ಪತ್ನಿ ಹೆಚ್ಚು ಸಂಪಾದಿಸುವುದು ದಾಂಪತ್ಯದಲ್ಲಿ ಮಾನಸಿಕ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಪತಿಯ ಆತ್ಮವಿಶ್ವಾಸ ಕುಗ್ಗಿ ಮಾದಕವಸ್ತುಗಳ ದಾಸರಾಗುವ ಸಾಧ್ಯತೆ ಹೆಚ್ಚು. ಪತ್ನಿಗೆ ಬೆಂಬಲದ ಕೊರತೆಯಿಂದ ಒತ್ತಡಕ್ಕೆ ಒಳಗಾಗುತ್ತಾಳೆ. ಆದಾಯ ಹೆಚ್ಚಿದಷ್ಟು ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಆದರೆ ಪತ್ನಿಯ ಆದಾಯ ಹೆಚ್ಚಾದಾಗ ಪತಿಯ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಹೇಳಿದೆ.
ಪುರುಷನಾದವನು ಮಹಿಳೆಗಿಂತ ಹೆಚ್ಚು ಸಂಪಾದನೆ (earning) ಮಾಡ್ಬೇಕು ಎಂಬುದು ಹಿಂದಿನಿಂದ ಬಂದ ಒಂದು ಅಲಿಖಿತ ನಿಯಮ. ಪಿತೃ ಪ್ರಧಾನ ಸಮಾಜದಲ್ಲಿ ಇದನ್ನು ಪಾಲಿಸ್ತಾ ಬರಲಾಗಿದೆ ಕೂಡ. ಈಗ ಬಹುತೇಕ ಎಲ್ಲ ಕ್ಷೇತ್ರಕ್ಕೆ ಮಹಿಳೆಯರು ಧುಮುಕಿದ್ದಾರೆ. ಪುರುಷನಿಗೆ ಸಮಾನವಾಗಿ ದುಡಿಯುತ್ತಿದ್ದಾರೆ. ಹಾಗೆಯೇ ಆತನಿಗೆ ಸಮನಾದ ಸಂಬಳವನ್ನು ಕೇಳ್ತಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ನಟ ಹಾಗೂ ನಟಿಯ ಮಧ್ಯೆ ಸಂಭಾವನೆ ವಿಚಾರದ ತಾರತಮ್ಯ ಆಗಾಗ ಚರ್ಚೆಗೆ ಬರೋದನ್ನು ನಾವು ನೋಡಿದ್ದೇವೆ. ಇದು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ದುಡಿಮೆಗೆ ತಕ್ಕ ಸಂಭಾವನೆ ಕೇಳ್ತಿದ್ದಾರೆ. ಇದು ಮಹಿಳೆ ಸ್ವಾವಲಂಭಿಯಾಗಲು, ಸ್ವತಂತ್ರ್ಯವಾಗಿ ಬದುಕಲು ಸಹಕಾರಿ. ಆದ್ರೆ ಇದು ದಾಂಪತ್ಯದ ಮೇಲೆ ಪರಿಣಾಮ ಬೀರ್ತಿದೆ ಎಂದು ಅಧ್ಯಯನವೊಂದು ಹೇಳಿದೆ.
