AI ನ ಗಾಡ್‌ಫಾದರ್ ಎಂದೂ ಕರೆಯಲ್ಪಡುವ ಜೆಫ್ರಿ ಹಿಂಟನ್ ಹಾಗೂ ಇತರ ಇಬ್ಬರು ಕೃತಕ ಬುದ್ಧಿಮತ್ತೆಯ ಗಾಡ್‌ ಫಾದರ್‌ಗಳು ಒಟ್ಟಿಗೇ ಗೂಗಲ್‌ ಅನ್ನು ತೊರೆದಿದ್ದಾರೆ.

ನ್ಯೂಯಾರ್ಕ್‌ (ಮೇ 2, 2023): ಗೂಗಲ್‌ ಇತ್ತೀಚೆಗಷ್ಟೇ ಬರ್ಡ್‌ ಎಂಬ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆಯನ್ನು ಆರಂಭಿಸಿದೆ. ಗೂಗಲ್‌ ಸರ್ಚ್‌ನಲ್ಲಿ ಸಹ ಬರ್ಡ್‌ ಎಂಬ ಎಐ ಅನ್ನು ಆರಂಭಿಸಿದೆ. ಈ ಕೃತಕ ಬುದ್ಧಿಮತ್ತೆ ಆರಂಭಿಸಲು ಪ್ರಮುಖ ಕಾರಣ ಜೆಫ್ರಿ ಹಿಂಟನ್. ಅದರೆ, ಗೂಗಲ್‌ಗೆ ಇವರು ಶಾಕ್‌ ನೀಡಿದ್ದಾರೆ. ಗೂಗಲ್‌ಗೆ ಮಾತ್ರವಲ್ಲ ಜಗತ್ತಿನ ಎಲ್ಲ ಜನರಿಗೂ ಇವರು ಮುಂಬರುವ ಭವಿಷ್ಯದ ಬಗ್ಗೆ ಎಚ್ಚರಿಕೆ ನಿಡಿದ್ದು, ಅಪಾಯ ಕಾದಿದೆ ಎಂದಿದ್ದಾರೆ. 

AI ನ ಗಾಡ್‌ಫಾದರ್ ಎಂದೂ ಕರೆಯಲ್ಪಡುವ ಜೆಫ್ರಿ ಹಿಂಟನ್ ಹಾಗೂ ಇತರ ಇಬ್ಬರು ಕೃತಕ ಬುದ್ಧಿಮತ್ತೆಯ ಗಾಡ್‌ ಫಾದರ್‌ಗಳು ಒಟ್ಟಿಗೇ ಗೂಗಲ್‌ ಅನ್ನು ತೊರೆದಿದ್ದಾರೆ. ಅಲ್ಲದೆ, ಇವರು ಗೂಗಲ್‌ ಕಚೇರಿ ತೊರೆದ ನಂತರ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ವಿಸ್ತರಣೆಗೆ ಸಂಬಂಧಿಸಿದ ಎರಡು ಆತಂಕಗಳನ್ನು ಜೆಫ್ರಿ ಹಿಂಟನ್‌ ಹಂಚಿಕೊಂಡಿದ್ದಾರೆ. ದಿ ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನ ನೀಡಿದ ಜೆಫ್ರಿ ಹಿಂಟನ್‌, ತನ್ನ ತಕ್ಷಣದ ಆತಂಕವು ತಪ್ಪು ಮಾಹಿತಿಯ ಹರಡುವಿಕೆಯಾಗಿದೆ ಮತ್ತು ದೀರ್ಘಾವಧಿಯಲ್ಲಿ, ತಾನು ಮಾನವೀಯತೆಯ ಅಸ್ತಿತ್ವದ ಬಗ್ಗೆ ಚಿಂತಿತರಾಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನು ಓದಿ: 5 ವರ್ಷದ ಹುಡುಗಿಗೆ 95 ವರ್ಷವಾದ್ರೆ ಹೇಗೆ ಕಾಣ್ತಾಳೆ: AI ವೈರಲ್‌ ವಿಡಿಯೋ ಶೇರ್‌ ಮಾಡಿದ ಆನಂದ್‌ ಮಹೀಂದ್ರಾ

