ಕೆಲಸಕ್ಕೆ ಸಮಯ ನೀಡ್ಬೇಕು ಅಂತಾ ಪತಿಗೆ ಎರಡನೇ ಮದುವೆ ಮಾಡಿಸಿದ ಖ್ಯಾತ ಗಾಯಕಿ!

ಪತಿ ಬೇರೆ ಹುಡುಗಿಯರನ್ನು ಕಣ್ಣೆತ್ತಿ ನೋಡಿದ್ರೂ ಕೋಪ ಬರುತ್ತೆ. ಎರಡನೇ ಮದುವೆ ಆಗ್ತಾನೆ ಅಂದ್ರೆ ಕಥೆ ಮುಗಿದಂತೆ. ಆದ್ರೆ ನಮ್ಮಲ್ಲೂ ಕೆಲ ದಾನಿಗಳಿದ್ದಾರೆ. ಅವರು ಪತಿಯನ್ನು ಹಂಚಿಕೊಳ್ಳೋದಲ್ಲದೆ ಅದ್ರಲ್ಲೂ ತಮ್ಮ ಸ್ವಾರ್ಥ ನೋಡ್ತಾರೆ.  
 

Famous Malaysian Singer Made Husband Marry And Get Second Wife So She Can Focus On Career roo

ತನ್ನ ಪತಿಗೆ ಎರಡನೇ ಮದುವೆ ಮಾಡಲು ಯಾವುದೇ ಪತ್ನಿ ಸಿದ್ಧವಿರೋದಿಲ್ಲ. ಎಷ್ಟೇ ಸಮಸ್ಯೆ ಇರಲಿ, ಏನೇ ಕಷ್ಟಗಳು ಬರಲಿ ಪತಿ ಸದಾ ತನ್ನ ಜೊತೆಗಿರಬೇಕು ಎಂದುಕೊಳ್ಳುವ ಮಹಿಳೆ ಆತನನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಪತಿಯ ಅಕ್ರಮ ಸಂಬಂಧ ಹೊರಬಿದ್ರೆ ಇಬ್ಬರೂ ವಿಚ್ಛೇದನ ತೆಗೆದುಕೊಳ್ಳಲು ಮುಂದಾಗ್ತಾರೆಯೇ ವಿನಃ ಎಲ್ಲರೂ ಒಟ್ಟಿಗೆ ಸೇರಿ ಜೀವನ ನಡೆಸೋದು ಬಹಳ ಅಪರೂಪ. ಬಹುಪತ್ನಿತ್ವ ಜಾರಿಯಲ್ಲಿರುವ ಧರ್ಮದಲ್ಲಿ ಕೂಡ ಮಹಿಳೆಯರಿಗೆ ಪತಿಯ ಇನ್ನೊಂದು ಪತ್ನಿ ಮೇಲೆ ಅಸೂಯೆ ಇರುತ್ತದೆ. ಆದ್ರೆ ಇಲ್ಲೊಬ್ಬ ಸಿಂಗರ್ ತನ್ನ ಪತಿಗೆ ಇನ್ನೊಂದು ಮದುವೆ ಮಾಡಿಸಿದ್ದಾಳೆ. ಈ ವಿಷ್ಯವನ್ನು ಆಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಲ್ಲದೆ ಮದುವೆ ಮಾಡಿಸಲು ಕಾರಣವೇನು ಎಂಬುದನ್ನು ಕೂಡ ಹೇಳಿದ್ದಾಳೆ. 