ಹಿಂದೆ ಮದುವೆ (marriage) ಸಮಯದಲ್ಲಿ ವರ (groom) ಹಾಗೂ ವಧು (bride)ವಿನ ಸಂಬಳ (salary)ವನ್ನು ಕೇಳಲಾಗ್ತಿತ್ತು. ವರನಿಗಿಂತ ವಧು ಹೆಚ್ಚಿಗೆ ಸಂಪಾದನೆ ಮಾಡ್ತಿದ್ದಾಳೆ ಅಂದ್ರೆ ಆ ಸಂಬಂಧ ಮುಂದುವರೆಯುತ್ತಿರಲಿಲ್ಲ. ಆದ್ರೀಗ ಆ ಪದ್ಧತಿ ಇಲ್ಲ. ವರ ಹಾಗೂ ವಧು ಸಮನಾಗಿ ಸಂಪಾದನೆ ಮಾಡ್ತಿದ್ದಾರೆ. ಜೀವನ ನಿರ್ವಹಣೆಗೆ ಇಬ್ಬರಲ್ಲಿ ಒಬ್ಬರು ದುಡಿಯೋದು ಮುಖ್ಯ, ಯಾರಿಗೆ ಹೆಚ್ಚು ಸಂಬಳ ಬರ್ತಿದೆ ಎಂಬುದು ಅಗತ್ಯವಿಲ್ಲ, ದಂಪತಿ ಮಧ್ಯೆ ಹೊಂದಾಣಿಕೆ ಇದ್ರೆ ಸಾಕು ಎನ್ನುವವರು ಕೆಲವರಿದ್ದಾರೆ. ಆದ್ರೆ ಅಧ್ಯಯನ ಬೇರೆಯದನ್ನೇ ಹೇಳ್ತಿದೆ. ಒಂದು ಸಂಬಂಧ ಗಟ್ಟಿಯಾಗಲು ಸಂಭಾವನೆ ಕೂಡ ಮುಖ್ಯವಾಗುತ್ತದೆ ಎಂದು ಅಧ್ಯಯನ ಹೇಳಿದೆ.
ಲಿವಿಂಗ್ ಟುಗೆದರ್ ನಲ್ಲಿದ್ದೀರಾ? ಭಾರತದಲ್ಲಿರುವ ಈ ಕಾನೂನುಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು
ಹೆಂಡತಿ ಗಂಡನಿಗಿಂತ ಹೆಚ್ಚು ಗಳಿಸುತ್ತಿರುವ ಪ್ರವೃತ್ತಿ ಜಾಗತಿಕವಾಗಿ ಹೆಚ್ಚುತ್ತಿದೆ ಎಂದು ಅಧ್ಯಯನ ಹೇಳಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಸ್ವೀಡನ್‌ನಂತಹ ದೇಶಗಳಲ್ಲಿ ಅಧ್ಯಯನ ನಡೆಸಿದ ತಂಡ, ಇದು ಮಾನಸಿಕ ಸ್ಥಿತಿ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಪತ್ತೆ ಮಾಡಿದೆ. ಪತಿಗಿಂತ ಪತ್ನಿಯರು ಹೆಚ್ಚು ಸಂಪಾದನೆ ಮಾಡ್ತಿದ್ದು, 2000 ರ ದಶಕದ ಆರಂಭದಿಂದ ಇದ್ರಲ್ಲಿ ಶೇಕಡಾ 25ರಷ್ಟು ಹೆಚ್ಚಳ ಕಂಡು ಬಂದಿದೆ. ಡರ್ಹ್ಯಾಮ್ ವಿಶ್ವವಿದ್ಯಾಲಯದ ಸಂಶೋಧಕರು ಸ್ವೀಡನ್‌ನಲ್ಲಿರುವ ಭಿನ್ನಲಿಂಗೀಯ ದಂಪತಿ ಮೇಲೆ ಅಧ್ಯಯನ ನಡೆಸಿದ್ದಾರೆ. 2021 ರಲ್ಲಿ ವಿವಾಹವಾದವರ ಮೇಲೆ ಗಮನವನ್ನು ಕೇಂದ್ರೀಕರಿಸಲಾಗಿತ್ತು. ಸರಾಸರಿ 37 ವರ್ಷ ವಯಸ್ಸಿನ ದಂಪತಿ ಮೇಲೆ 10 ವರ್ಷಗಳ ಕಾಲ ಅಧ್ಯಯನ ನಡೆದಿದೆ. ಈ ಅವಧಿಯಲ್ಲಿ ದಂಪತಿ ಮಧ್ಯೆ ಆದ ಏರುಪೇರಿನಿಂದ ಹಿಡಿದು ವಿಚ್ಛೇದನದವರೆಗೆ ಸಂಶೋಧಕರು ಆತಂಕಕಾರಿ ಪ್ರವೃತ್ತಿಯನ್ನು ಗುರುತಿಸಿದ್ದಾರೆ. ಹೆಂಡತಿ ತನ್ನ ಪತಿಗಿಂತ ಹೆಚ್ಚು ಗಳಿಸುತ್ತಿರುವಾಗ, ಇಬ್ಬರೂ ಪಾಲುದಾರರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ, ವಿಶೇಷವಾಗಿ ಪತಿ ಎಂದು ಸಂಶೋಧಕರು ಹೇಳಿದ್ದಾರೆ. ಮಹಿಳೆಯರು ಶೇಕಡಾ 8ರಷ್ಟು ಮಾನಸಿಕ ಸಮಸ್ಯೆ ಎದುರಿಸಿದ್ರೆ ಪುರುಷರು ಶೇಕಡಾ 11ರಷ್ಟು ಮಾನಸಿಕ ಸಮಸ್ಯೆಯಿಂದ ಬಳಲುತ್ತಾರೆ.
