ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ಮದುವೆಯ ದಿನ ವಧು ನಾಪತ್ತೆಯಾಗಿದ್ದಳು. ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆಂದು ಹೇಳಲಾಗಿತ್ತು. ಆದರೆ ಪೊಲೀಸರ ತನಿಖೆಯಲ್ಲಿ ಆಕೆ ತನ್ನ ಸ್ನೇಹಿತೆಯೊಂದಿಗೆ ಓಡಿಹೋಗಿರುವುದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ. ಬಲವಂತವಾಗಿ ಮದುವೆ ಮಾಡುತ್ತಿರುವುದನ್ನು ವಿರೋಧಿಸಿ ಈ ರೀತಿ ಮಾಡಿದ್ದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯ ಸ್ನೇಹಿತೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮದುವೆ ದಿನ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ನಿಲ್ಲಿ.... ಎಂದು ನಾಯಕನೋ, ನಾಯಕಿಯೋ ಅಥವಾ ಇನ್ನಾರೋ ಬಂದು ಮದುವೆಯನ್ನು ನಿಲ್ಲಿಸುವುದನ್ನು ಸೀರಿಯಲ್ಗಳು, ಸಿನಿಮಾಗಳಲ್ಲಿ ನೋಡಿರಬಹುದು. ಇನ್ನು ಮದುವೆಯ ದಿನವೇ ಮದುಮಕ್ಕಳಲ್ಲಿ ಒಬ್ಬರು ಓಡಿ ಹೋಗುವುದು ನಿಜ ಜೀವನದಲ್ಲಿಯೂ ನಡೆಯುತ್ತಲೇ ಇರುತ್ತವೆ, ಆದರೆ ಮದುಮಗಳು ಓಡಿಹೋದ್ರೆ ಸ್ನೇಹಿತನ ಜೊತೆ, ಮದುಮಗ ಓಡಿಹೋದರೆ ಸ್ನೇಹಿತೆಯ ಜೊತೆ ಓಡಿಹೋಗಿರುತ್ತಾರೆ. ಆದರೆ ಹುಡುಗಿಯೊಬ್ಬಳು ಇನ್ನೊಬ್ಬ ಹುಡುಗಿಯ ಜೊತೆ ಓಡಿಹೋಗಲು ಮದ್ವೆ ದಿನವನ್ನೇ ಆಯ್ಕೆ ಮಾಡಿಕೊಂಡು ಅದಕ್ಕೆ ಒಂದಿಷ್ಟು ಕಥೆ ಕಟ್ಟಿದ ರೋಚಕ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ.
ಈ ಘಟನೆಯಲ್ಲಿ, ಮದುವೆಗೆ ಕೆಲವೇ ಗಂಟೆಗಳ ಮೊದಲು ವಧು ಹಠಾತ್ತನೆ ಕಣ್ಮರೆಯಾದಳು. ಬಳಿಕ ಆಕೆಗಾಗಿ ಹುಡುಕಾಟ ನಡೆಸಿದಾಗ ಆಕೆ ಹೃದಯಾಘಾತದಿಂದ ಸತ್ತುಹೋದಳು ಎಂಬ ಸುದ್ದಿ ಮದುವೆ ಮನೆಯನ್ನು ಬರಸಿಡಿಲಿನಂತೆ ಬಿಡಿಯಿತು. ಹೋಮಿಯೋಪಥಿ ವೈದ್ಯೆಯಾಗಿರುವ ಮದುಮಗಳ ಮದುವೆ ಫಿಕ್ಸ್ ಆಗಿತ್ತು. ಮದುವೆಯ ದಿನದವರೆಗೂ ಆಕೆ ಏನೂ ಹೇಳಿರಲಿಲ್ಲ. ಮದುವೆಗೂ ಶೃಂಗಾರ ಮಾಡಿಕೊಂಡಳು. ಅಲ್ಲಿಯವರೆಗೂ ಸುಮ್ಮನೇ ಇದ್ದಳು. ಮದುವೆಯ ದಿನ ಶೃಂಗಾರ ಮಾಡಿಕೊಂಡು ಬ್ಯೂಟಿ ಪಾರ್ಲರ್ಗೆ ಹೋಗುವೆ ಎಂದಳು. ಆಗ ಎಷ್ಟು ಹೊತ್ತಾದರೂ ಬರಲಿಲ್ಲ. ಮಗಳು ಬರದಾಗ ಎಲ್ಲರೂ ಹುಡುಕಾಟ ನಡೆಸಿದರು. ಆ ಸಮಯದಲ್ಲಿ ಅವರಿಗೆ ಬ್ಯೂಟಿ ಪಾರ್ಲರ್‌ನಲ್ಲಿ ಇದ್ದ ಆಕೆಯ ಸ್ನೇಹಿತರು, ಬ್ಯೂಟಿ ಪಾರ್ಲರ್‌ನಲ್ಲಿ ಆಕೆಗೆ ಹೃದಯಾಘಾತವಾಯ್ತು. ಮೀರತ್ ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದಳು ಎಂದರು. ಇದನ್ನು ಕೇಳಿ ಇಡೀ ಮದುವೆ ಮನೆಯಲ್ಲಿ ಸ್ಮಶಾನಮೌನ ಆವರಿಸಿತು.
ವರ ಕೈಹಿಡಿದಾಗ ಹೀಗೆ ರಿಯಾಕ್ಷನ್ ಕೊಡೋದಾ ವಧು? ಸುಟ್ಟು ಭಸ್ಮವಾಗೋಗ್ತಿ ಕಣೋ ಅಂತಿರೋ ನೆಟ್ಟಿಗರು!
ಇದು ಎಲ್ಲಾ ಮೀಡಿಯಾಗಳಲ್ಲಿ ಬ್ರೇಕಿಂಗ್ ಸುದ್ದಿಯಾಗೋಯ್ತು. ವೈದ್ಯೆ ಆಗಿದ್ದರಿಂದ ಸ್ವಲ್ಪ ಹೆಚ್ಚಿನ ರೀತಿಯಲ್ಲಿಯೇ ಇದು ಸದ್ದು ಮಾಡಿತು. ಆದರೆ ಯುವತಿಯ ಡೆಡ್ಬಾಡಿ ಮಾತ್ರ ಯಾವ ಆಸ್ಪತ್ರೆಯಲ್ಲಿಯೂ ಸಿಗಲಿಲ್ಲ. ಮಗಳು ಸಿಗದಾಗ ಕುಟುಂಬಸ್ಥರು ಗಾಬರಿ ಬಿದ್ದು, ಪೊಲೀಸರಲ್ಲಿ ದೂರಿದರು. ಮಧ್ಯಪ್ರವೇಶಿಸಿದ ಪೊಲೀಸರು ತನಿಖೆ ಶುರು ಮಾಡಿದರು. ಸಿಸಿಟಿವಿ ದೃಶ್ಯ ನೋಡಿದಾಗ, ಮದುಮಗಳು ತನ್ನ ಸ್ನೇಹಿತೆಯ ಜೊತೆ ಓಡಿ ಹೋಗುತ್ತಿರುವುದು ಕಂಡುಬಂದಿದೆ! ಮಹಿಳೆಯ ತಂದೆ ಆಕೆಯ ಮಹಿಳಾ ಸ್ನೇಹಿತೆಯಿಂದ ಅಪಹರಿಸಲ್ಪಟ್ಟಿದ್ದಾಳೆ ಎಂದು ದೂರು ದಾಖಲಿಸಿದ ನಂತರ, ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ. ಬ್ಯೂಟಿ ಪಾರ್ಲರ್‌ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಹಿಳೆ ಮತ್ತು ಆಕೆಯ ಸ್ನೇಹಿತ ಕಾರಿನೊಳಗೆ ಪ್ರವೇಶಿಸಿ ಹೊರಟು ಹೋಗುತ್ತಿರುವುದನ್ನು ನೋಡಬಹುದಾಗಿದೆ.
ಕೊನೆಗೂ ಸ್ನೇಹಿತೆಯ ಜೊತೆ ಆಕೆ ಸಿಕ್ಕಿಬಿದ್ದಳು. ಅವಳನ್ನು ಅರೆಸ್ಟ್ ಮಾಡಿದಾಗ, ನನಗೆ ಮದುವೆ ಇಷ್ಟವಿರಲಿಲ್ಲ. ಸಾಕಷ್ಟು ವಿರೋಧಿಸಿದೆ. ಆದರೆ, ಬಲವಂತವಾಗಿ ನನ್ನನ್ನು ಮದುವೆಯ ಮನೆಯವರೆಗೆ ಕರೆತರಲಾಯಿತು ಎಂದು ವೈದ್ಯೆ ಹೇಳಿದ್ದಾಳೆ! ಆದ್ದರಿಂದ ಸ್ನೇಹಿತೆಯ ನೆರವಿನೊಂದಿಗೆ ಈ ಪ್ಲ್ಯಾನ್ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
ಕಣ್ಣೀರು ಒರೆಸಲು ಬೇಕಾಗಿದ್ದಾರೆ ಸುಂದರ ಯುವಕರು! ದಿನಕ್ಕೆ 5 ಸಾವಿರ ರೂ: ಇಲ್ಲಿದೆ ಫುಲ್ ಡಿಟೇಲ್ಸ್..
