ತ್ರಿವಳಿ ತಲಾಖ್‌ನಿಂದ ಬೇಸತ್ತ ಮುಸ್ಲಿಂ ಮಹಿಳೆ: ಹಿಂದೂ ಯುವಕನೊಂದಿಗೆ ದೇಗುಲದಲ್ಲಿ ಮದುವೆ
ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧವಾಗಿದೆ. ಹಾಗಿದ್ರೂ ಜನರು ಇಂಥಹವುಗಳನ್ನು ಮಾಡೋದನ್ನು ಮಾತ್ರ ನಿಲ್ಲಿಸಲ್ಲ ಉತ್ತರ ಪ್ರದೇಶದ ಮಥುರಾದ ಇಸ್ಲಾಂ ಧರ್ಮದ ಮಹಿಳೆಯೊಬ್ಬರುಲ್ಲಿ ಮದುವೆಯಾಗಿ ತ್ರಿವಳಿ ತಲಾಖ್ ಪಡೆದ ನಂತರ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ.
ಮಥುರಾ: ಉತ್ತರ ಪ್ರದೇಶದ ಮಥುರಾದ ಇಸ್ಲಾಂ ಧರ್ಮದ ಮಹಿಳೆಯೊಬ್ಬರುಲ್ಲಿ ಮದುವೆಯಾಗಿ ತ್ರಿವಳಿ ತಲಾಖ್ ಪಡೆದ ನಂತರ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಹಿಂದೂ ಧರ್ಮದ ಯುವಕನನ್ನು ಮದುವೆಯಾಗಿದ್ದಾರೆ. ಮದುವೆಯಲ್ಲಿ ಎಲ್ಲಾ ಹಿಂದೂ ಸಂಪ್ರದಾಯಗಳನ್ನು ಅನುಸರಿಸಲಾಗಿದೆ ಎಂದು ತಿಳಿದುಬಂದಿದೆ. ರುಬಿನಾ ಎಂಬ ಮೂಲ ಹೆಸರನ್ನು ಹೊಂದಿದ್ದ ಮಹಿಳೆ ಸಂಗಾತಿಯಿಂದ ತ್ರಿವಳಿ ತಲಾಖ್ ಪಡೆದ ನಂತರ ತುಂಬಾ ನೊಂದಿದ್ದಳು. ವಿಚ್ಛೇದನದ ನಂತರ ಅವಳು ತನ್ನ ಧರ್ಮವನ್ನು ಬದಲಾಯಿಸಲು ನಿರ್ಧರಿಸಿದಳು.
ಮಹಿಳೆ ಈ ಹಿಂದೆ ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಸಂಗಾತಿ ಆಕೆಗೆ ತ್ರಿವಳಿ ತಲಾಖ್ ನೀಡಿದ್ದ. ಇದಾದ ಬಳಿಕ ಮಹಿಳೆ ತನ್ನ 2 ಮಕ್ಕಳನ್ನು ಬಿಟ್ಟು ಹೋಗಿದ್ದಾಳೆ. ಒಬ್ಬ 6 ವರ್ಷ ಮತ್ತು ಇನ್ನೊಬ್ಬಳು ಕೇವಲ 3 ವರ್ಷ ವಯಸ್ಸಿನವಳು. ರುಬಿನಾ ಹಿಂದೂ ಯುವಕನನ್ನು ಮದುವೆಗಾಗಿ ತನ್ನ ಹೆಸರನ್ನು ರುಬಿನಾದಿಂದ ಪ್ರೀತಿ ಎಂದು ಬದಲಾಯಿಸಿದಳು. ಇಬ್ಬರ ನಡುವಿನ ಸಂಬಂಧವು ಮಿಸ್ಡ್ ಕಾಲ್ ಮೂಲಕ ಪ್ರಾರಂಭವಾಯಿತು. ನಂತರ ದಂಪತಿಗಳು Instagramನಲ್ಲಿ ಸಂಪರ್ಕಗೊಂಡರು. ಕೆಲವು ಸಂಭಾಷಣೆಗಳ ನಂತರ ಸ್ನೇಹಿತರಾದರು. ನಂತರ ಮಹಿಳೆ ತನ್ನ ಮಕ್ಕಳನ್ನು ಮತ್ತು ತನ್ನ ಧರ್ಮವನ್ನು ಬಿಟ್ಟು ಹಿಂದೂ ವ್ಯಕ್ತಿಯನ್ನು ಮದುವೆಯಾದಳು.
