ಮಕ್ಕಳ ಪಾಲನೆಯಲ್ಲಿ ಪೋಷಕರ ಪಾತ್ರ ಮಹತ್ವದ್ದೆಂದು ಪ್ರೇಮಾನಂದ ಸ್ವಾಮೀಜಿ ಹೇಳಿದ್ದಾರೆ. ಹಣ ಸಂಪಾದನೆಗಿಂತ ಮಕ್ಕಳಿಗೆ ಪ್ರೀತಿ, ಸಮಯ ಮೀಸಲಿಡುವುದು ಅಗತ್ಯ. ಕೆಲಸದ ಜೊತೆಗೆ ಮಕ್ಕಳೊಂದಿಗೆ ಕಾಲ ಕಳೆಯುವುದು ಮುಖ್ಯ. ಇದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಎಂದು ವಿರಾಟ್-ಅನುಷ್ಕಾ ಗುರು ಪ್ರೇಮಾನಂದ ಮಹಾರಾಜ್ ಸಲಹೆ ನೀಡಿದ್ದಾರೆ.
ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Team India player Virat Kohli) ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Bollywood actress Anushka Sharma) ಗುರು ಪ್ರೇಮಾನಂದ ಮಹಾರಾಜ್ (Premanand Maharaj) ಸ್ವಾಮೀಜಿ, ಜೀವನಕ್ಕೆ ಅಗತ್ಯವಿರುವ ಸಲಹೆಯನ್ನು ಭಕ್ತರಿಗೆ ನೀಡ್ತಿರುತ್ತಾರೆ. ವೃಂದಾವನದಲ್ಲಿರುವ ಅವರ ಆಶ್ರಮಕ್ಕೆ ಪ್ರತಿ ನಿತ್ಯ ನೂರಾರು ಭಕ್ತರು ಬರ್ತಾರೆ. ಅವರು ಕೇಳುವ ಪ್ರಶ್ನೆಗಳಿಗೆ ಶಾಂತವಾಗಿ ಉತ್ತರ ನೀಡುವ ಪ್ರೇಮಾನಂದ ಗುರುಜಿ, ಜೀವನವನ್ನು ಮತ್ತಷ್ಟು ಉತ್ತಮ ಮಾಡ್ಕೊಳ್ಳಲು ನೆರವಾಗ್ತಾರೆ. ಈಗ ಪಾಲಕರಿಗೆ ಮಕ್ಕಳ ಪಾಲನೆ ಬಗ್ಗೆ ಪಾಠ ಮಾಡಿದ್ದಾರೆ.
ಪ್ರೇಮಾನಂದ ಸ್ವಾಮೀಜಿ ಆಶ್ರಮಕ್ಕೆ ಬಂದಿದ್ದ ಮಹಿಳೆಯೊಬ್ಬರು, ತಮ್ಮ ಹಾಗೂ ಈಗಿನ ದಿನಗಳಲ್ಲಿ ಪ್ರತಿಯೊಬ್ಬ ಪಾಲಕರನ್ನು ಕಾಡುವ ಸಮಸ್ಯೆಯೊಂದನ್ನು ಹೇಳಿದ್ದಾರೆ. ನಾನು ಮತ್ತು ನನ್ನ ಪತಿ ಇಬ್ಬರೂ ಕೆಲಸಕ್ಕೆ ಹೊರಗೆ ಹೋಗ್ತೇವೆ. ಚಿಕ್ಕ ಮಗು ಮನೆಯಲ್ಲಿ ಒಂಟಿಯಾಗಿರುತ್ತದೆ. ಅದ್ರ ಪಾಲನೆ- ಪೋಷಣೆಯನ್ನು ಸರಿಯಾಗಿ ಮಾಡ್ತಿಲ್ಲ ಎನ್ನುವ ನೋವು, ಅಪರಾಧ ಭಾವ ನನ್ನನ್ನು ಕಾಡ್ತಿದೆ. ಅದಕ್ಕೆ ಏನು ಮಾಡ್ಬೇಕು ಎಂದು ಆಕೆ ಕೇಳಿದ್ದಾಳೆ. ಮಹಿಳೆ ಮಾತಿಗೆ ಉತ್ತರಿಸಿದ ಸ್ವಾಮೀಜಿ, ನಾವು ಯಾರಿಗಾಗಿ ಹಣ ಕೂಡಿಡುವ ಪ್ರಯತ್ನ ಮಾಡ್ತಿದ್ದೇವೆಯೋ ಅವರಿಗೆ ಸರಿಯಾದ ಸಮಯ ನೀಡಿಲ್ಲ ಅಂದ್ರೆ ಕೆಲಸ ಮಾಡಿ ಏನು ಪ್ರಯೋಜನ ಎಂದು ಮರು ಪ್ರಶ್ನೆ ಇಟ್ಟಿದ್ದಾರೆ. ಅಷ್ಟೇ ಅಲ್ಲ, ಕಡಿಮೆ ಹಣ ಸಂಪಾದನೆ ಮಾಡಿದ್ರೂ ಚಿಂತೆಯಿಲ್ಲ, ನಿಮ್ಮ ಮಕ್ಕಳಿಗೆ ಪ್ರೀತಿ ನೀಡಿ, ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಸೋದು ಮುಖ್ಯ. ಮಕ್ಕಳಿಗಾಗಿ ಸ್ವಲ್ಪ ಸಮಯ ತೆಗೆದಿಡಿ ಎಂದು ಸ್ವಾಮೀಜಿ ಪಾಲಕರಿಗೆ ಹೇಳಿದ್ದಾರೆ.