ಪತಿಗೆ ಎರಡನೇ ಮದುವೆ (Marriage) ಮಾಡಿದ ಸಿಂಗರ್ ಹೆಸರು ಅಜಲೈನ್ ಎರಿಫಿನ್. ಆಕೆಗೆ 42 ವರ್ಷ ವಯಸ್ಸು. ಆಕೆ ಮಲೇಷ್ಯಾ (Malaysia) ಸಿಂಗರ್. 2003ರಲ್ಲಿ ಹೈ ಹೈ ಬೈ ಬೈ ಹಾಡಿನ ಮೂಲಕ ದೇಶದಾದ್ಯಂತ ಪ್ರಸಿದ್ಧಿ ಪಡೆದಿದ್ದಳು. ಆ ನಂತ್ರ ಅಜಲೈನಾ ಯಾವುದೇ ಅಲ್ಮಂ ಮಾಡಿಲ್ಲ. ಆದ್ರೆ ಟಿವಿ ಶೋನಲ್ಲಿ ಬ್ಯುಸಿಯಾಗಿದ್ದಾಳೆ. ಸುಕೆ ಶಾಪ್ ನಂತಹ ಮಲೇಷ್ಯಾದ ಶಾಪಿಂಗ್ ಟಿವಿ ಚಾನೆಲ್ ನಲ್ಲಿ ಸಕ್ರಿಯವಾಗಿರುವ ಅಜಲೈನಾ, ತನ್ನ ಫಾಲೋವರ್ಸ್ (Followers) ಗೆ ಆರೋತ್ಪನ್ನವನ್ನು ಮಾರಾಟ ಮಾಡ್ತಾಳೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಅಜಲೈನಾಗೆ 173,000 ಫಾಲೋವರ್ಸ್ ಇದ್ದಾರೆ.  ಅಜಲೈನಾ ಕಳೆದ ವರ್ಷ ತನ್ನ 47 ವರ್ಷದ ಪತಿ ಮೊಹಮ್ಮದ್ ಹಫೀಜಮ್ ಗೆ 26 ವರ್ಷದ ಹುಡುಗಿಯನ್ನು ಹುಡುಕಿ ಮದುವೆ ಮಾಡಿದ್ದಾಳೆ. 

ಬಿಲಿಯನೇರ್ ದಂಪತಿ ನೀತಾ- ಮುಕೇಶ್ ಅಂಬಾನಿ ತಮ್ಮ ಅವಳಿ ಮಕ್ಕಳಿಗೆ ಇಶಾ, ಆಕಾಶ್‌ ಎಂದು ಹೆಸರಿಟ್ಟಿದ್ಯಾಕೆ?

ಪತಿಗೆ ಎರಡನೇ ಮದುವೆ ಮಾಡಲು ಕಾರಣವೇನು? : ಅಜಲೈನಾ ಪ್ರಕಾರ ಆಕೆ ಇಡೀ ದಿನ ಬ್ಯುಸಿ ಇರ್ತಾಳೆ. ಬೇರೆ ಊರುಗಳಿಗೆ ಹೋಗ್ತಿರುತ್ತಾಳೆ. ಇದ್ರಿಂದ ಪತಿ ಒಂಟಿಯಾಗಿ ಇರಬೇಕಾಗುತ್ತೆ. ಆತನ ಆರೋಗ್ಯ ಹಾಗೂ ಕೆಲಸದ ಬಗ್ಗೆ ಸದಾ ಅಜಲೈನಾ ಗಮನ ಹರಿಸಬೇಕಾಗುತ್ತದೆ. ಇದು ಸಾಧ್ಯವಿಲ್ಲದ ಕಾರಣ ಅಜಲೈನಾ ಇನ್ನೊಂದು ಮದುವೆ ಮಾಡಲು ಮುಂದಾಗಿದ್ದಳು.

