ಹುಡುಗಿಯರ ಈ ಐದು ಗುಟ್ಟುಗಳು ನಿಮಗೆ ತಿಳಿದಿರಲೇಬೇಕು!
ಹುಡುಗಿಯರು ತಮಗೆ ಇಂಥದ್ದು ಇಷ್ಟ ಎಂದು ನೇರವಾಗಿ ಹೇಳುವುದಿಲ್ಲ. ಹೇಳುವ ವಾತಾವರಣವೂ ಸಾಕಷ್ಟು ಬಾರಿ ಇರುವುದಿಲ್ಲ. ಆದರೆ, ಅವರಿಗೆ ಇಷ್ಟವಾಗುವ ಕೆಲವು ಗುಟ್ಟುಗಳಿವೆ. ಅವುಗಳನ್ನು ಅರಿತುಕೊಂಡರೆ ಹುಡುಗಿಯರ ಮನಸ್ಸು ಗೆಲ್ಲುವುದು ಸುಲಭ.
ಹುಡುಗಿಯರನ್ನು (Girls) ಅರ್ಥ (Understand) ಮಾಡಿಕೊಳ್ಳುವುದು ಅತಿ ಕಷ್ಟ ಎನ್ನುವ ಮಾತಿದೆ. ಇದು ನಿಜಕ್ಕೂ ಹೌದೋ ಅಲ್ಲವೋ ಎನ್ನುವ ವಿಚಾರ ಈಗ ಬೇಡ. ಆದರೆ, ಎದುರಿಗಿರುವ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಲು ಸಾಮಾನ್ಯವಾಗಿ ಎಲ್ಲರೂ ಬಯಸುವುದು ಸಹಜ. ಅದರಲ್ಲೂ ಸಂಬಂಧದಲ್ಲಿ ಎದುರಿನ ವ್ಯಕ್ತಿಯನ್ನು ಅರ್ಥೈಸಿಕೊಳ್ಳುವುದು ಅಗತ್ಯವೂ ಹೌದು. ಹೀಗಾಗಿ, ಹುಡುಗಿಯರಾಗಲೀ, ಹುಡುಗರಾಗಲೀ (Boys) ಪರಸ್ಪರ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಲೇ ಇರುತ್ತಾರೆ.
ಹುಡುಗಿಯರು ಗುಟ್ಟಾಗಿ ತಮ್ಮ ಸ್ನೇಹಿತನ (Friend) ಸ್ನೇಹಿತರು, ಸಹೋದ್ಯೋಗಿಗಳು, ಕುಟುಂಬಸ್ಥರು, ಅವರ ವೃತ್ತಿ, ಶಿಕ್ಷಣ (Education), ಅವರ ಇಷ್ಟಾನಿಷ್ಟಗಳ (Likings) ಬಗ್ಗೆ ಅರಿತುಕೊಳ್ಳಲು ಯತ್ನಿಸುತ್ತಾರೆ. ಹಾಗೆಯೇ ಹುಡುಗರೂ ಸಹ ಹುಡುಗಿಯರ ಮನಸ್ಥಿತಿ, ಆಕೆಗೆ ಯಾವುದು ಇಷ್ಟ, ಹೇಗಿದ್ದರೆ ಇಷ್ಟ ಇತ್ಯಾದಿ ಅಂಶಗಳ ಕುರಿತು ಭಾರೀ ತಲೆಕೆಡಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಹುಡುಗಿಯರಿಗೆ ಇಷ್ಟವಾಗದ ಕೆಲವು ವಿಚಾರಗಳಿವೆ. ಅವುಗಳನ್ನು ತಿಳಿದುಕೊಂಡರೆ ಹುಡುಗರಿಗೆ ಅವರ ಮನಸ್ಥಿತಿ ಅರಿತುಕೊಳ್ಳಲು ಹೆಚ್ಚು ಅನುಕೂಲವಾಗಬಹುದು.
ಹುಡುಗಿಯರಿಗೆ ಇಷ್ಟವಾಗದ ಆ ಸಂಗತಿಗಳು ಯಾವುವು?
