ಜಪಾನ್‌ನಲ್ಲಿ, ಕೆಲಸದ ಒತ್ತಡ ನಿವಾರಿಸಲು "ಹ್ಯಾಂಡ್ಸಮ್ ವೀಪಿಂಗ್ ಬಾಯ್ಸ್" ಎಂಬ ಹೊಸ ಸೇವೆ ಲಭ್ಯವಿದೆ. ಆಕರ್ಷಕ ಯುವಕರು ಕಣ್ಣೀರು ಒರೆಸಿ ಸಮಾಧಾನ ಮಾಡುತ್ತಾರೆ. ಇದಕ್ಕಾಗಿ ಸುಮಾರು 4,400 ರೂ. ಶುಲ್ಕ ವಿಧಿಸಲಾಗುತ್ತದೆ. ಉದ್ಯೋಗಿಗಳ ಖಿನ್ನತೆ ಕಡಿಮೆ ಮಾಡಲು ಹಿರೋಕಿ ಟೆರೈ ಈ ಕಲ್ಪನೆ ರೂಪಿಸಿದರು. ಆನ್‌ಲೈನ್‌ನಲ್ಲಿ ಯುವಕರನ್ನು ಆಯ್ಕೆ ಮಾಡಲಾಗುತ್ತದೆ. ಕಣ್ಣೀರು ತಡೆದುಕೊಳ್ಳುವುದಕ್ಕಿಂತ ಹೊರಹಾಕುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಇದರ ಉದ್ದೇಶ.
ನಿಮಗೆ ಸಿಕ್ಕಾಪಟ್ಟೆ ಕೆಲಸದ ಒತ್ತಡ ಇರುವ ಸಂದರ್ಭದಲ್ಲಿ, ಟೆನ್ಷನ್, ಖಿನ್ನತೆ ಎಲ್ಲಾ ಸುಳಿದಾಗ ಅಬ್ಬಾ ಯಾರಾದರೂ ಒಬ್ಬರು ಸಮಾಧಾನ ಮಾಡುವವರು ಇದ್ದರೆ ಮನಸ್ಸಿಗೆ ಏನೋ ಒಂದು ರೀತಿಯ ಸಮಾಧಾನ. ಯಾವುದೇ ನೋವಿನ ಸಂದರ್ಭಗಳಲ್ಲಿ ಕಣ್ಣೀರು ಹಾಕುವ ಸಮಯ ಬಂದರೆ, ಆಗ ಒಬ್ಬರಾದರೂ ಕಣ್ಣೀರು ಒರೆಸಿ ಸಮಾಧಾನ ಮಾಡುವವರು ಇರಬಾರದೇ ಎಂದು ಎಷ್ಟೋ ಮಂದಿಗೆ ಎನ್ನಿಸುವುದು ಉಂಟು. ಮನಸ್ಸನ್ನು ನಿರಾಳವಾಗಿಸಿಕೊಳ್ಳಲು ಈ ಸಮಾಧಾನ ಎನ್ನುವುದು ಬೇರೆ ಬೇರೆ ರೂಪದಲ್ಲಿಯಾದರೂ ಪ್ರತಿಯೊಬ್ಬರಿಗೆ ಅಗತ್ಯವಿರುತ್ತದೆ. ಸಮಾಧಾನ ಪಡಿಸುವ ಪರಿ ಬೇರೆ ರೀತಿಯದ್ದಿದ್ದರೂ ಮನಸ್ಸಿನಲ್ಲಿ ಇರುವ ಆತಂಕ, ದುಗುಡಗಳನ್ನು ಕಡಿಮೆ ಮಾಡಿಕೊಳ್ಳಲು ಯಾರಾದರೂ ಇದ್ದರೆ ಚೆನ್ನಾಗಿರತ್ತಲ್ವಾ ಎಂದುಕೊಳ್ಳುವ ಯುವ ಮನಸ್ಸುಗಳು ಅದರಲ್ಲಿಯೂ ಹೆಣ್ಣುಮಕ್ಕಳು ಹೆಚ್ಚಾಗಿರುವುದನ್ನು ಅರಿತುಕೊಂಡೇ ಕಣ್ಣೀರು ಒರೆಸುವ ಹುಡುಗರಿಗೆ ಡಿಮಾಂಡ್ ಜಾಸ್ತಿಯಾಗಿದೆ!
