ನಿವೃತ್ತಿ ವದಂತಿ ಬೆನ್ನಲ್ಲೇ ಪ್ರೇಮಾನಂದ್ ಮಹಾರಾಜ್ ಭೇಟಿ ಮಾಡಿದ ಕೊಹ್ಲಿ! ಈ ಪ್ರಶ್ನೆ ಕೇಳಿದ ವಿರುಷ್ಕಾ ಜೋಡಿ
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಂತರ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮಕ್ಕಳೊಂದಿಗೆ ಪ್ರೇಮಾನಂದ ಸ್ವಾಮಿ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಈ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಇದರಲ್ಲಿ ದಂಪತಿಗಳು ಸ್ವಾಮೀಜಿಯವರೊಂದಿಗೆ ಸಂವಾದ ನಡೆಸುವುದನ್ನು ಕಾಣಬಹುದು.
ಮಥುರ: ಭಾರತದ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಒಂದಿಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಸದ್ಯದಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಲಿದ್ದಾರೆ ಎನ್ನುವಂತಹ ಮಾತುಗಳು ಸೋಷಿಯಲ್ ಮೀಡಿಯಾಗಳಲ್ಲಿ ಕೇಳಿ ಬಂದಿದ್ದವು. ಇನ್ನು ಇವೆಲ್ಲದರ ನಡುವೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಮಕ್ಕಳಾದ ಅಕಾಯ್ ಹಾಗೂ ವಮಿಕಾ ಜತೆಗೂಡಿ ಪ್ರೇಮಾನಂದ ಸ್ವಾಮಿ ಅವರ ಆಶ್ರಮಕ್ಕೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಿ ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಪಾಸ್ಸಾಗಿರುವ ವಿರಾಟ್ ಕೊಹ್ಲಿ, ಇದೀಗ ನೇರವಾಗಿ ಪ್ರೇಮಾನಂದ ಸ್ವಾಮಿ ಅವರ ಆಶ್ರಮಕ್ಕೆ ಭೇಟಿ ನೀಡಿ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ. ವಿರುಷ್ಕಾ ದಂಪತಿ ತಮ್ಮ ಮಕ್ಕಳೊಂದಿಗೆ ಆಶ್ರಮಕ್ಕೆ ಭೇಟಿ ನೀಡಿರುವ ವಿಡಿಯೋವನ್ನು ಪ್ರೇಮಾನಂದ ಸ್ವಾಮೀಜಿಯವರು ತಮ್ಮ ಯೂಟ್ಯೂಬ್ ಚಾನೆಲ್ ಭಜನ್ ಮಾರ್ಗದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ, ಪ್ರೇಮಾನಂದ ಸ್ವಾಮಿಯವರ ಬಳಿ ಪ್ರಶ್ನೆಗಳನ್ನು ಕೇಳುವುದು ಕಂಡು ಬಂದಿದೆ. ಇದಕ್ಕೆ ಪ್ರೇಮಾನಂದ ಸ್ವಾಮೀಜಿಯವರು ಶಾಂತಚಿತ್ತದಿಂದ ಉತ್ತರ ನೀಡಿದ್ದಾರೆ.
ವಿಜಯ್ ಹಜಾರೆ ಟೂರ್ನಿ: ಹ್ಯಾಟ್ರಿಕ್ ಸೆಮೀಸ್ ಮೇಲೆ ಕಣ್ಣಿಟ್ಟ ಕರ್ನಾಟಕ, ರಾಜ್ಯಕ್ಕೆ ಮಯಾಂಕ್, ದೇವದತ್ ಬಲ
ಪ್ರೇಮಾನಂದ ಸ್ವಾಮೀಜಿಯವರನ್ನು ಉದ್ದೇಶಿಸಿ ಅನುಷ್ಕಾ ಶರ್ಮಾ, 'ನಾವು ಕಳೆದ ಬಾರಿ ಇಲ್ಲಿಗೆ ಭೇಟಿ ನೀಡಿದಾಗ ನಮ್ಮ ಮನಸ್ಸಿನಲ್ಲಿ ಹಲವು ಪ್ರಶ್ನೆಗಳಿದ್ದವು. ನಾನು ಆ ಪ್ರಶ್ನೆಗಳನ್ನು ಕೇಳಬೇಕು ಅಂದುಕೊಂಡಿದ್ದೆ. ಆದರೆ ನಮಗಿಂತ ಮುಂದಿದ್ದವರು ಆ ಪ್ರಶ್ನೆಗಳನ್ನು ನಿಮ್ಮ ಬಳಿ ಕೇಳಿದರು ಎಂದು ಹೇಳುತ್ತಾರೆ. ಆಗ ಪ್ರೇಮಾನಂದ ಸ್ವಾಮೀಜಿಯವರು, ಈಶ್ವರ ಒಂದಲ್ಲಾ ಒಂದು ವ್ಯವಸ್ಥೆ ಮಾಡುತ್ತಾರೆ ಎಂದು ಹೇಳುತ್ತಾರೆ.
ಏಕದಿನ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಸ್ಮೃತಿ ಮಂಧನಾ; ಮಿಥಾಲಿ ರಾಜ್ ಅಪರೂಪದ ದಾಖಲೆ ನುಚ್ಚುನೂರು!
ಇನ್ನು ಮುಂದುವರಿದು ಅನುಷ್ಕಾ ಶರ್ಮಾ, ತಾವು ನಿರಂತರವಾಗಿ ಪ್ರೇಮಾನಂದ ಸ್ವಾಮೀಜಿಯವರನ್ನು ಫಾಲೋಮಾಡುವುದಾಗಿಯೂ ಹೇಳಿದ್ದಾರೆ. ಇದಷ್ಟೇ ಅಲ್ಲದೇ ಪ್ರತಿನಿತ್ಯ ಸ್ವಾಮೀಜಿಯವರು ನಡೆಸಿಕೊಡುವ ಸತ್ಸಂಗ, ಪ್ರಶ್ನೋತ್ತರ ಕಾರ್ಯಕ್ರಮವನ್ನು ಕೇಳುವುದಾಗಿ ಹೇಳಿದ್ದಾರೆ. ಇನ್ನೊಂದು ಪ್ರಶ್ನೆಗೆ ಅಭ್ಯಾಸ ಹಾಗೂ ಪ್ರಯತ್ನದ ಮಹತ್ವವನ್ನು ಪ್ರೇಮಾನಂದ ಸ್ವಾಮೀಜಿಯವರು ಅದ್ಭುತವಾಗಿ ವಿವರಿಸುತ್ತಾರೆ. ಅಭ್ಯಾಸ ಮಾಡುವುದು ಒಳ್ಳೆಯದ್ದು, ಅಭ್ಯಾಸ ಮಾಡಿದ ಹೊರತಾಗಿಯೂ ಸೋಲು ಎದುರಾಗುತ್ತಿದೆ ಎಂದರೆ ನಮ್ಮ ಹಣೆಯಲ್ಲಿ ಏನು ಬರೆದಿದೆಯೋ ಅದನ್ನು ಅನುಭವಿಸಲೇಬೇಕಾಗುತ್ತದೆ ಎಂದು ಪ್ರೇಮಾನಂದ ಸ್ವಾಮೀಜಿಯವರು ಹಿತವಚನ ನೀಡಿದ್ದಾರೆ.