Watch: ದೆಹಲಿ ಮಟ್ರೋ ರೈಲಿನಲ್ಲಿ ಲವರ್‌ಗಳ ಕಿಸ್ಸಿಂಗ್, 'ಸ್ವಲ್ಪನಾದ್ರೂ ಸಂಸ್ಕತಿ ಉಳಿಸಿಕೊಳ್ಳಿ' ಎಂದು ಟೀಕಿಸಿದ ಜನ!
ದೆಹಲಿ ಪ್ರತಿದಿನ ವಿವಿಧ ಕಾರಣಗಳಿಗಾಗಿ ಸುದ್ದಿಯಲ್ಲಿರುತ್ತದೆ. ಒಂದೋ ರಾಜಕೀಯ ವಿಚಾರದಲ್ಲಿ ಇಲ್ಲವೇ, ಬೇರೆ ಯಾವುದೋ ಕಾರಣಕ್ಕಾಗಿ ಸುದ್ದಿಯಲ್ಲಿರುತ್ತದೆ. ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಆಗುವ ಘಟನೆಗಳು ರಾಷ್ಟ್ರವ್ಯಾಪಿ ಸುದ್ದಿಯಾಗುತ್ತಿವೆ.
ನವದೆಹಲಿ (ಏ.7): ಕಳೆದ ಕೆಲವು ದಿನಗಳಿಂದ ದೆಹಲಿ ಮೆಟ್ರೋ ಕುರಿತಾದ ವಿಡಿಯೋಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿವೆ. ಅರೆಬರೆ ಬಟ್ಟೆ ತೊಟ್ಟುಕೊಂಡು ಮೆಟ್ರೋ ಏರಿದ್ದ ರಿದಂ ಚನ್ನಾ ಎನ್ನುವ ಹುಡುಗಿಯ ವೇಷಕ್ಕೆ ಟ್ವಿಟರ್‌ನಲ್ಲಿ ಪರ-ವಿರೋಧದ ಕಾಮೆಂಟ್‌ಗಳು ಬಂದಿದ್ದವು. ಅದಕ್ಕೂ ಮುನ್ನ, ಇಬ್ಬರು ಪ್ರಯಾಣಿಕರ ನಡುವೆ ಯಾವುದೇ ಕಾರಣಕ್ಕೆ ನಡೆದ ಜಗಳ ವಿಪರೀತಕ್ಕೆ ಹೋಗಿದ್ದರಿಂದ ಮಹಿಳೆಯೊಬ್ಬಳು ಪೆಪ್ಪರ್ ಸ್ಪ್ರೇ ಹಾಕಿದ್ದ ಘಟನೆ ಕೂಡ ನಡೆದಿತ್ತು. ಈಗ ಮತ್ತೊಮ್ಮೆ ದೆಹಲಿ ಮೆಟ್ರೋ ಸುದ್ದಿಯಲ್ಲಿದೆ. ಈಗ ಬಾರಿಯ ವಿಡಿಯೋ ನೋಡಿದ ನೆಟ್ಟಿಗರು, ಸ್ವಲ್ಪನಾದ್ರೂ ಸಂಸ್ಕೃತಿ ಉಳಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು, ದೇಶದಲ್ಲಿ ಸಂಸ್ಕೃತಿ ಅನ್ನೋದು ದೆಹಲಿ ಮೆಟ್ರೋ ಏರುವಾಗಿ ಕೊನೆಯಾಗುತ್ತದೆ ಎಂದು ಟೀಕೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಲವರ್‌ಗಳು ಕೈಕೈ ಹಿಡಿದುಕೊಂಡು ಮೆಟ್ರೋದಲ್ಲಿ ನಿಂತಿದ್ದು ಮಾತ್ರವಲ್ಲದೆ, ಸುತ್ತಲಿನ ಜನರ ಪರಿವೇ ಇಲ್ಲದೇ, ಲಿಪ್‌ಲಾಕ್ ಮಾಡುತ್ತಾ, ರೊಮಾನ್ಸ್ ಮಾಡುತ್ತಿದ್ದಾರೆ. ಈ ವಿಡಿಯೋವಿಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೆಟ್ರೋ ರೈಲಿನಲ್ಲಿ ಸಾರ್ವಜನಿಕವಾಗಿ ಕಿಸ್ ಮಾಡುತ್ತಿರುವ ವಿಡಿಯೋ ನೋಡಿ ಕೆಲವರು ಟೀಕೆ ಮಾಡಿದ್ದರೆ, ಇನ್ನೂ ಕೆಲವವರು ಇದರ ಪರವಾಗಿ ಮಾತನಾಡಿದ್ದಾರೆ.