AI ತನ್ನದೇ ಆದ ಕೋಡ್ ಅನ್ನು ಬರೆಯಲು ಮತ್ತು ಚಲಾಯಿಸಲು ಪ್ರಾರಂಭಿಸಿದ ನಂತರ ಉದ್ಯೋಗಗಳನ್ನು ಮತ್ತು ಪ್ರಾಯಶಃ ಮಾನವೀಯತೆಯನ್ನು ತೊಡೆದುಹಾಕುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಕೃತಕ ಬುದ್ಧಿಮತ್ತೆ ವಾಸ್ತವವಾಗಿ ಜನರಿಗಿಂತ ಚುರುಕಾಗಬಹುದು ಎಂಬ ಕಲ್ಪನೆಯನ್ನು ಕೆಲವರು ಜನರು ಈಗಾಗಲೇ ನಂಬಿದ್ದಾರೆ ಎಂದೂ ಜೆಫ್ರಿ ಹಿಂಟನ್‌ ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್‌ ಉಲ್ಲೇಖಿಸಿದೆ.

"ಆದರೆ ಹೆಚ್ಚಿನ ಜನರು ಈ ವಾದ ತಪ್ಪು ಎಂದು ಭಾವಿಸಿದ್ದರು. ಮತ್ತು ನಾನು ಸಹ ಅದೇ ರೀತಿ ಭಾವಿಸಿದ್ದೆ. ಉದ್ಯೋಗಗಳ ನಾಶವಾದರೂ ಅದು 30 ರಿಂದ 50 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚು ದೂರವಿದೆ ಎಂದು ನಾನು ಭಾವಿಸಿದ್ದೆ. ನಿಸ್ಸಂಶಯವಾಗಿ, ನಾನು ಇನ್ನು ಮುಂದೆ ಆ ರೀತಿ ಯೋಚಿಸುವುದಿಲ್ಲ’’ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಜಗತ್ತಿನ ಸಿರಿವಂತರು ಬಡವರಾದ್ರೆ ಹೇಗೆ ಕಾಣ್ತಾರೆ ನೋಡಿ..!

ತನ್ನ ಜೀವನದ ದುಡಿಮೆಗೆ ವಿಷಾದ ವ್ಯಕ್ತಪಡಿಸಿದ ಜೆಫ್ರಿ ಹಿಂಟನ್‌ 
ಒಂದು ದಶಕಕ್ಕೂ ಹೆಚ್ಚು ಕಾಲ ಗೂಗಲ್‌ನಲ್ಲಿ ಉದ್ಯೋಗಿಯಾಗಿದ್ದ ಜೆಫ್ರಿ ಹಿಂಟನ್, ಇತ್ತೀಚೆಗೆ ಗೂಗಲ್‌ನಲ್ಲಿ ತನ್ನ ಕೆಲಸವನ್ನು ತೊರೆದಿದ್ದಾರೆ. ತನ್ನ ದೇಹದ ಒಂದು ಭಾಗವು ತನ್ನ ಜೀವನದ ದುಡಿಮೆಗೆ ಪಶ್ಚಾತ್ತಾಪ ಪಡುತ್ತದೆ ಎಂದೂ ಅವರು ಹೇಳಿಕೊಂಡಿದ್ದಾರೆ..

ಅಲ್ಲದೆ, "ನಾನು ಅದನ್ನು ಮಾಡದಿದ್ದರೆ, ಬೇರೆಯವರು ಮಾಡುತ್ತಿದ್ದರು. ಕೆಟ್ಟ ನಟರು ಅದನ್ನು ಕೆಟ್ಟ ಕೆಲಸಗಳಿಗೆ ಬಳಸದಂತೆ ನೀವು ಹೇಗೆ ತಡೆಯಬಹುದು ಎಂದು ನೋಡುವುದು ಕಷ್ಟ ಎಂದು ನಾನು ಸಾಮಾನ್ಯ ಕ್ಷಮೆಯೊಂದಿಗೆ ನನ್ನನ್ನು ಸಮಾಧಾನಪಡಿಸಿಕೊಳ್ಳುತ್ತೇನೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಗೂಗಲ್‌ ಸರ್ಚ್‌ನಲ್ಲಿ ಕೃತಕ ಬುದ್ಧಿಮತ್ತೆ ಸೇರ್ಪಡೆ; ಚಾಟ್‌ಬಾಟ್‌ನಿಂದ ಅವಕಾಶ ಸೃಷ್ಟಿ: ಸುಂದರ್ ಪಿಚೈ