ಅಮ್ಮ ಎಲ್ಲಿ? ಮದುವೆ ಮಂಟಪಕ್ಕೆ ಕಾಲಿಡುವ ಮೊದಲು ತಾಯಿ ಕಾಣದೆ ಕಂಗಲಾದ ವಧು!
ರುಬಿನಾ ವಿವಾಹವಾದ ವ್ಯಕ್ತಿ ಪ್ರಮೋದ್ ಕಶ್ಯಪ್ ಅವರಿಗಿಂತ 8 ವರ್ಷ ಚಿಕ್ಕವನು. ಈ ಹಿಂದೆ ಚಾಟ್‌ಗಳು ಮತ್ತು ವೀಡಿಯೊ ಕರೆಗಳ ಮೂಲಕ ಸಂಪರ್ಕ ಹೊಂದಿದ್ದ ರುಬೀನಾ ಮತ್ತು ಪ್ರಮೋದ್ ಈಗ ಮದುವೆಯಾಗಿದ್ದಾರೆ. ಕೆಕೆ ಶಂಕಧರ್ ಎಂಬ ಅರ್ಚಕ, ರುಬಿನಾ ಅವರನ್ನು ಗೋಮೂತ್ರ ಮತ್ತು ಗಂಗಾಜಲದಿಂದ ಶುದ್ಧೀಕರಿಸಿದ್ದಾರೆ. ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ, ರುಬಿನಾ, ಹಿಂದೂ ಧರ್ಮದಲ್ಲಿ ತನ್ನ ನಂಬಿಕೆಯನ್ನು ವ್ಯಕ್ತಪಡಿಸಿದಳು ಮತ್ತು ಇಸ್ಲಾಂನಲ್ಲಿ ಮಹಿಳೆಯರಿಗೆ ಗೌರವವಿಲ್ಲ ಎಂದು ಹೇಳಿದರು. ಇಸ್ಲಾಂನಲ್ಲಿ ಮಹಿಳೆಯರು ಹೆಚ್ಚಾಗಿ ಚಿತ್ರಹಿಂಸೆಯನ್ನು ಎದುರಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಮಥುರಾ ಮೂಲದ ರುಬೀನಾ ಮತ್ತು ಪ್ರಮೋದ್ ಬರೇಲಿಗೆ ಹೋಗಿ ಹಿಂದೂ ಸಂಪ್ರದಾಯಗಳ ಮೂಲಕ ಮದುವೆಯಾದರು. ವೃಂದಾವನದ ಬಂಗಾರ್ ಕಾಶಿರಾಮ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ರುಬಿನಾ ತನ್ನ ಪೂರ್ವಜರು ಮೊಘಲರ ಭಯದಿಂದ ಇಸ್ಲಾಂ ಧರ್ಮದ ಅನುಯಾಯಿಗಳಾದರು ಎಂದು ಹೇಳಿದ್ದಾರೆ. ಆದರೆ ನಾನು ಹಿಂದೂ ದೇವರುಗಳನ್ನು ನಂಬುತ್ತೇನೆ ಮತ್ತು ನಿಯಮಿತವಾಗಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಕೆಲಸಕ್ಕೆ ಸಮಯ ನೀಡ್ಬೇಕು ಅಂತಾ ಪತಿಗೆ ಎರಡನೇ ಮದುವೆ ಮಾಡಿಸಿದ ಖ್ಯಾತ ಗಾಯಕಿ!
ರುಬಿನಾ ಇಸ್ಲಾಂ ಧರ್ಮದ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯನ್ನು ಧಿಕ್ಕರಿಸಿದ್ದು ಮಾತ್ರವಲ್ಲದೆ, ‘ಹಲಾಲ್’ ಮತ್ತು ಧರ್ಮದಲ್ಲಿನ ಕೆಟ್ಟ ಅಭ್ಯಾಸ ಎಂದೂ ಕರೆದರು. ಹಿಂದೂ ಧರ್ಮವನ್ನು ಸ್ವೀಕರಿಸುವಂತೆ ಬಲವಂತ ಮಾಡಿಲ್ಲ ಮತ್ತು ಆಯ್ಕೆಯಿಂದ ಹಾಗೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.