ತನ್ನ ಪತಿಗೆ ತಕ್ಕ ಪತ್ನಿಯನ್ನು ಹುಡುಕಲು ಅಜಲೈನಾ ಸಾಕಷ್ಟು ಪ್ರಯತ್ನಿಸಿದ್ದಳು. ಕೊನೆಗೂ ಹುಡುಗಿ ಸಿಕ್ಕಿದ್ದಾಳೆ. ಈಗ ನಾನು ನೆಮ್ಮದಿಯಾಗಿದ್ದೇನೆ. ಆರಾಮವಾಗಿ ನನ್ನ ವೃತ್ತಿ ಕಡೆ ಗಮನ ಹರಿಸಬಹುದು ಎನ್ನುತ್ತಾಳೆ ಅಜಲೈನಾ. ತನ್ನ ಹಾಗೂ ತನ್ನ ಪತಿಯ ಫೋಟೋ ಹಂಚಿಕೊಂಡ ಅಜಲೈನಾ, ನಾವಿಬ್ಬರೂ ಈಗ್ಲೂ ಒಂದಾಗಿದ್ದೇವೆ ಎಂದು ಶೀರ್ಷಿಕೆ ಹಾಕಿದ್ದಾಳೆ. ಅಜಲೈನಾ ಆಕೆ ಪತಿ ಹಾಗೂ ಇನ್ನೊಬ್ಬ ಪತ್ನಿ ಎಲ್ಲರೂ ಒಟ್ಟಿಗೆ ವಾಸವಾಗಿದ್ದಾರೆ. ಒಂದು ವಾರ ಅಜಲೈನಾ ಹಾಗೂ ಇನ್ನೊಂದು ವಾರ ಇನ್ನೊಬ್ಬ ಪತ್ನಿ, ಮೊಹಮ್ಮದ್ ಹಫೀಜಮ್ ಜೊತೆಗಿರ್ತಾರೆ. 

ಮಲೇಷ್ಯಾದ ರಾಷ್ಟ್ರೀಯ ಧರ್ಮ ಇಸ್ಲಾಂ. ಇಲ್ಲಿ ಪುರುಷರು ನಾಲ್ಕು ಪತ್ನಿಯನ್ನು ಹೊಂದುವ ಅವಕಾಶವಿದೆ. ಆದ್ರೆ ಮುಸ್ಲಿಮೇತರರಿಗೆ ಇದು ಕಾನೂನುಬಾಹಿರವಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಇಸ್ಲಾಂ ಕಾನೂನಿಗೆ ತಕ್ಕಂತೆ ಮದುವೆಗೆ ಸಂಬಂಧಿಸಿದ ದಾಖಲೆ ನೀಡಬೇಕು. ಎರಡನೇ ಮದುವೆಗೆ ಒಪ್ಪಿಗೆ ಪಡೆಯಬೇಕು. ಮಾಹಿತಿ ಪ್ರಕಾರ, ಎರಡನೇ ಮದುವೆಗೆ ಸಂಬಂಧಿಸಿದಂತೆ ಮಲೆಷ್ಯಾದಲ್ಲಿ ಒಂದು ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಪುರುಷರು ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತಾರೆ. 

ಅಯ್ಯೋ ದೇವರೇ.. ಮೂರು ವರ್ಷದಲ್ಲಿ ಅರೇಂಜ್ಡ್ ಮ್ಯಾರೇಜ್ ಸಂಖ್ಯೆ ಶೇ.24ರಷ್ಟು ಕಡಿಮೆಯಾಗಿದೆಯಂತೆ ಗೊತ್ತಾ?

ಮಹಿಳೆಯರು ಎರಡನೇ ಮದುವೆ ಅಂದ್ರೆ ಅಸೂಯೆಗೆ ಒಳಗಾಗ್ತಾರೆ. ಪತಿಯನ್ನು ಹಂಚಿಕೊಳ್ಳಲು ಎಲ್ಲರಿಗೂ ಇಷ್ಟವಿರೋದಿಲ್ಲ. ಅನಿವಾರ್ಯವಿದ್ದಾಗ ಎರಡನೇ ಮದುವೆ ಆಗೋದ್ರಲ್ಲಿ ತಪ್ಪಿಲ್ಲ. ಆದ್ರೆ ಎಲ್ಲರೂ ಎರಡನೇ ಮದುವೆ ಆಗೋದು ಸೂಕ್ತವಲ್ಲ. ಇದು ಮಕ್ಕಳು ಮತ್ತು ಪತ್ನಿ ಭಾವನೆಗೆ ಧಕ್ಕೆ ಆಗುತ್ತೆ ಎನ್ನುತ್ತಾಳೆ ಅಜಲೈನಾ. 

Latest Videos
Follow Us:
Download App:
  • android
  • ios