Asianet Suvarna News Asianet Suvarna News

ವಯಾಗ್ರಗಳ ತವರು ಉತ್ತರಾಖಂಡದ ಬೆಟ್ಟ, 1 ಕೆಜಿ ವಯಾಗ್ರಕ್ಕೆ ಬರೋಬ್ಬರಿ 20 ಲಕ್ಷ ರೂ.

ಉತ್ತರಾಖಂಡದ ನಾಡು ಹಲವು ಅರ್ಥಗಳಲ್ಲಿ ವಿಶಿಷ್ಟವಾಗಿದೆ. ಅಪರೂಪದ ಹೂವುಗಳ ಮನೆಯಿಂದ ಹಿಡಿದು ದುಬಾರಿ ಅಣಬೆಗಳವರೆಗೆ. ಹಾಗೆಯೇ ಇಲ್ಲಿ  ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಯಾಗ್ರ ಕೂಡಾ ಸಿಗುತ್ತೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Uttarakhand Hills Are Home To Himalayan Viagra, Costs INR 20 Lakh Per Kg Vin
Author
Bengaluru, First Published Aug 4, 2022, 4:26 PM IST

ಉತ್ತರಾಖಂಡದ ನಾಡು ಹಲವು ಅರ್ಥಗಳಲ್ಲಿ ವಿಶಿಷ್ಟವಾಗಿದೆ. ಅಪರೂಪದ ಹೂವುಗಳ ಮನೆಯಿಂದ ಹಿಡಿದು ದುಬಾರಿ ಅಣಬೆಗಳವರೆಗೆ, ದೇವರ ಭೂಮಿ ವಿಲಕ್ಷಣವಾದ ಎಲ್ಲಾ ವಸ್ತುಗಳಿಂದ ಸಮೃದ್ಧವಾಗಿದೆ. ಅಂತಹ ಅಪರೂಪದ ವಸ್ತುವೆಂದರೆ ಹಿಮಾಲಯನ್ ವಯಾಗ್ರ ಅಥವಾ ಕೀಡಾ ಜಡಿ. ಇದು ಆಶ್ಚರ್ಯವೆನಿಸಬಹುದು ಆದರೆ ಭಾರತದಲ್ಲಿ ಉತ್ತರಾಖಂಡದಲ್ಲಿ ಮಾತ್ರ ಕಂಡುಬರುವ ಈ ಹಿಮಾಲಯನ್ ವಯಾಗ್ರದ ಒಂದು ಕಿಲೋಗ್ರಾಂನ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಸುಮಾರು 20 ಲಕ್ಷ ರೂಪಾಯಿಯಾಗಿದೆ. 

ಕೀಡಾ ಜಡಿ ಹೆಸರಿನ ವಯಾಗ್ರ
ಕೀಡಾ ಜಡಿ ಮೂಲತಃ ಶಿಲೀಂಧ್ರವಾಗಿದ್ದು, ಓಫಿಯೊಕಾರ್ಡಿಸೆಪ್ಸ್ ಸಿನೆನ್ಸಿಸ್ ಅದರ ವೈಜ್ಞಾನಿಕ ಹೆಸರು. ಇದು ವಿಶ್ವದ ಅತ್ಯಂತ ದುಬಾರಿ (Costly) ಶಿಲೀಂಧ್ರಗಳಲ್ಲಿ ಒಂದಾಗಿದೆ. ಶಿಲೀಂಧ್ರವು ತುಂಬಾ ಅಪರೂಪವಾಗಿದ್ದು, ಇದು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್‌ನ (IUCN) ಬೆದರಿಕೆಯಿರುವ ಜಾತಿಗಳ ಕೆಂಪು ಪಟ್ಟಿಯನ್ನು ಪ್ರವೇಶಿಸಿದೆ. ಟಿಬೆಟ್‌ನಲ್ಲಿ ಇದನ್ನು ಯರ್ಸಗುಂಬಾ ಎಂದು ಕರೆಯಲಾಗುತ್ತದೆ. ವಿಶೇಷವೆಂದರೆ ನೈಸರ್ಗಿಕವಾಗಿ ದೊರೆಯುವ ಈ ವರ್ಮ್ ವುಡ್ ಅನ್ನು ಲ್ಯಾಬ್ ನಲ್ಲೂ ತಯಾರಿಸಬಹುದು. ಕುಲುವಿನ ವ್ಯಕ್ತಿಯೊಬ್ಬರು ಪ್ರಯೋಗಾಲಯದಲ್ಲಿ ಈ ಮೂಲಿಕೆಯನ್ನು ಸಿದ್ಧಪಡಿಸಿದ್ದಾರೆ. ಇದು ಒಂದು ರೀತಿಯ ಕಾಡು ಅಣಬೆಯಾಗಿದೆ.

ಸೆಕ್ಸ್ ಲೈಫ್ ಸೂಪರ್ ಮಾಡೋ ವಯಾಗ್ರ ಕಣ್ಣು ಕುರುಡಾಗಿಸಬಹುದು !