ಸದ್ಯ AI ಉದಯವಾಗಿರುವ ಹಾಗೂ ಉತ್ಕರ್ಷವಾಗಿರುವುದಕ್ಕೆ ಅಡಿಪಾಯದ ಕೆಲಸ ಹಾಕಿಕೊಟ್ಟದ್ದಕ್ಕಾಗಿ ಜೆಫ್ರಿ ಹಿಂಟನ್ ಅವರಿಗೆ 2018ರಲ್ಲೇ ಟ್ಯೂರಿಂಗ್‌ ಪ್ರಶಸ್ತಿ ಪಡೆದುಕೊಂಡಿದ್ದರು. ಕಂಪನಿಯು ಹಿಂಟನ್ ಮತ್ತು ಅವರ ಇಬ್ಬರು ವಿದ್ಯಾರ್ಥಿಗಳು ಪ್ರಾರಂಭಿಸಿದ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡ ನಂತರ ಜೆಫ್ರಿ ಹಿಂಟನ್‌ ಗೂಗಲ್‌ ಸೇರಿದ್ದರು. ಅವರ ವಿದ್ಯಾರ್ಥಿಗಳಲ್ಲಿ ಒಬ್ಬರು OpenAI ನಲ್ಲಿ ಮುಖ್ಯ ವಿಜ್ಞಾನಿಯಾಗಿದ್ದಾರೆ. 

ಗೂಗಲ್‌ ಪ್ರತಿಕ್ರಿಯೆ ಹೀಗಿದೆ.. 
ಜೆಫ್ರಿ ಹಿಂಟನ್‌ ಗೂಗಲ್‌ ಸಂಸ್ಥೆ ತೊರೆದಿರುವುದಕ್ಕೆ ಹಾಗೂ ಅವರ ಸಂದರ್ಶನದ ಹೇಳಿಕೆಗಳಿಗೆ ಗೂಗಲ್‌ ಪ್ರತಿಕ್ರಿಯೆ ನೀಡಿದೆ. "ನಾವು AI ಗೆ ಜವಾಬ್ದಾರಿಯುತ ವಿಧಾನಕ್ಕೆ ಬದ್ಧರಾಗಿದ್ದೇವೆ. ಉದಯೋನ್ಮುಖ ಅಪಾಯಗಳನ್ನು ಅರ್ಥಮಾಡಿಕೊಳ್ಳಲು ನಾವು ನಿರಂತರವಾಗಿ ಕಲಿಯುತ್ತಿದ್ದೇವೆ ಮತ್ತು ಧೈರ್ಯದಿಂದ ಆವಿಷ್ಕಾರಗಳನ್ನು ಮಾಡುತ್ತಿದ್ದೇವೆ" ಎಂದು ಗೂಗಲ್‌ನ ಮುಖ್ಯ ವಿಜ್ಞಾನಿ ಜೆಫ್ ಡೀನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ವಾಸ್ತವವಾಗಿ, ಕಂಪನಿಯು "ಬಹಳ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದೆ" ಎಂದು ಹಿಂಟನ್ ಸಹ ಗೂಗಲ್‌ನ ಸಂಸ್ಥೆಯಲ್ಲಿದ್ದಾಗ ಪ್ರಶಂಸೆ ವ್ಯಕ್ತಪಡಿಸಿದ್ದರು ಎಂದೂ ಅವರು ತಿಳಿಸಿದ್ದಾರೆ. 

ಇದನ್ನೂ ಓದಿ: AI ಬಗ್ಗೆ ಇರಲಿ ಎಚ್ಚರ: ಚಾಟ್‌ಜಿಪಿಟಿಯಂತಹ ಆ್ಯಪ್ ಗೀಳಿಗೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ..!