• ಕಣ್ಣಲ್ಲಿ ಕಣ್ಣನಿಟ್ಟು (Eye Contact) ಮಾತನಾಡುವ ಹುಡುಗರೆಂದರೆ ಇಷ್ಟ
ಹೌದು, ಹುಡುಗಿಯರಿಗೆ ಕಣ್ಣಿಗೆ ಕಣ್ಣು ಕೂಡಿಸಿ ಮಾತನಾಡುವ ಹುಡುಗರೆಂದರೆ ಇಷ್ಟವಾಗುತ್ತಾರೆ. ಸಮೀಕ್ಷೆ(Survey)ಯೊಂದರ ಪ್ರಕಾರ, ಇದು ಸಾಬೀತಾಗಿದೆ. ಕಣ್ಣಲ್ಲಿ ಕಣ್ಣನಿಟ್ಟು ಮಾತನಾಡುವ ಹುಡುಗರು ಹೆಚ್ಚು ಆತ್ಮವಿಶ್ವಾಸಿ(Confident) ಗಳಾಗಿರುತ್ತಾರೆ. ಆಚೀಚೆ ನೋಡುತ್ತ, ತಲೆತಗ್ಗಿಸಿ ಮಾತನಾಡುವ ಹುಡುಗರು ಹುಡುಗಿಯರಿಗೆ ಸ್ವಲ್ಪವೂ ಹಿಡಿಸುವುದಿಲ್ಲ.
• ಜಡ್ಜ್ (Judgement) ಮಾಡುವ ಹುಡುಗರಿಂದ ದೂರ
ಹುಡುಗರು ಈ ಅಂಶದ ಬಗ್ಗೆ ಹೆಚ್ಚು ಗಮನ ನೀಡಬೇಕು. ಏಕೆಂದರೆ, ಹುಡುಗರು ಸ್ವಲ್ಪ ತಮ್ಮದೇ ನಿಲುವುಗಳನ್ನು ಹೊಂದಿ ಜಡ್ಜ್ ಮಾಡುವ ಮನಸ್ಥಿತಿ ಹೊಂದಿರುತ್ತಾರೆ. ಆದರೆ, ಅಂತಹ ಹುಡುಗರು ಮಹಿಳೆಯರಿಗೆ ಇಷ್ಟವಾಗುವುದಿಲ್ಲ. ಹುಡುಗರು ಅನೇಕ ವಿಚಾರಗಳ ಬಗ್ಗೆ ತಮ್ಮದೇ ರೀತಿಯಲ್ಲಿ ಜಡ್ಜ್ ಮಾಡಲು ಶುರು ಮಾಡುತ್ತಾರೆ. ಅದರಲ್ಲೂ ಹಳೆಯ ಜಡ್ಡುಗಟ್ಟಿದ ವಿಚಾರಗಳಿಗೆ ಕಟ್ಟುಬಿದ್ದು ಯೋಚಿಸುವವರು ನೀವಾಗಿದ್ದರೆ ನಿಮ್ಮ ಚಿಂತನಾವಿಧಾನವನ್ನು ಬದಲಿಸಿಕೊಳ್ಳಬೇಕಾಗುತ್ತದೆ.
ದಪ್ಪಗಿದ್ದೇವೆಂಬ ಚಿಂತೆ ಬಿಡಿ, ಆರಾಮಾಗಿ ಈ dress ಧರಿಸಿ
• ಸರ್ ಪ್ರೈಸ್ (Surprise) ನೀಡಿದರೆ ಭಾರೀ ಖುಷಿ
ಹುಡುಗಿಯರಿಗೆ ಏನಾದರೊಂದು ಸರ್ ಪ್ರೈಸ್ ನೀಡುತ್ತಿದ್ದರೆ ಬಹಳ ಖುಷಿಯಾಗುತ್ತದೆ. ಅವರು ಇದನ್ನು ನೇರವಾಗಿ ಪ್ರಕಟಿಸದೆ ಇದ್ದರೂ ಸಾಮಾನ್ಯವಾಗಿ ಎಲ್ಲ ಹುಡುಗಿಯರಿಗೂ ಇದು ಇಷ್ಟವಾಗುತ್ತದೆ. ಅವರು ಯಾರು ಬೇಕಿದ್ದರೂ ಆಗಿರಲಿ, ನಿಮ್ಮ ಸ್ನೇಹಿತೆ, ಗರ್ಲ್ ಫ್ರೆಂಡ್ (Girl Friend), ಅಮ್ಮ (Mother) ಅಥವಾ ಸಹೋದರಿ (Sister) ಯಾರೇ ಆಗಿದ್ದರೂ ಅವರಿಗೆ ಅಚ್ಚರಿದಾಯಕ ಗಿಫ್ಟ್ (Gift) ಅಥವಾ ಸನ್ನಿವೇಶ ನಿರ್ಮಿಸಿದರೆ ಭಾರೀ ಸಂತಸಗೊಳ್ಳುತ್ತಾರೆ.