ಪ್ರೀತಿಸಿದ ಜೋಡಿಗಳು ಕಿಸ್ ಮಾಡಿಕೊಳ್ಳುವಾಗ ಅದನ್ನು ಅವರ ಅನುಮತಿಯಿಲ್ಲದೆ ರೆಕಾರ್ಡ್ ಮಾಡಿದ್ದಲ್ಲದೆ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಕೂಡ ಮಾಡಿಕೊಂಡಿದ್ದಾರೆ. ಇಂಥವುಗಳೆಲ್ಲಾಬಹಳ ಸಹಜ. ಪ್ರೀತಿಯ ಪ್ರಾಮಾಣಿಕ ಅಭಿವ್ಯಕ್ತಪಡಿಸುವಿಕೆ ಇದಾಗಿದೆ ಎಂದು ಹೇಳಿದ್ದಾರೆ.
ಮಹಿಳೆಯೊಬ್ಬಳು ಇದನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ದೆಹಲಿಯ ನಾಚಿಕೆಗೇಡಿನ ವೈರಲ್ ವಿಡಿಯೋ ಇದು. ಪಾಟ್ನಾ ಜಂಕ್ಷನ್‌ನ ಘಟನೆಯ ಬಳಿಕ, ದೆಹಲಿ ಮೆಟ್ರೋ ಟ್ರೇನ್‌ನಲ್ಲಿ ಒಮ್ಮೆಲೆ ಎಲ್ಲಾ ಪ್ರಯಾಣಿಕರು ತಲೆತಗ್ಗಿಸುವಂತಾಯಿತು. ಶಾಂತವಾಗಿ ಕಿಸ್ ಮಾಡುತ್ತಿರುವ ವಿಡಿಯೋ, ನಾಚಿಕೆಗೇಡು' ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ವ್ಯಕ್ತಿಯೊಬ್ಬ ಟ್ವೀಟ್ ಮಾಡಿದ್ದು, 'ಭಾರತದಲ್ಲಿ ಇಂದು ಆಗುತ್ತಿರುವ ಬಹಳಷ್ಟು ಸಂಗತಿಗಳ ಮೂಲ ತಾಣ ದೆಹಲಿ ಮೆಟ್ರೋ. ಸೀಟ್‌ಗಾಗಿ ಇಲ್ಲಿ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡಿದ್ದರು. ಹೆಚ್ಚೂ ಕಡಿಮೆ ಬೆತ್ತಲೆಯಾಗಿಯೇ ಪ್ರಯಾಣ ಮಾಡಿದ್ದ, ಹುಡುಗಿಯೊಬ್ಬಳು ಬೋಲ್ಡ್ ಆಗಿ ಹೇಳಿಕೆ ನೀಡುತ್ತಾರೆ. ಈಗ ಲವರ್‌ಗಳು ಸಾರ್ವಜನಿಕವಾಗಿಯೇ ಲಿಪ್ ಲಾಕ್ ಮಾಡಿಕೊಂಡಿಕೊಂಡಿದ್ದಾರೆ. ಒಟ್ಟಾರೆ ಪ್ರತಿದಿನದ ಮನರಂಜನೆಗೆ ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಂಸ್ಕತಿ ಅನ್ನೋದು ಇಲ್ಲಿ ಬದಲಾಗುತ್ತದೆ' ಎಂದು ಬರೆದಿದ್ದಾರೆ.
