ಪ್ರೀತಿಯ ಶ್ವಾನದ ಅಗಲಿಕೆಯಿಂದ ಹೊರಬರಲು ಚಿರತೆ ದತ್ತು ಪಡೆದ ಯುವತಿ
ಗುಜರಾತ್‌ನ ವಡೋದರಾದ ಮಹಿಳೆಯೊಬ್ಬರು ತಮ್ಮ ಶ್ವಾನದ ಸಾವಿನ ನಂತರ ಚಿರತೆಯೊಂದನ್ನು ದತ್ತು ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ.
ವಡೋದರಾ: ಗುಜರಾತ್‌ನ ವಡೋದರಾದ ಮಹಿಳೆಯೊಬ್ಬರು ತಮ್ಮ ಶ್ವಾನದ ಸಾವಿನ ನಂತರ ಚಿರತೆಯೊಂದನ್ನು ದತ್ತು ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಶ್ವಾನಗಳು ಮನುಷ್ಯನ ಆಪ್ತ ಸ್ನೇಹಿತರು. ಮನುಷ್ಯರೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವ ಶ್ವಾನಗಳು ಮನುಷ್ಯರೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸುತ್ತವೆ. ಮನುಷ್ಯನ ಕಷ್ಟಸುಖದಲ್ಲಿ ಜೊತೆ ನಿಲ್ಲುವ ನಿಷ್ಠಾವಂತ ಶ್ವಾನದ ಸಾವನ್ನು ಮನುಷ್ಯರಿಗೂ ಅರಗಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ.
ಮಾಲೀಕ ತೀರಿಕೊಂಡಾದ ಆಹಾರ ತೊರೆದು ತಾನು ಪ್ರಾಣ ಬಿಟ್ಟ ಶ್ವಾನದ ಕತೆಯನ್ನು ಕೇಳಿದ್ದೇವೆ. ಜೊತೆಗೆ ಮಾಲೀಕನ ರಕ್ಷಣೆಗಾಗಿ ಹಾವಿನೊಂದಿಗೆ ಕಾದಾಟವಾಡಿ ತಾನು ಪ್ರಾಣಿ ಬಿಟ್ಟ ಘಟನೆಯೂ ನಡೆದಿದೆ. ಹೀಗೆ ಶ್ವಾನಗಳು ಹೇಗೆ ಮನುಷ್ಯರ ಬಗ್ಗೆ ನಿಕಟ ಭಾವ ಹೊಂದಿರುತ್ತವೋ ಹಾಗೆಯೇ ಮನುಷ್ಯರಿಗೂ ಅವುಗಳ ಒಡನಾಟ ಬಿಡಲಾಗದಷ್ಟು ಕಾಡುತ್ತವೆ. ಹೀಗಾಗಿಯೇ ಯುವತಿಯೊಬ್ಬಳು ತಮ್ಮ ಪ್ರೀತಿಯ ಶ್ವಾನದ ಸಾವಿನ ನಂತರ ಚಿರತೆಯೊಂದನ್ನು ದತ್ತು ಪಡೆದಿದ್ದಾರೆ.
Davanagere: ತುಂಗಾ ಚಾರ್ಲಿ ನೀಡಿದ ಸುಳಿವಿನ ಮೇಲೆ ಆರೋಪಿಯನ್ನು ಬಂಧಿಸಿದ ಪೊಲೀಸರು!
ವಡೋದರಾದ ಗರೀಮಾ ಮಲ್ವಂಕರ್ ಅವರ ಶ್ವಾನ ಪ್ಲುಟೋ ಅಸೌಖ್ಯದಿಂದಾಗಿ ದಿಢೀರ್ ಸಾವನ್ನಪ್ಪಿತ್ತು. ಇದು ಗರೀಮಾ ಮಲ್ವಂಕರ್ ಅವರನ್ನು ದುಃಖದ ಕಡಲಿಗೆ ತಳ್ಳಿತ್ತು. ಆ ದುಃಖದಲ್ಲೂ ತನ್ನ ಪ್ರೀತಿಯ ಶ್ವಾನ ಪ್ಲುಟೋ ಜೊತೆ ಕಳೆದ ಕೆಲವು ಖುಷಿಯ ಕ್ಷಣಗಳನ್ನು ಸಂಭ್ರಮಿಸಲು ಗರೀಮಾ ಮಲ್ವಂಕರ್ ನಿರ್ಧರಿಸಿದರು. ಈ ನಿರ್ಧಾರಕ್ಕೆ ಬಂದ ಅವರು ವಡೋದರಾದ ಸಯಾಜಿಬಾಗ್‌ನಲ್ಲಿರುವ ಮೃಗಾಲಯವೊಂದರಿಂದ ಅವರು ಚಿರತೆಯೊಂದನ್ನು ದತ್ತು ಪಡೆದಿದ್ದಾರೆ.
ಮಾಂಸ ನೋಡಿ ಟಿವಿ ಸ್ಕ್ರಿನ್ ನೆಕ್ಕಲು ಶುರು ಮಾಡಿದ ಶ್ವಾನ : ವಿಡಿಯೋ ವೈರಲ್
ಪ್ಲುಟೋ ಜೂನ್ 24 ರಂದು ಜನಿಸಿತ್ತು. ಈ ಲ್ಯಾಬ್ರಡಾರ್ ತಳಿಯ ಶ್ವಾನದೊಂದಿಗೆ ತಾನು ಬಹಳ ಆತ್ಮೀಯ ಸಂಬಂಧವನ್ನು ಹೊಂದಿದ್ದೆ. ಅದೂ ನನಗೆ ನನ್ನ ಕುಟುಂಬ ಸದಸ್ಯರಿಗಿಂತ ಹೆಚ್ಚಾಗಿತ್ತು. ಹೀಗಾಗಿ ಆತನ ಹುಟ್ಟುಹಬ್ಬದಂದು ತಾನು ಚಿರತೆಯೊಂದನ್ನು ದತ್ತು ಪಡೆದೆ ಎಂದು ಆಕೆ ಹೇಳಿದ್ದಾರೆ.