ಸಮುದ್ರ ಮಟ್ಟದಿಂದ ಸುಮಾರು 3,000 ಮೀಟರ್ ಎತ್ತರದಲ್ಲಿದೆ ಕೀಡಾ ಜಡಿ
ಕೀಡಾ ಜಡಿ ಎಂಬ ಹೆಸರಿನ ಈ ಹಳದಿ ಕಂದು ಮೂಲಿಕೆಯ ಅರ್ಧವು ಹುಳು ಮತ್ತು ಅರ್ಧ ಗಿಡಮೂಲಿಕೆಯಂತೆ ಕಾಣುತ್ತದೆ. ಅದಕ್ಕಾಗಿಯೇ ಇದನ್ನು ವರ್ಮ್ವುಡ್ ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಕಾರ್ಡಿಸೆಪ್ಸ್ ಸಿನೆನ್ಸಿಸ್ ಎಂದಾಗಿದೆ. ಈ ಮಶ್ರೂಮ್ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 3,000 ಮೀಟರ್ ಎತ್ತರದಲ್ಲಿ ಕಂಡುಬರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಕೆಜಿಗೆ ಮೂರರಿಂದ ಐದು ಲಕ್ಷ ರೂಪಾಯಿಯಿದೆ. ಆದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಕೆಜಿಗೆ 20 ರಿಂದ 25 ಲಕ್ಷ ರೂಪಾಯಿಗಳಷ್ಟಿದೆ. 

ಹಿಮಾಲಯದಲ್ಲಿ ಇದು 3,500ರಿಂದ 5,000 ಮೀಟರ್ ಎತ್ತರದಲ್ಲಿ ಕಂಡುಬರುತ್ತದೆ. ಭಾರತದಲ್ಲಿ, ಉತ್ತರಾಖಂಡದ ಪಿಥೋರಗಡ​, ಚಮೋಲಿ ಮತ್ತು ಬಾಗೇಶ್ವರದಲ್ಲಿ ಇದನ್ನು ಕಾಣಬಹುದು. ಮಾತ್ರವಲ್ಲ ನೇಪಾಳ ಮತ್ತು ಚೀನಾದ ಗಡಿಯಲ್ಲಿರುವ ಹಿಮಾಲಯದಲ್ಲಿ, ಹಾಗೆಯೇ ಭೂತಾನ್ ಮತ್ತು ಟಿಬೆಟ್‌ನ ಪ್ರಸ್ಥಭೂಮಿ ಪ್ರದೇಶಗಳಲ್ಲಿ ಹಿಮಾಲಯನ್​ ವಯಾಗ್ರ ಕಂಡುಬರುತ್ತದೆ. ಒಂದೂವರೆ ವರ್ಷಗಳಿಂದ ಅದನ್ನು ಬೆಳೆಯುವ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿದ್ದು, ಈಗ ಅದರಲ್ಲಿ ಯಶಸ್ಸು ಸಿಕ್ಕಿದೆ ಎಂದು ಗೌರವ್ ಶರ್ಮಾ ಹೇಳಿದ್ದಾರೆ. ಮಲೇಷ್ಯಾದಲ್ಲಿ ನೆಲೆಸಿರುವ ಸ್ನೇಹಿತರೊಬ್ಬರಿಂದ ಇದನ್ನು ಬೆಳೆಸುವ ಐಡಿಯಾ ಸಿಕ್ಕಿದೆ ಎಂದರು. ಅವರು ಅದನ್ನು 3,000 ಬಾಕ್ಸ್‌ಗಳಲ್ಲಿ ಸಿದ್ಧಪಡಿಸಿದ್ದಾರೆ.

Sex Secret: ವಯಾಗ್ರ ಜೊತೆ ನಿಂಬೆ ರಸ ಸೇರಿಸಿದ್ರೆ ಸೆಕ್ಸ್ ಲೈಫ್ ಸೂಪರ್ ಆಗುತ್ತಂತೆ..!

ಹಿಮಾಲಯನ್ ವಯಾಗ್ರ ಎಲ್ಲಕ್ಕಿಂತ ದುಬಾರಿ
ಹಿಮಾಲಯನ್ ವಯಾಗ್ರ ಬೆಲೆ ಹವಾಮಾನ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಬೆಲೆ ಹೆಚ್ಚಿದ್ದರೂ ಚೀನಾ ಮತ್ತು ಹಾಂಗ್​ಕಾಂಗ್‌ನಂತಹ ದೇಶಗಳಲ್ಲಿ ಹಿಮಾಲಯನ್ ವಯಾಗ್ರಕ್ಕೆ ಹೆಚ್ಚಿನ ಬೇಡಿಕೆಯಿದೆ (Demand). ಚೀನಾದಲ್ಲಿ, ಈ ಗಿಡಮೂಲಿಕೆಯನ್ನು ಲೈಂಗಿಕ ಉತ್ತೇಜಕವಾಗಿ ಬಳಸಲಾಗುತ್ತದೆ. ಕ್ರೀಡಾಪಟುಗಳು ಇದನ್ನು ಸ್ಟೀರಾಯ್ಡ್ ರೀತಿಯಲ್ಲಿ ಬಳಸುತ್ತಾರೆ. ಹಿಮಾಲಯನ್ ವಯಾಗ್ರ ಎಲ್ಲಕ್ಕಿಂತ ದುಬಾರಿ. ಇದರ ಬೆಲೆ ಚಿನ್ನಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ.  ಸುಮಾರು ಎರಡು ಇಂಚು ಉದ್ದವಿರುತ್ತದೆ. ಹಿಮಾಲಯನ್ ವಯಾಗ್ರ ವೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಯಕೃತ್ತಿಗೆ ಸಂಬಂಧಿಸಿದ ರೋಗಗಳ (Disease) ಚಿಕಿತ್ಸೆಯಲ್ಲಿ ಇದು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತದೆ.

Follow Us:
Download App:
  • android
  • ios