ನಿವೃತ್ತಿ ವದಂತಿ ಬೆನ್ನಲ್ಲೇ ಪ್ರೇಮಾನಂದ್ ಮಹಾರಾಜ್ ಭೇಟಿ ಮಾಡಿದ ಕೊಹ್ಲಿ! ಈ ಪ್ರಶ್ನೆ ಕೇಳಿದ ವಿರುಷ್ಕಾ ಜೋಡಿ
ಮಕ್ಕಳಿಗೆ ಅಮ್ಮನ ಪ್ರೀತಿ ಅಗತ್ಯ. ಕೆಲಸದಾಕೆಯ ಸೇವೆ ಮಕ್ಕಳಿಗೆ ಬೇಕಾಗಿಲ್ಲ. ನಿಮ್ಮ ಮನಸ್ಸಿನಲ್ಲಿ ಮಮತೆ, ವಾತ್ಸಲ್ಯವಿದೆ. ಆದ್ರೆ ನೀವು ಹಣ ಮಾಡಲು ಓಡ್ತಿದ್ದೀರಿ. ನೀವು ಕೆಲಸ ಮಾಡ್ಬೇಡಿ, ಮನೆಯಿಂದ ಹೊರಗೆ ಹೋಗ್ಬೇಡಿ ಅಂತ ನಾವು ಹೇಳ್ತಿಲ್ಲ. ಟೈಂ ಮ್ಯಾನೇಜ್ಮೆಂಟ್ ಮಾಡೋದನ್ನು ಕಲಿತುಕೊಳ್ಳಿ. ಸ್ವಲ್ಪ ಸಮಯ ಅಮ್ಮ ಹಾಗೂ ಸ್ವಲ್ಪ ಸಮಯ ಅಪ್ಪ ಮಕ್ಕಳ ಜೊತೆ ಕಾಲ ಕಳೆಯುವುದು ಬಹಳ ಮುಖ್ಯ ಎಂದು ಪ್ರೇಮಾನಂದ ಸ್ವಾಮೀಜಿ ಹೇಳಿದ್ದಾರೆ.
ನೀವಿಂದು ನಿಮ್ಮ ಮಕ್ಕಳಿಗೆ ಪ್ರೀತಿ ನೀಡಿಲ್ಲ ಎಂದಾದ್ರೆ ಮುಂದೆ ಅವರಿಂದ ಪ್ರೀತಿಯನ್ನು ನಿರೀಕ್ಷೆ ಮಾಡ್ಬೇಡಿ. ನೀವು ಈಗ ಅವರನ್ನು ಪ್ರೀತಿ ಮಾಡ್ದೆ ಹೋದ್ರೆ ಅವರು ಮುಂದೆ ನಿಮ್ಮನ್ನು ಪ್ರೀತಿ ಮಾಡೋದಿಲ್ಲ. ಜೀವನದಲ್ಲಿ ಆರ್ಥಿಕ ಸ್ಥಿತಿ, ಹಣ ಮಾತ್ರ ಎಲ್ಲವೂ ಅಲ್ಲ. ಪ್ರೀತಿಯನ್ನು ಕೂಡ ಸಮನಾಗಿ ನೀಡಬೇಕು. ನನ್ನ ಪ್ರಕಾರ, ಪಾಲಕರಾದವರು ಮಕ್ಕಳಿಗೆ ಅತೀ ಹೆಚ್ಚು ಪ್ರೀತಿ ಹಾಗೂ ಸಮಯವನ್ನು ನೀಡಬೇಕು ಎಂದಿದ್ದಾರೆ. ಪಾಲಕರಾದವರು ಕೆಲಸದ ಜೊತೆ ಮಕ್ಕಳಿಗೆ ಒಂದಿಷ್ಟು ಸಮಯ ಮೀಸಲಿಟ್ಟಾಗ ಮಕ್ಕಳು ಸರಿ ದಾರಿಯಲ್ಲಿ ಬೆಳೆಯುತ್ತಾರೆ. ಅವರ ಮನಸ್ಸು ದ್ವೇಷ, ಕೋಪದ ಬದಲು ಪ್ರೀತಿಯಿಂದ ತುಂಬಿರುತ್ತದೆ ಎಂದು ಪ್ರೇಮಾನಂದ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಪತಿಗಿಂತ ಪತ್ನಿ ಸಂಬಳ ಹೆಚ್ಚಿದ್ರೆ ದಾಂಪತ್ಯ ಉಳಿಯುತ್ತಾ? ಗಂಡನಿಗೆ ಕಾಡೋ ಖಾಯಿಲೆ
ಪ್ರೇಮಾನಂದ ಗೋವಿಂದ್ ಶರಣ್ ಮಹಾರಾಜ್ ಅವರ ಪೂರ್ಣ ಹೆಸರು. ವೃಂದಾವನ ರಾಸ್ ಮಹಿಮಾ ಅವರ ಆಶ್ರಮ. ಅವರು ಪ್ರತಿ ದಿನ ಸತ್ಸಂಗ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮ ನಡೆಸುತ್ತಾರೆ. ಕೆಲ ದಿನಗಳ ಹಿಂದಷ್ಟೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಹಾರಾಜ್ ಜೊತೆ ಅವರು ದೀರ್ಘ ಮಾತುಕತೆ ನಡೆಸಿದ್ದರು. ಕೊಹ್ಲಿಗೆ, ಪ್ರೇಮಾನಂದ ಮಹಾರಾಜ್ ಸಲಹೆ ನೀಡಿದ್ದಲ್ಲದೆ, ಅನುಷ್ಕಾ ಮಾತುಗಳನ್ನು ಆಲಿಸಿ, ಉತ್ತರ ನೀಡಿದ್ದರು.
