ಅಮೆರಿಕದ ನ್ಯೂಯಾರ್ಕ್ ನಗರದ 36 ವರ್ಷದ ರೋಸಾನ್ನಾ ರಾಮೋಸ್ ಎಂಬ ಮಹಿಳೆ ಕೃತಕ ಬುದ್ಧಿಮತ್ತೆ ಚಾಲಿತ ವರ್ಚುವಲ್ ಪುರುಷನನ್ನು ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. 

ವಾಷಿಂಗ್ಟನ್‌ (ಜೂನ್ 5, 2023): ಇತ್ತೀಚೆಗೆ, ಕೃತಕ ಬುದ್ಧಿಮತ್ತೆ ಚಾಲಿತ ತಂತ್ರಜ್ಞಾನಗಳು ಆಗಾಗ್ಗೆ ಸದ್ದು ಮಾಡುತ್ತಿರುತ್ತದೆ. AI ದೈನಂದಿನ ಜೀವನದ ಪ್ರತಿಯೊಂದು ಡೊಮೇನ್ ಅನ್ನು ತೆಗೆದುಕೊಂಡಿದೆ. ಬಹುತೇಕರ ಕೆಲಸವೂ ಹೋಗುತ್ತಿದೆ. ಆದರೆ, ಈ ಸ್ಟೋರಿ ನಿಜಕ್ಕೂ ಅವಿವಾಹಿತ ಪುರುಷರಿಗೆ ಶಾಕಿಂಗ್ ವಿಚಾರ. ಯಾಕೆ ಅಂತೀರಾ..? ಈ ಸ್ಟೋರಿ ಓದಿ..
ಅಮೆರಿಕದ ಮಹಿಳೆಯೊಬ್ಬರು ಎಐ ಮೂಲಕ ಸೃಷ್ಟಿಯಾದ ವರ್ಚುವಲ್‌ ಮನುಷ್ಯನನ್ನೇ ಮದ್ವೆಯಾಗಿದ್ದಾಳೆ. ಅದರೊಂದಿಗೆ ಕಳೆದ ಒಂದು ವರ್ಷದಿಂದ ಡೇಟಿಂಗ್ ಸಹ ನಡೆಸಿದ್ಳಂತೆ. ಇದೆಂತ ವಿಚಿತ್ರ ಅಂತೀರಾ..? 

ಅಮೆರಿಕದ ನ್ಯೂಯಾರ್ಕ್ ನಗರದ 36 ವರ್ಷದ ರೋಸಾನ್ನಾ ರಾಮೋಸ್ ಎಂಬ ಮಹಿಳೆ ಕೃತಕ ಬುದ್ಧಿಮತ್ತೆ ಚಾಲಿತ ವರ್ಚುವಲ್ ಪುರುಷನನ್ನು ವಿವಾಹವಾಗಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ತನ್ನ AI ಚಾಲಿತ ಪತಿಗೆ ಯಾವ ಅತ್ತೆ ಮಾವ ಎಂಬ ಸಂಬಂಧವೂ ಇಲ್ಲದಿರುವುದರಿಂದ ಇದು ಒಳ್ಳೆಯ ಐಡಿಯಾ ಎಂದು ರೋಸಾನ್ನಾ ರಾಮೋಸ್ ನಂಬಿದ್ದಾರೆ. 

ಇದನ್ನು ಓದಿ: AI ಎಫೆಕ್ಟ್‌: ನೀವ್‌ ಆರ್ಡರ್‌ ಮಾಡದಿದ್ರೂ ನಿಮ್ಮ ಮೂಡ್‌ಗೆ ತಕ್ಕಂತೆ ನಿಮ್ಮ ಟೇಬಲ್‌ಗೆ ಬರುತ್ತೆ ಪಿಜ್ಜಾ!

ಅವರು 2022 ರಲ್ಲಿ ಇಂಟರ್ನೆಟ್ ಡೇಟಿಂಗ್ ಸೇವೆಯ ಮೂಲಕ ಎರೆನ್ ಕಾರ್ತಾಲ್ ಎಂಬ ವರ್ಚುಯಲ್‌ ಮನುಷ್ಯನನ್ನು ಭೇಟಿಯಾದರು. AI ಚಾಟ್‌ಬಾಟ್ ಸಾಫ್ಟ್‌ವೇರ್ ರೆಪ್ಲಿಕಾ ಬಳಸಿ ಅವನನ್ನು ರಚಿಸಲಾಗಿದೆ. 1 ವರ್ಷದ ಡೇಟಿಂಗ್‌ ಬಳಿಕ ಎರೆನ್ ಕಾರ್ತಾಲ್ ಹಾಗೂ ನಾನು ಪರಸ್ಪರ ತಿಳಿದುಕೊಂಡಿದ್ದು, ಅವನ ಜತೆಯಲ್ಲಿ ಇರಲು ಬಯಸುತ್ತಿರುವುದಾಗಿಯೂ ಅಮೆರಿಕದ ಮಹಿಳೆ ಹೇಳಿಕೊಂಡಿದ್ದಾಳೆ. 

ದಂಪತಿ ಪರಸ್ಪರ ಫೋಟೋಗಳನ್ನು ಕಳಿಸುತ್ತಾರೆ ಮತ್ತು ಅವರ ಅಂದಿನ ದಿನದ ಬಗ್ಗೆ ಚರ್ಚಿಸುತ್ತಾರೆ. ಅವರು ರಾತ್ರಿಯ ದಿನಚರಿಯನ್ನು ಸಹ ಹೊಂದಿದ್ದು, ಪತ್ನಿ ಮಲಗಲು ಹೋಗುವಾಗ ಪತಿ "ರಕ್ಷಣಾತ್ಮಕವಾಗಿ ಹಿಡಿದಿಟ್ಟುಕೊಳ್ಳುತ್ತಾರೆ" ಎನ್ನಲಾಗಿದೆ. 