ಒಂದು ಸಲ ಹುಡುಗಿಯರ ಕಣ್ಣೀರು ಒರೆಸಿದ್ರೆ ನಾಲ್ಕೂವರೆ ಸಾವಿರ ರೂಪಾಯಿ ಸಿಗುತ್ತದೆ! ಅದರಲ್ಲಿಯೂ ಹುಡುಗರು ನೋಡಲು ಆಕರ್ಷಕರಾಗಿದ್ದರೆ ಸಕತ್ ಡಿಮಾಂಡ್. ಇದೀಗ ವೃತ್ತಿಯಾಗಿ ಪರಿಣಮಿಸಿದೆ. ಯುವಕರ ಕೆಲಸ ಹುಡುಗಿಯರ ಪಕ್ಕದಲ್ಲಿ ಹೋಗಿ ಕಣ್ಣೀರು ಒರೆಸಿ ಸಮಾಧಾನ ಮಾಡುವುದು ಅಷ್ಟೇ. ತುಂಬಾ ಸುಲಭದ ಕೆಲಸ ಅಲ್ವೆ? ಹಾಗೆಂದು ಸದ್ಯ ಇದು ಭಾರತಕ್ಕೆ ಬಂದಿಲ್ಲ ಬಿಡಿ. ಇದು ಇರುವುದು ಜಪಾನ್ ದೇಶದಲ್ಲಿ, ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಟೋಕಿಯೊ ಕಚೇರಿಗಳು ಅಸಾಂಪ್ರದಾಯಿಕ ವಿಧಾನವನ್ನು ಅನುಸರಿಸುತ್ತಿದೆ. 7,900 ಯೆನ್, ಸರಿಸುಮಾರು 4,400 ರೂ. ವೆಚ್ಚದಲ್ಲಿ ಜಪಾನ್‌ನ ಜನತೆ ಈ ಸೇವೆಯನ್ನು ಪಡೆಯಬಹುದಾಗಿದೆ.
ಮಗಳ ಮಗುವಿಗೇ ಅಮ್ಮನಾದ ಅಜ್ಜಿ! ಮುಟ್ಟು ನಿಂತರೂ ಗರ್ಭಿಣಿಯಾಗೋ ಸಾಹಸ ಮಾಡಿದ ಈಕೆ ರೋಚಕ ಕಥೆ ಕೇಳಿ
"ಹ್ಯಾಂಡ್ಸಮ್ ವೀಪಿಂಗ್ ಬಾಯ್ಸ್" (ಇಕೆಮೆಸೊ ಡ್ಯಾನ್ಶಿ- ಆಕರ್ಷಕ ಕಣ್ಣೀರು ಒರೆಸುವ ಯುವಕರು) ಎಂದು ಕರೆಯಲ್ಪಡುವ ಯೋಜನೆ ಇದಾಗಿದೆ. ತಮ್ಮ ಮೇಲ್ನೋಟದ ಆಕರ್ಷಣೆಯ ಹೊರತಾಗಿಯೂ, ಕಣ್ಣೀರು ಒರೆಸುವಲ್ಲಿ ಇವರು ವೃತ್ತಿಪರರಾಗಿರಬೇಕು. ಕಣ್ಣೀರಿನ ಮೂಲಕ ಸಾಂತ್ವನವನ್ನು ಒದಗಿಸಬೇಕು, ಕೆಲಸದ ಸ್ಥಳದಲ್ಲಿ ಭಾವನಾತ್ಮಕ ಸಂಪರ್ಕಗಳನ್ನು ಸ್ಥಾಪಿಸಬೇಕು. ಇಂಥವರಿಗೆ ಆದ್ಯತೆ ಇದೆ. ಯುವ ಸಮುದಾಯದಲ್ಲಿ ಹೆಚ್ಚುತ್ತಿರುವ ಖಿನ್ನತೆ, ಕೆಲಸದ ಒತ್ತಡವನ್ನು ಗಮನಿಸಿ, ಹಿರೋಕಿ ಟೆರೈ ಎಂಬುವವರು ಈ ಕಲ್ಪನೆ ರೂಪಿಸಿದ್ದರು. ಅದೀಗ ಸಕ್ಸಸ್ ಆಗಿದೆ. ಜಪಾನ್‌ನಲ್ಲಿ ಬಹುತೇಕ ಕಂಪೆನಿಗಳಲ್ಲಿ ಯುವತಿಯರದ್ದೇ ಕಾರುಬಾರು. ಕಡಿಮೆ ಸಂಬಳಕ್ಕೆ ಅತ್ಯಧಿಕ ಶ್ರಮ ವಹಿಸಿ ದುಡಿಯುವಲ್ಲಿ ಇವರು ನಿಸ್ಸೀಮರು. ಆದ್ದರಿಂದ ಸುಂದರ ಯುವಕರ ಕಲ್ಪನೆ ಮಾಡಲಾಗಿದೆಯೋ ಗೊತ್ತಿಲ್ಲ!
ಯುವಕರನ್ನು ಹುಡುಕುವುದಕ್ಕಾಗಿಯೇ ಆನ್ಲೈನ್ ಸೇವೆ ಇದೆ. ಉದ್ಯೋಗಿಗಳ ಕಣ್ಣೀರು ಒರೆಸಿ ಅವರನ್ನು ಸಮಾಧಾನ ಮಾಡುವಲ್ಲಿ ನಿಪುಣರಾದವರು ಇಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಇಲ್ಲಿ ಅವಕಾಶ ಇರುವುದಿಲ್ಲ. ಮನಸ್ಸಿನಲ್ಲಿ ಇರುವ ದುಗುಡವನ್ನು ಕಣ್ಣೀರಿನ ಮೂಲಕ ಹರಿಸಿದರೆ, ಹಲವು ಅಪಾಯಗಳನ್ನು ತಪ್ಪಿಸಬಹುದು, ಕಣ್ಣೀರನ್ನು ತಡೆದುಕೊಂಡಷ್ಟೂ ಜೀವಕ್ಕೆ ಅಪಾಯ ಎನ್ನುವುದು ಇದಾಗಲೇ ಸಾಬೀತಾಗಿದೆ. ಅದಕ್ಕಾಗಿಯೇ ಜಪಾನಿನ ವ್ಯಕ್ತಿಗಳು ಮನೆಯಲ್ಲಿ ಮಾತ್ರವಲ್ಲದೆ ಕೆಲಸದ ಸ್ಥಳದಲ್ಲಿಯೂ ಕಣ್ಣೀರು ಸುರಿಸಬೇಕೆಂದು ನಾನು ಬಯಸುತ್ತೇನೆ. ಅಂಥ ಸಂದರ್ಭದಲ್ಲಿ ಯಾರೂ ಇಲ್ಲದಿದ್ದರೆ ಈ ಸುಂದರ ಯುವಕರು ಕಣ್ಣೀರು ಒರೆಸಲು ಬರುತ್ತಾರೆ ಎನ್ನುವುದು ಇದರ ಉದ್ದೇಶ ಎಂದಿದ್ದಾರೆ ಇದರ ರೂವಾರಿ ಹಿರೋಕಿ ಟೆರೈ. ಯುವಕರನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಗಳೂ ನಡೆಯುತ್ತವೆ. ಅದಕ್ಕಾಗಿ ಸಂದರ್ಶನ ಇತ್ಯಾದಿಗಳು ಇರಲಿವೆ.
ಸ್ನೇಹಿತನ ಮದ್ವೆಯಾಗಿ ಕೊನೆಯುಸಿರೆಳೆದ 10 ವರ್ಷದ ಬಾಲಕಿ! ಈಕೆಯ ಕಣ್ಣೀರ ಕಥೆ ಕೇಳಿ...
