಅಸ್ಥಿಪಂಜರದಂತೆಯೇ ಗೋಚರಿಸುತ್ತೆ

ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರುವವರು ಈ ನೀರುನಾಯಿಗಳು ನಾಯಿಯಂತೆ ಗುಣ ಸ್ವಭಾವವನ್ನು ಹೊಂದಿರುವ ಪ್ರಾಣಿಗಳಾಗಿವೆ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ವಿಡಿಯೋ ನೋಡಿದವರು ಕೂಡ ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಬಹುತೇಕ ಜೀವ ವೈವಿಧ್ಯಗಳು ಮನುಷ್ಯರನ್ನು ಸ್ನೇಹಿತರಂತೆ ಕಾಣುತ್ತಾರೆ. ಆ ಕಾರಣಕ್ಕೆ ಮನುಷ್ಯರ ಒಡನಾಟ ಬಯಸುತ್ತವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಅಂತರ್ಜಾಲದಲ್ಲಿರುವ ಮುದ್ದಾದ ವೀಡಿಯೋ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಸಮುದ್ರದಾಳದಲ್ಲಿ ಮೊದಲ ಸಲ ಕನ್ನಡ ಧ್ವಜಾರೋಹಣ!

 

Latest Videos
Follow Us:
Download App:
  • android
  • ios