ನನ್ನ ಬಟ್ಟೆ ನನ್ನ ಆಯ್ಕೆ ಅಂತ ಹೇಳಿ ಬ್ರಾ, ಮಿನಿ ಸ್ಕರ್ಟ್ ಹಾಕ್ಕೊಂಡು ಮೆಟ್ರೋ ಹತ್ತೋದು ಸರೀನಾ?
ಇದರ ನಡುವೆ ಇನ್ನೊಬ್ಬ ವ್ಯಕ್ತಿ ಭಿನ್ನ ಅಭಿಪ್ರಾಯ ನೀಡಿದ್ದಾರೆ. "ದೆಹಲಿ ಮೆಟ್ರೋದಲ್ಲಿ ಜೋಡಿಗಳು ಚುಂಬಿಸುತ್ತಿರುವ ವೀಡಿಯೊವನ್ನು ಇತ್ತೀಚೆಗೆ ಟ್ವಿಟರ್‌ನಲ್ಲಿ(Twitter) ಇದು ಸಾಂಸ್ಕೃತಿಕ ನರಮೇಧ ಎಂದು ಹೇಳಿಕೊಂಡು ಶೇರ್ ಮಾಡಿಕೊಳ್ಳಲಾಗುತ್ತಿದೆ. ನಾನು ಮೊದಲ ಬಾರಿಗೆ ಯುರೋಪ್‌ಗೆ ಭೇಟಿ ನೀಡಿದಾಗ, ಜನರು ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುವುದನ್ನು ನೋಡಿ ನನಗೆ ಸಂತೋಷವಾಯಿತು. ಇದಕ್ಕೆ ಸಾಕ್ಷಿಯಾಗುವುದು ನನಗೆ ಖುಷಿಯ ವಿಷಯ' ಎಂದು ಬರೆದುಕೊಂಡಿದ್ದಾರೆ.
ಇವಳೇನು ಮತ್ತೊಬ್ಬ ಉರ್ಫಿ ಜಾವೇದಾ? ತುಂಡುಡುಗೆ ತೊಟ್ಟು ಮೆಟ್ರೋ ಹತ್ತಿದ ಯುವತಿ!
ಚುಂಬನ (Kiss ) ಸೇರಿದಂತೆ ಪ್ರೀತಿಯ ಸಾರ್ವಜನಿಕ ಪ್ರದರ್ಶನಗಳು ಭಾರತದಲ್ಲಿ (India) ಕಾನೂನುಬಾಹಿರವಲ್ಲ. ಆದಾಗ್ಯೂ, ನಿರ್ದಿಷ್ಟ ಸ್ಥಳಗಳು ಮತ್ತು ಸಂದರ್ಭಗಳಲ್ಲಿ, ವಿಶೇಷವಾಗಿ ಹೆಚ್ಚು ಸಂಪ್ರದಾಯವಾದಿ ಮತ್ತು ಸಾಂಪ್ರದಾಯಿಕ ಪ್ರದೇಶಗಳಲ್ಲಿ ಇದು ಸಾಂಸ್ಕೃತಿಕವಾಗಿ ಸೂಕ್ತವಲ್ಲ ಎಂದು ಪರಿಗಣನೆ ಮಾಡಲಾಗುತ್ತದೆ. ಸಾರ್ವಜನಿಕ ಪ್ರದೇಶಗಳಲ್ಲಿ ಕಿಸ್ ಮಾಡಿದ್ದ ಕಾರಣಕ್ಕೆ ಜೋಡಿಗಳಿಗೆ ದಂಡ ವಿಧಿಸಿದ ಹಾಗೂ ಬಂಧಿಸಿದ ಪ್ರಕರಣಗಳೂ ಭಾರತದಲ್ಲಿದೆ. ಇದನ್ನು ಸಾರ್ವಜನಿಕವಾಗಿ (Delhi Metro) ಅಶ್ಲೀಲತೆ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ಎಂದು ಪರಿಗಣನೆ ಮಾಡಲಾಗುತ್ತದೆ. ಕೆಲವೊಮ್ಮೆ ಇದು ನೈತಿಕ ಪೊಲೀಸ್‌ಗಿರಿಗೂ ಕಾರಣವಾಗುತ್ತದೆ.