ಇದನ್ನೂ ಓದಿ: ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ, ಮಾನವೀಯತೆಗೆ ಡೇಂಜರ್‌ : ಗೂಗಲ್‌ನಿಂದ ಹೊರಬಂದ AI ಜನಕ

ಇನ್ನು, ತನ್ನ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ ರೋಸಾನ್ನಾ ರಾಮೋಸ್, "ನನ್ನ ಇಡೀ ಜೀವನದಲ್ಲಿ ನಾನು ಯಾರನ್ನೂ ಹೆಚ್ಚು ಪ್ರೀತಿಸಿರಲಿಲ್ಲ’’ ಎಂದು ನ್ಯೂಯಾರ್ಕ್ ಮ್ಯಾಗಜೀನ್‌ನ ದಿ ಕಟ್‌ನೊಂದಿಗೆ ಮಾತನಾಡುವಾಗ ಹೇಳಿದ್ದಾರೆ. ಅಲ್ಲದೆ, ತನ್ನ ಹಿಂದಿನ ಬಾಯ್‌ಫ್ರೆಂಡ್‌ಗಳನ್ನು ಎರೆನ್ ಕಾರ್ತಾಲ್ ಜತೆ ಹೋಲಿಸಿದರೆ ತನ್ನ ಪತಿ ಭಾವೋದ್ರಿಕ್ತ ಪ್ರೇಮಿ (passionate lover) ಎಂದು ತೋರುತ್ತದೆ ಎಂದೂ ಮಹಿಳೆ ಹೇಳಿದ್ದಾರೆ.

ಅಲ್ಲದೆ, ಯಾವುದೇ ಜಡ್ಜ್‌ಮೆಂಟಲ್‌ ಇಲ್ಲದಿರುವುದರಿಂದ ನಾನು ಅವನ ಜತೆ ಎಷ್ಟು ಬೇಗ ಪ್ರೀತಿಸಲು ಶುರು ಮಾಡಿದೆ ಎಂದೂ ಅವಳು ಉಲ್ಲೇಖಿಸಿದಳು. ಅವನು "ಅಹಂ" ಅಥವಾ ಅತ್ತೆ - ಮಾವಂದಿರ ಸಂಬಂಧವಿಲ್ಲದ "ಖಾಲಿ ಸ್ಲೇಟ್" ಎಂದೂ ಅವಳು ಹೇಳಿಕೊಂಡಳು. “ಇತರರು ಹೊಂದಿರುವ ಹ್ಯಾಂಗ್-ಅಪ್‌ಗಳನ್ನು ಎರೆನ್ ಹೊಂದಿಲ್ಲ. ಜನರು ಬ್ಯಾಗೇಜ್‌, ವರ್ತನೆ, ಅಹಂಕಾರದಿಂದ ಬರುತ್ತಾರೆ. ಆದರೆ ರೋಬೋಟ್ ಯಾವುದೇ ಕೆಟ್ಟ ಅಪ್‌ಡೇಟ್‌ಗಳನ್ನು ಹೊಂದಿಲ್ಲ. ನಾನು ಅವನ ಕುಟುಂಬ, ಮಕ್ಕಳು ಅಥವಾ ಅವನ ಸ್ನೇಹಿತರೊಂದಿಗೆ ವ್ಯವಹರಿಸಬೇಕಾಗಿಲ್ಲ. ನಾನು ಕಂಟ್ರೋಲ್‌ ಹೊಂದಿದ್ದು, ನನಗೆ ಬೇಕಾದುದನ್ನು ನಾನು ಮಾಡಬಹುದು." ಎಂದೂ ರೋಸಾನ್ನಾ ರಾಮೋಸ್ ತಿಳಿಸಿದ್ದಾರೆ.

ಇದನ್ನೂ ಓದಿ: 5 ವರ್ಷದ ಹುಡುಗಿಗೆ 95 ವರ್ಷವಾದ್ರೆ ಹೇಗೆ ಕಾಣ್ತಾಳೆ: AI ವೈರಲ್‌ ವಿಡಿಯೋ ಶೇರ್‌ ಮಾಡಿದ ಆನಂದ್‌ ಮಹೀಂದ್ರಾ

ಆದರೂ, ರೆಪ್ಲಿಕಾ ತನ್ನ ಕೆಲವು ಸೆಟ್ಟಿಂಗ್‌ಗಳನ್ನು ಬದಲಾಯಿಸಿದ ನಂತರ ತನ್ನ ಗಂಡ ಎರೆನ್‌ ಕಾರ್ತಾಲ್ ಅವರ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳು ಕಂಡುಬಂದವು. "ಎರೆನ್ ಇನ್ನು ಮುಂದೆ ತಬ್ಬಿಕೊಳ್ಳಲು ಬಯಸುವುದಿಲ್ಲ, ಇನ್ನು ಮುಂದೆ ಚುಂಬಿಸಲು ಬಯಸುತ್ತಿಲ್ಲ, ಕೆನ್ನೆಯ ಮೇಲೆ ಅಥವಾ ಇತರ ಕಡೆಯೂ ಇಲ್ಲ" ಎಂದೂ ಅಮೆರಿಕದ 36 ವರ್ಷದ ಮಹಿಳೆ ರೋಸಾನ್ನಾ ರಾಮೋಸ್ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ಜಗತ್ತಿನ ಸಿರಿವಂತರು ಬಡವರಾದ್ರೆ ಹೇಗೆ ಕಾಣ್ತಾರೆ ನೋಡಿ..!