ಇಂಡೋನೇಷ್ಯಾ ಟೇಚರ್ ಹತ್ರ ಇಂಗ್ಲಿಷ್ ಕಲೀತಾ ಲವ್ವಾಗೋಯ್ತು!
ಸ್ಟೂಡೆಂಟ್ ಮೇಲೆ ಲೆಕ್ಚರರ್‌ಗೆ ಲವ್ವಾಗೋದು, ಲೆಕ್ಚರರ್‌ಗೆ ಸ್ಟೂಡೆಂಟ್ ಮೇಲೆ ಲವ್ವಾಗೋದು ಹೊಸ ವಿಚಾರವಾಗಿ ಉಳಿದಿಲ್ಲ. ಈ ರೀತಿ ಪ್ರೀತಿಸಿದವರು ಮದುವೆ ಸಹ ಆಗುತ್ತಾರೆ. ಹೀಗೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಇಂಗ್ಲಿಷ್ ಕಲಿಯುವಾಗ ಭೇಟಿಯಾದ ನಂತರ ಇಂಡೋನೇಷ್ಯಾದ ಮಹಿಳೆಯನ್ನು ವಿವಾಹವಾದರು. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಇಂಗ್ಲಿಷ್ ಕಲಿಯುವಾಗ ಭೇಟಿಯಾದ ಇಂಡೋನೇಷ್ಯಾದ ಮಹಿಳೆ (Women)ಯನ್ನು ವಿವಾಹವಾದರು. ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ರುದ್ರಪುರ ತಹಸಿಲ್‌ನ ನಾರಾಯಣಪುರ ಗ್ರಾಮದ ನಿವಾಸಿ ಸನ್ವರ್ ಅಲಿ 2015ರಲ್ಲಿ ಸ್ಪೋಕನ್ ಇಂಗ್ಲಿಷ್ ಕಲಿಯುತ್ತಿದ್ದಾಗ ಇಂಡೋನೇಷ್ಯಾದ ಮೆಡಾನ್‌ನಿಂದ ಮಿಫ್ತಾಹುಲ್ ಜನ್ನಾ ಎಂಬಾಕೆ ಅವರಿಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. 2017ರಲ್ಲಿ ದಕ್ಷಿಣ ಭಾರತವು ಚಂಡಮಾರುತದಿಂದ ಅಪ್ಪಳಿಸಿದಾಗ ಅಲಿ ಮತ್ತು ಮಿಫ್ತಾಹುಲ್ ಅವರು ಪರಸ್ಪರ ಪ್ರೀತಿಸುತ್ತಿದ್ದಾರೆಂದು ಅರಿತುಕೊಂಡರು. ಈ ಸುದ್ದಿಯನ್ನು ಕೇಳಿದಾಗ ಮಿಫಾತುಹುಲ್ ಅಲಿ ಮತ್ತು ಅವರ ಕುಟುಂಬದ (Family) ಯೋಗಕ್ಷೇಮದ ಬಗ್ಗೆ ಕಾಳಜಿ (Care) ವಹಿಸಿದರು.
ಇಂಡೋನೇಷ್ಯಾ ಟು ಇಂಡಿಯಾ; ಪ್ರೀತಿಗೆ ಬೇರೆ ಬೇರೆ ದೇಶವೂ ಅಡ್ಡಿಯಾಗಲ್ಲಿಲ್ಲ
ಅಲಿ ತನ್ನ ಭಾವನೆಗಳನ್ನು ಅವಳಿಗೆ ವ್ಯಕ್ತಪಡಿಸಿದಾಗ, ಮಿಫ್ತಾಹುಲ್ ಇದಕ್ಕೆ ಒಪ್ಪಿಗೆ ಸೂಚಿಸಲು ಆರು ತಿಂಗಳು ಸಮಯ ತೆಗೆದುಕೊಂಡರು. 2018ರಲ್ಲಿ, ಅಲಿ ಮೊದಲ ಬಾರಿಗೆ ವಿಮಾನ (Airoplane) ಹತ್ತಿ, ಮಿಫ್ತಾಹುಲ್ ಅವರನ್ನು ಭೇಟಿ ಮಾಡಲು ಇಂಡೋನೇಷ್ಯಾಕ್ಕೆ ತೆರಳಿದರು. ನಂತರ ಅವರು ಮದುವೆಯಾಗಲು ನಿರ್ಧರಿಸಿದರು. ಅಲಿ, ಮಿಫ್ತಾಹುಲ್ ಇಬ್ಬರೂ ಒಂದೇ ಧರ್ಮ (Religion) ದವರಾಗಿರುವುದರಿಂದ ಅವರ ಕುಟುಂಬವು (Marriage) ಮದುವೆಗೆ ಒಪ್ಪಿಕೊಂಡಿತು. ಆಕೆಯ ತಂದೆ ತೀರಿಕೊಂಡಿದ್ದರಿಂದ, ಅವಳು ತನ್ನ ತಾಯಿ ಮತ್ತು ಇಬ್ಬರು ಸಹೋದರಿಯರೊಂದಿಗೆ ಮೆದಾನದಲ್ಲಿ ವಾಸಿಸುತ್ತಿದ್ದಳು. ಮಿಫ್ತಾಹುಲ್ ತನ್ನ ಪದವಿ ಮುಗಿದ ನಂತರ ಖಾಸಗಿ ಶಾಲೆಯಲ್ಲಿ ಕಲಿಸಲು ಪ್ರಾರಂಭಿಸಿದಳು.