ನವದಂಪತಿಗೆ ಹಾಗೂ ಮದುವೆಯಾಗಲು ಕಾತುರದಿಂದ ಕಾಯುತ್ತಿರುವವರಿಗೆ ಕೆಲ
ಪತ್ನಿಗಿಂತ ಕಡಿಮೆ ಸಂಬಳ ಪಡೆಯುವ ಪತಿ ಮಾದಕವಸ್ತು ಬಳಕೆಗೆ ಸಂಬಂಧಿಸಿದ ಅಸ್ವಸ್ಥತೆಗಳಿಂದ ಬಳಲುವುದು ಹೆಚ್ಚು. ಅದೇ ಪತ್ನಿ ಒತ್ತಡಕ್ಕೆ ಹೆಚ್ಚು ಒಳಗಾಗ್ತಾಳೆ ಎಂದು ಸಂಶೋಧನೆ ತಿಳಿಸಿದೆ. ತಜ್ಞರ ಪ್ರಕಾರ, ಆದಾಯ ಮತ್ತು ಮಾನಸಿಕ ಆರೋಗ್ಯದ ನಡುವೆ ಸಕಾರಾತ್ಮಕ ಸಂಬಂಧವಿದೆ. ಆದಾಯ ಹೆಚ್ಚಾದಾಗ ವ್ಯಕ್ತಿಯ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಹಣದ ಹೆಚ್ಚುವರಿ ಹರಿವು ಹೆಚ್ಚು ಆರಾಮದಾಯಕ ಜೀವನಶೈಲಿಯನ್ನು ನಡೆಸಲು ಸಹಕಾರಿ. ಇದು ದೈನಂದಿನ ಜೀವನವನ್ನು ಸುಲಭಗೊಳಿಸುತ್ತದೆ. ಆದ್ರೆ ಹೆಂಡತಿಯ ಆದಾಯವನ್ನು ಮಾತ್ರ ಪರಿಗಣಿಸಿದಾಗ ಇದು ನಕಾರಾತ್ಮಕವಾಗಿ ಬದಲಾಗುತ್ತದೆ. ಪುರುಷನ ಮಾನಸಿಕ ಆರೋಗ್ಯದ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಆರ್ಥಿಕತೆ ಮಾತ್ರವಲ್ಲ ಪುರುಷರ ಶಕ್ತಿಗೆ ಅಡ್ಡಿಯಾಗುತ್ತದೆ. ಪತ್ನಿ ಅವರಿಗಿಂತ ಹೆಚ್ಚು ಸಂಪಾದನೆ ಮಾಡಲು ಶುರು ಮಾಡಿದಾಗ ಪುರುಷರು ದಣಿಯುತ್ತಾನೆ. ಆತ್ಮವಿಶ್ವಾಸ ಕಳೆದುಕೊಳ್ತಾನೆ. ಅಭದ್ರತೆಯು ಮಾದಕ ವ್ಯಸನದತ್ತ ಕರೆದೊಯ್ಯುತ್ತದೆ. ಇದೇ ವೇಳೆ ಪತಿಯಿಂದ ಪತ್ನಿಗೆ ಬೆಂಬಲ ಸಿಗೋದಿಲ್ಲ. ಇದು ಮಹಿಳೆಯರನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಅವರು ಒತ್ತಡಕ್ಕೆ ಒಳಗಾಗುತ್ತಾರೆ ಎಂದು ಅಧ್ಯಯನ ಹೇಳಿದೆ.