• ಹೆಚ್ಚು ಜೋಕ್ (Joke) ಮಾಡುವ ಹುಡುಗರು ಇಷ್ಟ
ಮಾತಿನ ಮಧ್ಯೆ ಮಧ್ಯೆ ಚೆನ್ನಾಗಿ ಜೋಕ್ ಕಟ್ ಮಾಡುವ ಹುಡುಗರು ಹುಡುಗಿಯರಿಗೆ ಇಷ್ಟವಾಗುತ್ತಾರೆ. ಮಾತನಾಡಬೇಕೆಂದು ಏನೇನೋ ಮಾತನಾಡದೆ, ಬೋರ್ (Bore) ಹೊಡೆಸದೆ ಇರುವಂಥವರಾಗಬೇಕು. ಅವರ ಮಾತಿಗೆ ನಿಜಕ್ಕೂ ನಗು (Smile) ಬರುವಂತಿರಬೇಕು. ಹುಡುಗರು ಸದಾಕಾಲ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವವರಾಗಿದ್ದರೆ, ದುಃಖಿತರಾಗಿದ್ದರೆ ಅವರು ಇಷ್ಟಪಡುವುದಿಲ್ಲ. ನೀವೂ ಸಹ ನಿಮ್ಮ ಸಮಸ್ಯೆಗಳನ್ನು (Problems) ಪದೇ ಪದೆ ಹುಡುಗಿಯೆದುರು ಹೇಳಿಕೊಳ್ಳುತ್ತಿದ್ದರೆ ಅದನ್ನು ಬದಲಿಸಿಕೊಳ್ಳಿ. ಸ್ವಲ್ಪ ನಗುವುದನ್ನು ಕಲಿತುಕೊಳ್ಳಿ. ಜೋಕ್ ಮಾಡುವುದನ್ನು ಕಲಿತುಕೊಳ್ಳಿ. ಸಮಸ್ಯೆಗಳನ್ನು ಹೇಳಿಕೊಳ್ಳಲೇಬಾರದು ಎಂದಲ್ಲ, ಆದರೆ, ಅವುಗಳನ್ನು ಮಾತ್ರವೇ ಹೇಳುತ್ತಿದ್ದರೆ ಹುಡುಗಿಯರು ಬೋರೆದ್ದು ಹೋಗುತ್ತಾರೆ. ಕೆಲವು ಹುಡುಗರಿಗೆ ಸಿಂಪತಿ ಗಿಟ್ಟಿಸಿಕೊಳ್ಳಲು ಬರೀ ದುಃಖವನ್ನೇ ಹೇಳಿಕೊಳ್ಳುವ ಅಭ್ಯಾಸವಿರುತ್ತದೆ. ಇದನ್ನು ಬಿಟ್ಟಾಕಿ.
ಮೂಡ್ ಆಫ್ ಆಗಿದ್ಯಾ ? ಇಂಥಾ ಆಹಾರ ಸೇವಿಸಿ, ಫುಲ್ ಹ್ಯಾಪಿಯಾಗ್ತೀರಿ
• ಗೌರವ (Respect) ನೀಡುವ ಹುಡುಗರೆಂದರೆ ಮೆಚ್ಚುಗೆ (Like)
ಹುಡುಗಿಯರನ್ನು ಎರಡನೇ ದರ್ಜೆಯ ಪ್ರಜೆಯನ್ನಾಗಿ ನೋಡದೆ ಸಮಾನ ಗೌರವ ನೀಡುವ ಹುಡುಗರು ಅವರಿಗೆ ಮೆಚ್ಚುಗೆಯಾಗುತ್ತಾರೆ. ಈ ವಿಚಾರವನ್ನು ಮದುವೆಯಾದ ಮಹಿಳೆಯರು ಪತಿಗೆ ಹೇಳಬಹುದೇ ವಿನಾ ಹುಡುಗಿಯರು ತಮ್ಮ ಸ್ನೇಹಿತರ ಬಳಿ ಹಂಚಿಕೊಳ್ಳುವುದು ಕಡಿಮೆ. ಗೌರವದಿಂದ ಮಾತನಾಡಿದರೆ ಎಲ್ಲ ಮಹಿಳೆಯರೂ (Women) ನಿಮ್ಮನ್ನು ಮೆಚ್ಚುಗೆಯಿಂದ ಕಾಣುತ್ತಾರೆ.