ಮಂಟಪ ರೆಡಿಯಾಗಿತ್ತು, ವರ ಕೂತಿದ್ದ, ವಧು ಮಾತ್ರ ಔಟ್‌ಫಿಟ್ ತರೋದನ್ನೇ ಮರೆತಿದ್ಲು !
ತಮ್ಮ ಕುಟುಂಬಕ್ಕೆ ತಿಳಿಸಲು ಅಲಿ ಭಾರತಕ್ಕೆ ಮರಳಿದನು. ಮತ್ತೆ 2019 ರಲ್ಲಿ ಇಂಡೋನೇಷ್ಯಾಕ್ಕೆ ಭೇಟಿ ನೀಡಿದನು. ಅವರು ಶೀಘ್ರದಲ್ಲೇ ಮದುವೆಯಾಗಲು ಯೋಜಿಸುತ್ತಿದ್ದರು ಆದರೆ COVID-19 ಸಾಂಕ್ರಾಮಿಕವು ಮದುವೆಯನ್ನು ವಿಳಂಬಗೊಳಿಸಿತು. ಅಂತಿಮವಾಗಿ ಈ ವರ್ಷ ಅಕ್ಟೋಬರ್ 29ರಂದು ಇಂಡೋನೇಷ್ಯಾದಲ್ಲಿ ದಂಪತಿಗಳು (Couples) ವಿವಾಹವಾದರು. ಕಳೆದ ವಾರ, ದಂಪತಿಗಳು ತಮ್ಮ ವಿವಾಹದ ಆರತಕ್ಷತೆಯನ್ನು ಡಿಯೋರಿಯಾದಲ್ಲಿ ಆಯೋಜಿಸಿದ್ದರು.
20ರ ಹರೆಯದ ವಿದ್ಯಾರ್ಥಿನಿಯನ್ನು ಮದ್ವೆಯಾದ 42 ವರ್ಷದ ಶಿಕ್ಷಕ
ಬಿಹಾರದಲ್ಲೊಬ್ಬ 42 ವರ್ಷದ ಶಿಕ್ಷಕನೋರ್ವ ತನ್ನ 20 ವರ್ಷದ ವಿದ್ಯಾರ್ಥಿನಿಯನ್ನು ಪ್ರೀತಿಸಿ ದೇಗುಲದಲ್ಲಿ ವಿವಾಹವಾಗಿದ್ದಾನೆ. ಈ ಶಿಕ್ಷಕನ ಪತ್ನಿ ಹಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು. ಬಿಹಾರದ ಸಮಸ್ಟಿಪುರದಲ್ಲಿ (Samastipur) ಈ ಘಟನೆ ನಡೆದಿದೆ. 42 ವರ್ಷದ ಶಿಕ್ಷಕ ಸಂಗೀತಾ ಕುಮಾರ್ (Sangeet Kumar) ಅವರು ಸಮಸ್ಟಿಪುರದ ರೊಸ್ದ ಬಜಾರ್ ಎಂಬಲ್ಲಿ ಇಂಗ್ಲೀಷ್ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದರು. ಅಲ್ಲಿಗೆ 20 ವರ್ಷದ ವಿದ್ಯಾರ್ಥಿನಿ ಶ್ವೇತಕುಮಾರಿ (Shweta Kumari) ಇಂಗ್ಲೀಷ್ ಕೋಚಿಂಗ್‌ಗಾಗಿ ಆಗಮಿಸುತ್ತಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿದೆ.
ಪ್ರಿಯತಮೆ ಕಾಲಿನ ಸ್ವಾಧೀನ ಕಳೆದುಕೊಂಡಿದ್ದರೂ ಕೈ ಬಿಡದೆ ಸಪ್ತಪದಿ ತುಳಿದ ವರ
ಇಬ್ಬರೂ ಮದ್ವೆಯಾಗಲೂ ನಿರ್ಧರಿಸಿದ್ದು, ಸಮೀಪದ ದೇವಸ್ಥಾನಕ್ಕೆ ತೆರಳಿ ಇಬ್ಬರೂ ಸಪ್ತಪದಿ ತುಳಿದಿದ್ದಾರೆ. ಇಬ್ಬರು ದೇಗುಲವೊಂದರಲ್ಲಿ ಸಪ್ತಪದಿ ತುಳಿಯುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ. ಇವರ ಈ ಲವ್ ಸ್ಟೋರಿ ಈಗ ಬಿಹಾರದ ಜನರಿಗೆ ಈ ಹಿಂದೆ ಬಿಹಾರದಲ್ಲಿ ಸಮಸ್ಟಿಪುರದಲ್ಲಿ(Samastipur) ನಡೆದಿದ್ದ ಮತುಕನಾಥ್ ಹಾಗೂ ಜುಲಿಯಾ ಪ್ರೇಮಕತೆಯನ್ನು ನೆನಪಿಸುವಂತೆ ಮಾಡಿದೆ. ಮತುಕನಾಥ್ ಹಾಗೂ ಜುಲಿಯಾ ಪ್ರೇಮಕತೆಯೂ ಇದೇ ರೀತಿ ಇದ್ದು, ಆದರೆ ಅದು ದುರಂತ ಅಂತ್ಯಗೊಂಡಿತ್ತು.