ಎಲ್ಲರೂ ವ್ಯಾಲೆಂಟೈನ್ಸ್ ಡೇಯನ್ನು ಸ್ಪೆಶಲ್ ಡಿನ್ನರ್, ಲಾಂಗ್ ಡ್ರೈವ್, ಸಂದೇಶಗಳ ವಿನಿಮಯದಲ್ಲಿ ಕಳೆದರೆ ಈ ಜೋಡಿ ಮಾತ್ರ ನೀರೊಳಗೆ ಚುಂಬನ ಮಾಡುತ್ತಾ, ಅದರಲ್ಲೇ ಗಿನ್ನೆಸ್ ದಾಖಲೆಗೆ ಸೇರಿ ಸಂಭ್ರಮಿಸಿದರು. 

ಪ್ರೇಮಿಗಳು ಪರಸ್ಪರರ ಕಡೆಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಮಾನ್ಯವಾಗಿ ಚುಂಬಿಸುತ್ತಾರೆ ಮತ್ತು ಸಾಮಾನ್ಯವಾಗಿ ಇದು ಕೆಲವು ಸೆಕೆಂಡುಗಳ ಭಾವನೆಯಾಗಿದೆ. ಕೆಲವೇ ಸೆಕೆಂಡ್ ಆದರೂ ಪ್ರತಿ ಜೋಡಿಗೂ ಆ ಕ್ಷಣ ಬಹಳ ವಿಶೇಷವಾದುದಾಗಿದೆ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಇಲ್ಲೊಂದು ಅಪರೂಪದ ಜೋಡಿ ಇದೆ. ಅವರು ವ್ಯಾಲೆಂಟೈನ್ಸ್ ಡೇ ಹಿನ್ನೆಲೆಯಲ್ಲಿ ಅದೆಷ್ಟು ಧೀರ್ಘವಾಗಿ ಚುಂಬಿಸಿದರೆಂದರೆ ಅವರ ಈ ಚುಂಬನ ವಿಶ್ವದಾಖಲೆಯಾಗಿ ಗಿನ್ನೆಸ್ ಪುಸ್ತಕ ಸೇರಿದೆ. ಇಷ್ಟಕ್ಕೂ ಅವರು ಚುಂಬಿಸಿದ್ದು ನೀರಿನೊಳಗಡೆ ನಿಂತು ಎಂಬುದು ವಿಶೇಷ.

ಹೌದು, ದಕ್ಷಿಣ ಆಫ್ರಿಕಾದ ಬೆತ್ ನೀಲ್ ಮತ್ತು ಕೆನಡಾದ ಮೈಲ್ಸ್ ಕ್ಲೌಟಿಯರ್ ಜೋಡಿಯೇ ಈ ದೀರ್ಘ ಚುಂಬನದಿಂದ ಇತಿಹಾಸ ನಿರ್ಮಿಸಿದವರು. ಇವರು ಪ್ರೇಮಿಗಳ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ನೀರಿನಡಿಯಲ್ಲಿ ನಿಂತು ಬರೋಬ್ಬರಿ 4 ನಿಮಿಷ 6 ಸೆಕೆಂಡುಗಳ ಕಾಲ ಚುಂಬಿಸಿದರು. ಇವರ ಈ ಸುಧೀರ್ಘ ಚುಂಬನ ಗಿನ್ನೆಸ್ ದಾಖಲೆಯಲ್ಲಿ ದಾಖಲಾಯಿತು. ಈ ಹಿಂದೆ 3 ನಿಮಿಷ 24 ಸೆಕೆಂಡುಗಳ ಕಾಲ ನೀರಿನಡಿಯಲ್ಲಿ ಚುಂಬಿಸಿದ ದಾಖಲೆ ಇತ್ತು. ಅದನ್ನು ಈ ಜೋಡಿ ಮುರಿದರು. 

ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಮಗಳೊಂದಿಗೆ ವಾಸಿಸುತ್ತಿರುವ ಬೆತ್ ನೀಲ್ ಮತ್ತು ಮೈಲ್ಸ್ ಕ್ಲೌಟಿಯರ್ ಮಾಲ್ಡೀವ್ಸ್‌ನ ಹೋಟೆಲ್‌ನಲ್ಲಿ ಈ ರೊಮ್ಯಾಂಟಿಕ್ ಸಾಹಸ ಮೆರೆದಿದ್ದಾರೆ. 
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ನ ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ದಂಪತಿಯು 13 ವರ್ಷಗಳ ಹಿಂದೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ನ ಇಟಾಲಿಯನ್ ಟಿವಿ ಶೋ ಲೋ ಶೋ ಡೀ ರೆಕಾರ್ಡ್ನಲ್ಲಿ ಸ್ಥಾಪಿಸಲಾದ 3 ನಿಮಿಷ 24 ಸೆಕೆಂಡುಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. 

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಹ್ಯಾಂಡಲ್ ಅದರ ವೀಡಿಯೊವನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ವೀಡಿಯೊದ ಶೀರ್ಷಿಕೆಯು, 'ಈ ಪ್ರೇಮ ಪಕ್ಷಿಗಳು ನೀರೊಳಗಿನ ಕಿಸ್vndnf ದಾಖಲೆಯನ್ನು ಸ್ಥಾಪಿಸಿದವು. ಏಕೆಂದರೆ ಅವರ ಜಂಟಿ ಪ್ರೀತಿ ಸಾಗರದಷ್ಟಿದೆ' ಎಂದು ಹೇಳಲಾಗಿದೆ. 

Scroll to load tweet…

ತಯಾರಿ ಕೂಡಾ ಜೋರಾಗಿತ್ತು!
ದಂಪತಿಯು ಬೆಳಿಗ್ಗೆ 7.30 ಕ್ಕೆ ತಮ್ಮ ಪ್ರಯತ್ನವನ್ನು ಪ್ರಾರಂಭಿಸಿದರು ಮತ್ತು ಅವರು ರೆಕಾರ್ಡ್ ಅನ್ನು ಮುರಿಯಲು ನಿರ್ಧರಿಸುವ ಮೊದಲು ಎರಡು ಮತ್ತು ಮೂರು ನಿಮಿಷಗಳ ಕಾಲ ಕೆಲವು ಉಸಿರಾಟದ ಅಭ್ಯಾಸ ಮತ್ತು ಎರಡು ಪ್ರಾಯೋಗಿಕ ನೀರೊಳಗಿನ ಚುಂಬನಗಳನ್ನು ಮಾಡಿದರು. ಬೆತ್ ಮತ್ತು ಮೈಲ್ಸ್ ದೇಹದೊಳಗೆ ಕಾರ್ಬನ್ ಡೈಆಕ್ಸೈಡ್ ನಿರ್ಮಾಣವಾಗುತ್ತಿದ್ದಂತೆ, ಅವರು ಮೇಲ್ಮೈಗೆ ಈಜುವ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳುವ ಬಯಕೆಯೊಂದಿಗೆ ಹೋರಾಡಬೇಕಾಯಿತು ಎಂದು GWR ವರದಿ ಮಾಡಿದೆ. 

Brain Dead ಮಹಿಳೆಯರಿಂದ್ಲೂ ಮಗು ಪಡೆಯಬಹುದು?

ಅಂದ ಹಾಗೆ ಬೆತ್, ನಾಲ್ಕು ಬಾರಿ ದಕ್ಷಿಣ ಆಫ್ರಿಕಾದ ಫ್ರೀಡೈವ್ ಚಾಂಪಿಯನ್ ಆಗಿದ್ದಾರೆ. ಅಷ್ಟೇ ಅಲ್ಲ. ದಂಪತಿಯು ನೀರೊಳಗಿನ ಚಲನಚಿತ್ರ ನಿರ್ಮಾಪಕರಾಗಿ ಕೂಡಾ ಕೆಲಸ ಮಾಡುತ್ತಾರೆ. ಅಷ್ಟಾಗಿಯೂ ಈ ಲಾಂಗೆಸ್ಟ್ ಕಿಸ್ ಜೀವವನ್ನೇ ಕಸಿಯುವಷ್ಟು ಕಷ್ಟದಾಯಕವಾಗಿತ್ತು ಎಂದವರು ಒಪ್ಪಿಕೊಳ್ಳುತ್ತಾರೆ.