ಕೆಲ ತಿಂಗಳ ಹಿಂದೆ ಅಹ್ಮದಾಬಾದ್‌ನ ಯುವಕನೋರ್ವ ಶ್ವಾನದ ಹುಟ್ಟುಹಬ್ಬವನ್ನು ಯಾವುದೋ ಮದುವೆ ಕಾರ್ಯಕ್ರಮಕ್ಕೆ ಕಡಿಮೆ ಇಲ್ಲದಂತೆ ಅದ್ದೂರಿಯಾಗಿ ಆಚರಿಸಿದ್ದ. ಹೆಚ್ಚಿನ ಕುಟುಂಬಗಳಲ್ಲಿ ಸಾಕುಪ್ರಾಣಿಗಳು ಕೇವಲ ಪ್ರಾಣಿಗಳಲ್ಲ, ಅವರು ಕುಟುಂಬದ ಪ್ರಮುಖ ಸದಸ್ಯರ ಸ್ಥಾನವನ್ನು ಪಡೆಯುತ್ತವೆ. ಪ್ರಸ್ತುತ ಈ ಶ್ವಾನವೂ ಹಾಗೆ. ಅಬ್ಬಿ ಹೆಸರಿನ ಈ ಶ್ವಾನದ ಬರ್ತ್‌ಡೇ ಗುಜರಾತ್‌ನ (Gujarat) ಅಹ್ಮದಾಬಾದ್ (Ahmedabad) ನ ನಿಕೋಲ್ ( Nikol) ಪ್ರದೇಶದಲ್ಲಿ ನಡೆದಿತ್ತು. ಅಬ್ಬಿಗೆ ಇದು 2ನೇ ವರ್ಷದ ಹುಟ್ಟುಹಬ್ಬವಾಗಿತ್ತು. ಅಬ್ಬಿಯ ಬರ್ತ್‌ಡೇ ಪಾರ್ಟಿಗಾಗಿ ಹಲವಾರು ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಹುಟ್ಟು ಹಬ್ಬಕ್ಕಾಗಿ ಸಿದ್ದಗೊಂಡ ಸ್ಥಳವೂ ಯಾವುದೇ ಮದುವೆ ಪಾರ್ಟಿಗಿಂತ ಕಡಿಮೆ ಇರಲಿಲ್ಲ. ಮಧುಬನ್ ಗ್ರೀನ್ (Madhuban Green)ನಲ್ಲಿ ದೊಡ್ಡ ಪ್ಲಾಟ್ ಅನ್ನು ಪಾರ್ಟಿಗಾಗಿ ಕಾಯ್ದಿರಿಸಲಾಗಿತ್ತು. ಮತ್ತು ಸುಂದರವಾದ ಅಲಂಕಾರಗಳು ಮತ್ತು ಶ್ವಾನದ ದೊಡ್ಡ ಪೋಸ್ಟರ್‌ಗಳೊಂದಿಗೆ ಟೆಂಟ್‌ಗಳನ್ನು ಸ್ಥಾಪಿಸಲಾಗಿತ್ತು.
ಎಲ್ಲವೂ ನಿಜವಾಗಿಯೂ ಅದ್ದೂರಿ ಮತ್ತು ಭವ್ಯವಾಗಿತ್ತು. ಕೇವಲ ನಾಯಿಯ ಹುಟ್ಟುಹಬ್ಬಕ್ಕೆ ಇಷ್ಟೊಂದೆಲ್ಲಾ ವ್ಯವಸ್ಥೆಗಳನ್ನು ಮಾಡಿರುವುದನ್ನು ನೋಡಿ ಪಾರ್ಟಿಗೆ ಬಂದ ಅತಿಥಿಗಳು ಆಶ್ಚರ್ಯಚಕಿತರಾದರು. ಹುಟ್ಟುಹಬ್ಬದ ಪಾರ್ಟಿಗಾಗಿ ಅಬ್ಬಿಗೆ ಕಪ್ಪು ಉಡುಗೆ ಹಾಗೂ ಸ್ಕಾರ್ಪ್‌ನ್ನು ತೊಡಿಸಲಾಗಿತ್ತು. ಹುಟ್ಟುಹಬ್ಬದ ದೃಶ್ಯಗಳಲ್ಲಿ ಕಾಣಿಸುವಂತೆ ಗಾರ್ಬಾ ನೃತ್ಯ, ಲೈವ್ ಆರ್ಕೆಸ್ಟ್ರಾ ಮತ್ತು ಸಂಗೀತವನ್ನು ಕೂಡ ಆಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ.
ಈ ಶ್ವಾನದ ಹುಟ್ಟುಹಬ್ಬದ ಫೋಟೋಗಳು ನಂತರ ಇಂಟರ್‌ನೆಟ್‌ನಲ್ಲಿ ರಾರಾಜಿಸುತ್ತಿದ್ದು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದರು. ಶ್ವಾನದ ಹುಟ್ಟುಹಬ್ಬಕ್ಕೆ ಇಷ್ಟೊಂದು ಖರ್ಚು ಮಾಡುವುದೇ ಎಂದು ಎಲ್ಲರೂ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟಿದ್ದರು.